100,000ನೇ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ: ಮಾರಾಟದಲ್ಲೂ ಬೆಂಗಳೂರಿನ ಎಥರ್‌ನಿಂದ ದೊಡ್ಡ ದಾಖಲೆ

ಬೆಂಗಳೂರು ಮೂಲಕದ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಕಂಪನಿ 'ಎಥರ್ ಎನರ್ಜಿ' ದೊಡ್ಡ ದಾಖಲೆ ನಿರ್ಮಿಸಿದೆ. ಈವರೆಗೆ ಒಂದು ಲಕ್ಷ ಯುನಿಟ್ ಸ್ಕೂಟರ್ ಉತ್ಪಾದನೆ ಮಾಡಿದ್ದು, ಟ್ರೂ ರೆಡ್ ಬಣ್ಣದ ಜೆನರೇಷನ್ 3 450X ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಈ ಸಾಧನೆ ಮಾಡಿದೆ.

ಕಳೆದ ಜವನರಿ ಜನವರಿ 7 ರಂದು ಎಥರ್ ಎನರ್ಜಿ ಕಮ್ಯೂನಿಟಿ ಡೇಯನ್ನು ಏರ್ಪಡಿಸಿತ್ತು. ಅಲ್ಲಿ ಜೆನರೇಷನ್ 3 ಸ್ಕೂಟರ್ ಗಳಿಗೆ ಹಲವು ನವೀಕರಣಗಳನ್ನು ಮಾಡಲಾಗುವುದು ಎಂದು ಘೋಷಣೆ ಮಾಡಿತ್ತು. ಅದರಂತೆ ಈ ಸ್ಕೂಟರ್ ನಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ಎಥರ್, ಜನವರಿ 2023ರ ತನ್ನ ಮಾರಾಟ ಅಂಕಿಅಂಶದ ಕುರಿತು ಮಾಹಿತಿ ನೀಡಿದ್ದು, ಇಲ್ಲಿಯೂ ಉತ್ತಮ ಪ್ರಗತಿಯನ್ನು ದಾಖಲಿಸಿದೆ. 2022ಕ್ಕೆ ಹೋಲಿಸಿದರೆ, ಅದರ ವರ್ಷದಿಂದ ವರ್ಷದ ಮಾರಾಟ ಪ್ರಮಾಣ ಶೇಕಡ 330% ಬೆಳವಣಿಗೆಯಾಗಿದೆ.

100,000ನೇ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ: ಮಾರಾಟದಲ್ಲೂ ಬೆಂಗಳೂರಿನ ಎಥರ್‌ನಿಂದ ದೊಡ್ಡ ದಾಖಲೆ

ಈ ಜನವರಿಯಲ್ಲಿ ಎಥರ್ ಎನರ್ಜಿ 12,149 ಯುನಿಟ್ ಸ್ಕೂಟರ್ ಮಾರಾಟ ಮಾಡಿದೆ. ಅದು 2022ರ ಜನವರಿಯಲ್ಲಿ ಕೇವಲ 2,825 ಸ್ಕೂಟರ್ ಸೇಲ್ ಮಾಡಲು ಮಾತ್ರ ಯಶಸ್ವಿಯಾಗಿತ್ತು. ಇದಕ್ಕೆ ಹೋಲಿಸಿದರೆ, ಬರೋಬ್ಬರಿ 9,324 ಯುನಿಟ್ ಹೆಚ್ಚಳವಾಗಿದೆ. ಇನ್ನು, ತಿಂಗಳ ಮಾರಾಟ ಪ್ರಮಾಣದಲ್ಲೂ ಎಥರ್ ಒಳ್ಳೆಯ ಸಾಧನೆ ಮಾಡಿದೆ. ಡಿಸೆಂಬರ್ 2022ಕ್ಕೆ ಹೋಲಿಸಿದರೆ ಈ ಜನವರಿಯಲ್ಲಿ ಶೇಕಡ 32.24% ಪ್ರಗತಿಯನ್ನು ದಾಖಲಿಸಿದೆ. ಡಿಸೆಂಬರ್ ತಿಂಗಳಲ್ಲಿ 9,187 ಯುನಿಟ್ ಸ್ಕೂಟರ್ ಮಾರಾಟ ಮಾಡಿತ್ತು. ಇದೀಗ ಆ ಸಂಖ್ಯೆ 12,149ಕ್ಕೆ ಏರಿಕೆಯಾಗಿದೆ. ಹೆಚ್ಚುವರಿಯಾಗಿ 2,962 ಯುನಿಟ್ ಸೇಲ್ ಮಾಡಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳ ಹೊತ್ತಿಗೆ ಎಥರ್ 50,000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಗುರಿಯನ್ನು ತಲುಪಿತ್ತು. ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಡೀಲರ್ ಶಿಪ್ ಜಾಲವನ್ನು ವಿಸ್ತರಿಸುವ ಕಾರ್ಯದಲ್ಲಿ ಎಥರ್ ಎನರ್ಜಿ ನಿರತವಾಗಿದೆ. ಅಲ್ಲದೆ, ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ವೇಗಗೊಳಿಸಲು ಎಥರ್ ತನ್ನ ಎರಡನೇ ಉತ್ಪಾದನಾ ಘಟಕವನ್ನು ನವೆಂಬರ್ 2022ರಲ್ಲಿ ಆರಂಭಿಸಿತ್ತು. ಇದು ಮುಂಬರುವ ಆರ್ಥಿಕ ವರ್ಷದಿಂದ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆಯನ್ನು ನಡೆಸಲಿದೆ.

100,000ನೇ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ: ಮಾರಾಟದಲ್ಲೂ ಬೆಂಗಳೂರಿನ ಎಥರ್‌ನಿಂದ ದೊಡ್ಡ ದಾಖಲೆ

ಅಲ್ಲದೆ, ಎಥರ್ ಎನರ್ಜಿ ತಮಿಳುನಾಡಿನ ಹೊಸೂರಿನಲ್ಲಿ ಹೊಸ ಉತ್ಪಾದನಾ ಘಟಕವನ್ನು 2023ರ ಅಂತ್ಯದೊಳಗೆ ಪ್ರಾರಂಭಿಸಲಿದೆ. ಈ ನೂತನ ಉತ್ಪಾದನಾ ಘಟಕದ ಮೂಲಕ ತನ್ನ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಕಂಪನಿ ಹೊಂದಿದ್ದು, ವಾರ್ಷಿಕ 10 ಲಕ್ಷ ಯುನಿಟ್‌ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಸದ್ಯ ಎರಡು ಉತ್ಪಾದನಾ ಘಟಕಗಳ ನೆರವಿನಿಂದ ವಾರ್ಷಿಕ 4.2 ಲಕ್ಷ ಸ್ಕೂಟರ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಜನವರಿಯಲ್ಲಿ ಅಹಮದಾಬಾದ್, ಈರೋಡ್, ಗುಂಟೂರು ಮತ್ತು ಹೊಸೂರು ಸೇರಿದಂತೆ ವಿವಿಧ ನಗರಗಳಲ್ಲಿ 13 ಹೊಸ ಶೋರೂಮ್‌ಗಳನ್ನು ಎಥರ್ ತೆರೆದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀಫ್ ಬಿಸಿನೆಸ್ ಆಫೀಸರ್ ರವನೀತ್ ಸಿಂಗ್ ಫೋಕೆಲಾ ಅವರು, 'ಜನವರಿ ತಿಂಗಳಲ್ಲಿ 12,419 ಯುನಿಟ್‌ಗಳನ್ನು ಮಾರಾಟ ಮಾಡಿರುವುದು ಖುಷಿ ತಂದಿದೆ. ಕೆಲ ದಿನಗಳ ಹಿಂದಷ್ಟೇ ಆಯೋಜಿಸಿದ್ದ ಕಮ್ಯುನಿಟಿ ಡೇಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. Atherstack 5.0 ಸಾಫ್ಟ್‌ವೇರ್ ಅಪ್‌ಡೇಟ್ ಪರಿಚಯಿಸುತ್ತಿದ್ದು, ಇದು ಖರೀದಿದಾರರಿಗೆ ಇಷ್ಟವಾಗಲಿದೆ ಎಂದು ನಂಬಿದ್ದೇವೆ. ಅಲ್ಲದೆ, 5-ವರ್ಷದ ವಾರಂಟಿಯನ್ನು ನೀಡಲಾಗುತ್ತಿದ್ದು, ಮತ್ತೆ ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಗ್ರಾಹಕರು ಸ್ವೀಕರಿಸುತ್ತಾರೆ' ಎಂದು ಹೇಳಿದ್ದಾರೆ.

ಎಥರ್ ಎನರ್ಜಿ ಭಾರತದ ಮಾರುಕಟ್ಟೆಯಲ್ಲಿ 450X ಮತ್ತು 450 ಪ್ಲಸ್ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಸ್ಕೂಟರ್‌ಗಳು ದೊಡ್ಡ ಬ್ಯಾಟರಿ ಪ್ಯಾಕ್ ಹಾಗೂ BLDC ಎಲೆಕ್ಟ್ರಿಕ್ ಮೋಟರ್‌ನಿಂದ ಪವರ್ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿವೆ. ಇದಲ್ಲದೆ, 450 ಪ್ಲಸ್ 2.6 kWh ಬ್ಯಾಟರಿಯನ್ನು ಹೊಂದಿದ್ದು, 450X ಸ್ಕೂಟರ್ 3.34 kWh ಬ್ಯಾಟರಿಯಿಂದ ಪಡೆದಿದೆ. ಎಥರ್ 450X ಬೆಲೆ 1,35,452 ರೂ.ಇದ್ದು,105 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದ್ದು, 90 km/h ಟಾಪ್ ಸ್ವೀಡ್ ಹೊಂದಿದೆ. ಇದೇ ಈ ಸ್ಕೂಟರ್ ಗ್ರಾಹಕರು ಹೆಚ್ಚು ಇಷ್ಟಪಡಲು ಕಾರಣವಾಗಿದೆ.

ಎಥರ್ ಸ್ಕೂಟರ್ ನಂತೆಯೇ ಮಾರುಕಟ್ಟೆಯಲ್ಲಿ ಬೆಂಗಳೂರು ಮೂಲದ ಓಲಾ ಕಂಪನಿಯ S1 ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದ್ದು, ಓಲಾ ಎಸ್1 1,04,999 ಆರಂಭಿಕ ಬೆಲೆಯನ್ನು ಹೊಂದಿದೆ. ಪ್ರಮುಖ ವಾಹನ ತಯಾರಕ ಕಂಪನಿ ಬಜಾಜ್, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೇಲ್ ಮಾಡುತ್ತಿದ್ದು, ರೂ.1,51,958 ದರದಲ್ಲಿ ಗ್ರಾಹಕರು ಖರೀದಿಸಬಹುದು. 85-95 km/h ರೇಂಜ್ ನೀಡಲಿದೆ. ಟಿವಿಎಸ್, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ರೂ.99,130 ಬೆಲೆಗೆ ಮಾರಾಟ ಮಾಡುತ್ತಿದೆ.

Most Read Articles

Kannada
English summary
Ather rolls out 100000 th ev from production line details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X