ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಸಿಂಪಲ್ ಎನರ್ಜಿ ಕಂಪನಿಯು ಹೊಸ ಸಿಂಪಲ್ ಒನ್ ಸ್ಕೂಟರ್ ವಿತರಣೆಗೆ ಭರ್ಜರಿ ಸಿದ್ದತೆ ನಡೆಸಿದ್ದು, ಕಂಪನಿಯು ಈ ತಿಂಗಳಾಂತ್ಯಕ್ಕೆ ಹೊಸ ಇವಿ ಸ್ಕೂಟರ್ ವಿತರಿಸುವ ಭರವಸೆ ನೀಡಿದೆ.

ಸದ್ಯ ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭಿಸಿರುವ ಸಿಂಪಲ್ ಎನರ್ಜಿ ಕಂಪನಿಯು ಸ್ಕೂಟರ್ ವಿತರಣೆಗಾಗಿ ಯೋಜನೆ ರೂಪಿಸುತ್ತಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ವಿತರಣೆಗಾಗಿ ಕಳೆದ ತಿಂಗಳು ಅಗಸ್ಟ್ ಆರಂಭದಲ್ಲಿ ನಮ್ಮ ಬೆಂಗಳೂರು ಸೇರಿದಂತೆ ಹಂತ-ಹಂತವಾಗಿ ಚೆನ್ನೈ, ಹೈದ್ರಾಬಾದ್, ಮುಂಬೈ, ಪುಣೆ ನಗರಗಳಲ್ಲಿ ಟೆಸ್ಟ್ ರೈಡ್ ನಡೆಸಲಾಗಿದ್ದು, ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟೆಸ್ಟ್ ರೈಡ್ ಕೈಗೊಳ್ಳಲಾಗುತ್ತಿದೆ. ಮುಂದಿನ ಕೆಲ ದಿನಗಳವರೆಗೆ ಟೆಸ್ಟ್ ರೈಡ್ ನಂತರ ಖರೀದಿ ವಿಂಡೋ ಆರಂಭವಾಗಲಿದ್ದು, ಈ ತಿಂಗಳಾಂತ್ಯಕ್ಕೆ ಇಲ್ಲವೇ ಅಕ್ಟೋಬರ್ ಮೊದಲ ವಾರದಲ್ಲಿ ಹೊಸ ಇವಿ ಸ್ಕೂಟರ್ ಗ್ರಾಹಕರ ಕೈಸೆರಲಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಸಿಂಪಲ್ ಎನರ್ಜಿ ಕಂಪನಿಯು ಹೊಸ ಸ್ಕೂಟರ್ ವಿತರಣೆಗೂ ಮುನ್ನ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, 70 ಸಾವಿರಕ್ಕೂ ಹೆಚ್ಚು ಯುನಿಟ್‌ಗೆ ಬುಕಿಂಗ್ ಸಲ್ಲಿಕೆಯಾಗಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಕಳೆದ ವರ್ಷ ಅಗಸ್ಟ್ 15ರಂದು ಬಿಡುಗಡೆಯಾಗಿದ್ದ ಸಿಂಪಲ್ ಒನ್ ಇವಿ ಸ್ಕೂಟರ್‌ಗ ರೂ. 1947 ಮೊತ್ತದೊಂದಿಗೆ ಬುಕಿಂಗ್ ಆರಂಭಿದ್ದ ಸಿಂಪಲ್ ಎನರ್ಜಿ ಕಂಪನಿಯು ಹೊಸ ಸ್ಕೂಟರ್ ಬಿಡುಗಡೆಯ ನಂತರವಷ್ಟೇ ವಿವಿಧ ಹಂತದ ತಾಂತ್ರಿಕ ಸೌಲಭ್ಯಗಳ ಪರೀಕ್ಷಾರ್ಥಾ ಪ್ರಕ್ರಿಯೆಗಳನ್ನು ಆರಂಭಿಸಿತ್ತು.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಕಂಪನಿಯ ಯೋಜನೆಯ ಪ್ರಕಾರ ಈ ವರ್ಷದ ಆರಂಭದಲ್ಲಿಯೇ ವಿತರಣೆಯಾಗಬೇಕಿದ್ದ ಹೊಸ ಸ್ಕೂಟರ್ ವಿತರಣೆಯು ಕಾರಾಣಾಂತರಗಳಿಂದ ಮುಂದೂಡಿಕೆಯಾಗುತ್ತಿದ್ದು, ಇದೀಗ ಅಂತಿಮವಾಗಿ ಗ್ರಾಹಕರ ಕೈ ಸೇರಲು ಸಿದ್ದವಾಗುತ್ತಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಇವಿ ವಾಹನಗಳಲ್ಲಿನ ಅಗ್ನಿ ಅವಘಡಗಳನ್ನು ತಪ್ಪಿಸಲು ಜಾರಿಗೆ ತಂದ ಹೊಸ ಮಾನದಂಡ ಅಳವಡಿಕೆ ಕಡ್ಡಾಯವಾಗಿರುವುದರಿಂದ ಸಿಂಪಲ್ ಎನರ್ಜಿ ಕಂಪನಿಯು ಹೊಸ ಸ್ಕೂಟರ್ ಮಾದರಿಯಲ್ಲಿ ಮತ್ತೊಮ್ಮೆ ಹೊಸದಾಗಿ ಬ್ಯಾಟರಿ ಪ್ಯಾಕ್ ಅಭಿವೃದ್ದಿಯಲ್ಲಿ ಕೆಲವು ಬದಲಾವಣೆ ಮಾಡಿದ್ದರಿಂದ ವಿತರಣೆಯಲ್ಲಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಸದ್ಯ ನವೀಕೃತ ಬ್ಯಾಟರಿ ಪ್ಯಾಕ್ ಮೂಲಕವೇ ಕಂಪನಿಯು ಹೊಸ ಇವಿ ಸ್ಕೂಟರ್ ಪರೀಕ್ಷಾರ್ಥ ಕೈಗೊಂಡಿದ್ದು, ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಸದ್ಯ ಟೆಸ್ಟ್ ರೈಡ್ ನೀಡಲಾಗುತ್ತಿದೆ. ಈಗಾಗಲೇ ನಮ್ಮ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಟೆಸ್ಟ್ ರೈಡ್ ನೀಡಲಾಗಿದ್ದು, ದೇಶಾದ್ಯಂತ ಒಟ್ಟು 13 ನಗರಗಳಲ್ಲಿ ಟೆಸ್ಟ್ ರೈಡ್ ನಡೆಸುತ್ತಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೀಗಾಗಿ ಹೊಸ ಇವಿ ಸ್ಕೂಟರ್ ಮಾದರಿಯು ಮುಂದಿನ ಅಕ್ಟೋಬರ್ ಅವಧಿಯೊಳಗಾಗಿ ಅಧಿಕೃತವಾಗಿ ರಸ್ತೆಗಿಳಿಯಬಹುದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಸ್ಟ್ಯಾಂಡರ್ಡ್ ವೆರಿಯೆಂಟ್ ಮತ್ತು ಎಕ್ಸೈಡ್ ವೆರಿಯೆಂಟ್ ಎನ್ನುವ ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಸಿಂಪಲ್ ಎನರ್ಜಿ ಕಂಪನಿಯು ಸದ್ಯ ಸ್ಟ್ಯಾಂಡರ್ಡ್ ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ಹೊಸ ಮಾದರಿಗೆ ರೂ. 1.44 ಲಕ್ಷ ನಿಗದಿಪಡಿಸಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ಇವಿ ಸ್ಕೂಟರ್ ಮಾದರಿಯು ಶೇ. 95 ರಷ್ಟು ಬ್ಯಾಟರಿ ದಕ್ಷತೆಯನ್ನು ಹಿಂದಿರುಗಿಸಲಿದ್ದು, 4.8 kWh ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 72 ಎನ್ಎಂ ಟಾರ್ಕ್ ಜೊತೆಗೆ ಇಕೋ ಮೋಡ್‌ನಲ್ಲೂ 200 ಕಿಮೀ ಗಿಂತಲೂ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಈ ಮೂಲಕ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಖಾತ್ರಿಪಡಿಸಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಇನ್ನು ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿಯಾಗಿ 1.6 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಸಹ ಆಯ್ಕೆ ರೂಪದಲ್ಲಿ ಜೋಡಣೆ ಮಾಡುವುದಾಗಿ ಹೇಳಿಕೊಂಡಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಮೂಲಕ ಸಿಂಪಲ್ ಒನ್ ಸ್ಕೂಟರ್ ಮಾಲೀಕರು ಪ್ರತಿ ಚಾರ್ಜ್‌ಗೆ 300 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಬಹುದಾಗಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

1.6 kWh ಸಾಮರ್ಥ್ಯದ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಕಂಪನಿಯು ಹೊಸ ಸ್ಕೂಟರಿನ ಬೂಟ್‌ ಸ್ಪೆಸ್‌ನಲ್ಲಿ ಸುಲಭವಾಗಿ ಇರಿಸುವಂತೆ ವಿನ್ಯಾಸಗೊಳಿಸಿದ್ದು, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಇದರೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದೆ.

ದೆಹಲಿಯಲ್ಲಿ ಟೆಸ್ಟ್ ರೈಡ್ ಆರಂಭ: ಶೀಘ್ರದಲ್ಲಿಯೇ ವಿತರಣೆಯಾಗಲಿದೆ ಸಿಂಪಲ್ ಒನ್ ಇವಿ ಸ್ಕೂಟರ್

ಇನ್ನೊಂದು ವಿಶೇಷ ಅಂದರೆ ಸಿಂಪಲ್ ಎನರ್ಜಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಿನಲ್ಲಿಯೇ ಅಭಿವೃದ್ದಿಪಡಿಸಿದ ಸಂಭ್ರಮಕ್ಕಾಗಿ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ವಿಶೇಷವಾಗಿ 'ನಮ್ಮ ರೆಡ್' ಎನ್ನುವ ಬಣ್ಣದ ಆಯ್ಕೆ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

Most Read Articles

Kannada
English summary
Simple one ev scooter test ride begins in delhi
Story first published: Friday, September 2, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X