ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಲೀಟರ್-ಕ್ಲಾಸ್ ಸರಣಿಯಲ್ಲಿರುವ ಬೈಕ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ.

Recommended Video

Ather 450X & 450 Plus Gen 3 Launched | ಅತ್ಯಧಿಕ ಮೈಲೇಜ್, ಆಕರ್ಷಕ ಬೆಲೆ ಮತ್ತು ಹೊಸ ಫೀಚರ್ಸ್..

ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿಯ ನಿಂಜಾ 1000 ಎಸ್‌ಎಕ್ಸ್, ಝಡ್ಎಕ್ಸ್-10ಆರ್, ಮತ್ತು ವರ್ಸಿಸ್ 1000 ಬೈಕ್‌ಗಳು ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಕವಾಸಕಿ ಇಂಡಿಯಾದ ನಿಂಜಾ 1000 ಎಸ್ಎಕ್ಸ್ ಮೊದಲಿಗಿಂತ 12,000 ಹೆಚ್ಚು ಬೆಲೆಯದ್ದಾಗಿದೆ ಆದರೆ ಝಡ್ಎಕ್ಸ್-10ಆರ್ ಮತ್ತು ವರ್ಸಿಸ್ 1000 ಈಗ ಕ್ರಮವಾಗಿ ರೂ. 16,000 ಮತ್ತು ರೂ 12,000 ಗಳಷ್ಟು ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಬೆಲೆ ಏರಿಕೆಯ ಬಳಿಕ ಕವಾಸಕಿ ನಿಂಜಾ 1000 ಎಸ್ಎಕ್ಸ್ ರೂ.12,19,000, ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ಬೆಲೆಯು ರೂ.15,99,000 ಗಳಾದರೆ, ಕವಾಸಕಿ ವರ್ಸಿಸ್ 1000 ಬೈಕಿನ ಬೆಲೆಯು ರೂ.12,19,000 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಈ ಕವಾಸಕಿ ವರ್ಸಿಸ್ 1000 ಬೈಕ್ ಬಗ್ಗೆ ಹೇಳುವುದಾದರೆ, ಇದು ಲೀಟರ್-ಕ್ಲಾಸ್ ಸ್ಪೋರ್ಟ್ಸ್ ಟೂರರ್ ಒಂದೇ ರೂಪಾಂತರದಲ್ಲಿ ಲಭ್ಯವಿದೆ. 2022ರ ಕವಾಸಕಿ ವರ್ಸಿಸ್ 1000 ಬೈಕ್ ಕ್ಯಾಂಡಿ ಲೈಮ್ ಗ್ರೀನ್ ಬಣ್ಣದಲ್ಲಿ ಲಭ್ಯವಿದೆ, ಈ ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಈಗಾಗಲೇ ಇತ್ತೀಚಿನ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಇನ್ನು ಈ ಹೊಸ ವರ್ಸಿಸ್ 1000 ಬೈಕಿನಲ್ಲಿ ಯಾಂತ್ರಿಕ ವಿಶೇಷಣಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದರಲ್ಲಿ ಅದೇ 1,043ಸಿಸಿ ಇನ್‌ಲೈನ್-ನಾಲ್ಕು, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 118 ಬಿಹೆಚ್‍ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 102 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಈ ಲೀಟರ್-ಕ್ಲಾಸ್ ಸ್ಪೋರ್ಟ್ಸ್ ಟೂರರ್‌ನಲ್ಲಿ ಎಲೆಕ್ಟ್ರಾನಿಕ್ ರೈಡರ್ ಸಹಾಯಗಳು ಕ್ರೂಸ್ ಕಂಟ್ರೋಲ್, ಕವಾಸಕಿ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಎಬಿಎಸ್ ಅನ್ನು ಒಳಗೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳಿಲ್ಲದೆ, ಅದೇ ಡ್ಯುಯಲ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎತ್ತರದ ವೈಸರ್, ಬೃಹತ್ ಫೇರಿಂಗ್ ಮತ್ತು ಆರಾಮವನ್ನು ಗರಿಷ್ಠಗೊಳಿಸಲು ಉದ್ದವಾದ ಸ್ಪ್ಲಿಟ್ ಸೀಟ್‌ಗಳನ್ನು ಹೊಂದಿದೆ. ಈ ಬೈಕ್ ದೇಶದಲ್ಲಿ ಮಾರಾಟದಲ್ಲಿರುವ ಅತ್ಯಂತ ಸುಲಭವಾಗಿ ಲಭ್ಯವಿರುವ ಲೀಟರ್-ಕ್ಲಾಸ್ ಕೊಡುಗೆಗಳಲ್ಲಿ ಒಂದಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಬ್ರೇಕಿಂಗ್ ಕಾರ್ಯಕ್ಷಮತೆಯು ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಪೆಟಲ್ ಡಿಸ್ಕ್‌ಗಳು ಮತ್ತು ಎಬಿಎಸ್ ಜೊತೆಗೆ ಹಿಂಭಾಗದಲ್ಲಿ ಒಂದೇ 250 ಎಂಎಂ ಪೆಟಲ್ ಡಿಸ್ಕ್‌ನಿಂದ ಬರುತ್ತದೆ. ಇನ್ನು ಈ ಬೈಕ್ 21-ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ 255 ಕೆಜಿ ತೂಕವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಇನ್ನು ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್‌ಗಳಲ್ಲಿ ಒಂದಾಗಿದೆ. ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಸೂಪರ್‌ಸ್ಪೋರ್ಟ್ ಬೈಕ್ ಏರೋಡೈನಾಮಿಕ್ ಮೇಲ್ಭಾಗದ ಕೌಲ್, ಹೊಸ ಟೈಲ್ ಕೌಲ್, ಪರಿಷ್ಕೃತ ಹ್ಯಾಂಡಲ್‌ಬಾರ್, ಫುಟ್‌ಪೆಗ್ ಮತ್ತು ಎಲ್‌ಇಡಿ ಲೈಟಿಂಗ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಈ ಪ್ರೀಮಿಯಂ ಸೂಪರ್‌ಸ್ಪೋರ್ಟ್ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಇನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಯುರೊ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಪಡೆದುಕೊಂಡಿವೆ

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಇನ್ನು ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡ ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಹ ಹೊಂದಿದೆ. ಇದು ಬ್ರ್ಯಾಂಡ್‌ನ 'ರೈಡಾಲಜಿ ದಿ ಆ್ಯಪ್' ನೊಂದಿಗೆ ಕಾರ್ಯನಿರ್ವಹಿಸುತ್ತದೆ.ಲೀಟರ್-ಕ್ಲಾಸ್ ಸೂಪರ್‌ಸ್ಪೋರ್ಟ್ ಬೈಕ್ ಆಗಿರುವುದರಿಂದ, ಇದರಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳನ್ನು ಹೊಂದಿವೆ,. ಇದರಲ್ಲಿ ಕ್ರೂಸ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಅನ್ನು ಹೊಂದಿದೆ. ಇದರೊಂದಿಗೆ ರೈಡಿಂಗ್ ಮೋಡ್ ಗಳು, ಎಂಜಿನ್ ಬ್ರೇಕ್ ಮತ್ತು ಇನು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿವೆ

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಇನ್ನು ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕ್ ಎಮರಾಲ್ಡ್ ಬ್ಲೇಜ್ಡ್ ಗ್ರೀನ್ ಮತ್ತು ಮೆಟಾಲಿಕ್ ಮ್ಯಾಟ್ ಗ್ರಾಫೆನೆಸ್ಟೀಲ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. 2022ರ ನಿಂಜಾ 1000ಎಸ್‌ಎಕ್ಸ್ ಎಲ್ಇಡಿ ಲೈಟಿಂಗ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 4.3 TFT ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ, ಈ ಹೊಸ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಎಬಿಎಸ್, ಕ್ರೂಸ್ ಕಂಟ್ರೋಲ್, ರೈಡಿಂಗ್ ಮೋಡ್‌ಗಳು (ಸ್ಪೋರ್ಟ್/ ರೋಡ್/ ರೈನ್/ ರೈಡರ್), ಮೂರು-ಹಂತದ ಟ್ರ್ಯಾಕ್ಷನ್ ಕಂಟ್ರೋಲ್, ಪವರ್ ಮೋಡ್‌ಗಳು, ಕ್ವಿಕ್-ಶಿಫ್ಟರ್ ಮತ್ತು ಕವಾಸಕಿ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್ ಅನ್ನು ಒಳಗೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಕವಾಸಕಿ ನಿಂಜಾ 1000ಎಸ್‌ಎಕ್ಸ್ ಭಾರತದ ಮೊದಲ ಸ್ಥಳೀಯವಾಗಿ ತಯಾರಿಸಿದ ಪ್ರೀಮಿಯಂ ಸ್ಪೋರ್ಟ್-ಟೂರರ್ ಕೊಡುಗೆಯಾಗಿದೆ. ನವೀಕರಿಸಿದ 2022ರ ನಿಂಜಾ 1000 ಎಸ್‌ಎಕ್ಸ್ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಬೈಕಿನ ರೈಡರ್ ಮತ್ತು ಪಿಲಿಯನ್ ಎರಡಕ್ಕೂ ನವೀಕರಿಸಿದ ಎರ್ಗಾನೊಮಿಕ್ಸ್ ಒಳಗೊಂಡಿದೆ. ರೈಡರ್ ಮತ್ತು ಪಿಲಿಯನ್ ಸೀಟುಗಳು ದಪ್ಪವಿದೆ. ರೈಡರ್ ಸೀಟನ್ನು ಅಗಲವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ಲೀಟರ್-ಕ್ಲಾಸ್ ಸರಣಿಯ ಬೈಕ್‌ಗಳು

ಹೊಸ ಕವಾಸಕಿ ನಿಂಜಾ 1000ಎಸ್‌ಎಕ್ಸ್ ಬೈಕಿನಲ್ಲಿ 1,043 ಸಿಸಿ ಲಿಕ್ವಿಡ್-ಕೂಲ್ಡ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್‍ಪಿಎಂನಲ್ಲಿ 140 ಬಿಹೆಚ್‍ಪಿ ಪವರ್ ಮತ್ತು 8,000 ಆರ್‍ಪಿಎಂನಲ್ಲಿ 111 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

Most Read Articles

Kannada
English summary
Kawasaki ninja 1000 sx zx10r and versys 1000 prices hiked in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X