Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ವಿತರಣೆ ಆರಂಭ
ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಹೈಪರ್‌ಮೋಟಾರ್ಡ್ 950 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತು. ಇದೀಗ ಡುಕಾಟಿ ಕಂಪನಿಯು ಈ ಹೊಸ ಹೈಪರ್‌ಮೋಟಾರ್ಡ್ 950 ಬೈಕ್ ವಿತರಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ.

ಈ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950(Ducati Hypermotard 950) ಬೈಕ್ ಆರಂಭಿಕ ಬೆಲೆಯು ಎಕ್ಸ್ ಶೂರೂಂ ಪ್ರಕಾರ ರೂ.12.99 ಲಕ್ಷವಾಗಿದೆ. ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೈಪರ್‌ಮೋಟಾರ್ಡ್ 950 ಎಸ್‌ಪಿ ಮತ್ತು ಹೈಪರ್‌ಮೋಟಾರ್ಡ್ 950 ಆರ್‌ವಿಇ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಹೈಪರ್‌ಮೋಟಾರ್ಡ್ 950, ಹೈಪರ್‌ಮೋಟಾರ್ಡ್ 950 ಆರ್‌ವಿಇ, ಮತ್ತು ಹೈಪರ್‌ಮೋಟಾರ್ಡ್ 950 ಎಸ್‌ಪಿ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ,

ಈ ಬೈಕ್ ವಿನ್ಯಾಸವು 'ಮೋಟಾರ್ಡ್‌ಗಳಿಂದ ಪ್ರೇರಿತವಾಗಿದೆ' ಎಂದು ಡುಕಾಟಿ ಕಂಪನಿ ಹೇಳಿಕೊಂಡಿದೆ. ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿನ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಬೈಕಿನಲ್ಲಿ 937 ಸಿಸಿ ಡುಕಾಟಿ ಟೆಸ್ಟಾಸ್ಟ್ರೆಟ್ಟಾ 11-ಡಿಗ್ರಿ V-ಟ್ವಿನ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ ನಲ್ಲಿ 112.4 ಬಿಹೆಚ್‍ಪಿ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿನಲ್ಲಿ ಟ್ವಿನ್ ಎಕ್ಸಾಸ್ಟ್ ಸೆಟಪ್, ಕನಿಷ್ಠ ಬಾಡಿವರ್ಕ್, ಟ್ರೆಲ್ಲಿಸ್ ಫ್ರೇಮ್, ಟ್ರೆಲ್ಲಿಸ್ ಸಬ್-ಫ್ರೇಮ್, ಅಗಲವಾದ ಹ್ಯಾಂಡಲ್‌ಬಾರ್, ನಕಲ್‌ಗಾರ್ಡ್-ಸಂಯೋಜಿತ ಎಲ್ಇಡಿ ಬ್ಲಿಂಕರ್‌ಗಳು, ಫ್ಲಾಟ್ ಸೀಟ್ ಮತ್ತು 17-ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಇನ್ನು ಈ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಶ್ರೇಣಿಯ-ಟಾಪ್, ಎಸ್‌ಪಿ ರೂಪಾಂತರವು ಮಾರ್ಚೆಸಿನಿ ಫಾರ್ಗ್ಡ್ ವ್ಹೀಲ್ ಗಳು, ಕಾರ್ಬನ್-ಫೈಬರ್ ಫ್ರಂಟ್ ಮಡ್‌ಗಾರ್ಡ್ ಮತ್ತು ಕಾರ್ಬನ್-ಫೈಬರ್ ಟೈಮಿಂಗ್ ಬೆಲ್ಟ್ ಕವರ್ ಅನ್ನು ಪಡೆಯುತ್ತದೆ.

ವೈಶಿಷ್ಟ್ಯದ ಪಟ್ಟಿಯಲ್ಲಿ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿನಲ್ಲಿ ಎಲ್‌ಇಡಿ ಲೈಟಿಂಗ್, 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇ, ಮೊನಚಾದ ಅಲ್ಯೂಮಿನಿಯಂ ಹ್ಯಾಂಡಲ್‌ಬಾರ್, ತೆಗೆಯಬಹುದಾದ ಪ್ಯಾಸೆಂಜರ್ ಫುಟ್‌ಪೆಗ್‌ಗಳು ಮತ್ತು ಯುಎಸ್‌ಬಿ ಪವರ್ ಸಾಕೆಟ್ ಅನ್ನು ಒಳಗೊಂಡಿದೆ.

ಇನ್ನು ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಸ್‌ಗಳಲ್ಲಿ ಬಾಷ್ ಸಿಕ್ಸ್-ಆಕ್ಸಿಸ್ ಇಂಟಿರಿಯಲ್ ಪ್ಲಾಟ್‌ಫಾರ್ಮ್, ರೈಡಿಂಗ್ ಮೋಡ್‌ಗಳು, ಪವರ್ ಮೋಡ್‌ಗಳು, ಕಾರ್ನರ್ ಮಾಡುವ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಮತ್ತು ವ್ಹೀಲಿ ಕಂಟ್ರೋಲ್ ಸೇರಿವೆ.

ಡುಕಾಟಿ ಹೈಪರ್‌ಮೋಟಾರ್ಡ್ 950 ಆರ್‌ವಿಇ ರೂಪಾಂತರದ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸಂಪೂರ್ಣ-ಹೊಂದಾಣಿಕೆ ಮಾಡಬಹುದಾದ 45 ಎಂಎಂ Marzocchi ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ರೀಬೌಂಡ್ ಡ್ಯಾಂಪಿಂಗ್-ಹೊಂದಾಣಿಕೆ ಮಾಡಬಹುದಾದ Sachs ಮೊನೊ-ಶಾಕ್ ಅನ್ನು ಒಳಗೊಂಡಿದೆ.

ಇನ್ನು ಹೈಪರ್‌ಮೋಟಾರ್ಡ್ 950 ಎಸ್‌ಪಿ ರೂಪಾಂತರದಲ್ಲಿ ಓಹಿನ್ಸ್ ಮೂಲದ 48 ಎಂಎಂ ಅಪ್ ಸೈಡ್ ಡೌನ್ ಮುಂಭಾಗದ ಫೋರ್ಕ್‌ಗಳನ್ನು ಮತ್ತು ಓಹ್ಲಿನ್ ಹಿಂಭಾಗದ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಇದು ಎರಡೂ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾಗಿದೆ. ಇನ್ನು ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಎರಡು ರೂಪಾಂತರಗಳಲ್ಲಿ ಒಂದೇ ರೀತಿಯ ಬ್ರೇಕಿಂಗ್ ಸೆಟಪ್ ಗಳನ್ನು ಒಳಗೊಂಡಿವೆ. ಇವುಗಳ ಮುಂಭಾಗದ ಟ್ವಿನ್ ರೋಟರ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ.

ಇಟಾಲಿಯನ್ ಬ್ರ್ಯಾಂಡ್ ಡುಕಾಟಿ ತನ್ನ ಪಾನಿಗಲೆ ವಿ4 2022ರ ಮಾದರಿಯ ಸಮಗ್ರವಾದ ನವೀಕರಣವನ್ನು ನಡೆಸಿದೆ. ಇತ್ತೀಚೆಗೆ ನಡೆದ ಡುಕಾಟಿ ವರ್ಲ್ಡ್ ಪ್ರೀಮಿಯರ್‌ನಲ್ಲಿ 2022ರ ಪ್ಯಾನಿಗೇಲ್ ವಿ4 ಮಾದರಿಯನ್ನು ಅನಾವರಣಗೊಳಿಸಿತು. ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ ಒಟ್ಟಾರೆ ಶೈಲಿಯು ಮೂಲಭೂತವಾಗಿ ಒಂದೇ ಆಗಿದ್ದರೂ, ಫೇರಿಂಗ್‌ನಲ್ಲಿ ಅಳವಡಿಸಲಾದ ವ್ಹೀಂಗ್ ಗಳ ವಿನ್ಯಾಸವು ಹೆಚ್ಚು ಸಾಂದ್ರವಾಗಿರುತ್ತದೆ. ಆದರೆ ಇದು 300 ಕಿ.ಮೀ ಸ್ಪೀಡ್ ನಲ್ಲಿ ಡೌನ್‌ಫೋರ್ಸ್ ಅನ್ನು ಉತ್ಪಾದಿಸುವುದನ್ನು ಮುಂದುವರೆಸಿದೆ. ತಂಪಾಗಿಸುವಿಕೆಯನ್ನು ಸುಧಾರಿಸುವ ಸಲುವಾಗಿ, ಕೆಳಗಿನ ಫೇರಿಂಗ್‌ನಲ್ಲಿನ ವೆಂಟ್ ಗಳನ್ನು ಸಹ ಟ್ವೀಕ್ ಮಾಡಲಾಗಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ4 ಬೈಕ್ 1,103 ಸಿಸಿ ಮೋಟರ್ ಕೋರ್‌ನಲ್ಲಿ ಬದಲಾಗಿಲ್ಲ.

ಆದರೆ ಸೂಕ್ಷ್ಮ ಬದಲಾವಣೆಗಳು ಸುಮಾರು 1.5 ಬಿಹೆಚ್‌ಪಿ ಪವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ ಮತ್ತು ಬೈಕ್ ಈಗ 215 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಕ್ಸಾಸ್ಟ್ ಬ್ಯಾಕ್ ಒತ್ತಡವನ್ನು ಕಡಿಮೆ ಮಾಡಲು ದೊಡ್ಡ ಎಕ್ಸಾಸ್ಟ್ ಒಳಗೊಂಡಂತೆ ಆಯಿಲ್ ಪಂಪ್ ಮತ್ತು ಲೂಬ್ರಿಕೇಶನ್ ಸಿಸ್ಟಮ್ ಅನ್ನು ನವೀಕರಿಸುವ ಮೂಲಕ ಇದನ್ನು ಸಾಧಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ, ವೇಗವರ್ಧನೆಯು ಈಗಾಗಲೇ ಅಗ್ರೇಸಿವ್ ಆದರೂ ಡುಕಾಟಿಯು ವೇಗವರ್ಧಕವನ್ನು ಸುಧಾರಿಸಲು ಗೇರ್ ಅನುಪಾತಗಳನ್ನು ಪರಿಷ್ಕರಿಸಿದೆ. ಡುಕಾಟಿಯು ಎಲೆಕ್ಟ್ರಾನಿಕ್ಸ್‌ನೊಂದಿಗೆ ಟಿಂಕರ್ ಮಾಡಿದೆ ಮತ್ತು ಅದರ ರೈಡ್-ಬೈ-ವೈರ್ ಸೆಟಪ್‌ಗೆ ಬದಲಾವಣೆಗಳನ್ನು ಮಾಡಿದೆ. ಪರಿಣಾಮವಾಗಿ, ಈಗ ಫುಲ್, ಹೈ, ಮೀಡಿಯಂ ಮತ್ತು ಲೋ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳಿವೆ.

ಇನ್ನು ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಕೊನೆಗೂ ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶಿಸಿದೆ. ಪ್ರೀಮಿಯಂ ಪರ್ಫಾಮೆನ್ಸ್ ಬೈಕ್ ಪ್ರಿಯರನ್ನು ಈ ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್ ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.