75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ಇಟಲಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಪಿಯಾಜಿಯೊ ತನ್ನ ವೆಸ್ಪಾ ಬ್ರ್ಯಾಂಡ್ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 75ನೇ ಆನಿವರ್ಸರಿ ಎಡಿಷನ್ ಸ್ಕೂಟರ್‌ಗಳು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ವೆಸ್ಪಾ ಮತ್ತು ಎಪ್ರಿಲಿಯಾ ಬ್ರಾಂಡ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪಿಯಾಜಿಯೊ ಕಂಪನಿಯು ವೆಸ್ಪಾ ಸಹ ಬ್ರ್ಯಾಂಡ್ ಮಾರುಕಟ್ಟೆಗೆ ಪರಿಚಯಿಸಿ 75 ವರ್ಷಗಳ ಯಶಸ್ವಿ ಉದ್ಯಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಗ್ರಾಹಕರಿಗೆ ಹೊಸ ಸಂಭ್ರಮದ ಭಾಗವಾಗಿ ವಿಶೇಷ ಸೌಲಭ್ಯಗಳನ್ನು ಒಳಗೊಂಡ ಸ್ಪೆಷಲ್ ಎಡಿಷನ್‌ಗಳನ್ನು ಇಂಡೋನೇಷ್ಯಾದ ಮಾರುಕಟ್ಟೆಗಾಗಿ ಬಿಡುಗಡೆ ಮಾಡಿದೆ.

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ವೆಸ್ಪಾ ಮಾದರಿಯು 75ನೇ ಆನಿವರ್ಸರಿ ಎಡಿಷನ್ ತನ್ನ ಹೈ ಎಂಡ್ ಮಾದರಿಗಳಾದ ಜಿಟಿಎಸ್ ಮತ್ತು ಪ್ರಿಮಾವೆರಾ 150 ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ. ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ವೆಸ್ಪಾ ಪ್ರಿಮಾವೆರಾ 150 ಸ್ಕೂಟರ್ 64 ಮಿಲಿಯನ್ ಮತ್ತು ಜಿಟಿಎಸ್ ಮಾದರಿಯ ಬೆಲೆಯು ಆರ್ಪಿ 175 ಮಿಲಿಯನ್ ಆಗಿದೆ,

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ಎರಡೂ ಸ್ಕೂಟರ್‌ಗಳು ವಿಶೇಷ ಬಣ್ಣ ಮತ್ತು ಗ್ರಾಫಿಕ್ಸ್ ಪಡೆಯುತ್ತವೆ. ಸ್ಕೂಟರ್‌ಗಳು ಯೆಲ್ಲೋ ಮೆಟಾಲಿಕ್ ಬಾಡಿವರ್ಕ್ ಅನ್ನು ಹೊಂದಿದ್ದರೆ, ಸೈಡ್ ಪ್ಯಾನಲ್ಗಳು ಮತ್ತು ಮಡ್ಗಾರ್ಡ್ 75ನೇ ವಾರ್ಷಿಕೋತ್ಸವದ ನೆನಪಿಗಾಗಿ "75" ಬ್ಯಾಡ್ಜ್ ಅನ್ನು ಹೊಂದಿದೆ.

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ಈ ಸ್ಪೆಷಲ್ ಎಡಿಷನ್ ಮಾದರಿಗಳಲ್ಲಿನ ಮತ್ತೊಂದು ಸ್ಟೈಲಿಂಗ್ ಲೆದರ್ ಬ್ಯಾಗ್ ಟೇಲ್ ನಲ್ಲಿ ಜೋಡಿಸಲಾಗಿದೆ. ಇದಲ್ಲದೆ, ಸೀಟ್ ಕವರ್ ಲೆದರ್ ಅಂಶಗಳಿಂದ ಕೂಡಿದೆ. ಈ ಸೀಟ್ ಉತ್ತಮ ಕಂಫರ್ಟ್ ನಿಂದ ಕೂಡಿದೆ.

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ಇನ್ನು ಈ ಸ್ಕೂಟರ್ ರಿಯರ್-ವ್ಯೂ ಮೀರರ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲಗೇಜ್ ರ್ಯಾಕ್ ಮತ್ತು ಎಕ್ಸಾಸ್ಟ್ ಕ್ರೋಮ್ ಫಿನಿಶ್ ಅನ್ನು ಹೊಂದಿರುತ್ತದೆ. ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಹೊಸ ಸ್ಕೂಟರ್‌ಗಳು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರಲಿವೆ.

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ವಿವಿಧ ಸ್ಕೂಟರ್‌ಗಳಿಗೆ ಅನುಗುಣವಾಗಿ ವಿವಿಧ ಬಣ್ಣಗಳ ಆಯ್ಕೆ, ಕ್ರೋಮ್ ಫಿನಿಶಿಂಗ್‌ಗಳು, ಸೈಡ್ ಪ್ಯಾನಲ್ ಸೇರಿದಂತೆ ಇಟಾಲಿಯನ್ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವ ಆಕ್ಸೆಸರಿಸ್ ಕಿಟ್ ಹೊಂದಿರಲಿವೆ. ಇನ್ನು ಪಿಯಾಜಿಯೊ ತನ್ನ ಸಹ ಬ್ರಾಂಡ್ ವೆಸ್ಪಾ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಯಶಸ್ವಿ 75 ವರ್ಷಗಳನ್ನು ಪೂರೈಸಿದೆ.

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

ಕಂಪನಿಯು ಇದುವರೆಗೆ 19 ಮಿಲಿಯನ್(1.90 ಕೋಟಿ) ಸ್ಕೂಟರ್‌ಗಳ ಉತ್ಪಾದನಾ ಗುರಿತಲುಪಿದೆ. 1946ರಲ್ಲಿ ಇಟಾಲಿಯ ಪ್ಯಾಂಟೆಡೊರಾ ಎನ್ನುವಲ್ಲಿ ಮೊದಲ ಸ್ಕೂಟರ್ ನಿರ್ಮಾಣದೊಂದಿಗೆ ಜಾಗತಿಕ ಆಟೋ ಉದ್ಯಮಕ್ಕೆ ಅಧಿಕೃತವಾಗಿ ಪ್ರವೇಶಿಸಿದ ವೆಸ್ಪಾ ಕಂಪನಿಯು ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ 83 ರಾಷ್ಟ್ರಗಳಲ್ಲಿ ಮಾರಾಟ ಜಾಲ ಹೊಂದಿದೆ,

75ನೇ ಆನಿವರ್ಸರಿ ಎಡಿಷನ್ ವೆಸ್ಪಾ ಸ್ಕೂಟರ್‌ಗಳು ಬಿಡುಗಡೆ

75ನೇ ಆನಿವರ್ಸರಿ ಎಡಿಷನ್ ಸ್ಕೂಟರ್‌ಗಳು ಆಕರ್ಷಕ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಕೂಡ ಬಿಡುಗಡೆಗೊಳಿಸಬಹುದು.

Most Read Articles

Kannada
Read more on ವೆಸ್ಪಾ vespa
English summary
75th Anniversary Edition Vespa scooters launched in Indonesia. Read In Kananda.
Story first published: Wednesday, June 30, 2021, 21:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X