ಭಾರತದಲ್ಲೂ ಬಿಡುಗಡೆಯಾಗಲಿದೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌

ಇಟಾಲಿಯನ್ ವಾಹನ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೊ ತನ್ನ ಸಹ ಬ್ರಾಂಡ್ ವೆಸ್ಪಾ ದ್ವಿಚಕ್ರ ವಾಹನಗಳಲ್ಲಿ 75ನೇ ವರ್ಷಾಚರಣೆಯ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದ್ದು, ವಿಶೇಷ ಫೀಚರ್ಸ್ ಹೊಂದಿರುವ ಲಿಮಿಟೆಡ್ ಎಡಿಷನ್‌ಗಳು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಯುರೋಪಿನ್ ಮಾರುಕಟ್ಟೆಗಳಲ್ಲಿ ವೆಸ್ಪಾ ಮತ್ತು ಎಪ್ರಿಲಿಯಾ ಬ್ರಾಂಡ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪಿಯಾಜಿಯೊ ಕಂಪನಿಯು ವೆಸ್ಪಾ ಮಾದರಿಯನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿ 75 ವರ್ಷಗಳ ಯಶಸ್ವಿ ಉದ್ಯಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ವೆಸ್ಪಾ ದ್ವಿಚಕ್ರ ವಾಹನಗಳ ಉತ್ಪಾದನೆಯು ಯಶಸ್ವಿ 75 ವರ್ಷಗಳೊಂದಿಗೆ ಇದುವರೆಗೆ 19 ಮಿಲಿಯನ್(1.90 ಕೋಟಿ) ಸ್ಕೂಟರ್‌ಗಳ ಉತ್ಪಾದನಾ ಗುರಿತಲುಪಿದ್ದು, ವಿಶ್ವದ ಪ್ರಮುಖ 83 ರಾಷ್ಟ್ರಗಳಲ್ಲಿ ಮಾರಾಟ ಜಾಲ ಹೊಂದಿದೆ. ವಿಶ್ವಾದ್ಯಂತ ಮೂರು ಉತ್ಪಾದನಾ ಘಟಕಗಳ ಮೂಲಕ ಇದುವರೆಗೆ 1.90 ಕೋಟಿ ಯುನಿಟ್ ಉತ್ಪಾದನೆ ಪೂರ್ಣಗೊಳಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌

ಪ್ರೀಮಿಯಂ ಸ್ಕೂಟರ್ ಮಾದರಿಯಾಗಿರುವ ವೆಸ್ಪಾ ಆವೃತ್ತಿಗಳು ಇತರೆ ಸ್ಕೂಟರ್ ಮಾದರಿಗಳಿಂತಲೂ ತುಸು ದುಬಾರಿ ಎನ್ನಿಸಿದರೂ ತನ್ನದೆ ಬ್ರಾಂಡ್ ಜನಪ್ರಿಯತೆ, ಗುಣಮಟ್ಟದೊಂದಿಗೆ ವಿಶ್ವಾದ್ಯಂತ ಬೇಡಿಕೆ ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಹೀಗಾಗಿ 75ನೇ ವರ್ಷದ ಸಂಭ್ರಮಕ್ಕಾಗಿ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒಳಗೊಂಡ ಸ್ಪೆಷಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್‌ಗಳು ಭಾರತದಲ್ಲೂ ಬಿಡುಗಡೆಯಾಗುವ ನೀರಿಕ್ಷೆಗಳಿವೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌

ಇಟಾಲಿಯನ್ ಶೈಲಿಯೊಂದಿಗೆ ಸ್ಕೂಟರ್ ಉತ್ಪಾದನೆಯಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ವೆಸ್ಪಾ ಮಾದರಿಯು 75ನೇ ವರ್ಷದ ಮಾದರಿಯನ್ನು ತನ್ನ ಹೈ ಎಂಡ್ ಮಾದರಿಗಳಾದ ಜಿಟಿಎಸ್ ಮತ್ತು ಪ್ರಿಮಾವೆರಾ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ದುಬಾರಿ ಬೆಲೆ ಹೊಂದಿರುವ ಜಿಟಿಎಸ್ ಮತ್ತು ಪ್ರಿಮಾವೆರಾ ಸ್ಕೂಟರ್‌ಗಳು ಸದ್ಯ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಮಾತ್ರ ಲಭ್ಯವಿದ್ದು, ಈ ಎರಡು ಸ್ಕೂಟರ್‌ಗಳಲ್ಲಿ ಕಂಪನಿಯು ಆರಂಭಿಕವಾಗಿ 75ನೇ ಸಂಭ್ರಮಾಚರಣೆಯ ಮಾದರಿಗಳನ್ನು ಪರಿಚಯಿಸಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ 75ನೇ ವರ್ಷದ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

75ನೇ ವಾರ್ಷಿಕೋತ್ಸವದ ಆವೃತ್ತಿಗಳು ಈ ವರ್ಷದ ಕೊನೆಯಲ್ಲಿ ಭಾರತದಲ್ಲೂ ಮಾರಾಟಗೊಳ್ಳುವ ನಿರೀಕ್ಷೆಗಳಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಗಂಟ್ 150, ಎಸ್ಎಕ್ಸ್ಎಲ್ ಮತ್ತು ನೊಟ್ಟೆ ಸ್ಕೂಟರ್ ಮಾದರಿಗಳಲ್ಲಿ ವಿಶೇಷ ಆವೃತ್ತಿಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ 75ನೇ ವರ್ಷದ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಹೊಸ ಸ್ಪೆಷಲ್ ಎಡಿಷನ್‌ಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಹೊಸ ಸ್ಕೂಟರ್‌ಗಳು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ 75ನೇ ವರ್ಷದ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಹೊಸ ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳಲ್ಲಿ 75ನೇ ವರ್ಷದ ಸಂಭ್ರಮಾಚರಣೆಯ ಬ್ಯಾಡ್ಜ್ ಜೊತೆಗೆ ವಿವಿಧ ಸ್ಕೂಟರ್‌ಗಳಿಗೆ ಅನುಗುಣವಾಗಿ ವಿವಿಧ ಬಣ್ಣಗಳ ಆಯ್ಕೆ, ಕ್ರೋಮ್ ಫಿನಿಶಿಂಗ್‌ಗಳು, ಸೈಡ್ ಪ್ಯಾನಲ್ ಸೇರಿದಂತೆ ಇಟಾಲಿಯನ್ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವ ಆಕ್ಸೆಸರಿಸ್ ಕಿಟ್ ಹೊಂದಿರಲಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಹಾಗೆಯೇ ಸ್ಪೆಷಲ್ ಎಡಿಷನ್ ಮಾದರಿಗಳಲ್ಲಿನ ಮತ್ತೊಂದು ಸ್ಟೈಲಿಂಗ್ ಲೆದರ್ ಬ್ಯಾಗ್ ಟೇಲ್ ನಲ್ಲಿ ಜೋಡಿಸಲಾಗಿದ್ದು, ಇದಲ್ಲದೆ, ಸೀಟ್ ಕವರ್ ಲೆದರ್ ಅಂಶಗಳಿಂದ ಕೂಡಿದೆ. ಈ ಸೀಟ್ ಉತ್ತಮ ಕಂಫರ್ಟ್ ನಿಂದ ಕೂಡಿದ್ದು, ವಿವಿಧ ಬಣ್ಣಗಳ ಆಯ್ಕೆ ಹೊಂದಿರಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ 75ನೇ ವರ್ಷದ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಸ್ಪೆಷಲ್ ಎಡಿಷನ್ ಸ್ಕೂಟರ್‌ಗಳನ್ನು ಸದ್ಯ ಇಟಲಿ ಮತ್ತು ಯುರೋಪಿನ ಪ್ರಮುಖ ರಾಷ್ಟ್ರಗಳ ನಂತರ ಇತ್ತೀಚೆಗೆ ಇಂಡೋನೇಷ್ಯಾದಲ್ಲೂ ಮಾರಾಟಕ್ಕೆ ಚಾಲನೆ ನೀಡಿರುವ ವೆಸ್ಪಾ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಭಾರತದಲ್ಲೂ ವಿವಿಧ ಸ್ಕೂಟರ್ ಮಾದರಿಗಳನ್ನು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಭಾರತದಲ್ಲಿ ಸದ್ಯ ವಿವಿಧ ಕಂಪನಿಗಳ ಹಲವು ಪ್ರೀಮಿಯಂ ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಸದ್ಯ ವೆಸ್ಪಾ ಬ್ರಾಂಡ್ ನಿರ್ಮಾಣದ ಸ್ಕೂಟರ್‌ಗಳೇ ಹೆಚ್ಚಿನ ಮಟ್ಟದ ಬೆಲೆ ಹೊಂದಿದ್ದರೂ ಉತ್ತಮ ಬೇಡಿಕೆ ಹರಿದುಬರುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸ್ಕೂಟರ್‌ಗಳು ಬಿಡುಗಡೆಯಾಗಲಿವೆ.

ಭಾರತದಲ್ಲೂ ಬಿಡುಗಡೆಯಾಗಲಿವೆ 75ನೇ ವರ್ಷದ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ಇನ್ನು 2018ರಲ್ಲಿ ಅನಾವರಣಗೊಂಡಿದ್ದ ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯು ಕೂಡಾ ಬಿಡುಗಡೆಯ ಹಂತದಲ್ಲಿದ್ದು, ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಎಲೆಕ್ಟ್ರಿಕಾ ಮಾದರಿಯನ್ನು ಕಾರಣಾಂತರಗಳಿಂತ ಮುಂದೂಡಿಕೆ ಮಾಡುತ್ತಾ ಬಂದಿರುವ ಕಂಪನಿಯು ಇದೀಗ ಬಿಡುಗಡೆಯ ಸಿದ್ದತೆಯಲ್ಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ವೆಸ್ಪಾ ಕಂಪನಿಯು ಹೊಸ ಎಲೆಕ್ಟಿಕಾ ಇವಿ ಸ್ಕೂಟರ್‌ನಲ್ಲಿ 4ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‍‌ಗೆ 100ರಿಂದ 120ಕಿ.ಮೀ ಸಾಮರ್ಥ್ಯದೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಭಾರತದಲ್ಲೂ ಬಿಡುಗಡೆಯಾಗಲಿವೆ 75ನೇ ವರ್ಷದ ವೆಸ್ಪಾ ಸ್ಪೆಷಲ್ ಎಡಿಷನ್ ಸ್ಕೂಟರ್‌ ಮಾದರಿಗಳು!

ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್ ಮಾದರಿಯಲ್ಲಿ ಎಪ್ರಿಲಿಯಾ ಇಎಸ್ಆರ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೂಡಾ ಉತ್ತಮ ಮೈಲೇಜ್‌ನೊಂದಿಗೆ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಶೀಘ್ರದಲ್ಲೇ ಈ ಹೊಸ ಸ್ಕೂಟರ್‌ಗಳ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Most Read Articles

Kannada
Read more on ವೆಸ್ಪಾ vespa
English summary
Vespa planning to introduce 75th editions in india details.
Story first published: Monday, August 16, 2021, 0:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X