Auto Expo 2023: 100 Km ಮೈಲೇಜ್ ನೀಡುವ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ... ಬೆಲೆ ಇಷ್ಟೇನಾ?

ಭಾರತದಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳನ್ನು (EV) ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅನೇಕ ವಾಹನ ತಯಾರಕ ಕಂಪನಿಗಳು ಇವಿಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಸದ್ಯ ಇವುಗಳ ಬೆಲೆ ಹಾಗೂ ಆಕರ್ಷಕ ಲುಕ್ ಗ್ರಾಹಕರನ್ನು ಸೆಳೆಯುತ್ತಿದ್ದು, ಇವಿ ವಿಭಾಗ ವೇಗವಾಗಿ ಬೆಳೆಯುತ್ತಿದೆ.

'ಜಾಯ್ ಇ-ಬೈಕ್' ಕಂಪನಿಯು ಆಟೋ ಎಕ್ಸ್‌ಪೋದಲ್ಲಿ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1.49 ಲಕ್ಷ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಿದೆ. ಮಿಹೋಸ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಪಡೆದಿದ್ದು, ಒಂದೇ ಚಾರ್ಜ್‌ನಲ್ಲಿ 100 ಕಿಲೋಮೀಟರ್ ರೇಂಜ್ ನೀಡುತ್ತದೆ. ಹೊಸ ಮಿಹೋಸ್ ಸ್ಕೂಟರ್ ಅನ್ನು ಗುಜರಾತ್‌ನ ವಡೋದರಾದಲ್ಲಿ ವಾರ್ಡ್‌ವಿಜಾರ್ಡ್ (ಜಾಯ್ ಇ-ಬೈಕ್‌ನ ಮೂಲ ಕಂಪನಿ) ಅಭಿವೃದ್ಧಿಪಡಿಸಿದೆ. ಇಷ್ಟೇಅಲ್ಲದೆ, ಕಂಪನಿಯು ರಾಕ್‌ಫೆಲ್ಲರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಾನ್ಸೆಪ್ಟ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ.

Auto Expo 2023: ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ:
ಜಾಯ್ ಇ-ಬೈಕ್ ರೆಡಿ ಮಾಡಿರುವ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ನಿಕಲ್ ಮ್ಯಾಂಗನೀಸ್ ಕೋಬಾಲ್ಟ್ (NMC) ಕೆಮಿಸ್ಟ್ರಿಯೊಂದಿಗೆ 2.5 kWh ಪವರ್ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಲಿದ್ದು, ಒಂದೇ ಚಾರ್ಜ್‌ನಲ್ಲಿ 100 ಕಿಲೋಮೀಟರ್ ರೇಂಜ್ ನೀಡಲಿದ್ದು, ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ ರೇಂಜ್ ಅತುತ್ತಮವಾಗಿದ್ದು, ಜೊತೆಗೆ ಚಾರ್ಜಿಂಗ್ ಸಮಯ ಕಡಿಮೆಯಿರುವುದರಿಂದ ಗ್ರಾಹಕರು ಈ ಸ್ಕೂಟರ್ ಖರೀದಿಸಲು ಇಷ್ಟಪಡಬಹುದು.

ಮಿಹೋಸ್‌ನಲ್ಲಿವ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್, ಹಬ್ - ಮೌಂಟೆಡ್ ಮೋಟಾರ್‌ಗೆ ಪವರ್ ಅನ್ನು ವರ್ಗಾಯಿಸಲಿದ್ದು, ಅದು 1.5 kW ಗರಿಷ್ಠ ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನೂತನ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 7 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 0 - 40 km/h ವೇಗವನ್ನು ಪಡೆಯಲಿದ್ದು, 70 km/h ಟಾಪ್ ಸ್ವೀಡ್ ಹೊಂದಿದೆ ಎಂದು ಹೇಳಬಹುದು.

Auto Expo 2023: ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

'ಜಾಯ್ ಇ-ಬೈಕ್' ಮಿಹೋಸ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌, ರೇರ್ ಮೊನೊಶಾಕ್ ಅನ್ನು ಹೊಂದಿದೆ. ಬ್ರೇಕಿಂಗ್ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ಹ್ಯಾಂಡಲ್ ನ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದ್ದು, ಇದು ಹೈಡ್ರಾಲಿಕ್ ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತವೆ. ಮಿಹೋಸ್, 1,864 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,178 ಎಂಎಂ ಎತ್ತರವಾಗಿದ್ದು, 1,360 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಪಡೆದಿದ್ದು, 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಜಾಯ್ ಇ-ಬೈಕ್ ತಯಾರಿಸಿರುವ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್, ರೆಟ್ರೊ ಡಿಸೈನ್ ಹೊಂದಿದ್ದು, ಹಿಂದಿನ ಕಾಲದ ಸ್ಕೂಟರ್‌ನಂತೆ ಕಾಣುತ್ತದೆ. ಇದನ್ನು ಖರೀದಿದಾರರು ಲೈಕ್ ಮಾಡುತ್ತಾರೆ. ಜೊತೆಗೆ ವೃತ್ತಾಕಾರದ ಹೆಡ್‌ಲ್ಯಾಂಪ್, ಉದ್ದವಾದ ಸೀಟ್ ಮತ್ತು ಸಿಂಗಲ್-ಪೀಸ್ ಗ್ರಾಬ್ರೈಲ್ ಅನ್ನು ಪಡೆದಿದೆ. ಮಿಹೋಸ್ ಬಾಡಿ ಪ್ಯಾನೆಲ್‌ಗಳನ್ನು ಪಾಲಿ ಡಿಸೈಕ್ಲೋಪೆಂಟಡೀನ್ (PDCPD) ಬಳಸಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ ಇದು ಹೆಚ್ಚು ಕಾಲ ಬಾಳಿಕೆ ಮತ್ತು ನವೀನವಾಗಿ ಕಾಣಿಸುತ್ತದೆ ಎಂದು ಹೇಳಬಹುದು.

Auto Expo 2023: ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಮಿಹೋಸ್ ಬ್ಲೂಟೂತ್ ಮೂಲಕ ಸ್ಕೂಟರ್‌ಗೆ ಸಂಪರ್ಕಿಸುವ ಜಾಯ್ ಇ-ಕನೆಕ್ಟ್ ಅಪ್ಲಿಕೇಶನ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಕೂಟರ್‌ನ ಅಂಕಿಅಂಶಗಳನ್ನು ಪರಿಶೀಲಿಸಲು, GPS ಮೂಲಕ ದೂರದಿಂದಲೇ ಟ್ರ್ಯಾಕ್ ಮಾಡಬಹುದು. ಮಿಹೋಸ್ ಜಿಯೋಫೆನ್ಸಿಂಗ್, ಆಂಟಿ ಥೆಫ್ಟ್ ಮತ್ತು ಕೀಲೆಸ್ ವೈಶಿಷ್ಟ್ಯ, ಪಾರ್ಕಿಂಗ್‌ಗಾಗಿ ರಿವರ್ಸ್ ಮೋಡ್ ಅನ್ನು ಸಹ ಹೊಂದಿದೆ. ಮೆಟಾಲಿಕ್ ಬ್ಲೂ, ಸಾಲಿಡ್ ಬ್ಲ್ಯಾಕ್ ಗ್ಲೋಸಿ, ಸಾಲಿಡ್ ಯೆಲ್ಲೋ ಗ್ಲೋಸಿ ಮತ್ತು ಪರ್ಲ್ ವೈಟ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಜಾಯ್ ಇ-ಬೈಕ್ ಕಂಪನಿ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಬುಕ್ಕಿಂಗ್‌ಗಳನ್ನು ಈಗ ದೇಶಾದ್ಯಂತ ಎಲ್ಲ ಡೀಲರ್‌ಶಿಪ್‌ಗಳಲ್ಲಿ ತೆರೆದಿದೆ. ಮಿಹೋಸ್ ರೆಟ್ರೋ ಲುಕ್ ಹೊಂದಿದ್ದು, ಇದು ಗ್ರಾಹಕರನ್ನು ಆಕರ್ಷಿಸುತ್ತದೆ. ಶೀಘ್ರದಲ್ಲೇ ಖರೀದಿಗೆ ಸಿಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಬಹುದು. ಇದರ ಬೆಲೆಯೂ ಕೈಗಟುಕುವ ರೀತಿ ಇದ್ದು, ದೇಶದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಇತರೆ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಬಹುದು. ಮಾರುಕಟ್ಟೆಗೆ ಈ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬಂದ ಮೇಲೆ ಯಾವ ರೀತಿ ಖರೀದಿದಾರರನ್ನೂ ಆಕರ್ಷಿಸಲಿದೆ ಎಂದು ಕಾದುನೋಡಬೇಕಾಗಿದೆ.

Most Read Articles

Kannada
English summary
Auto expo 2023 mihos electric scooter launched 100 km mileage details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X