ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ರೂ. 100 ರ ಗಡಿ ದಾಟಿದೆ. ಪೆಟ್ರೋಲ್ ಬೆಲೆ ಏರಿಕೆಯು ವಾಹನ ಸವಾರರನ್ನು ಪರದಾಡುವಂತೆ ಮಾಡಿದೆ. ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಭಾರತದಲ್ಲಿ ಸದ್ಯಕ್ಕೆ ಎರಡು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮಾತ್ರ ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತಿವೆ. ಇನ್ನುಳಿದಂತೆ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತವೆ. ಬಜಾಜ್ ಆಟೋ (Bajaj Auto) ಹಾಗೂ ಟಿವಿಎಸ್ ಮೋಟಾರ್ (TVS Motor) ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್'ಗಳನ್ನು ಮಾರಾಟ ಮಾಡುತ್ತಿವೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಬಜಾಜ್ ಕಂಪನಿಯು ಚೇತಕ್ (Chetak) ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಮಾರಾಟ ಮಾಡಿದರೆ, ಟಿವಿಎಸ್ ಮೋಟಾರ್ ಕಂಪನಿಯು ಐಕ್ಯೂಬ್ (iQube) ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಇದರ ಜೊತೆಗೆ ಎಥರ್ ಎನರ್ಜಿಯಂತಹ ವಿವಿಧ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಆದರೆ ಬಜಾಜ್ ಹಾಗೂ ಟಿವಿಎಸ್ ಕಂಪನಿಗಳು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾಗಿದ್ದು, ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳನ್ನು ಮಾರಾಟ ಮಾಡುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದ ಬಗ್ಗೆ ಹೇಳುವುದಾದರೆ ಬಜಾಜ್ ಚೇತಕ್ ಹಾಗೂ ಟಿವಿಎಸ್ ಐಕ್ಯೂಬ್ ಸ್ಕೂಟರ್ ಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಕಳೆದ ನವೆಂಬರ್‌ನಲ್ಲಿ ಟಿವಿಎಸ್ ಐಕ್ಯೂಬ್ ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ. ಕಳೆದ 11 ತಿಂಗಳ ಮಾರಾಟದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಿಂತ ಹೆಚ್ಚು ಮಾರಾಟವಾಗಿದೆ. ಆದರೆ ನವೆಂಬರ್ ತಿಂಗಳಿನಲ್ಲಿ ಮಾತ್ರ ಐಕ್ಯೂಬ್ ಸ್ಕೂಟರ್, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್'ಗಿಂತ ಹೆಚ್ಚು ಮಾರಾಟವಾಗಿದೆ. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 699 ಯುನಿಟ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿತ್ತು.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಇನ್ನು ಬಜಾಜ್ ಆಟೋ ಕಂಪನಿಯು ಕಳೆದ ತಿಂಗಳು ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ 511 ಯೂನಿಟ್ ಗಳನ್ನು ಮಾರಾಟ ಮಾಡಿದೆ. 2020ರ ನವೆಂಬರ್ ತಿಂಗಳಿನಲ್ಲಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿನ 99 ಯುನಿಟ್ ಗಳನ್ನು ಮಾರಾಟ ಮಾಡಿದ್ದರೆ, ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ 264 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿರುವುದು ಇದರಿಂದ ಸಾಬೀತಾಗಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಕಳೆದ ತಿಂಗಳು ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಮಾರಾಟ ಕಡಿಮೆಯಾಗಿದೆಯಾದರೂ, ಅದಕ್ಕಿಂತ ಹಿಂದಿನ ತಿಂಗಳುಗಳಲ್ಲಿ ಬಜಾಜ್ ಆಟೋ ಕಂಪನಿಯು ಐಕ್ಯೂಬ್ ಗಿಂತ ಎರಡು ಪಟ್ಟು ಹೆಚ್ಚು ಚೇತಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ಅಕ್ಟೋಬರ್‌ನಲ್ಲಿ 395 ಯುನಿಟ್ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರಾಟವಾಗಿದ್ದರೆ, ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಒಟ್ಟು 835 ಯುನಿಟ್‌ಗಳು ಮಾರಾಟವಾಗಿದ್ದವು.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಈ ಮೂಲಕ ಬಜಾಜ್ ಆಟೋ ಕಂಪನಿಯು ಒಂದೇ ತಿಂಗಳಿನಲ್ಲಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡಿತ್ತು. ಇದಕ್ಕೂ ಮುನ್ನ ಕಂಪನಿಯು ಕಳೆದ ಜುಲೈನಲ್ಲಿ 730 ಯುನಿಟ್ ಹಾಗೂ ಸೆಪ್ಟೆಂಬರ್‌ನಲ್ಲಿ 642 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಇನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಐಕ್ಯೂಬ್ ಸ್ಕೂಟರಿನ ಗರಿಷ್ಠ 766 ಯುನಿಟ್‌ಗಳು ಮಾರಾಟವಾಗಿದ್ದವು.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಈಗ ನವೆಂಬರ್‌ನಲ್ಲಿ 699 ಯುನಿಟ್‌ ಸ್ಕೂಟರ್'ಗಳು ಮಾರಾಟವಾಗಿವೆ. ಈ ವರ್ಷ ಕಳೆದ 11 ತಿಂಗಳುಗಳಲ್ಲಿ ಒಟ್ಟು 4,343 ಯುನಿಟ್ ಚೇತಕ್ ಸ್ಕೂಟರ್‌ಗಳನ್ನು ಹಾಗೂ 4,764 ಯುನಿಟ್ ಐಕ್ಯೂಬ್ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ 2021ರಲ್ಲಿ ಇದುವರೆಗೂ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿಗಿಂತ, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿನ 421 ಯುನಿಟ್‌ ಹೆಚ್ಚು ಮಾರಾಟವಾಗಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಡಿಸೆಂಬರ್ ಮಾರಾಟದ ಅಂಕಿ ಅಂಶಗಳನ್ನು ಇನ್ನೂ ಸೇರಿಸಲಾಗಿಲ್ಲ. ಆದರೆ ಈ ತಿಂಗಳು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿಗಿಂತ ಹೆಚ್ಚು ಮಾರಾಟವಾಗುತ್ತವೆಯೇ ಎಂದು ಕಾದು ನೋಡಬೇಕಿದೆ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷದ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿಗೆ ನೇರ ಪ್ರತಿಸ್ಪರ್ಧಿಯಾಗಿದೆ. ಈ ವರ್ಷದ ಮೊದಲ ಕೆಲವು ತಿಂಗಳುಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಮೂರು ಅಂಕಿಗಳಿಗಿಂತ ಕಡಿಮೆಯಾಗಿತ್ತು.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಕರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಅಂದರೆ ಕಳೆದ ಮೇ ತಿಂಗಳಿನಲ್ಲಿ ಹೊರತು ಪಡಿಸಿದರೆ ಬೇರೆ ಯಾವುದೇ ಯಾವುದೇ ತಿಂಗಳಲ್ಲಿ ಟಿವಿಎಸ್ ಐಕ್ಯೂಬ್ ಮಾರಾಟವು ಮೂರು ಅಂಕಿಗಳಿಗಿಂತ ಕಡಿಮೆಯಾಗಿಲ್ಲ. ಹೀಗಾಗಿ 2021ರ ಮಾರಾಟದಲ್ಲಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸುಲಭವಾಗಿ ಹಿಂದಿಕ್ಕುವ ಸಾಧ್ಯತೆಗಳಿವೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಈ ವರ್ಷ ಬಜಾಜ್ ಚೇತಕ್‌ನ ಸರಾಸರಿ ಮಾಸಿಕ ಮಾರಾಟವು 395 ಯುನಿಟ್‌ಗಳಾಗಿದ್ದರೆ, ಐಕ್ಯೂಬ್ ಸ್ಕೂಟರಿನ ಸರಾಸರಿ ಮಾಸಿಕ ಮಾರಾಟವು 433 ಯುನಿಟ್‌ಗಳಾಗಿದೆ. 2020ರ ಆರಂಭದಲ್ಲಿ ಈ ಎರಡೂ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿದಾಗ, ಮೊದಲ ಕೆಲವು ತಿಂಗಳು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಮಾರಾಟವಾಗಿತ್ತು. ಐಕ್ಯೂಬ್ ಹೆಚ್ಚು ಮಾರಾಟವಾಗುತ್ತಿರುವುದಕ್ಕೆ ಬೆಲೆ ಪ್ರಮುಖ ಕಾರಣವಾಗಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಟಿವಿಎಸ್ ಐಕ್ಯೂಬ್, ಚೇತಕ್ ಎಲೆಕ್ಟ್ರಿಕ್ ಸ್ಕೂಟರಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಕೆಲವು ನಗರಗಳಲ್ಲಿ, ಐಕ್ಯೂಬ್ ಸ್ಕೂಟರಿನ ಆನ್ ರೋಡ್ ಬೆಲೆ ರೂ. 1.50 ಲಕ್ಷಗಳಾಗಿದೆ. ಆದರೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆಯಲ್ಲಿ ಕಾಲ ಕ್ರಮೇಣ ಹೆಚ್ಚಳವಾಗಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ ಚೇತಕ್ ಸ್ಕೂಟರ್ ಹಿಂದಿಕ್ಕಿದ ಟಿವಿಎಸ್ ಐಕ್ಯೂಬ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬೆಂಗಳೂರು, ಪುಣೆ, ಚೆನ್ನೈ, ಮಂಗಳೂರು, ಮೈಸೂರು, ಹೈದರಾಬಾದ್, ನಾಗ್ಪುರ, ಔರಂಗಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಟಿವಿಎಸ್ ಮೋಟಾರ್ ಕಂಪನಿಯು ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚೆನ್ನೈ ಸೇರಿದಂತೆ ಭಾರತದ ವಿವಿಧ ನಗರಗಳಲ್ಲಿ ಮಾರಾಟ ಮಾಡುತ್ತದೆ.

Most Read Articles

Kannada
English summary
Tvs iqube overtakes chetak electric scooter in nov 2021 sales details
Story first published: Thursday, December 16, 2021, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X