Just In
- 16 min ago
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- 12 hrs ago
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- 13 hrs ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 14 hrs ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
Don't Miss!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಲ್ಟ್ರಾವೈಲೆಟ್ F77 Vs ಕೆಟಿಎಂ RC 390: ಈ ಎಲೆಕ್ಟ್ರಿಕ್ ಬೈಕ್ ನಿಜವಾಗಿಯು ಉತ್ತಮವಾಗಿದೆಯೇ?
ಬೆಂಗಳೂರು ಮೂಲದ EV ಸ್ಟಾರ್ಟ್ಅಪ್ ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ F77 ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಅಲ್ಟ್ರಾವೈಲೆಟ್ F77 ಬೈಕ್ ಭವಿಷ್ಯದಲ್ಲಿ ಭಾರತದ ಯುವ ಜನರು ಹೆಚ್ಚು ಆಯ್ಕೆ ಮಾಡುವ ಸಾಮಾನ್ಯ ಸ್ಪೋರ್ಟ್ಸ್ ಬೈಕ್ ಆಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಹಾಗಾದರೆ ಹೊಸದಾಗಿ ಲಾಂಚ್ ಆಗಿರುವ ಎಲೆಕ್ಟ್ರಿಕ್ ಅಲ್ಟ್ರಾವೈಲೆಟ್ F77, ಇವತ್ತಿನ ಭಾರತೀಯ ಯುವ ರೈಡರ್‌ಗಳಿಗೆ ಹಾಟ್ ಫೆವರೇಟ್ ಆಗಿರುವ ಪೆಟ್ರೋಲ್ ಚಾಲಿತ KTM RC390 ವಿರುದ್ಧ ಹೇಗೆ ಕಾರ್ಯನಿರ್ವಹಿಸುತ್ತದೆ? ಎಲೆಕ್ಟ್ರಿಕ್ ಬೈಕ್ ನಿಜವಾಗಿಯೂ ಉತ್ತಮವಾದ ಆಯ್ಕೆಯೇ? ಈ ಬೈಕ್ ಖರೀದಿ ಮಾಡಿದರೆ ನಮ್ಮ ನಿರೀಕ್ಷೆಗಳನ್ನು ಪೂರೈಕೆ ಮಾಡುತ್ತದೆಯೇ ಎಂಬುದನ್ನು ತಿಳಿಯಬೇಕೇ? ನಾವು ಇಲ್ಲಿ ಎರಡು ಬೈಕ್‌ಗಳನ್ನು ಹೋಲಿಕೆ ಮಾಡಿ, ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ.
ಪವರ್ ಮತ್ತು ತೂಕ
ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಲಿದ್ದು, 40.42bhp ಪವರ್ ಮತ್ತು 100Nm ಟಾರ್ಕ್ ಉತ್ಪಾದಿಸುತ್ತದೆ. ಸಿಂಗಲ್ ಸ್ವೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೂಲಕ ಹಿಂದಿನ ಚಕ್ರಕ್ಕೆ ಪವರ್ ನೀಡುತ್ತದೆ. ಈ ಬೈಕ್ ದೊಡ್ಡದಾದ 10.3kWh ಬ್ಯಾಟರಿ ಪ್ಯಾಕ್ ಅನ್ನು ಪಡೆಡಿದ್ದು, ಒಂದೇ ಚಾರ್ಜ್‌ನಲ್ಲಿ (IDC) 307km ರೇಂಜ್ ಅನ್ನು ನೀಡುತ್ತದೆ. 7.8 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಜೊತೆಗೆ 152km/h ಗರಿಷ್ಟ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಅಲ್ಲದೆ, ಈ ಬೈಕ್ 207kg ತೂಕವಿದೆ.
KTM RC 390 ಸಿಂಗಲ್-ಸಿಲಿಂಡರ್, ಫ್ಯೂಯಲ್-ಇಂಜೆಕ್ಟೆಡ್ 373ಸಿಸಿ ಎಂಜಿನ್ ಹೊಂದಿದ್ದು, ಇದು 9,000rpmನಲ್ಲಿ 42.9bhp ಗರಿಷ್ಠ ಪವರ್ ಮತ್ತು 7,000rpmನಲ್ಲಿ 37Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮೂಲಕ ಹಿಂದಿನ ಚಕ್ರಗಳಿಗೆ ಪವರ್ ಅನ್ನು ನೀಡುತ್ತದೆ. KTM RC 390 ಬೈಕ್, 172 ಕೆ.ಜಿ ತೂಕವಿದ್ದು, 13.7-ಲೀಟರ್ ಇಂಧನ ಟ್ಯಾಂಕ್ ಸಂಪೂರ್ಣವಾಗಿ ಭರ್ತಿ ಮಾಡಿಕೊಂಡರೆ 427 ಕಿಲೋಮೀಟರ್ ದೂರದವರೆಗೂ ಪ್ರಯಾಣಿಸಬಹುದು.
KTM RC 390 ಕೇವಲ 5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಜೊತೆಗೆ 177km/h ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹಾಗಾದರೆ ನಾವು ಇಲ್ಲಿ ಯಾವ ತೀರ್ಮಾನವನ್ನು ತೆಗೆದುಕೊಳ್ಳಬಹುದು? ತೂಕದ ವಿಚಾರವನ್ನು ಪರಿಗಣಿಸಬೇಕೆ ಅಥವಾ ಮೈಲೇಜ್ ಆಧಾರವಾಗಿ ತೀರ್ಮಾನ ಮಾಡಬೇಕೇ.. ಇಲ್ಲವೇ ಮುಂಬರುವ ದಿನಗಳಲ್ಲಿ EV ವಾಹನಗಳಿಗೆ ಭವಿಷ್ಯ ಇದೆ ಎಂದು ಅವುಗಳನ್ನು ಖರೀದಿ ಮಾಡಬೇಕೇ ಎನ್ನುವುದು ನಿಮ್ಮ ಆಯ್ಕೆಯಾಗಿದ್ದು, ಸೂಕ್ತವಾಗಿರುವುದನ್ನು ಆರಿಸಿ.
ಬೆಲೆ
ಇನ್ನೂ ಬೈಕ್‌ನ ಬೆಲೆ ವಿಚಾರದ ಬಗ್ಗೆ ಮಾತನಾಡುವುದರೆ KTM RC 390ಗೆ ಹೋಲಿಕೆ ಮಾಡಿದರೆ ಅಲ್ಟ್ರಾವೈಲೆಟ್ F77 ಕೊಂಚ ದುಬಾರಿಯಂದೇ ಹೇಳಬಹುದು. F77 ಮೂಲ ಬೆಲೆ 3.8 ಲಕ್ಷ ರೂಪಾಯಿ ಇದ್ದು, ಕ್ರೇಜಿ ರೆಂಜ್ ಮಾಡೆಲ್ ಬೈಕ್ ಬೇಕಿದ್ದರೆ ಎಲ್ಲ ತೆರಿಗೆ ಸೇರಿ, ಕನಿಷ್ಟ 4.55 ಲಕ್ಷ ರೂಪಾಯಿಗಳನ್ನು ಗ್ರಾಹಕರು ಪಾವತಿಸಬೇಕು. ಮತ್ತೊಂದೆಡೆ, ಕೆಟಿಎಂ RC 390 ಬೆಲೆಯು ಹೆಚ್ಚಿದ್ದು, 3.14 ಲಕ್ಷ (ಎಕ್ಸ್ ಶೋ ರೂಂ) ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ.
ಪೆಟ್ರೋಲ್ ಚಾಲಿತ KTM RC 390 ಬೈಕಿಗೆ ಹೋಲಿಸಿದರೆ ಅಲ್ಟ್ರಾವೈಲೆಟ್ F77ನ ಚಾಲನೆ ಮತ್ತು ನಿರ್ವಹಣೆ ವೆಚ್ಚಗಳು ಅತ್ಯಂತ ಕಡಿಮೆಯಿರುತ್ತದೆ ಎಂದು ಅಲ್ಟ್ರಾವೈಲೆಟ್ ಕಂಪನಿ ಹೇಳಿಕೊಂಡಿದೆ. ಆದಾಗ್ಯೂ, ಮುಂಗಡ ವೆಚ್ಚ ಪಾವತಿಯ ವ್ಯತ್ಯಾಸವನ್ನು ಸರಿದೂಗಿಲು ಸಮಯ ತೆಗೆದುಕೊಳ್ಳಬಹುದು. ಆ ಸಮಯದಲ್ಲಿ ಅನೇಕ ಬೈಕ್ ಸವಾರರು, ಈ F77 ಬೈಕಿನ ಸ್ವೀಡ್ ಅನ್ನು ಕೊಂಚ ಮಟ್ಟಿಗೆ ಏನನ್ನಾದರೂ ಅಪ್‌ಗ್ರೇಡ್ ಮಾಡಲು ಕಂಪನಿಯಿಂದ ಸಾದ್ಯವಾಗುತ್ತದೆಯೇ ಎಂಬುದನ್ನು ಬಯಸುತ್ತಿದ್ದಾರೆ.
ಯಾವುದು ಉತ್ತಮ KTM RC 390 ಅಥವಾ ಅಲ್ಟ್ರಾವೈಲೆಟ್ F77?
ಇಂದಿನ ಪರಿಸ್ಥಿತಿಯಲ್ಲಿ ಪೆಟ್ರೋಲ್ ಚಾಲಿತ KTM RC 390 ಬೈಕ್ ಹೆಚ್ಚಿನ ಯುವ ಜನರ ಹಾಟ್ ಫೆವರೇಟ್ ಆಗಿವೆ. ಅಲ್ಟ್ರಾವೈಲೆಟ್ F77ನಲ್ಲಿನ ದೊಡ್ಡ ಸಮಸ್ಯೆಗಳೆಂದರೆ ಅದರ ತೂಕ ಮತ್ತು ಬೆಲೆ. ಇದು ಸ್ವಲ್ಪಮಟ್ಟಿಗೆ ಹೆಚ್ಚಿದ್ದು, ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಮತ್ತಷ್ಟು ವೇಗವನ್ನು ಪಡೆದುಕೊಳ್ಳಲಿದ್ದು, ಗ್ರಾಹಕರು ಇದರತ್ತ ವಾಲುವುದರಿಂದ ಅಲ್ಟ್ರಾವೈಲೆಟ್ F77 ಬೈಕಿಗೆ ಬೇಡಿಕೆ ಹೆಚ್ಚಾಗಬಹುದು.