ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ದೇಶಾದ್ಯಂತ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌‌ಗಳಲ್ಲಿ ಅಗ್ನಿ ಅವಘಡಗಳು ಹೆಚ್ಚುತ್ತಿರುವುದು ಇವಿ ವಾಹನ ಉದ್ಯಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯ ಇವಿ ಸ್ಕೂಟರ್ ಉತ್ಪನ್ನದಲ್ಲಿನ ಅಗ್ನಿ ಅವಘಡವು ಸಹ ಭಾರೀ ಸುದ್ದಿಯಾಗಿತ್ತು.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಚೆನ್ನೈನಲ್ಲಿರುವ ಎಥರ್ ಶೋರೂಂನಲ್ಲಿ ನಡೆದಿದ್ದ ಅಗ್ನಿ ಅವಘಡವು ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಲ್ಲಿ ಗೊಂದಲ ಮೂಡಿಸಿತ್ತು. ಘಟನೆ ನಂತರ ಕೂಡಲೇ ಎಚ್ಚೆತ್ತುಕೊಂಡ ಎಥರ್ ತಾಂತ್ರಿಕ ಸೇವಾ ತಂಡವು ಘಟನೆಗೆ ನಿಖರ ಕಾರಣವನ್ನು ಪತ್ತೆಹಚ್ಚಿದ್ದು, ಸರ್ವಿಸ್ ಕಾರಣಕ್ಕೆ ಶೋರೂಂನಲ್ಲಿದ್ದ ‌ಇವಿ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಘಟನೆಗೂ ಮೊದಲು ಗ್ರಾಹಕರೊಬ್ಬ ಸರ್ವಿಸ್ ಉದ್ದೇಶಕ್ಕಾಗಿ ದುರಸ್ಥಿ ಸ್ಥಿತಿಯಲ್ಲಿದ್ದ ಸ್ಕೂಟರ್ ಅನ್ನು ಶೋರೂಂ ಸಿಬ್ಬಂದಿಗೆ ಒಪ್ಪಿಸಿದ್ದರು. ಗ್ರಾಹಕರ ಸೂಚನೆ ಮೇರೆಗೆ ಸ್ಕೂಟರ್ ಪರಿಶೀಲನೆ ಸಂದರ್ಭದಲ್ಲಿ ಬ್ಯಾಟರಿ ಪ್ಯಾಕ್‌‌ಗೆ ತ್ರೀವವಾದ ಹಾನಿಯಾಗಿರುವುದನ್ನು ಕಂಡುಂಬಂದಿತ್ತು.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಬ್ಯಾಟರಿ ಸುತ್ತಲೂ ಹೆಚ್ಚಿನ ಪ್ರಮಾಣದಲ್ಲಿ ಧೂಳು ಮತ್ತು ಮಣ್ಣು ಮೆತ್ತಿಕೊಂಡಿದ್ದ ಪರಿಣಾಮ ಕಂಪನಿಯು ಸಿಬ್ಬಂದಿಯು ಬ್ಯಾಟರಿ ಪರೀಕ್ಷಿಸುವ ಮುನ್ನ ಹೈ ಪ್ರೆಷರ್ ವಾಟರ್ ಸರ್ವಿಸ್ ಮಾಡಿದ್ದಾರೆ. ಈ ವೇಳೆ ಬ್ಯಾಟರಿ ಮೇಲೆ ಸಣ್ಣದಾದ ಬಿರುಕು ಹೊಂದಿರುವುದು ಖಚಿತಪಡಿಸಿಕೊಂಡಿದ್ದಾರೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಹೈ ಪ್ರೆಷರ್ ವಾಟರ್ ಸರ್ವಿಸ್‌ನಿಂದಾಗಿ ನೀರು ಒಳಗೆ ಇಳಿದಿದ್ದು, ಇದು ಸಿಬ್ಬಂದಿಯ ಗಮನಕ್ಕೆ ಬಂದಿಲ್ಲ. ಬ್ಯಾಟರಿ ಮೇಲ್ಭಾವನ್ನು ಸ್ವಚ್ಚಗೊಳಿಸಿದ ನಂತರ ಪರೀಕ್ಷಿಸುತ್ತಿದ್ದಂತೆ ಬ್ಯಾಟರಿಯಲ್ಲಿ ತುಂಬಿಕೊಂಡಿದ್ದ ನೀರಿನ ಪರಿಣಾಮ ಒಂದೇ ಬಾರಿ ಬ್ಯಾಟರಿಯಲ್ಲಿದ್ದ ಬ್ಯಾಟರಿ ಸೆಲ್‌ಗಳು ಸುಟ್ಟುಕೊಂಡಿವೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಘಟನೆಯಿಂದ ಬ್ಯಾಟರಿ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಹೊತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಸಿಬ್ಬಂದಿಯು ತಡಮಾಡದೆ ಬೆಂಕಿಹೊತ್ತಿಕೊಂಡ ಇವಿ ಸ್ಕೂಟರ್ ಅನ್ನು ಇತರೆ ವಾಹನಗಳಿಂದ ಬೇರ್ಪಡಿಸಿ ಹೊರಗೆ ತಂದಿದ್ದಾರೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಬ್ಯಾಟರಿ ಸೆಲ್‌ಗಳಿಗೆ ಬೆಂಕಿ ಹೊತ್ತಿಕೊಂಡಾಗ ಬ್ಯಾಟರಿಯಲ್ಲಿ ನೀರು ತುಂಬಿಕೊಂಡ ಪರಿಣಾಮ ಬೆಂಕಿಗಿಂತಲೂ ಹೆಚ್ಚು ಹೊಗೆ ತುಂಬಿಕೊಳ್ಳಲಾರಂಭಿಸಿದೆ. ಹೊಗೆ ಪರಿಣಾಮ ಕೂಡಲೇ ಶೋರೂಂನಿಂದ ಎಲ್ಲ ಸಿಬ್ಬಂದಿ ಹೊರಗೆ ಬರುವ ಮೂಲಕ ಬೆಂಕಿ ಅವಘಡದಿಂದ ಪಾರಾಗಿದ್ದು, ಸರ್ವಿಸ್‌ಗೆ ತರಲಾಗಿದ್ದ ಇವಿ ಸ್ಕೂಟರ್ ಹೊರತುಪಡಿಸಿ ಇನ್ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲ ಎಂದಿರುವ ಎಥರ್ ಕಂಪನಿಯು ಸುರಕ್ಷತೆಗಾಗಿ ಕಂಪನಿಯು ಎಲ್ಲಾ ಹಂತದಲ್ಲೂ ಸುರಕ್ಷಾ ಮಾನದಂಡಗಳನ್ನು ಪಾಲಿಸಿರುವುದಾಗಿ ಖಚಿತಪಡಿಸಿದ್ದು, ಬ್ಯಾಟರಿ ಸುರಕ್ಷಾಗಿ IP67 ರೇಟಿಂಗ್ಸ್ ಮಾನದಂಡ ಪಾಲನೆ ಮಾಡುತ್ತಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಆದರೆ ಕೆಲವು ಕಾರಣಗಳಿಂದಾಗಿ ಬ್ಯಾಟರಿ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮವೇ ಘಟನೆಗೆ ಕಾರಣವಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚೆರಿಕೆಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಇದುವರೆಗೆ ಕಂಪನಿಯುು ಸಾವಿರಾರು ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಯಶಸ್ವಿಯಾಗಿ 150 ಮಿಲಿಯನ್ ಕಿ.ಮೀ ದೂರವನ್ನು ಕ್ರಮಿಸಿದ್ದು, ಇದುವರೆಗೂ ಬ್ಯಾಟರಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಎದುರಿಸಿಲ್ಲ. ಆದರೆ ಇದೇ ಮೊದಲ ಬಾರಿಗೆ ದಾಖಲಾಗಿರುವ ಅಗ್ನಿ ಅವಘಡ ಪ್ರಕರಣವು ಕಂಪನಿಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಭವಿಷ್ಯದಲ್ಲಿ ಹೊಸ ಸ್ಕೂಟರ್ ತಾಂತ್ರಿಕ ವಿಷಯಗಳಲ್ಲಿ ಮತ್ತಷ್ಟು ಮುಂಜಾಗ್ರತ ಕ್ರಮಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಇನ್ನು ಇವಿ ಸ್ಕೂಟರ್ ಮಾರಾಟದಲ್ಲಿ ಪ್ರೀಮಿಯಂ ಸ್ಥಾನ ಪಡೆದುಕೊಂಡಿರುವ ಎಥರ್ ಎನರ್ಜಿ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡಿದ್ದು, ಪ್ರತಿಸ್ಪರ್ಧಿ ಮಾದರಿಗಿಂತಲೂ ತುಸು ದುಬಾರಿಯಾಗಿದ್ದರೂ ವಿಭಿನ್ನವಾದ ತಾಂತ್ರಿಕ ಸೌಲಭ್ಯ, ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಇತರೆ ಮಾದರಿಗಿಂತಲೂ ಹೆಚ್ಚು ಗ್ರಾಹಕರ ವಿಶ್ವಾಸ ಹೊಂದಿವೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಮತ್ತೇರಡು ಎರಡು ಹೊಸ ಮಾದರಿಗಳ ಬಿಡುಗಡೆಯ ಯೋಜನೆಯಲ್ಲಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಹೊಸ ಮಾದರಿಗಳಿಗಾಗಿ ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಎರಡನೇ ಘಟಕದ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷದ ಮಧ್ಯಂತರ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ಹೊಸ ಯೋಜನೆಗಳಿಗಾಗಿ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ರೂ. 650 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

ಇವಿ ಸ್ಕೂಟರ್‌ ಶೋರೂಂನಲ್ಲಿ ಅಗ್ನಿ ಅವಘಡಕ್ಕೆ ಕಾರಣ ಬಹಿರಂಗ ಪಡಿಸಿದ ಎಥರ್ ಎನರ್ಜಿ

ಹೊಸ ಯೋಜನೆಯೊಂದಿಗೆ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ವಾರ್ಷಿಕವಾಗಿ 1 ಮಿಲಿಯನ್ ಸ್ಕೂಟರ್ ಉತ್ಪಾದನೆ, 5 ಸಾವಿರ ಫಾಸ್ಟ್ ಚಾರ್ಜಿಂಗ್ ಮತ್ತು 600 ಮಾರಾಟ ಮಳಿಗೆಗಳನ್ನು ತೆರೆಯುವ ಗುರಿಹೊಂದಿದೆ.

Most Read Articles

Kannada
English summary
Ather energy has revealed that fire incident reason details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X