ದುಬಾರಿ ಬೆಲೆಯ 'ಡುಕಾಟಿ ಡೆಸರ್ಟ್ ಎಕ್ಸ್' ಡಿಸೆಂಬರ್ 12ರಂದು ಭಾರತದಲ್ಲಿ ಬಿಡುಗಡೆ

ಆಫ್-ರೋಡ್ ಕೇಂದ್ರೀಕೃತ ಬೈಕ್‌ಗಳು ಹೆಚ್ಚು ಯುವ ಜನರನ್ನು ತನ್ನತ್ತ ಸೆಳೆಯುತ್ತವೆ. ಸದ್ಯ ದೇಶೀಯ ಬೈಕ್ ಕಂಪನಿಗಳಿಗೆ ಪೈಪೋಟಿ ನೀಡಲು ಇಟಾಲಿಯನ್ ಸೂಪರ್‌ಬೈಕ್ ತಯಾರಕ ಕಂಪನಿ 'ಡುಕಾಟಿ' ತನ್ನ ಇತ್ತೀಚಿನ ಮೋಟಾರ್‌ಸೈಕಲ್ 'ಡೆಸರ್ಟ್ ಎಕ್ಸ್' ಅನ್ನು ಡಿಸೆಂಬರ್ 12ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಮುಂಬರುವ ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್, ಡುಕಾಟಿ ಮಲ್ಟಿಸ್ಟ್ರಾಡಾ V2ಗಿಂತ ಹೆಚ್ಚು ಆಫ್-ರೋಡ್ ಕೇಂದ್ರೀಕೃತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಡುಕಾಟಿ ಡೆಸರ್ಟ್ ಎಕ್ಸ್ ಬೈಕ್ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಮೋಟಾರ್‌ಸೈಕಲ್‌ ಹೊಂದಿರುವ ರೀತಿಯಲ್ಲಿ 937 ಸಿಸಿ, ಎಲ್-ಟ್ವಿನ್ ಎಂಜಿನ್‌ನೊಂದಿಗೆ ಖರೀದಿಗೆ ಸಿಗಲಿದೆ. ಆದಾಗ್ಯೂ, ಡಸರ್ಟ್ ಎಕ್ಸ್ ಬೈಕ್ ಅನ್ನು ಬಹುತೇಕ ಆಫ್-ರೋಡ್ ಚಾಲನೆಗೆ ಸರಿಹೊಂದುವಂತೆ ಕಂಪನಿಯು ಎಂಜಿನ್ ಅನ್ನು ವಿಭಿನ್ನವಾಗಿರಿಸಿದೆ.

ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್‌ನಲ್ಲಿರುವ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 9,250 ಆರ್‌ಪಿಎಂನಲ್ಲಿ 108.5 ಬಿಹೆಚ್‌ಪಿ ಗರಿಷ್ಠ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 92 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪವರ್‌ಟ್ರೇನ್, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೊತೆಗೆ ಆಫ್-ರೋಡ್ ರೈಡಿಂಗ್‌ಗಾಗಿ ಶಾರ್ಟ್ ಫಸ್ಟ್ ಮತ್ತು ಸೆಕೆಂಡ್ ಗೇರ್‌ನೊಂದಿಗೆ ಬರುತ್ತಿದ್ದು, ಹೆದ್ದಾರಿ ಪ್ರಯಾಣಕ್ಕಾಗಿ ಟಾಲ್ ಆರನೇ ಗೇರ್‌ನೊಂದಿಗೆ ಬರುತ್ತದೆ.

ಅಲ್ಲದೇ, ಈ ಹೊಸ ಮೋಟಾರ್‌ಸೈಕಲ್‌ನಲ್ಲಿ ಆರು ರೈಡಿಂಗ್ ಮೋಡ್‌ಗಳನ್ನು ಸಹ ಡುಕಾಟಿ ಕಂಪನಿ ತನ್ನ ಖರೀದಿದಾರರಿಗೆ ನೀಡುತ್ತಿದೆ. ಸ್ಪೋರ್ಟ್, ಟೂರಿಂಗ್, ಅರ್ಬನ್, ವೆಟ್, ಎಂಡ್ಯೂರೋ ಮತ್ತು ರ‍್ಯಾಲಿ. ಇವುಗಳಲ್ಲಿ, ಮೊದಲ ನಾಲ್ಕು ರೈಡಿಂಗ್ ಮೋಡ್‌ಗಳನ್ನು ದೈನಂದಿನ ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗಿದೆ. ಆದರೆ, ಕೊನೆಯ ಎರಡು ರೈಡಿಂಗ್ ಮೋಡ್‌ಗಳನ್ನು ನಿರ್ದಿಷ್ಟವಾಗಿ ಆಫ್-ರೋಡ್ ರೈಡಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಬೈಕ್ ಪ್ರಿಯರಿಗೆ ತುಂಬಾ ಇಷ್ಟವಾಗುತ್ತಿದೆ.

ಹೊಸ ಡುಕಾಟಿ ಡೆಸರ್ಟ್ ಎಕ್ಸ್ ಬೈಕಿನಲ್ಲಿರುವ ಮೆಕ್ಯಾನಿಕಲ್‌ ಅಂಶಗಳ ಬಗ್ಗೆ ಹೇಳುವುದಾದರೆ, ಈ ಮೋಟಾರ್‌ಸೈಕಲ್ ಹೊಸ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಹೊಂದಿದ್ದು, ಕಯಾಬಾದಿಂದ ಮಾಡಲಾದ ಫ್ರಂಟ್ ಮತ್ತು ರೇರ್ ಸಸ್ಪೆನ್ಷನ್ ಇದೆ. ಫ್ರಂಟ್, ಸಸ್ಪೆನ್ಷನ್ 46 ಎಂಎಂ USD ಫೋರ್ಕ್ ಆಗಿದೆ. ಆದರೆ ರೇರ್, ಅಲ್ಯೂಮಿನಿಯಂ ಸ್ವಿಂಗರ್ಮ್ ಜೊತೆ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಆಫ್-ರೋಡ್ ಮೋಟಾರ್‌ಸೈಕಲ್ ಆಗಿರುವುದರಿಂದ, ಡುಕಾಟಿ ಡೆಸರ್ಟ್ ಎಕ್ಸ್ ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 21-ಇಂಚು ಮತ್ತು 18-ಇಂಚಿನ ಸ್ಪೋಕ್ಡ್ ಮೀಲ್ ಗಳನ್ನು ಹೊಂದಿದೆ.

ಭಾರತದ ಮಾರುಕಟ್ಟೆಗೆ ಬಿಡುಗಡೆಯಲಿರುವ ಡುಕಾಟಿ ಡೆಸರ್ಟ್ ಎಕ್ಸ್, ಪಿರೆಲ್ಲಿ ಸ್ಕಾರ್ಪಿಯನ್ ರ‍್ಯಾಲಿ ಎಸ್‌ಟಿಆರ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ 90/90 ಮತ್ತು ಹಿಂಭಾಗದಲ್ಲಿ 150/70 ಅಳತೆಯೊಂದಿಗೆ ಬರುತ್ತದೆ. ಬ್ರೇಕ್ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ, ಈ ಮೋಟಾರ್‌ಸೈಕಲ್ ಮುಂಭಾಗದಲ್ಲಿ 4-ಪಿಸ್ಟನ್ ಕ್ಯಾಲಿಪರ್‌ಗಳಿಂದ ಎರಡು 320 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದಲ್ಲದೆ, ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್ 250 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಬೆಲೆ ವಿಚಾರದ ಬಗ್ಗೆ ಮಾತನಾಡುವುದಾದರೆ, ಡುಕಾಟಿಯು ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್‌ನ ಬೆಲೆ ಭಾರೀ ಜಾಸ್ತಿಯೇ ಎನ್ನಬಹುದು. ಡಿಸೆಂಬರ್ 12ರಂದು ಲಾಂಚ್ ಆಗುವ ಈ ಬೈಕ್ ಬೆಲೆ 15 ಲಕ್ಷದಿಂದ 18 ಲಕ್ಷದವರೆಗೆ ಎಕ್ಸ್ ಶೋರೂಂನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಲೆಯನ್ನು ಗಮನಿಸಿದರೆ, ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್, ಹೋಂಡಾ ಆಫ್ರಿಕನ್ ಟ್ವಿನ್ ಮತ್ತು ಟ್ರಯಂಫ್ ಟೈಗರ್ 900 ರ‍್ಯಾಲಿಯಂತಹ ಮೋಟಾರ್‌ಸೈಕಲ್‌ಗಳಿಗಿಂತ ಕೊಂಚ ದುಬಾರಿಯಾಗಿದೆ.

ಡುಕಾಟಿ ಡೆಸರ್ಟ್ ಎಕ್ಸ್ ಬಗ್ಗೆ ಆಲೋಚನೆಗಳು:
ಡುಕಾಟಿ ಡೆಸರ್ಟ್ ಎಕ್ಸ್ ಬಹಳ ಆಕರ್ಷಕವಾಗಿ ಕಾಣುವ ಮೋಟಾರ್‌ಸೈಕಲ್‌ ಆಗಿದೆ. ಜೊತೆಗೆ ಡಸರ್ಟ್ ಎಕ್ಸ್ ಅತ್ಯಂತ ಸಮರ್ಥವಾದ ಬೈಕ್ ಎಂದು ಡುಕಾಟಿ ಕಂಪನಿ ಹೇಳಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬೈಕ್ ಪ್ರಿಯರನ್ನು ಸೆಳೆಯುತ್ತಿರುವ ಹೋಂಡಾ ಆಫ್ರಿಕನ್ ಟ್ವಿನ್ ಮತ್ತು ಟ್ರಯಂಫ್ ಟೈಗರ್ 900 ರ‍್ಯಾಲಿಯಂತಹ ಆಫ್-ರೋಡ್ ಬೈಕುಗಳಿಗೆ ಈ ಡೆಸರ್ಟ್ ಎಕ್ಸ್ ತೀವ್ರ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

Most Read Articles

Kannada
Read more on ಡುಕಾಟಿ ducati
English summary
The expensive ducati desert x will be launched in India on december 12
Story first published: Friday, December 9, 2022, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X