ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೂ ಮುನ್ನ ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಓಲಾ ಎಲೆಕ್ಟ್ರಿಕ್ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಆ್ಯಪ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ದೇಶಾದ್ಯಂತ ಅತಿ ದೊಡ್ಡ ಚಾರ್ಜಿಂಗ್ ನೆಟ್‌ವರ್ಕ್ ತೆರೆಯುವ ಯೋಜನೆಯಲ್ಲಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾಗಿರುವ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯದ ಮೇಲೆ ವಿಶೇಷ ಆಸಕ್ತಿವಹಿಸಿರುವ ಓಲಾ ಕಂಪನಿಯು ದೇಶದ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ವಿಸ್ತರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಹೋಂ ಚಾರ್ಜರ್ ಸೌಲಭ್ಯ ಹೊರತುಪಡಿಸಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಹೈಪರ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಗಂಟೆಗೆ ನೂರಾರು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಒಂದೇ ಅವಧಿಯಲ್ಲೇ ಚಾರ್ಜ್ ಮಾಡಬಹುದಾಗಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಓಲಾ ಕಂಪನಿಯು ದೇಶದ 400 ನಗರಗಳಲ್ಲಿ 1 ಲಕ್ಷ ಫಾಸ್ಟ್ ಚಾರ್ಜರ್‌ಗಳನ್ನು ತೆರೆಯಲಿದ್ದರೆ ಆಯ್ದ ಮೆಟ್ರೊ ನಗರಗಳಲ್ಲಿ ಮಾತ್ರ ಹೈಪರ್ ಚಾರ್ಜಿಂಗ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ. ಹೈಪರ್ ಚಾರ್ಜಿಂಗ್ ಪಾರ್ಕ್‌ಗಳಲ್ಲಿ ಒಂದೇ ಬಾರಿಗೆ ನೂರಾರು ಇವಿ ಸ್ಕೂಟರ್‌ಗಳನ್ನು ಚಾರ್ಜ್ ಮಾಡಬಹುದಾಗಿದ್ದು, ಹೊಸ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಇನ್ನು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಓಲಾ ಎಲೆಕ್ಟ್ರಿಕ್ ಬಾರಿಗೆ ವಾಹನಗಳ ಉತ್ಪಾದನೆದಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಇವಿ ವಾಹನಗಳನ್ನು ರಫ್ತು ಮಾಡಲು ಸಿದ್ದವಾಗಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಈ ವರ್ಷಾಂತ್ಯಕ್ಕೆ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವ ಓಲಾ ಕಂಪನಿಯು ತಮಿಳುನಾಡಿನ ಹೊಸೂರಿನಲ್ಲಿ ಹೊಸ ವಾಹನ ಉತ್ಪಾದನಾ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಮೊದಲ ಹಂತದ ನಿರ್ಮಾಣ ಪ್ರಕ್ರಿಯೆಗಳನ್ನು ಆರಂಭಿಸಿದೆ. ಬೃಹತ್ ಪ್ರಮಾಣದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಯೋಜನೆಗಾಗಿ ನೇದರ್ಲ್ಯಾಂಡ್ ಮೂಲದ ಎಟರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯೊಂದಿಗೆ ಜೊತೆಗೂಡಿಸಿರುವ ಓಲಾ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಹೊಸ ಇವಿ ವಾಹನಗಳನ್ನು ರಫ್ತು ಮಾಡುವ ಬೃಹತ್ ಯೋಜನೆ ಹೊಂದಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಮೂಲಕ ಹೊಸ ಘಟಕವು ದೇಶದ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಗಳಲ್ಲಿ ಒಂದಾಗಲಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಿವಿಧ ಕಾರ್ಯಗಳಿಗಾಗಿ ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲು ನಿರ್ಧರಿಸಲಾಗುತ್ತಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಪ್ರತಿ 2 ಸೆಕೆಂಡುಗಳಲ್ಲಿ 1 ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಳ್ಳಲಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ವಿವಿಧ ಉತ್ಪಾದನಾ ಹಂತಗಳಲ್ಲಿ ಒಂದೇ ಬಾರಿಗೆ ನೂರಾರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಸೆಂಬ್ಲಿ ಮಾಡುವ ರೋಬೋಟ್‌ಗಳು ಅಂತಿಮವಾಗಿ ಪ್ರತಿ ಸೆಕೆಂಡುಗಳಲ್ಲಿ ಒಂದು ಉತ್ಪಾದನಾ ಮಾದರಿಯನ್ನು ಮಾರಾಟಕ್ಕೆ ಸಿದ್ದಗೊಳಿಸಲಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಹೊಸ ಯೋಜನೆಗಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಇವಿ ವಾಹನಗಳನ್ನು ಅಭಿವೃದ್ದಿಪಡಿಸಲಿದೆ.

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಹೊಸ ಇವಿ ವಾಹನ ಉತ್ಪಾದನಾ ಘಟಕದೊಂದಿಗೆ ಓಲಾ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುವ ಸ್ಕೂಟರ್‌ಗಳನ್ನು ಭಾರತದಲ್ಲಿ ಮಾತ್ರವಲ್ಲದೇ ಯುರೋಪ್, ಇಂಗ್ಲೆಂಡ್, ಲ್ಯಾಟಿನ್ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಹೈಪರ್ ಚಾರ್ಜರ್ ನೆಟ್‌ವರ್ಕ್ ಘೋಷಿಸಿದ ಓಲಾ

ಓಲಾ ಕಂಪನಿಯು ಬಿಡುಗಡೆ ಮಾಡಲಿರುವ ಹೊಸ ಸ್ಕೂಟರಿನ ಅಧಿಕೃತ ಚಿತ್ರಗಳನ್ನು ಈಗಾಗಲೇ ಬಹಿರಂಗಪಡಿಸಿದ್ದು, ಹೊಸ ಸ್ಕೂಟರ್ ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್‌ನೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯ ಹೊಂದಿದೆ.

Most Read Articles

Kannada
English summary
Ola Eletric Announces Hypercharger Network. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X