ಹೊಸ ವಿನ್ಯಾಸದ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ದೇಶದ ಮುಂಚೂಣಿ ಎಲೆಕ್ಟ್ರಿಕ್ ತಯಾಕ ಕಂಪನಿಯಾಗಿರುವ ಒಕಿನಾವ ದೇಶಿಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ವಿನ್ಯಾಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ವ್ಯಯಕ್ತಿಕ ಬಳಕೆಗೆ ಅಥವಾ ವಾಣಿಜ್ಯ ವ್ಯವಹಾರಕ್ಕೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ವಿವಿಧ ಉದ್ದೇಶಗಳಿಗೆ ಬಳಕೆ ಮಾಡಬಹುದಾದ ವೈಶಿಷ್ಟ್ಯತೆ ಹೊಂದಿರುವ ಹೊಸ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.58,998 ಬೆಲೆ ಹೊಂದಿದ್ದು, ಹೊಸ ಸ್ಕೂಟರ್ ಮಾದರಿಯನ್ನು ವಿಶೇಷವಾಗಿ ವಾಣಜ್ಯ ಚಟುವಟಿಕೆಗಳಿಗೆ ಬಳಕೆ ಮಾಡುವಂತೆ ಸಿದ್ದಪಡಿಸಲಾಗಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹೊಸ ಸ್ಕೂಟರ್ ಅನ್ನು ಮಾಡಿಫೈ ಮಾಡಿಕೊಳ್ಳಬಹುದಾಗಿದ್ದು, 200 ಕೆಜಿಯಷ್ಟು ಸರಕು ಸಾಗಿಸಬಹುದಾಗಿದೆ.

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ಯಾವ ಮಾದರಿಯ ಸರಕು ಸಾಗಾಣಿಕೆಗೆ ಅವಶ್ಯವಿದೆ ಎನ್ನುವುದರ ಆಧಾರದ ಲಗೇಜ್ ರಾಕ್ ಜೋಡಣೆ ಮಾಡಬಹುದಾಗಿದ್ದು, ಸಿಲಿಂಡರ್ ಪೂರೈಕೆ, ವಾಟರ್ ಬಾಟಲ್‌ಗಳ ಸಾಗಾಣಿಕೆ ಸೇರಿದಂತೆ ಯಾವುದೇ ಮಾದರಿಯ ವಾಣಿಜ್ಯ ಚಟುವಟಿಕೆಗಳಿಗೂ ಈ ಇವಿ ಸ್ಕೂಟರ್ ಬಳಕೆ ಮಾಡಬಹುದಾಗಿದೆ.

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ಹೊಸ ಸ್ಕೂಟರ್‌ನಲ್ಲಿ ಅಷ್ಟಾಗಿ ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಮಾಡಿಲ್ಲವಾದರೂ ಸರಕು ಸಾಗಾಣಿಕೆಗೆ ಅನೂಕಲಕವಾದ ವೈಶಿಷ್ಟ್ಯತೆಗಳನ್ನು ಜೋಡಣೆ ಮಾಡಿದ್ದು, ಅತ್ಯುತ್ತಮ ಬಾಡಿ ಕಿಟ್ ಜೋಡಣೆಯಿಂದಾಗಿ ಪ್ಲೇ ಲೋಡ್ ಸಾಮರ್ಥ್ಯವು ಗ್ರಾಹಕರನ್ನು ಸೆಳೆಯಲಿದೆ.

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ಒಕಿನಾವ ಕಂಪನಿಯು ಹೊಸ ಡ್ಯುಯಲ್ ಇವಿ ಸ್ಕೂಟರ್ ಮಾದರಿಯಲ್ಲಿ 48W 55Ah ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಬಹುದಾಗಿದ್ದು, ಪ್ರತಿ ಚಾರ್ಚ್‌ಗೆ ಗರಿಷ್ಠ 130 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹೊಸ ಸ್ಕೂಟರ್‌ನಲ್ಲಿರುವ ಬ್ಯಾಟರಿಯು ಶೇ.80 ರಷ್ಟು ಚಾರ್ಜ್ ಆಗಲು 90 ನಿಮಿಷ ತೆಗೆದುಕೊಂಡಲ್ಲಿ ಪೂರ್ಣ ಪ್ರಮಾಣದ ಚಾರ್ಜ್‌ಗೆ 5 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ಡ್ಯುಯಲ್ ಸ್ಕೂಟರ್ ಚಾಲನೆಗೆ ಬೇಕಿಲ್ಲ ಡಿಲ್ಎಲ್

ಹೌದು, ಒಕಿನಾವ ಕಂಪನಿ ಬಿಡುಗಡೆ ಮಾಡಿರುವ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಾಣಿಜ್ಯ ಬಳಕೆಗಾಗಿ ಲೋ ಸ್ಪೀಡ್ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಪ್ರತಿ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸ್ಕೂಟರ್ ಅನ್ನು ನೋಂದಣಿ ಮಾಡಿಸಬೇಕಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ಜೊತೆಗೆ ಹೊಸ ಇವಿ ಸ್ಕೂಟರ್ ಚಾಲನೆಗೆ ಚಾಲನಾ ಪರವಾನಿಗೆ ಕೂಡಾ ಅವಶ್ಯವಿಲ್ಲ ಎಂದಿರುವ ಒಕಿನಾವ ಕಂಪನಿಯು ಅತಿ ಕಡಿಮೆ ನಿರ್ವಹಣಾ ವೆಚ್ಚದ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸಿದೆ.

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ಹೊಸ ಸ್ಕೂಟರ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್, ಟರ್ನ್ ಸಿಗ್ನಲ್ ಇಂಡಿಕೇಟರ್, ಕಿಕ್‌ಸ್ಟ್ಯಾಂಡ್, ಸಿಂಗಲ್ ಪೀಸ್ ಹ್ಯಾಂಡಲ್‌ಬಾರ್, ಪುಶ್ ಅಪ್ ಮಾದರಿಯ ಪಿಲಿಯನ್ ಸೀಟ್ ಮತ್ತು ಬ್ಯಾಕ್‌ರೆಸ್ಟ್ ಜೋಡಿಸಲಾಗಿದ್ದು, ತೆಗೆದು ಹಾಕಬಹುದಾದ ಬ್ಯಾಟರಿ ಸೌಲಭ್ಯವಿರುವುದರಿಂದ ಚಾರ್ಜಿಂಗ್ ಸಮಸ್ಯೆ ಬಗೆಹರಿಸಲು ಬ್ಯಾಕ್ಅಪ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವ ಒಕಿನಾವ ಕಂಪನಿಯು ಶೀಘ್ರದಲ್ಲೇ ವಿತರಣೆಗೆ ಚಾಲನೆ ನೀಡಲಿದ್ದು, ಹೊಸ ಸ್ಕೂಟರ್ ಮಾದರಿಯು ಮುಂಬರುವ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Okinawa Dual Electric Scooter Launched In India. Read in Kannada.
Story first published: Thursday, January 21, 2021, 20:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X