ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಭಾರತೀಯ ಯುವಕರ ಅಚ್ಚುಮೆಚ್ಚಿನ ಬೈಕ್'ಗಳಲ್ಲಿ ಒಂದು. ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಅನ್ನು ಯುವಕನೊಬ್ಬ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಂತೆ ಮಾಡಿಫೈ ಮಾಡಿದ್ದಾನೆ. ರಾಕೇಶ್ ಬಾಬು ಎಂಬುವವರೇ ತಮ್ಮ ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಅನ್ನು ಮಾರ್ಪಾಡು ಮಾಡಿರುವವರು.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಅವರು ಈ ಹಿಂದೆ ಸುಜುಕಿ ಸಮುರಾಯ್ ಬೈಕಿನ ಎಂಜಿನ್ ಬಳಸಿ ಫೋಕ್ಸ್‌ವ್ಯಾಗನ್ ಬೀಟಲ್ ಮಾದರಿಯ ಕಾರ್ ಅನ್ನು ಅಭಿವೃದ್ಧಿಪಡಿಸಿದ್ದರು ಎಂಬುದು ಗಮನಾರ್ಹ. ಅವರು ಈ ಕಾರ್ ಅನ್ನು ಸ್ಕ್ರ್ಯಾಪ್ ಭಾಗಗಳೊಂದಿಗೆ ವಿನ್ಯಾಸಗೊಳಿಸಿದ್ದರು. ರಾಕೇಶ್ ಬಾಬು ಈ ಕಾರ್ ಅನ್ನು ವಿನ್ಯಾಸಗೊಳಿಸಿದ ನಂತರ ಹಲವು ಜನರ ಗಮನ ಸೆಳೆದರು. ಈ ಕಾರಿನ ವೀಡಿಯೊ ವೈರಲ್ ಆದ ನಂತರ ಅವರು ಯೂಟ್ಯೂಬ್‌ನಲ್ಲಿಯೂ ಜನಪ್ರಿಯರಾದರು.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ ಗಳನ್ನು ಸಹ ಪಡೆದರು. ರಾಕೇಶ್ ಬಾಬು ಇದುವರೆಗೂ ಹಲವು ರೀತಿಯ ವಾಹನಗಳನ್ನು ವಿನ್ಯಾಸಗೊಳಿಸಿದ್ದಾರೆ. ಬಾಲಕರು ಚಾಲನೆ ಮಾಡುವ ಎಲೆಕ್ಟ್ರಿಕ್ ಜೀಪ್, ಮೋಟಾರ್ ಸೈಕಲ್ ಸೇರಿದಂತೆ ಹಲವು ವಾಹನಗಳನ್ನು ಅವರು ಅಭಿವೃದ್ಧಿಪಡಿಸಿದ್ದಾರೆ ಎಂಬುದು ಗಮನಾರ್ಹ. ಈಗ ರಾಕೇಶ್ ಬಾಬು ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್‌ ಅನ್ನು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಂತೆ ಮಾಡಿಫೈ ಮಾಡಿದ್ದಾರೆ.

ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಅನ್ನು ಬುಲೆಟ್ ಬೈಕಿನಂತೆ ಮಾಡಿಫೈ ಮಾಡಲು ರಾಕೇಶ್ ಬಾಬು ಸಾಕಷ್ಟು ಶ್ರಮ ವಹಿಸಿದ್ದಾರೆ. ಅದಕ್ಕಾಗಿ ಎಕ್ಸ್‌ಎಲ್ 100 ಮೊಪೆಡ್ ನಲ್ಲಿದ್ದ ಹಲವು ಭಾಗಗಳನ್ನು ತೆಗೆದು ಹಾಕಿದ್ದಾರೆ. ನಂತರ ಬುಲೆಟ್ ಬೈಕ್ ಅನ್ನು ಬಿಂಬಿಸುವ ಭಾಗಗಳನ್ನು ಅಳವಡಿಸಿದ್ದಾರೆ. ತರುವಾಯ, ಚಾಸಿಸ್ ರಚನೆಗೆ ಸಣ್ಣ ಬದಲಾವಣೆಗಳನ್ನು ಮಾಡಿದ್ದಾರೆ.

ಎಕ್ಸ್‌ಎಲ್ 100 ಮೊಪೆಡ್'ನ ಹಿಂಭಾಗದ ಸಸ್ಪೆಂಷನ್ ತೆಗೆದು ಬೇರೆ ಸಸ್ಪೆಂಷನ್ ಅಳವಡಿಸಲಾಗಿದೆ. ಫ್ಯೂಯಲ್ ಟ್ಯಾಂಕ್ ಸ್ಥಾನವನ್ನು ಸಹ ಬದಲಿಸಲಾಗಿದೆ. ಹಳೆಯ ಫ್ಯೂಯಲ್ ಟ್ಯಾಂಕ್ ತೆಗೆದು ಫೈಬರ್ ಗ್ಲಾಸ್ ಡಮ್ಮಿ ಟ್ಯಾಂಕ್ ಅಳವಡಿಸಲಾಗಿದೆ. ಈ ಟ್ಯಾಂಕ್ ಬುಲೆಟ್ ಬೈಕ್ ಅನ್ನು ಅನುಕರಿಸುವ ಸ್ಥಾನವನ್ನು ಹೊಂದಿದೆ. ಅದೇ ರೀತಿ ಸೀಟುಗಳು, ಹೆಡ್‌ಲೈಟ್‌ಗಳು, ಇಂಡಿಕೇಟರ್ ಲೈಟ್‌ಗಳು, ಸೈಡ್ ಪ್ಯಾನೆಲ್‌ಗಳು ಹಾಗೂ ಬ್ಯಾಟರಿ ವಿಭಾಗವನ್ನು ಬುಲೆಟ್ ಬೈಕಿಗೆ ಹೊಂದುವಂತೆ ಮರು ವಿನ್ಯಾಸಗೊಳಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಈ ರೀತಿಯ ಕ್ರಮಗಳ ಮೂಲಕ ಮಿನಿ ಬುಲೆಟ್ ಬೈಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ರಾಕೇಶ್ ಬಾಬು ಎಂಜಿನ್ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿದ್ದಾರೆ. ಆದರೆ ಈ ವಾಹನದಲ್ಲಿರುವುದು ನಿಜವಾದ ಎಂಜಿನ್ ಅಲ್ಲ ಎಂದು ಹೇಳಲಾಗಿದೆ. ಈ ವಾಹನದಲ್ಲಿರುವ ಎಂಜಿನ್ ನಕಲಿಯಾಗಿದೆ. ಇದು ಬುಲೆಟ್ ಬೈಕಿನ ಎಂಜಿನ್‌ನಂತೆ ಕಾಣಲು ಫೈಬರ್ ಪ್ಯಾನಲ್‌ಗಳಿಂದ ತಯಾರಿಸಿದ ನಕಲಿ ಎಂಜಿನ್.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಈ ವಾಹನವನ್ನು ಹುಡುಗರು ಬಳಸಲು ಅನುಕೂಲವಾಗುವಂತೆ ಹಗುರವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಈ ರೀತಿ ವಾಹನಗಳನ್ನು ಮಾರ್ಪಡಿಸುವುದು ಅಪರಾಧ. ಆದರೆ, ರಾಕೇಶ್ ಬಾಬು ಅವರ ಈ ಕಾರ್ಯವನ್ನು ಶ್ಲಾಘಿಸದೇ ಇರಲು ಸಾಧ್ಯವಿಲ್ಲವೆಂದು ವಾಹನ ಪ್ರಿಯರು ಪ್ರತಿಕ್ರಿಯೆ ನೀಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಇತ್ತೀಚಿಗೆ ಅಸ್ಸಾಂನ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ನಾಲ್ಕು ಜನ ಪ್ರಯಾಣಿಸುವಂತೆ ಪರಿವರ್ತಿಸಿದ್ದಾರೆ. ಅವರು ತಮ್ಮ ನಾಲ್ಕು ಜನರ ಕುಟುಂಬಕ್ಕಾಗಿ ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಕೂಟರ್ ನೋಡಲು ತುಂಬಾ ವಿಶೇಷವಾಗಿರುವುದರ ಜೊತೆಗೆ ವಿಶಿಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಮಾಡಿಫೈಗೊಂಡ ಸ್ಕೂಟರ್ ನಲ್ಲಿ ನಾಲ್ವರು ಪ್ರಯಾಣಿಸುತ್ತಿರುವುದನ್ನು ಕಾಣಬಹುದು.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಈ ಸ್ಕೂಟರ್ ಮಾಲೀಕರಾದ ಅತುಲ್ ದಾಸ್, ಎಡಿ ಆಟೋಮೊಬೈಲ್ ವರ್ಕ್‌ಶಾಪ್‌ನ ಮಾಲೀಕರಾಗಿದ್ದಾರೆ. ಅವರು ಕೆಲವು ವಾರಗಳ ಹಿಂದೆ ಈ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಯೋಜನೆಗಾಗಿ ಅತುಲ್ ದಾಸ್ ಎರಡು ಸ್ಕೂಟರ್‌ಗಳನ್ನು ಖರೀದಿಸಿದ್ದರು. ನಂತರ ಎರಡು ಸ್ಕೂಟರ್ ಗಳನ್ನು ಒಟ್ಟಿಗೆ ಸೇರಿಸಿ ಮಾಡಿಫೈ ಮಾಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ತಮ್ಮ ನಾಲ್ಕು ಸದಸ್ಯರ ಕುಟುಂಬವು ಸ್ಕೂಟರ್‌ನಲ್ಲಿ ಯಾವುದೇ ಅನಾನುಕೂಲವಿಲ್ಲದಂತೆ ಸಂಚರಿಸಲು ಅವರು ಈ ವಿಶಿಷ್ಟ ಐಡಿಯಾ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅತುಲ್ ದಾಸ್, ಈ ಸ್ಕೂಟರ್ ಅನ್ನು ತಯಾರಿಸುವುದು ನನ್ನ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ನಾನು ಹೆಚ್ಚುವರಿಯಾಗಿ ಏನನ್ನಾದರೂ ಮಾಡುವ ಯೋಜನೆ ಹೊಂದಿದ್ದೇನೆ.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಆದರೆ ಯಾವುದೇ ವಾಹನವನ್ನು ಮಾರ್ಪಾಡು ಮಾಡುವುದು ಭಾರತದಲ್ಲಿ ಕಾನೂನುಬಾಹಿರ ಎಂಬುದನ್ನು ಗಮನಿಸಬೇಕು. ಸುಪ್ರೀಂ ಕೋರ್ಟ್ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಮಾಡಿಫೈಗೊಂಡಿರುವ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಅಂತಹ ವಾಹನಗಳನ್ನು ಜನರು ರೇಸಿಂಗ್ ಟ್ರ್ಯಾಕ್ ಅಥವಾ ಫಾರಂಹೌಸ್‌ನಂತಹ ಖಾಸಗಿ ಸ್ಥಳಗಳಲ್ಲಿ ಬಳಸಬಹುದು.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಒಂದು ವೇಳೆ ಸಾರ್ವಜನಿಕ ರಸ್ತೆಗಳಲ್ಲಿ ಕಂಡು ಬಂದರೆ ಸಾರಿಗೆ ಇಲಾಖೆ ಅಥವಾ ಸಂಚಾರಿ ಪೊಲೀಸರು ಆ ವಾಹನಗಳನ್ನು ವಶಕ್ಕೆ ಪಡೆಯಬಹುದು. ಇದು ಮಾತ್ರವಲ್ಲದೆ ಆಫ್ಟರ್ ಮಾರ್ಕೆಟ್ ಬಿಡಿ ಭಾಗಗಳಾದ ಬುಲ್‌ಬಾರ್‌ಗಳ ಅಳವಡಿಕೆ ಹಾಗೂ ಇತರ ಬದಲಾವಣೆಗಳನ್ನು ಸಹ ವಾಹನದಲ್ಲಿ ನಿಷೇಧಿಸಲಾಗಿದೆ. ಇದರ ಜೊತೆಗೆ ಯಾವುದೇ ವಾಹನದಲ್ಲಿ ನಿಗದಿಪಡಿಸಿರುವುದಕ್ಕಿಂತ ದೊಡ್ಡ ಗಾತ್ರದ ಟಯರ್‌ಗಳನ್ನು ಸಹ ಅಳವಡಿಸುವಂತಿಲ್ಲ.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಅಂತಹ ವಾಹನಗಳು ರಸ್ತೆಗಳಲ್ಲಿ ಖಂಡಿತವಾಗಿಯೂ ಸಾರ್ವಜನಿಕರ ಗಮನವನ್ನು ತಮ್ಮತ್ತ ಸೆಳೆಯುತ್ತವೆ. ಸರಿಯಾದ ಉಪಕರಣಗಳಿಲ್ಲದೆ ಸ್ಥಳೀಯ ಗ್ಯಾರೇಜ್‌ನಲ್ಲಿಮಾಡಲಾಗುವ ಇಂತಹ ಮಾರ್ಪಾಡುಗಳಿಂದ ಅಪಾಯ ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ಮಾಡಿಫೈಗೊಂಡ ವಾಹನಗಳು ರಸ್ತೆಯಲ್ಲಿ ಚಲಿಸುವಾಗ ಕೆಟ್ಟು ನಿಂತರೆ ಅಪಘಾತಗಳೂ ಸಂಭವಿಸಬಹುದು.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಈ ಹಿಂದೆ ಇಂತಹ ಮಾಡಿಫೈಗೊಂಡ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು ಎಂಬುದು ಗಮನಾರ್ಹ. ಆದರೆ ವಾಹನ ಉತ್ಸಾಹಿಗಳು ಮಾತ್ರ ವಾಹನಗಳನ್ನು ಮಾಡಿಫೈ ಮಾಡುವುದನ್ನು ನಿಲ್ಲಿಸಿಲ್ಲ. ಕೆಲವೊಮ್ಮೆ ವಾಹನದ ಮಾರ್ಪಾಡುಗಳು ವಿರೋಧಾಭಾಸವಾಗಿ ಕಾಣುತ್ತವೆ. ಇನ್ನೂ ಕೆಲವೊಮ್ಮೆ ಆಕರ್ಷಕವಾಗಿ ಕಾಣುತ್ತವೆ.

ರಾಯಲ್ ಎನ್‌ಫೀಲ್ಡ್ ಬೈಕಿನಂತೆ ಮಾಡಿಫೈಗೊಂಡ TVS XL ಮೊಪೆಡ್

ಅಂತಹ ವಾಹನಗಳನ್ನು ಪ್ರಶಂಸಿಸದಿರಲು ಸಾಧ್ಯವಿಲ್ಲ. ಹೆಚ್ಚಿನ ಐಷಾರಾಮಿ ಸೌಕರ್ಯ ಹಾಗೂ ಆಕರ್ಷಕ ನೋಟವನ್ನು ಹೊಂದಿರುವ ಅನೇಕವಾಹನಗಳು ನಮ್ಮ ದೇಶದ ಆಟೋ ಉತ್ಸಾಹಿಗಳಿಂದ ಮಾಡಿಫೈ ಆಗಿವೆ. ಇತ್ತೀಚೆಗಷ್ಟೇ ಪ್ರವಾಸಿಗರನ್ನು ಆಕರ್ಷಿಸಲು ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಮರು ವಿನ್ಯಾಸಗೊಳಿಸಲಾಗಿತ್ತು.

Most Read Articles

Kannada
English summary
Tvs xl moped modified like a royal enfield bullet video details
Story first published: Wednesday, December 1, 2021, 15:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X