Just In
Don't Miss!
- Movies
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
- News
ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
EV India Expo 2022: ಮೂರು ಹೊಸ ಹೈ-ಸ್ಪೀಡ್ ಇ-ಸ್ಕೂಟರ್ ಅನಾವರಣಗೊಳಿಸಿದ ಶೆಮಾ ಎಲೆಕ್ಟ್ರಿಕ್
2022ರ ಇವಿ ಇಂಡಿಯಾ ಎಕ್ಸ್‌ಪೋ ಗ್ರೇಟರ್ ನೋಯ್ಡಾದಲ್ಲಿ ಆರಂಭವಾಗಿದ್ದು, ಇವಿ ಆಟೋ ಎಕ್ಸ್‌ಪೋದಲ್ಲಿ ಹಲವಾರು ಹೊಸ ಮಾದರಿಯ ಇವಿ ವಾಹನಗಳನ್ನು ಪ್ರದರ್ಶನಗೊಳಿಸಲಾಗುತ್ತಿದೆ. ಶೆಮಾ ಎಲೆಕ್ಟ್ರಿಕ್ ತನ್ನ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಈಗಲ್ ಪ್ಲಸ್, ಗ್ರೆಫಾನ್ ಮತ್ತು ಟಫ್ ಪ್ಲಸ್ ಮಾದರಿಗಳನ್ನು ಅನಾವರಣಗೊಳಿಸಿದ್ದು, ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿವೆ.

ಪ್ರಸಕ್ತ ವರ್ಷದ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಹಲವಾರು ಹೊಸ ಇವಿ ವಾಹನ ಮಾದರಿಗಳು ಪ್ರದರ್ಶನಗೊಳ್ಳುತ್ತಿದ್ದು, ಸ್ಟಾರ್ಟ್ಅಪ್ ಇವಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವಶೆಮಾ ಎಲೆಕ್ಟ್ರಿಕ್ ಕೂಡಾ ತನ್ನ ಬಹುನೀರಿಕ್ಷಿತ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ.

ಶೆಮಾ ಎಲೆಕ್ಟ್ರಿಕ್ ಕಂಪನಿಯು ಈಗಲ್ ಪ್ಲಸ್, ಗ್ರೆಫಾನ್ ಮತ್ತು ಟಫ್ ಪ್ಲಸ್ ಇವಿ ಸ್ಕೂಟರ್‌ಗಳನ್ನು ಬಹಿರಂಗಪಡಿಸಿದ್ದು, ಹೊಸ ಸ್ಕೂಟರ್‌ಗಳು ಭಾರತದಲ್ಲಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಹೊಸ ಇವಿ ಸ್ಕೂಟರ್ ಮಾದರಿಗಳನ್ನು ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಅಭಿವೃದ್ದಿಪಡಿಸಿರುವ ಶೆಮಾ ಎಲೆಕ್ಟ್ರಿಕ್ ಕಂಪನಿಯು ಬಜೆಟ್ ಬೆಲೆಯಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಮೂರು ಹೊಸ ಇವಿ ಸ್ಕೂಟರ್‌ಗಳು ವಿಭಿನ್ನ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರಲಿವೆ.

ಶೆಮಾ ಎಲೆಕ್ಟ್ರಿಕ್ ಕಂಪನಿಯ ಮೊದಲ ಇವಿ ಸ್ಕೂಟರ್ ಮಾದರಿಯಾದ ಈಗಲ್ ಪ್ಲಸ್ ಕುರಿತು ಹೇಳುವುದಾದರೇ ಇದು ಬ್ರಾಂಡ್‌ನ ಆರಂಭಿಕ ಮಾದರಿಯಾಗಿದ್ದು, ಈ ಸ್ಕೂಟರ್ ಸ್ಥಳೀಯ ಪ್ರಯಾಣಕ್ಕೆ ಉತ್ತಮವಾಗಿದೆ.

ಈಗಲ್ ಪ್ಲಸ್ ಮಾದರಿಯು ಹೈ ಸ್ಪೀಡ್ ಹೈಸ್ಪೀಡ್ ವೈಶಿಷ್ಟ್ಯತೆಯೊಂದಿಗೆ ಗಂಟೆಗೆ 50 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದ್ದು, ಇದು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೊಸ ಮಾದರಿಯಲ್ಲಿ ಕಂಪನಿಯು 1200 ವ್ಯಾಟ್ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಿದ್ದು, ಸ್ಕೂಟರ್‌ಗೆ ಶಕ್ತಿಯನ್ನು ನೀಡಲು 3.2 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಲಾಗಿದೆ. ಇದು 3.5 ಗಂಟೆಗಳಿಂದ 4 ಗಂಟೆಗಳ ಒಳಗೆ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಆಗಲಿದೆ.

ಶೆಮಾ ಎಲೆಕ್ಟ್ರಿಕ್ ಪರಿಚಯಿಸುತ್ತಿರುವ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಗ್ರೆಫಾನ್ ಬಿಡುಗಡೆಯಾಗಲಿದ್ದು, ಇದೂ ಕೂಡ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿದೆ.

ಗ್ರೆಫಾನ್ ಇವಿ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 130 ಕಿ.ಮೀ ಮೈಲೇಜ್ ನೀಡಲಿದ್ದು, ಇದರಲ್ಲಿ 1500 ವ್ಯಾಟ್ ಬಿಎಲ್‌ಡಿಸಿ ಮೋಟಾರ್‌ನೊಂದಿಗೆ 4.1 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಲಿದೆ.

ಹೊಸ ಮಾದರಿಯಲ್ಲಿ ಕಂಪನಿಯು ಸಾಮಾನ್ಯ ಚಾರ್ಜರ್‌ನೊಂದಿಗೆ ಬ್ಯಾಟರಿ ಚಾರ್ಜ್ ಸೌಲಭ್ಯಕ್ಕೆ 3.5 ಗಂಟೆಯಿಂದ 4 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಖಾತ್ರಿಪಡಿಸಲಿದ್ದು, ಇದು ಈಗಲ್ ಪ್ಲಸ್‌ಗಿಂತಲೂ ತುಸು ಹೆಚ್ಚಿನ ಮಟ್ಟದ ಬೆಲೆ ಹೊಂದಿರಲಿದೆ.

ಇನ್ನು ಶೆಮಾ ಎಲೆಕ್ಟ್ರಿಕ್ ಕಂಪನಿಯು ಪರಿಚಯಿಸುತ್ತಿರುವ ಮೂರನೇ ಹೈಸ್ಪೀಡ್ ಇ-ಸ್ಕೂಟರ್ ಮಾದರಿಯಾದ 'ಟಫ್ ಪ್ಲಸ್' ಹಲವಾರು ಹೊಸ ಸೌಲಭ್ಯಗಳೊಂದಿಗೆ ಇದು ಕೂಡಾ ಪ್ರತಿ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 130 ಕಿ.ಮೀ ಮೈಲೇಜ್ ನೀಡಲಿದೆ.

ಇದರಲ್ಲಿ 1500 ವ್ಯಾಟ್ ಬಿಎಲ್‌ಡಿಸಿ ಮೋಟಾರ್‌ನೊಂದಿಗೆ 4 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಲಿದ್ದು, ಫಾಸ್ಟ್ ಚಾರ್ಜರ್ ವೈಶಿಷ್ಟ್ಯತೆಯೊಂದಿಗೆ 3.5 ರಿಂದ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಶೆಮಾ ಎಲೆಕ್ಟ್ರಿಕ್ ಕಂಪನಿಯು ಐದು ಹೊಸ ಲೋ ಸ್ಪೀಡ್ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಈ ವರ್ಷದ ಅಕ್ಟೋಬರ್‌ನಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಬಹುದಾಗಿದೆ.

ಶೆಮಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೇಶದ ಪ್ರಮುಖ ನಾಲ್ಕು ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ 10,000 ಹೊಸ ಇವಿ ಗ್ರಾಹಕರನ್ನು ಹೊಂದಿರುವುದಾಗಿ ಕಂಪನಿಯು ಭರವಸೆ ನೀಡಿದೆ.

ಒಡಿಶಾ ಮೂಲದ ಶೆಮಾ ಎಲೆಕ್ಟ್ರಿಕ್ ಕಂಪನಿಯು ಸಂಬಲ್‌ಪುರ ಮತ್ತು ಹರಿಯಾಣದ ಮನೇಸರ್‌ನಲ್ಲಿ ಅತ್ಯಾಧುನಿಕ ಇವಿ ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕಂಪನಿಯು ಸದ್ಯ ಲೋ ಸ್ಪೀಡ್ ಸ್ಪೀಡ್ ವೈಶಿಷ್ಟ್ಯತೆಯ ಈಗಲ್, ಟಫ್, ಜೂಮ್, ಫ್ಲೈ ಮತ್ತು ಬೋಲ್ಡ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.