Just In
Don't Miss!
- News
ಜಾತಿ ನಿಂದನೆ ಪ್ರಕರಣ: ಬಸವರಾಜ ಹೊರಟ್ಟಿ ವಿರುದ್ಧ ತನಿಖಾ ವರದಿ ಸಲ್ಲಿಕೆ
- Sports
ಐರ್ಲೆಂಡ್ನ ಹ್ಯಾರಿ ಟೆಕ್ಟರ್ಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ
- Movies
ಸಿಧು ಮೂಸೆವಾಲಾ ಹಾಡಿದ್ದ ಕೊನೆಯ ಹಾಡು ಬಿಡುಗಡೆ ಆದ ಮೂರೇ ದಿನಕ್ಕೆ ಡಿಲೀಟ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಬೇಡಿಕೆ ಹೆಚ್ಚಳದಿಂದ ಆಂಧ್ರಪ್ರದೇಶದಲ್ಲಿ ಹೊಸ ಶೋರೂಂ ಉದ್ಘಾಟಿಸಿದ ಎಥರ್ ಎನರ್ಜಿ
ದೇಶದಲ್ಲಿ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಎಲೆಕ್ಟ್ರಿಕ್ ವಾಹನ ತಯಾರಕ ಎಥರ್ ಎನರ್ಜಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ತನ್ನ ಹೊಸ ಶೋ ರೂಂ ಅನ್ನು ತೆರೆದಿದೆ. ಈ ಮೂಲಕ ಕಂಪನಿಯು ನಿರಂತರವಾಗಿ ಹೊಸ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಮುಂದಾಗಿದ್ದು, ಈ ವರ್ಷ ಎಲ್ಲಾ ಪ್ರಮುಖ ನಗರಗಳಲ್ಲಿ ಡೀಲರ್‌ಶಿಪ್‌ಗಳನ್ನು ತೆರೆಯುವ ತವಕದಲ್ಲಿದೆ.

ಕಂಪನಿಯು ತನ್ನ ಎಕ್ಸ್‌ಪೀರಿಯನ್ಸ್ ಸೆಂಟರ್‌ಗಳನ್ನು ವಿಸ್ತರಿಸುತ್ತಿದ್ದು, ಗ್ರಾಹಕರಿಗೆ ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಟೆಸ್ಟ್ ರೈಡ್ ನೀಡುತ್ತಿದ್ದೆ. ವಿಜಯವಾಡದಲ್ಲಿ ಗ್ರಾಹಕರು ಈ ಸೇವೆಯ ಮೂಲಕ ರೈಡ್‌ನ ಅನುಭವ ಪಡೆಯಬಹುದಾಗಿದೆ.

ವಿಜಯವಾಡ ಕೆ.ಪಿ.ನಗರದ ಚಂದ್ರಲೋಕ ಕಾಂಪ್ಲೆಕ್ಸ್‌ನಲ್ಲಿ ಈ ಡೀಲರ್‌ಶಿಪ್ ತೆರೆಯಲಾಗಿದೆ. ಈ ಮೂಲಕ ದೇಶದಲ್ಲಿ ಕಂಪನಿಯ 31ನೇ ಅನುಭವ ಕೇಂದ್ರವಾಗಿದ್ದು (experience center), ಕಂಪನಿಯು 450X ಮತ್ತು 450 ಪ್ಲಸ್ ಅನ್ನು ಮಾರಾಟ ಮಾಡಲಿದೆ. ಈ ಹೊಸ ಅನುಭವ ಕೇಂದ್ರದೊಂದಿಗೆ ಗ್ರಾಹಕರು ವಾಹನದ ಬಗ್ಗೆ ಎಲ್ಲವನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಅಲ್ಲದೇ ಕಂಪನಿಯು ಈ ಡೀಲರ್‌ಶಿಪ್‌ನಲ್ಲಿ ಚಾರ್ಜಿಂಗ್ ಪಾಯಿಂಟ್ ಅನ್ನು ಸಹ ಸ್ಥಾಪಿಸಿದೆ, ಚಾರ್ಜಿಂಗ್ ಮೂಲಸೌಕರ್ಯವನ್ನು ಸುಧಾರಿಸುವ ಕೆಲಸ ಮಾಡುತ್ತಿರುವ ಕೆಲವೇ ಕಂಪನಿಗಳಲ್ಲಿ ಎಥರ್ ಕಂಪನಿಯೂ ಒಂದಾಗಿದೆ.

ಕಂಪನಿಯು ತನ್ನ ಎಥರ್ ಸ್ಪೇಸ್ ಡೀಲರ್‌ಶಿಪ್‌ನಲ್ಲಿ ಸ್ಕೂಟರ್‌ನ ಟೆಸ್ಟ್ ರೈಡ್‌ಗಳನ್ನು ನೀಡುತ್ತಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ಸ್ಕೂಟರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಸ್ಕೂಟರ್ ಖರೀದಿಸಲು ನಿರ್ಧರಿಸಬಹುದು. ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ವಾಹನ ಕೊಳ್ಳಲು ಯಾವುದೇ ಗೊಂದಲವಿರದಂತೆ ಮಾಡುವುದೇ ಈ ಎಲ್ಲಾ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ಸ್ಕೂಟರ್ ತಯಾರಕರು ತಿಳಿಸಿದ್ದಾರೆ. ಹಾಗಾಗಿ ಸ್ಕೂಟರ್ ಬಗ್ಗೆ ಗ್ರಾಹಕರಿಗೆ ಏನೇ ಸಂದೇಹಗಳು ಇದ್ದರೂ ಎಥರ್‌ನ ಡೀಲರ್‌ಶಿಪ್‌ನಲ್ಲಿ ಪರಿಹರಿಸಿಕೊಳ್ಳಬಹುದು.

ಕಂಪನಿಯು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿರುವುದರಿಂದ 2022ರಲ್ಲಿ ಡೀಲರ್‌ಶಿಪ್ ಅನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. ಇದರೊಂದಿಗೆ ಕಂಪನಿಯು ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಿಸಿದ್ದು, ಇತ್ತೀಚೆಗೆ ಕಂಪನಿಯು ಹೊಸೂರು ಕಾರ್ಖಾನೆಯಿಂದ 25,000ನೇಯ ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉತ್ಪಾದಿಸಿದೆ. ಭಾರತದಲ್ಲಿ ಎಥರ್ 450X ಉತ್ಪಾದನೆಯು ಜನವರಿ 28, 2020 ರಂದು ಪ್ರಾರಂಭವಾಗಿತ್ತು. ಈ ಐತಿಹಾಸಿಕ ಅಂಕಿಅಂಶವನ್ನು ಸಾಧಿಸಲು ಕಂಪನಿಯು ಎರಡು ವರ್ಷಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿದೆ ಎಂದು ಕಂಪನಿ ತಿಳಿಸಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ತಯಾರಕರಿಗೆ ಹಲವಾರು ಸಮಸ್ಯೆಗಳು ಎದುರಾಗಿದ್ದವು. ಈ ನಡುವೆಯೂ ಎಥರ್ ಎನರ್ಜಿ 2020ರ ನಂತರ ಎಥರ್ 450Xನ ವಿತರಣೆಯನ್ನು ಪ್ರಾರಂಭಿಸಿತ್ತು. ಎಥರ್ ಎನರ್ಜಿ ಕಳೆದ ವರ್ಷ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಅತ್ಯುತ್ತಮ ಸೌಲಭ್ಯದೊಂದಿಗೆ ಉತ್ಪಾದನೆಯನ್ನು ಹೆಚ್ಚಿಸಿತ್ತು. ಹೊಸ ರಾಜ್ಯ ಮತ್ತು ಕೇಂದ್ರ ಸಬ್ಸಿಡಿಗಳು ಮತ್ತು EV ನೀತಿಗಳೊಂದಿಗೆ ಕಂಪನಿಯ ವಿಸ್ತರಣೆ ಮತ್ತು ಮಾರಾಟದ ಯೋಜನೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಎಥರ್ ಎನರ್ಜಿ ತನ್ನ ಚಾರ್ಜಿಂಗ್ ಗ್ರಿಡ್‌ನಲ್ಲಿ ಉಚಿತ ಚಾರ್ಜಿಂಗ್ ಸೌಲಭ್ಯವನ್ನು ಜೂನ್ 30, 2022ರ ವರೆಗೆ ವಿಸ್ತರಿಸಿದೆ, ಕಂಪನಿಯು ಸೆಪ್ಟೆಂಬರ್ ತಿಂಗಳಿನಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿತ್ತು. ಇದರೊಂದಿಗೆ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಉಚಿತ ಸಂಪರ್ಕದ ಸೌಲಭ್ಯವನ್ನು ಮೇ 2022 ರವರೆಗೆ ವಿಸ್ತರಿಸಲಾಗಿದೆ, ಇದನ್ನು ಕಳೆದ ವರ್ಷ ನವೆಂಬರ್ 15 ರಂದು ಪ್ರಾರಂಭಿಸಲಾಗಿತ್ತು. ಕಂಪನಿಯ ಚಾರ್ಜಿಂಗ್ ಗ್ರಿಡ್ ಪ್ರಸ್ತುತ ಎಲ್ಲಾ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳಿಗೆ ಲಭ್ಯವಿದೆ.

ಸೆಪ್ಟಂಬರ್‌ನಲ್ಲಿ ದೇಶಾದ್ಯಂತ ಚಾರ್ಜಿಂಗ್ ಗ್ರಿಡ್‌ಗಳ ಸಂಖ್ಯೆ 200 ದಾಟಿದಾಗ ಎಥರ್ ಎನರ್ಜಿ ಅದನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಈ ಉಚಿತ ಯೋಜನೆ ಎಥರ್ 450 ಶ್ರೇಣಿಗೆ ಸೀಮಿತವಾಗಿರದೆ ಯಾವುದೇ ಕಂಪನಿಯ ಎಲೆಕ್ಟ್ರಿಕ್ ವಾಹನವನ್ನು ಕೂಡ ಇಲ್ಲಿ ಉಚಿತವಾಗಿ ಚಾರ್ಜ್ ಮಾಡಬಹುದಾಗಿದೆ. ನೀವು ಯಾವುದೇ ಇತರ ಎಲೆಕ್ಟ್ರಿಕ್ ವಾಹನವನ್ನು ಹೊಂದಿದ್ದರೆ, ಇದು ನಿಮಗೆ ಒಳ್ಳೆಯ ಸುದ್ದಿಯೆಂದೇ ಹೇಳಬಹುದು. ಇದು ಹೊಸ ಗ್ರಾಹಕರಲ್ಲಿಯೂ EV ಗಳನ್ನು ಕೊಳ್ಳಲು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಎಥರ್ ಎನರ್ಜಿ ಭಾರತದ ತಮಿಳುನಾಡಿನ ಹೊಸೂರಿನಲ್ಲಿ ಮತ್ತೊಂದು ಹೊಸ ಘಟಕವನ್ನು ಸ್ಥಾಪಿಸಲು ಹೊರಟಿದೆ. ಎಥರ್ ತನ್ನ 450X ಮತ್ತು 450 ಪ್ಲಸ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಹೊಸ ಕಾರ್ಖಾನೆಯನ್ನು ತೆರೆಯಲು ಸಿದ್ಧವಾಗಿದೆ, ಇದು ಕಂಪನಿಯ ಎರಡನೇ ಸ್ಥಾವರವಾಗಿದೆ. ಈ ಹೊಸ ಸ್ಥಾವರದ ನಂತರ, ವರ್ಷಕ್ಕೆ 4,00,000 ಘಟಕಗಳ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಕಂಪನಿ ಹೊಂದಿರಲಿದೆ.

ಇನ್ನು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳ್ಳುತ್ತಿವೆ.

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಥರ್ ಡೀಲರ್‌ಶಿಪ್‌ಗಳನ್ನು ವಿಸ್ತರಿಸುವುದನ್ನು ಮುಂದುವರೆಸಿದ್ದು ಕಂಪನಿಯು ಈ ವರ್ಷ ಹಲವಾರು ಹೊಸ ನಗರಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಲುಪಿಸಲು ಯೋಜನೆ ರೂಪಿಸಿಕೊಂಡಿದೆ. ಈ ವರ್ಷ ಕಂಪನಿಯು ಎಷ್ಟು ಘಟಕಗಳನ್ನು ಮಾರಾಟ ಮಾಡುತ್ತದೆ ಮತ್ತು ಎಷ್ಟು ಹೊಸ ನಗರಗಳನ್ನು ಬಡಿದೆಬ್ಬಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.