ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಎಲೆಕ್ಟ್ರಿಕ್ ವಾಹನ ತಯಾರಿಕ ಸ್ಟಾರ್ಟ್ಅಪ್ ಒಕಾಯಾ (Okaya) ಎಲೆಕ್ಟ್ರಿಕ್ ವೆಹಿಕಲ್ಸ್ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಫಾಸ್ಟ್ (Faast) ಮಾದರಿಯನ್ನು ಅನ್ನು ಬಿಡುಗಡೆಗೊಳಿಸಿದ್ದು, ಈ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 89,999 ಬೆಲೆ ಹೊಂದಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಕಾಯಾ ಎಲೆಕ್ಟ್ರಿಕ್ ವೆಹಿಕಲ್ಸ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್‌ ಮಾಡಬಹುದಾಗಿದ್ದು, ಹೊಸ ಇವಿ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 1,999 ಮುಂಗಡ ಪಾವತಿ ನಿಗದಿಪಡಿಸಿದೆ. ಒಕಾಯಾ ಫಾಸ್ಟ್ ಕನೆಕ್ಟೆಡ್ ಫೀಚರ್ ಹೊಂದಿರುವ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್ ಮಾದರಿಯು ಒಕಾಯಾ ಇವಿ ಮಾದರಿಗಳಲ್ಲೇ ಅತ್ಯುತ್ತಮ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು,ಇದು 60-70 ಕಿಮೀ / ಗಂ ಗರಿಷ್ಠ ವೇಗವನ್ನು ಪಡೆದುಕೊಂಡಿದೆ. ಹಾಗೆಯೇ ವಿವಿಧ ರೈಡಿಂಗ್ ಮೋಡ್ ನೀಡಲಾಗಿದ್ದು, ಇಕೋ ಮೋಡ್‌ನಲ್ಲಿ ಗರಿಷ್ಠ ಮೈಲೇಜ್ ಹಿಂಪಡೆಯಬಹುದಾಗಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಒಕಾಯಾ ಕಂಪನಿಯು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ಹೊಚ್ಚ ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಅವಿಯೋನಿಕ್, ಕ್ಲಾಸಿಕ್ ಮತ್ತು ಫ್ರೀಡಮ್ ಇವಿ ಮಾದರಿಗಳು ಸಹ ಒಕಾಯಾ ಕಂಪನಿಯ ಪ್ರಮುಖ ಇವಿ ಮಾದರಿಗಳಾಗಿದ್ದು, ಒಕಾಯಾ ಫೆರಾಟೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ. ಸದ್ಯ ಬಿಡುಗಡೆಯಾಗಿರುವ ಫಾಸ್ಟ್ ಇವಿ ಮೂಲಕ ದೇಶದ ಪ್ರಮುಖ ನಗರಗಳಲ್ಲಿ ವಿತರಣೆ ಆರಂಭಿಸುತ್ತಿರುವ ಒಕಾಯಾ ಕಂಪನಿಯು ಒಲಾ ಎಸ್1, ಎಸ್1 ಪ್ರೊ,ಟಿವಿಎಸ್ ಐಕ್ಯೂಬ್, ಬೌನ್ಸ್ ಇನ್ಫಿನಿಟಿ ಇ1, ಎಥರ್ 450ಎಕ್ಸ್ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಆದರೂ ಹೊಸ ಸ್ಕೂಟರ್ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇನ್ನು ಕೆಲವು ಆಧುನಿಕ ವೈಶಿಷ್ಟ್ಯತೆಗಳ ಕೊರತೆ ಎದ್ದುಕಾಣಲಿದ್ದರೂ ಸಂಪರ್ಕಿತ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಒಕಾಯಾ ಫಾಸ್ಟ್‌ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಎಲ್‌ಇಡಿ ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್, ಕಾಂಬಿ ಬ್ರೇಕ್ ಸಿಸ್ಟಂನಂತಹ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಒಕಾಯಾ ಫಾಸ್ಟ್ ಇವಿ ಸ್ಕೂಟರ್ ದೂರದಿಂದ ಮ್ಯಾಕ್ಸಿ ಸ್ಕೂಟರ್ ಶೈಲಿಯ ವಿನ್ಯಾಸದೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದ್ದು, ಕೆಂಪು, ಬೂದು, ಹಸಿರು ಮತ್ತು ಬಿಳಿ ಬಣ್ಣಗಳ ಆಯ್ಕೆಯೊಂದಿಗೆ ಕಟಿಂಗ್ ಎಡ್ಜ್ ಶೈಲಿಯ ಕನ್ನಡಿಗಳು, ಫ್ಲಾಟ್ ಫುಟ್‌ಬೋರ್ಡ್, ಸಿಂಗಲ್ ಫ್ಲಾಟ್ ಸೀಟ್ ಮತ್ತು ಡಿಸೈನರ್ ಚಕ್ರಗಳಲ್ಲಿ ಡ್ಯುಯಲ್ ಟೋನ್ ಬಣ್ಣ ನೀಡಲಾಗಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಹೊಸ ಮಾದರಿಯ ಇತರೆ ನಿರ್ಮಾಣ ವಿವರಗಳು, ಸೀಟಿನ ಅಡಿಯಲ್ಲಿ ಶೇಖರಣಾ ಸಾಮರ್ಥ್ಯ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ ವೇಗದ ಚಾರ್ಜಿಂಗ್ ಮೂಲಸೌಕರ್ಯದೊಂದಿಗೆ ಇ-ಸ್ಕೂಟರ್‌ಗಳ ಶ್ರೇಣಿಯನ್ನು ಸಹ ಉನ್ನತೀಕರಿಸಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಹೊಸ ಇವಿ ಮಾದರಿಗಳ ಮೂಲಕ ಕಂಪನಿಯು ಕಳೆದ ಆರು ತಿಂಗಳಲ್ಲಿ ದೇಶಾದ್ಯಂತ 225 ಡೀಲರ್‌ಶಿಪ್‌ಗಳನ್ನು ಸ್ಥಾಪಿಸಿದ್ದು, ಶೀಘ್ರದಲ್ಲೇ ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆ ಆಧಾರದ ಮೇಲೆ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಮುಂಬರುವ ದಿನಗಳಲ್ಲಿ ಒಕಾಯಾ ಕಂಪನಿಯು 800 ಡೀಲರ್‌ಗಳನ್ನು ತಲುಪಲಿದೆ. ಒಕಾಯಾ ಕಂಪನಿಯು 2016 - 17 ರಿಂದ ಇವಿ ಚಾರ್ಜರ್ ಹಾಗೂ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳನ್ನು ಪೂರೈಸುತ್ತಿದೆ. ಒಕಾಯಾ ಗ್ರೂಪ್ ಕಳೆದ 35 ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಕ್ರಿಯವಾಗಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಒಕಾಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಎದುರಾಗುತ್ತಿರುವ ಮೂರು ಪ್ರಮುಖ ಸಮಸ್ಯೆಗಳನ್ನು ಗುರುತಿಸಿದೆ. ಗುಣಮಟ್ಟದ ಬಿಡಿಭಾಗ ಹಾಗೂ ಸರ್ವೀಸ್ ಕೊರತೆ, ಸರಿಯಾದ ಮೂಲಸೌಕರ್ಯಗಳ ಕೊರತೆ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಗಳಿಗೆ ಧನಸಹಾಯ - ಇವು ಒಕಾಯಾ ಕಂಪನಿಯು ಗುರುತಿಸಿರುವ ಮೂರು ಪ್ರಮುಖ ಸಮಸ್ಯೆಗಳಾಗಿವೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಒಕಾಯಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ, ಎಲೆಕ್ಟ್ರಾನಿಕ್ಸ್ ಹಾಗೂ ಸಾಫ್ಟ್‌ವೇರ್ ಬಗ್ಗೆ ವಿಶ್ವಾಸ ಹೊಂದಿದೆ. ಒಕಾಯಾ ಕಂಪನಿಯು ಏವಿಯನ್ ಐಕ್ಯೂ ಹಾಗೂ ಕ್ಲಾಸಿಕ್ ಐಕ್ಯೂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಎರಡು ಕಸ್ಟಮರ್ ಎಕ್ಸ್ ಪಿರಿಯನ್ಸ್ ಕೇಂದ್ರಗಳನ್ನು ತೆರೆದಿದೆ.

ಕೇವಲ ರೂ.90 ಸಾವಿರಕ್ಕೆ 200 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಒಕಾಯಾ ಇವಿ ಸ್ಕೂಟರ್ ಬಿಡುಗಡೆ

ಇನ್ನು ಕಂಪನಿಯು 2022ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ತನ್ನ ಮತ್ತೊಂದು ಫೆರಾಟೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸುವ ನಿರೀಕ್ಷೆಗಳಿದ್ದು, ಫೆರಾಟೊ ಎಲೆಕ್ಟ್ರಿಕ್ ಬೈಕ್ 2 ಕಿ.ವ್ಯಾ ಮೋಟಾರ್ ಹಾಗೂ 3 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದ್ದು, ಗಂಟೆಗೆ 80 - 90 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಬೈಕ್ ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 100 ಕಿ.ಮೀಗಳವರೆಗೆ ಚಲಿಸುತ್ತದೆ.

Most Read Articles

Kannada
English summary
Okaya launched new faast electric scooter in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X