ಲೀಕ್ ಆಯ್ತು ಎಥರ್ ಹೊಸ ಜನ್ ಸ್ಕೂಟರ್‌ನ ಹೊಸ ಬಣ್ಣಗಳು

ಎಥರ್ ಎನರ್ಜಿಯು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದ್ದು, ಇದು ಪ್ರಸ್ತುತ ಭಾರತೀಯ EV ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡಿಯುತ್ತಿದೆ. ಸದ್ಯ ಓಲಾ, ಟಿವಿಎಸ್ ಮತ್ತು ಚೇತಕ್‌ನಂತಹ ಇವಿ ಸ್ಕೂಟರ್‌ಗಳ ಪೈಪೋಟಿಯನ್ನು ಎದುರಿಸಿ ತನ್ನ ಮಾದರಿಗಳನ್ನು ಮುನ್ನಡೆಸುತ್ತಿದ್ದು, ಈಗ ಹೊಸ ಉತ್ಪನ್ನದ ಪರಿಚಯಕ್ಕೂ ಮುನ್ನ ಕೆಲ ಮಾಹಿತಿ ಬಹಿರಂಗವಾಗಿದೆ.

ಎಥರ್ ತನ್ನ 450x ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾದಾಗಿನಿಂದ ಹೊಸ ಅಪ್‌ಡೇಟ್‌ಗಳನ್ನು ಮಾಡುತ್ತಲೇ ಬಂದಿದೆ. ಈ ಪೈಪೋಟಿಯನ್ನು ತಡೆದುಕೊಳ್ಳಲು ಟಿವಿಎಸ್, ಚೇತಕ್ ಮತ್ತು ಮುಂಬರುವ ಸಿಂಪಲ್ ಎನರ್ಜಿ ಕೂಡ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಸ ವೈಶಿಷ್ಟ್ಯಗಳು, ದೊಡ್ಡ ಬ್ಯಾಟರಿ, ಇತ್ಯಾದಿಗಳೊಂದಿಗೆ ನವೀಕರಿಸುವುದನ್ನು ಮುಂದುವರೆಸಿವೆ. ಹಾಗಾಗಿ ಎಥರ್ ಕೂಡ ಇನ್ನಷ್ಟು ನವೀಕರಣಗೊಂಡು ಎದುರಾಳಿಗಳಿಗೆ ಸವಾಲನ್ನು ಒಡ್ಡಲು ಮತ್ತೊಮ್ಮೆ ನವೀಕರಣವನ್ನು ಪ್ರಾರಂಭಿಸಲು ತಯಾರಾಗುತ್ತಿದೆ.

ಲೀಕ್ ಆಯ್ತು ಎಥರ್ ಹೊಸ ಜನ್ ಸ್ಕೂಟರ್‌ನ ಹೊಸ ಬಣ್ಣಗಳು

ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಬಣ್ಣಗಳು
ಈ ವಾರದ ಆರಂಭದಲ್ಲಿ, ಎಥರ್ ಅವರು ಜನವರಿ 7 ರಂದು ಸಮುದಾಯ ದಿನವನ್ನು ಆಯೋಜಿಸಿದ್ದಾರೆ. ತಮ್ಮ ಗ್ರಾಹಕರು ಮತ್ತು ಅಭಿಮಾನಿಗಳನ್ನು ಭೇಟಿ ಮಾಡುವುದರ ಹೊರತಾಗಿ, ಮುಂಬರುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು, ಸ್ಕೂಟರ್‌ಗಳು ಇತ್ಯಾದಿಗಳ ಬಗ್ಗೆ ಎಥರ್ ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಅದರ ಹೊರತಾಗಿ, ಅವರು ಅಸ್ತಿತ್ವದಲ್ಲಿರುವ 450x ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೊಸ ಬಣ್ಣಗಳನ್ನು ಬಿಡುಗಡೆ ಮಾಡಲಿದ್ದಾರೆ.

Ather 450x ನೊಂದಿಗೆ ಹೊಸ ಬಣ್ಣದ ಆಯ್ಕೆಗಳ ವಿವರಗಳು ಈಗ ಸೋರಿಕೆಯಾಗಿವೆ. ಅವುಗಳೆಂದರೆ ಕಾಸ್ಮಿಕ್ ಬ್ಲಾಕ್, ಲೂನಾರ್ ಗ್ರೇ, ಸಾಲ್ಟ್ ಗ್ರೀನ್ ಮತ್ತು ಅತ್ಯಾಕರ್ಷಕ ಕೆಂಪು ಬಣ್ಣಗಳಾಗಿವೆ. ಇವುಗಳು 450X ಜೊತೆಗೆ ಆಫರ್‌ನಲ್ಲಿರುವ ವೈಟ್, ಸ್ಪೇಸ್ ಗ್ರೇ ಮತ್ತು ಮಿಂಟ್ ಗ್ರೀನ್‌ಗಿಂತ ಭಿನ್ನವಾಗಿವೆ. ಕೇವಲ ತನ್ನ ಹಳೆಯ ಬಣ್ಣಗಳಿಂದಲೇ ಭಾರೀ ಮಾರಾಟವನ್ನು ಕಂಡಿದ್ದ 450x ಎಲೆಕ್ಟ್ರಿಕ್ ಸ್ಕೂಟರ್ ಈಗ ಹೊಸ ಬಣ್ಣಗಳಿಂದ ಮಾರಾಟವನ್ನು ಮತ್ತಷ್ಟು ಹೆಚ್ಚಿಸಬಹುದು.

ಎಂಜಿನ್ ವಿಶೇಷತೆಗಳು ಮೊದಲಿನಂತೆಯೇ ಮುಂದುವರಿಯುತ್ತವೆ. Ather 450X Gen 3, 3.66 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು Ather 450X Gen 2 ನ 2.23 kWh ಬ್ಯಾಟರಿ ಪ್ಯಾಕ್‌ಗಿಂತ 1.33 kWh ದೊಡ್ಡದಾಗಿದೆ. Gen 3, 3-ಹಂತದ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಅನ್ನು ಸಹ ಪಡೆಯುತ್ತದೆ. ಇದು 450X Gen 2 ಗಿಂತ 1 kW ಹೆಚ್ಚು ಗರಿಷ್ಠ ಶಕ್ತಿಯನ್ನು ಹೊರ ಹಾಕುತ್ತದೆ.

ದೊಡ್ಡ ಆಸನ, ಹೆಚ್ಚು ಆರಾಮ
ಹೊಸ ಬಣ್ಣಗಳ ಹೊರತಾಗಿ, ಸೋರಿಕೆಯಾದ ಚಿತ್ರಗಳು ಪರಿಷ್ಕೃತ ಆಸನವನ್ನು ಸಹ ಹೊಂದಿದೆ. ನೋಡಬಹುದಾದಂತೆ, ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಸೀಟ್ ಈಗ ಉದ್ದವಾಗಿದೆ, ಅಗಲವಾಗಿದೆ. ಉತ್ತಮ ಬಾಹ್ಯರೇಖೆಯನ್ನು ನೀಡುತ್ತದೆ. ಸವಾರರಿಗೆ ಮತ್ತು ಪಿಲಿಯನ್‌ಗೆ ಸುಧಾರಿತ ಸೌಕರ್ಯವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ನಂತರ, ಎಥರ್ ಹೆಚ್ಚು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದು ರೇಂಜ್‌ನಲ್ಲಿ 450x ಮತ್ತು 450 ಪ್ಲಸ್‌ಗಿಂತ ಕಡಿಮೆ ಇರುತ್ತದೆ.

ಇದು ಇತ್ತೀಚೆಗೆ ಬಿಡುಗಡೆಯಾದ Ola S1 ಏರ್ ಮಾದರಿಗೆ ಪ್ರತಿಸ್ಪರ್ಧಿಯಾಗುವ ಗುರಿಯನ್ನು ಹೊಂದಿದೆ, ಇದರ ಬೆಲೆ ಕೇವಲ 80 ಸಾವಿರ ರೂ. ಇರಬಹುದು ಎನ್ನಲಾಗುತ್ತಿದೆ. ಈ ಮುಂಬರುವ ಬಜೆಟ್ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ, ಎಥರ್ ಸಣ್ಣ ಬ್ಯಾಟರಿ, ಸ್ಟೀಲ್ ಸ್ಪೇಸ್ ಫ್ರೇಮ್ ಚಾಸಿಸ್, ಕಡಿಮೆ ಶ್ರೇಣಿ, ಕಡಿಮೆ ಕಾರ್ಯಕ್ಷಮತೆ ಮತ್ತು 450 ಪ್ಲಸ್‌ಗಿಂತ ಕಡಿಮೆ ವೈಶಿಷ್ಟ್ಯಗಳನ್ನು ನೀಡಬಹುದು. ಬೆಲೆ ಕಡಿಮೆಯಿರುವುದರಿಂದ ಸೀಮಿತ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ.

ಸದ್ಯ ಕಡಿಮೆ ಬೆಲೆಗೆ ಬಂದು ಸದ್ದು ಮಾಡುತ್ತಿರುವ Ola S1 Air ನ ಬೆಲೆ ತಂತ್ರವನ್ನು ಹೊಂದಿಸುವ ಪ್ರಯತ್ನವೂ ಇದಾಗಿದೆ. ಮುಂಬರುವ ವರ್ಷಗಳಲ್ಲಿ ಸರ್ಕಾರದ ಸಬ್ಸಿಡಿಗಳು ಕೊನೆಗೊಳ್ಳಲಿರುವುದರಿಂದ, EV ತಯಾರಕರು EV ಜಗತ್ತಿಗೆ ಹೊಂದಿಕೊಳ್ಳಲು ಸ್ಪಷ್ಟವಾದ ಮತ್ತು ಕಡಿಮೆ ವೆಚ್ಚದ ವಾಹನಗಳನ್ನು ತಯಾರಿಸಲು ಪ್ರಾರಂಭಿಸಬೇಕು. ಇನ್ನು ಎಥರ್ ಪ್ರಿಯರು ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ನಾಳೆಯ ಎಥರ್ ದಿನದ ವರೆಗು ಕಾಯಬೇಕಾಗುತ್ತದೆ.

Most Read Articles

Kannada
English summary
New colors of the new gen ather scooter have been leaked
Story first published: Friday, January 6, 2023, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X