ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರ್ಯಾಂಡ್‌ ಮೂಲಕ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಆಧುನಿಕ ವೈಶಿಷ್ಟ್ಯತೆ ಹೊಂದಿರುವ ಹೊಸ ಬೈಕ್ ಮಾದರಿಗಳು ಮಾರುಕಟ್ಟೆಯಲ್ಲಿನ ಪ್ರಮುಖ 200ಸಿಸಿಯಿಂದ 350ಸಿಸಿ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿವೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಜಾವಾ ಹೊಸ ಬೈಕ್‌ಗಳ ಬಿಡುಗಡೆಯ ನಂತರ ಇದೀಗ ಕಂಪನಿಯು ಯೆಜ್ಡಿ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಯೆಜ್ಡಿ ಹೊಸ ಬೈಕ್ ಮಾದರಿಗಳು ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ವೈಶಿಷ್ಟ್ಯತೆಯೊಂದಿಗೆ ಖರೀದಿಗೆ ಲಭ್ಯವಿರಲಿವೆ. ಇದರಲ್ಲಿ ಸ್ಕ್ರ್ಯಾಂಬ್ಲರ್ ಮಾದರಿಯು ಪ್ರಮುಖ ಆಕರ್ಷಕವಾಗಿದ್ದು, ಹೊಸ ಬೈಕ್ ಮಾದರಿಯು ದಿನನಿತ್ಯದ ಬಳಕೆಯ ಜೊತೆಗೆ ಸಾಹಸಿ ಬೈಕ್ ಚಾಲನೆಗೂ ಇದು ಬೇಡಿಕೆ ಪಡೆದುಕೊಳ್ಳಲಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಯೆಜ್ಡಿ ಬ್ರ್ಯಾಂಡ್ ಅಡಿ ಕ್ಲಾಸಿಕ್ ಲೆಜೆಂಡ್ ಕಂಪನಿಯು ಗ್ರಾಹಕರ ಬೇಡಿಕೆಯಂತೆ ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್‌ಗಳಲ್ಲಿ ಸ್ಕ್ರ್ಯಾಂಬ್ಲರ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.04 ಲಕ್ಷ ಬೆಲೆ ಹೊಂದಿದೆ.

ಯೆಜ್ಡಿ ಕಂಪನಿಯು ಹೊಸ ಸ್ಕ್ರ್ಯಾಂಬ್ಲರ್ ಮಾದರಿಯನ್ನು ಒಂದೇ ವೆರಿಯೆಂಟ್‌‌ನಲ್ಲಿ ಬಿಡುಗಡೆ ಮಾಡಿದ್ದು, ವಿವಿಧ ಬಣ್ಣಗಳ ಆಯ್ಕೆಗೆ ಅನುಗುಣವಾಗಿ ಆರಂಭಿಕ ಮಾದರಿಯು ರೂ. 2.04 ಲಕ್ಷ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2.11 ಲಕ್ಷ ಬೆಲೆ ಹೊಂದಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಹೊಸ ಸ್ಕ್ರ್ಯಾಂಬ್ಲರ್ ಮಾದರಿಯು ಆಕರ್ಷಕ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ ಫೋರ್ಕ್‌ನ ಮೇಲ್ಭಾಗದಲ್ಲಿ ಸ್ಪೀಡೋಮೀಟರ್ ಜೋಡಿಸಲಾಗಿದ್ದು, ಇದು ಸ್ವಲ್ಪ ಬಲಭಾಗಕ್ಕೆ ತಿರುಗಿಸಲಾಗಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಹೊಸ ಸ್ಕ್ರ್ಯಾಂಬ್ಲರ್ ಮಾದರಿಯು ರೋಡ್‌ಸ್ಟರ್ ಮಾದರಿಯಲ್ಲಿಯೇ ಡಬಲ್ ಕ್ರೇಡಲ್ ಚಾಸಿಸ್ ಅನ್ನು ಸಹ ಹೊಂದಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ ಮತ್ತು ಹಿಂಬದಿಯಲ್ಲಿ ಟ್ವಿನ್ ಶಾಕ್ಸ್ ನೀಡಲಾಗಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಸಿಂಗಲ್ ಪೀಸ್ ಸೀಟ್ ಅನ್ನು ಇಂಧನ ಟ್ಯಾಂಕ್‌ಗೆ ಅಂದವಾಗಿ ವಿಲೀನಗೊಳಿಸಿರುವ ಕ್ಲಾಸಿಕ್ ಕಂಪನಿಯು ಸ್ಪೋರ್ಟಿ ಸ್ಟೈಲ್ ಹೆಚ್ಚಿಸಿದ್ದು, ಹೊಸ ಬೈಕ್ ಮಾದರಿಯು ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಮೂರು ಎಬಿಎಸ್ ಮೋಡ್‌ಗಳು ರೋಡ್, ರೈನ್ ಮತ್ತು ಆಫ್ ರೋಡ್ ಮೋಡ್‌ಗಳು ಸ್ಪೋಕ್ಡ್ ವೀಲ್ಹ್ ಸವಾರಿಗೆ ಅನುಕೂಲವಾಗಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಹೊಸ ಬೈಕಿನಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯವು 12.5-ಲೀಟರ್ ಗಳಾಗಿದ್ದು, ಇದು ವಿಶೇಷವಾಗಿ ಸಿಂಗಲ್-ಪೀಸ್ ಸೀಟ್ ಅನ್ನು ಹೊಂದಿದೆ. ಹಾಗೆಯೇ ಸ್ಕ್ರ್ಯಾಂಬ್ಲರ್ ಬೈಕ್ ಮಾದರಿಯು 182 ಕೆ.ಜಿ ಒಟ್ಟಾರೆ ತೂಕ ಹೊಂದಿದ್ದು, ಈ ಬೈಕ್ ಮಾದರಿಗೆ 350ಸಿಸಿ ವಿಭಾಗದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ‌ಗಳಿಲ್ಲ.

ಹೊಸ ಸ್ಕ್ರ್ಯಾಂಬ್ಲರ್ ಬೈಕ್ 200ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಬ್ರೇಕಿಂಗ್ ಸೌಲಭ್ಯಕ್ಕಾಗಿ ಹೊಸ ಮಾದರಿಯಲ್ಲಿ 320 ಎಂಎಂ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಜೋಡಿಸಲಾಗಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಸ್ಕ್ರ್ಯಾಂಬ್ಲರ್ ಮಾದರಿಯಲ್ಲಿ 19 ಇಂಚಿನ ಮುಂಭಾಗದ ಚಕ್ರವನ್ನು ಮತ್ತು 17 ಇಂಚಿನ ಹಿಂಬದಿಯ ಚಕ್ರ ನೀಡಲಾಗಿದ್ದು, ಮೋಟಾರ್‌ಸೈಕಲ್ ಯುಎಸ್‌ಬಿ ಟೈಪ್-ಸಿ ಮತ್ತು ಸಾಮಾನ್ಯ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಪದುಕೊಂಡಿದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಯೆಜ್ಡಿ ಕಂಪನಿಯು ಸ್ಕ್ರ್ಯಾಂಬ್ಲರ್‌ ಮಾದರಿಯಲ್ಲಿ 334ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಜೋಡಿಸಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಹಿಂದಿನ ಚಕ್ರದ ಚಾಲನೆಯೊಂದಿಗೆ 28.7 ಬಿಎಚ್‌ಪಿ ಮತ್ತು 28.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ನ್ಯೂ ಜನರೇಷನ್ ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್

ಹೊಸದಾಗಿ ಯೆಜ್ಡಿ ಮೂರು ಬೈಕ್ ಮಾದರಿಗಳಲ್ಲೂ 334 ಸಿಸಿ ಎಂಜಿನ್ ಆಯ್ಕೆ ನೀಡಿದ್ದರೂ ಕೂಡಾ ಆಯಾ ಬೈಕ್ ಮಾದರಿಗೆ ಅನುಗುಣವಾಗಿ ಹಾರ್ಸ್ ಪವರ್ ಹೊಂದಾಣಿಕೆ ಮಾಡಲಾಗಿದ್ದು, ಸ್ಕ್ರ್ಯಾಂಬ್ಲರ್‌ ಮಾದರಿಯು ಉತ್ತಮ ಪರ್ಫಾಮೆನ್ಸ್ ಜೊತೆಗೆ ಇಂಧನ ಕಾರ್ಯಕ್ಷಮತೆಯಲ್ಲೂ ಗಮನಸೆಳೆದಿದೆ.

Most Read Articles

Kannada
Read more on ಯೆಜ್ಡಿ yezdi
English summary
Yezdi scrambler bike launched in india at rs 2 04 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X