ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್.. ಯಾವುದು ಬೆಸ್ಟ್?

ಭಾರತದಲ್ಲಿ ಅಡ್ವೆಂಚರ್ ಬೈಕ್ ಮಾರುಕಟ್ಟೆಯು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು, ಹೈ ಎಂಡ್ ಬೈಕ್ ಬ್ರಾಂಡ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಅಡ್ವೆಂಚರ್ ಮಾದರಿಗಳು ಇದೀಗ ಮಧ್ಯಮ ಕ್ರಮಾಂಕದ ಬೈಕ್ ಮಾದರಿಗಳಲ್ಲೂ ಪರಿಚಯಿಸಲಾಗುತ್ತಿದೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಮಧ್ಯಮ ಕ್ರಮಾಂಕದ ಅಡ್ವೆಂಚರ್ ಮಾದರಿಗಳಲ್ಲಿ ಸದ್ಯ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಹಿಮಾಲಯನ್ ಆವೃತ್ತಿಯು ಮುಂಚೂಣಿಯಲ್ಲಿದ್ದು, ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಪ್ರಮುಖ ಬೈಕ್ ತಯಾರಕ ಕಂಪನಿಗಳು ವಿವಿಧ ಸೆಗ್ಮೆಂಟ್‌ಗಳಲ್ಲಿ ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡಿವೆ. ಆದರೆ ಹಿಮಾಲಯನ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉನ್ನತ ತಾಂತ್ರಿಕ ಸೌಲಭ್ಯಗಳೊಂದಿಗೆ ಮುಂಚೂಣಿಯಲ್ಲಿದ್ದು, ಹಿಮಾಲಯನ್ ಮಾದರಿಗೆ ಎಲ್ಲಾ ಹಂತದಲ್ಲೂ ಪೈಪೋಟಿ ನೀಡಬಲ್ಲ ಮಾದರಿಯೊಂದು ಇದೀಗ ಮಾರುಕಟ್ಟೆಗೆ ಪ್ರವೇಶಿಸಿದೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಹೌದು, ಮಧ್ಯಮ ಕ್ರಮಾಂಕದ ಅಡ್ವೆಂಚರ್ ಬೈಕ್ ಮಾದರಿಯಲ್ಲಿ ಮುಂಚೂಣಿಯಲ್ಲಿದ್ದ ಹಿಮಾಲಯನ್ ಮಾದರಿಗೆ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೆ ಮರುಜೀವ ತುಂಬವ ಮೂಲಕ ವಿವಿಧ ಮಾದರಿಯ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಯೆಜ್ಡಿ ಕಂಪನಿಯ ಮೂರು ಹೊಸ ಬೈಕ್‌ಗಳಲ್ಲಿ ಒಂದು ಅಡ್ವೆಂಚರ್ ಮಾದರಿಯಾಗಿದ್ದು, ಹೊಸ ಅಡ್ವೆಂಚರ್ ಬೈಕ್ ಮಾದರಿಯು ಆರ್‌ಇ ಹಿಮಾಲಯನ್ ಆವೃತ್ತಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಹೊಸ ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ತಾಂತ್ರಿಕ ಅಂಶಗಳ ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್, ಆಕರ್ಷಕ ಬೆಲೆಯೊಂದಿಗೆ ಹೊಸ ಬೈಕ್ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಬೈಕ್ ಮಾದರಿಯು ಹಿಮಾಲಯನ್ ಬೈಕ್ ಮಾದರಿಗಿಂತ ಹೇಗೆ ಭಿನ್ನವಾಗಿದೆ ಮತ್ತು ಪ್ರತಿಸ್ಪರ್ಧಿ ಮಾದರಿಗಿಂತ ಏನೆಲ್ಲಾ ಹೊಸತನ ಪಡೆದುಕೊಂಡಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಎಂಜಿನ್ ಮತ್ತು ಪರ್ಫಾಮೆನ್ಸ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾದರಿಯು 411 ಸಿಸಿ ಆಯಿಲ್ ಕೂಲ್ಡ್, SOHC ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 23.98 ಬಿಎಚ್‌ಪಿ ಮತ್ತು 32 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಯೆಜ್ಡಿ ಅಡ್ವೆಂಚರ್ ಮಾದರಿಯು 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದ್ದು, 29.7 ಬಿಎಚ್‌ಪಿ ಮತ್ತು 29.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಯೆಜ್ಡಿ ಬೈಕ್ ಮಾದರಿಯು ಹಿಮಾಲಯನ್ ಮಾದರಿಗಿಂತಲೂ ಕಡಿಮೆ ಎಂಜಿನ್ ಆಯ್ಕೆ ಹೊಂದಿದ್ದು, ಹಿಮಾಲಯನ್ ಮಾದರಿಗಿಂತಲೂ ಹೆಚ್ಚಿನ ಪರ್ಫಾಮೆನ್ಸ್‌ನೊಂದಿಗೆ ಗ್ರಾಹಕರನ್ನು ಸೆಳೆಯಲಿದೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಜೊತೆಗೆ ಹೊಸ ಯೆಜ್ಡಿ ಬೈಕ್ ಮಾದರಿಯು 188 ಕೆ.ಜಿ ಕಡಿಮೆ ತೂಕದೊಂದಿಗೆ ಹಿಮಾಲಯನ್ ಮಾದರಿಗಿಂತಲೂ 11 ಕೆ.ಜಿ ಕಡಿಮೆ ತೂಕದೊಂದಿಗೆ ಅತ್ಯುತ್ತಮ ಹಿಡಿತದೊಂದಿಗೆ ದೂರದ ಪ್ರಯಾಣಕ್ಕೆ ಅನುಕೂಲಕರವಾಗಿದೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಫೀಚರ್ಸ್‌ಗಳು

ಅಡ್ವೆಂಚರ್ ರೈಡ್‌ಗೆ ಪೂರಕವಾಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾದರಿಗಿಂತಲೂ ಯೆಜ್ಡಿ ಅಡ್ವೆಂಚರ್ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದ್ದು, ಯೆಜ್ಡಿ ಹೊಸ ಬೈಕಿನಲ್ಲಿ ಎಲ್ಇಡಿ ಹೆಡ್‌ಲೈಟ್ಸ್, ಎಲ್ಇಡಿ ಟೈಲ್‌ಲ್ಯಾಂಪ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್, ತ್ರಿ ರೈಡ್ ಮೋಡ್(ರೋಡ್, ಆಫ್-ರೋಡ್ ಮತ್ತು ರೈನ್), ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಹೊಂದಾಣಿಕೆ ಮಾಡಬಹುದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೊಲ್ ಸೌಲಭ್ಯಗಳಿವೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಚಾರ್ಸಿ ಮತ್ತು ಸಸ್ಷೆಂಷನ್

ಅಡ್ವೆಂಚರ್ ಮಾದರಿಗಳಿಗಾಗಿ ಯೆಜ್ಡಿ ಅಡ್ವೆಂಚರ್ ಮತ್ತು ಆರ್‌ಇ ಹಿಮಾಲಯನ್ ಮಾದರಿಗಳು ತಮ್ಮದೆ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹಿಮಾಲಯನ್ ಮಾದರಿಯು ಹಾಫ್ ಡ್ಯುಪೆಕ್ಸ್ ಫ್ರೇಮ್ ಚಾಸಿಸ್ ಮೇಲೆ ನಿರ್ಮಾಣವಾಗಿದ್ದರೆ ಯೆಜ್ಡಿ ಅಡ್ವೆಂಚರ್ ಮಾದರಿಯು ಡಬಲ್ ಕ್ರೇಡಲ್ ಚಾಸಿಸ್ ಮೇಲೆ ನಿರ್ಮಾಣವಾಗಿದೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಎರಡು ಬೈಕ್ ಮಾದರಿಗಳಲ್ಲೂ ಅಡ್ವೆಂಚರ್ ರೈಡ್‌ಗೆ ಪೂರಕವಾಗಿ ಫ್ರೀ ಲೋಡ್ ಹೊಂದಾಣಿಕೆಯ 200ಎಂಎಂ ಟೆಲಿಸ್ಕೊಪಿಕ್ ಫ್ರಂಟ್ ಸಸ್ಷೆಂಷನ್ ಮತ್ತು 180 ಎಂಎಂ ಹಿಂಬದಿಯ ಮೊನೊ-ಶಾಕ್ ಸಸ್ಷೆಂಷನ್ ಹೊಂದಿದ್ದು, ಚಾಸಿಸ್ ಸಸ್ಷೆಂಷನ್‌ನಲ್ಲಿ ಎರಡು ಮಾದರಿಗಳು ತಮ್ಮದೆ ಆದ ವೈಶಿಷ್ಟ್ಯತೆ ಪಡೆದುಕೊಂಡಿವೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಡಿಸೈನ್

ಯೆಜ್ಡಿ ಮತ್ತು ಹಿಮಾಲಯನ್ ಮಾದರಿಗಳು ನೋಡಲು ತುಸು ಹೆಚ್ಚು ಕಡಿಮೆ ಒಂದೇ ರೀತಿಯಾಗಿದ್ದರೂ ಅಡ್ವೆಂಚರ್ ರೈಡ್‌ಗೆ ಪೂರಕವಾದ ಅಂಶಗಳೊಂದಿಗೆ ಎರಡು ಮಾದರಿಗಳು ವಿಭಿನ್ನ ಗ್ರಾಹಕ ವರ್ಗವನ್ನು ಹೊಂದಲಿವೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ವಿನ್ಯಾಸ ವಿಚಾರದಲ್ಲಿ ಹಿಮಾಲಯನ್ ಮಾದರಿಯು ತುಸು ಎತ್ತರ ನಿಲುವು ಹೊಂದಿದ್ದರೂ ಕೆಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಯೆಜ್ಡಿ ಅಡ್ವೆಂಚರ್ ಮಾದರಿಯು ಹೆಚ್ಚು ಆಕರ್ಷಕವಾಗಿದೆ. ಯೆಜ್ಡಿ ಬೈಕಿನಲ್ಲಿರುವ ಎಲ್ಇಡಿ ಹೆಡ್‌ಲೈಟ್ಸ್, ಎಲ್ಇಡಿ ಟೈಲ್‌ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು ಮತ್ತು ಅಡ್ವೆಂಚರ್ ರೈಡ್‌ಗೆ ಪೂರಕವಾದ ಜೆರ್ರಿ ಕ್ಯಾನ್, ಲಗೇಜ್ ರಾಕ್‌ಗಳು ಹೆಚ್ಚು ಆಕರ್ಷಿತವಾಗಿವೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಯೆಜ್ಡಿ ಕಂಪನಿಯು ಹೊಸ ಅಡ್ವೆಂಚರ್ ಮಾದರಿಯನ್ನು ಒಂದೇ ವೆರಿಯೆಂಟ್‌‌ನಲ್ಲಿ ಬಿಡುಗಡೆ ಮಾಡಿದ್ದು, ಅಡ್ವೆಂಚರ್ ಮಾದರಿಯು ವಿವಿಧ ಬಣ್ಣಗಳ ಆಯ್ಕೆಗೆ ಅನುಗುಣವಾಗಿ ಆರಂಭಿಕ ಮಾದರಿ ಎಕ್ಸ್‌ಶೋರೂಂ ಪ್ರಕಾರ ರೂ. 2.09 ಲಕ್ಷ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2.18 ಲಕ್ಷ ಬೆಲೆ ಹೊಂದಿದೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಹಾಗೆಯೇ ಆರ್‌ಇ ಹಿಮಾಲಯನ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.22 ಲಕ್ಷ ಬೆಲೆ ಹೊಂದಿದ್ದು, ಬೆಲೆ ವಿಚಾರದಲ್ಲಿ ಎರಡೂ ಬೈಕ್ ಮಾದರಿಗಳಿಗೆ ರೂ. 4 ಸಾವಿರದಿಂದ ರೂ.5 ಸಾವಿರದಷ್ಟು ಮಾತ್ರ ವ್ಯತ್ಯಾಸವಿದೆ.

ಯೆಜ್ಡಿ ಅಡ್ವೆಂಚರ್ vs ರಾಯಲ್ ಎನ್‌ಫೀಲ್ಡ್ ಹಿಯಾಲಯನ್!

ಮೇಲಿನ ಹೋಲಿಕೆ ವಿಚಾರಗಳನ್ನು ಹೊರತುಪಡಿಸಿಯೂ ಯೆಜ್ಡಿ ಹೊಸ ಅಡ್ವೆಂಚರ್ ಮಾದರಿಯು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌‌ನೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್, ಹಲವಾರು ಸ್ಟ್ಯಾಂಡರ್ಡ್ ಅಡ್ವೆಂಚರ್ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಬೈಕ್ ಮಾದರಿಯು ಆರ್‌ಇ ಹಿಮಾಲಯನ್ ಮಾದರಿಗೆ ಹೇಗೆ ಪೈಪೋಟಿ ನೀಡಲಿದೆ ಎಂಬುವುದನ್ನು ಮುಂಬರುವ ದಿನಗಳಲ್ಲಿ ಕಾಯ್ದುನೋಡಬೇಕಿದೆ. ತಾಂತ್ರಿಕ ವಿಚಾರವಾಗಿ ಹಿಮಾಲಯನ್ ಮಾದರಿಗಿಂತಲೂ ಯೆಜ್ಡಿ ಬೈಕ್ ಸಾಕಷ್ಟು ಸುಧಾರಿತವಾಗಿದ್ದರೂ ಬ್ರಾಂಡ್, ಗ್ರಾಹಕ ಸೇವೆಗಳು ಕೂಡಾ ಬೈಕ್ ಖರೀದಿಯ ಪ್ರಮುಖ ಅಂಶ ಎನ್ನುವುದನ್ನು ಮರೆಯುವಂತಿಲ್ಲ.

Most Read Articles

Kannada
Read more on ಯೆಜ್ಡಿ yezdi
English summary
Royal enfield himalayan vs yezdi adventure comparison details
Story first published: Friday, January 14, 2022, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X