ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಕೀವೇ ತನ್ನ ಹೊಸ ರೆಟ್ರೊ-ಶೈಲಿಯ ಎಸ್ಆರ್125 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕೀವೇ ಎಸ್ಆರ್125 ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.19 ಲಕ್ಷವಾಗಿದೆ. ಈ ಹೊಸ ಬೈಕ್ ಕಮ್ಯೂಟರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಎಸ್ಆರ್125 ಕಳೆದ 5 ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಗೆ ಕೀವೇ ಬಿಡುಗಡೆಗೊಳಿಸಿದ ಏಳನೇ ಮಾದರಿಯಾಗಿದೆ. ಕೀವೇ ಹಂಗೇರಿಯನ್ ದ್ವಿಚಕ್ರ ವಾಹನ ತಯಾರಕರಾಗಿದ್ದು, ಇದು ಪ್ರಸ್ತುತ ಚೀನಾದ ದ್ವಿಚಕ್ರ ವಾಹನ ತಯಾರಕರಾದ ಕ್ಯೂಜೆ ಮೋಟಾರ್ಸ್ ಜೊತೆಗೆ ಬೆನೆಲ್ಲಿ ಕಂಪನಿಯ ಒಡೆತನದಲ್ಲಿದೆ. ಕೀವೇ ಬ್ರ್ಯಾಂಡ್ ಜಾಗತಿಕ ಅಸ್ತಿತ್ವವನ್ನು ಹೊಂದಿರುವ ಬ್ರ್ಯಾಂಡ್ ಆಗಿದೆ. ಕೀವೇ ಸ್ಕೂಟರ್‌ಗಳು ಯುರೋಪ್‌ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ಸಂಚಲನ ಮೂಡಿಸಲು ಪ್ರಯತ್ನಿಸುತ್ತಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಹೊಸ ಕೀವೇ ಎಸ್ಆರ್125 ಬೈಕ್ ವಿನ್ಯಾಸವು ತುಂಬಾ ಸರಳವಾಗಿದೆ, ಟಿಯರ್-ಡ್ರಾಪ್ ಆಕಾರದ, 14.5-ಲೀಟರ್ ಇಂಧನ ಟ್ಯಾಂಕ್ ಮತ್ತು ಕಾಂಪ್ಯಾಕ್ಟ್ ಸೈಡ್ ಪ್ಯಾನೆಲ್ ಹೆಚ್ಚಿನ ಬಾಡಿವರ್ಕ್ ಅನ್ನು ರೂಪಿಸುತ್ತದೆ. ಸಣ್ಣ, ಹ್ಯಾಲೊಜೆನ್ ಹೆಡ್‌ಲೈಟ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಈ ಹೊಸ ಬೈಕಿನಲ್ಲಿ ಡಿಜಿಟಲ್ ಡಿಸ್‌ಪ್ಲೇಯನ್ನು ನೀಡಲಾಗಿದೆ. ಈ ಬೈಕಿನಲ್ಲಿ ಕಂದುಬಣ್ಣದ ಫಿನಿಶಿಂಗ್ ಹೊಂದಿರುವ ಸಿಂಗಲ್-ಪೀಸ್ ಸೀಟ್ ಕಾಂಟ್ರಾಸ್ಟ್‌ನ ಡ್ಯಾಶ್ ಅನ್ನು ಹೊಂದಿದೆ. ಸಣ್ಣ ಫೆಂಡರ್, ಟೈಲ್-ಲೈಟ್ ಮತ್ತು ಇಂಡಿಕೇಟರ್ಸ್ ಅನ್ನು ಹೊಂದಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಈ ಹೊಸ ಕೀವೇ ಎಸ್ಆರ್125 ಬೈಕಿನಲ್ಲಿ 125cc, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9.7 ಬಿಹೆಚ್‍ಪಿ ಪವರ್ ಮತ್ತು 8.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಹೋಂಡಾ ಶೈನ್ 125 ಬೈಕ್ ಅಂಕಿಅಂಶಗಳಿಗಿಂತ ಕಡಿಮೆಯಾಗಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಈ ಹೊಸ ಕೀವೇ ಎಸ್ಆರ್125 ಬೈಕ್ ಸಿಂಗಲ್ ಡೌನ್ ಟ್ಯೂಬ್ ಫ್ರೇಮ್ ಅನ್ನು ಹೊಂದಿದೆ, ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು 5-ಹಂತದ ಹೊಂದಾಣಿಕೆಯ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ, ಸುರಕ್ಷತೆಯಲ್ಲಿ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 210 ಎಂಎಂ ಡಿಸ್ಕ್ ಬ್ರೆಕ್ ಅನ್ನು ನೀಡಲಾಗಿದೆ. ಈ ಬೈಕಿನಲ್ಲಿ 17-ಇಂಚಿನ ವೈರ್ ಸ್ಪೋಕ್ ವೀಲ್‌ಗಳ ಜೊತೆ ಡ್ಯುಯಲ್-ಪರ್ಪಸ್ ಟೈರ್‌ಗಳನ್ನು ಹೊಂದಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

125cc, ಸಬ್-10hp ಮೋಟಾರ್‌ಸೈಕಲ್‌ಗೆ 300 ಎಂಎಂ ಡಿಸ್ಕ್ ಗಾತ್ರವು ತುಂಬಾ ದೊಡ್ಡದಾಗಿದೆ ಎಂದು ಗಮನಿಸಬೇಕು. ಇನ್ನು ಈ ಕೀವೇ ಎಸ್ಆರ್125 ಬೈಕ್ ಪವರ್ ವಿಷಯದಲ್ಲಿರು ಹೋಂಡಾ ಶೈನ್ ಅಥವಾ ಟಿವಿಎಸ್ ರೈಡರ್‌ಗಿಂತ ಕಡಿಮೆ ಪವರ್ ಅನ್ನು ಉತ್ಪಾದಿಸುತ್ತದೆ. ಆದರೆ ಈ ಹೊಸ ಕೀವೇ ಬೈಕ್ 120 ಕೆಜಿಗಿಂತ ಹೆಚ್ಚು ತೂಕವನ್ನು ಹೊಂದಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಹೊಸ ಕೀವೇ ಎಸ್ಆರ್125 ಭಾರತದಲ್ಲಿನ ಎಲ್ಲಾ ಕೀವೇ ಡೀಲರ್‌ಶಿಪ್‌ಗಳಲ್ಲಿ ಗ್ಲೋಸಿ ಬ್ಲ್ಯಾಕ್, ಗ್ಲೋಸಿ ಬ್ಲ್ಯಾಕ್ ರೆಡ್ ಮತ್ತು ಗ್ಲೋಸಿ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಸ ಕೀವೇ ಎಸ್ಆರ್125 ಬೈಕ್ ಭಾರಟೀಯ ಮಾರುಕಟ್ಟೆಯಲ್ಲಿ ಟಿವಿಎಸ್ ರೈಡರ್, ಹೋಂಡಾ ಶೈನ್, ಹೋಂಡಾ SP125 ಮತ್ತು ಬಜಾಜ್ ಪಲ್ಸರ್ 125 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಹೊಸ ಕೀವೇ ಎಸ್ಆರ್125 ಬೈಕ್ ಅಧಿಕೃತ ಬೆನೆಲ್ಲಿ ಮತ್ತು ಕೀವೇ ಡೀಲರ್‌ಶಿಪ್‌ಗಳ ಮೂಲಕ 2ಮಾರಾಟ ಮಾಡಲಾಗುತ್ತದೆ. ಈ ತಿಂಗಳ ಕೊನೆಯ ವಾರದಿಂದ ಈ ಹೊಸ ಬೈಕಿನ ವಿತರಣೆಯು ಪ್ರಾರಂಭವಾಗಲಿವೆ. ಇನ್ನು ಈ ಕೀವೇ ಎಸ್ಆರ್125 ಬೈಕ್ ಖರೀದಿಸಲು ಬಯಸುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಡೀಲರ್‌ಶಿಪ್ ಮೂಲಕ 1,000 ರೂಪಾಯಿಗಳ ಟೋಕನ್ ಮೊತ್ತಕ್ಕೆ ಮೋಟಾರ್‌ಸೈಕಲ್ ಅನ್ನು ಬುಕ್ ಮಾಡಬಹುದು.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಕೀವೇ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಇತ್ತೀಚೆಗೆ ಕೀವೇ ಕಂಪನಿಯು ಹೊಸ ವಿ302ಸಿ ಬಾಬರ್-ಶೈಲಿಯ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಈ ಹೊಸ ಕೀವೇ ವಿ302ಸಿ ಬೈಕಿನ ಬೆಲೆಯು ರೂ.3,89,000 ದಿಂದ ಪ್ರಾರಂಭವಾಗಲಿದೆ. ಈ ಕೀವೇ ವಿ302ಸಿ ಬೈಕ್ ಭಾರತೀಯ ಮಾರುಕಟ್ಟೆಗೆ ಬ್ರ್ಯಾಂಡ್‌ನಿಂದ ನಾಲ್ಕನೇ ಮಾದರಿಯಾಗಿದೆ. ಹೊಸ ಕೀವೇ ವಿ302 ಬೈಕ್ ಬಾಬರ್-ಶೈಲಿಯೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ ಹೊಸ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2022ರ ಅಂತ್ಯದ ವೇಳೆಗೆ ವಿಭಾಗಗಳಾದ್ಯಂತ ಇನ್ನೂ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಇವುಗಳಲ್ಲಿ ಎರಡು ರೆಟ್ರೊ ಸ್ಟ್ರೀಟ್ ಕ್ಲಾಸಿಕ್‌ಗಳು, ನೇಕೆಡ್ ಸ್ಟ್ರೀಟ್ ಮತ್ತು ಸ್ಪೋರ್ಟ್ಸ್ ಬೈಕ್ ಕೂಡ ಸೇರಿವೆ. ಒಟ್ಟಿನಲ್ಲಿ ಕೀವೇ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮತ್ತು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ.

Most Read Articles

Kannada
Read more on ಕೀವೇ keeway
English summary
New keeway sr125 launched in india features engine price details
Story first published: Thursday, October 13, 2022, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X