ಡಬಲ್ ಧಮಾಕಾ; ಕೆಟಿಎಂ ಆರ್‌ಸಿ390, ಆರ್‌ಸಿ 200 ಲಾಂಚ್

Written By:

ಒಂದೇ ಸಮಯಕ್ಕೆ ದೇಶಕ್ಕೆ ಎರಡೆರಡು ಕ್ರಿಡಾ ಬೈಕ್‌ಗಳ ಪ್ರವೇಶವಾಗಿದೆ. ಹೌದು, ಕೆಟಿಎಂ ಸಂಸ್ಥೆಯ ಬಹು ನಿರೀಕ್ಷಿತ ಸೂಪರ್ ಸ್ಪೋರ್ಟ್ ಬೈಕ್ ಆಗಿರುವ ಆರ್‌ಸಿ 390 ಮತ್ತು ಆರ್‌ಸಿ 200 ಭಾರತದಲ್ಲಿ ಆದ್ದೂರಿ ಬಿಡುಗಡೆ ಮಾಡಿದೆ. ಬಜಾಜ್ ಆಟೋ ಲಿಮಿಟೆಡ್ ಸಹಯೋಗದಲ್ಲಿ ಕೆಟಿಎಂ ತನ್ನ ಮಾದರಿಗಳನ್ನು ದೇಶದಲ್ಲಿ ಮಾರಾಟ ಮಾಡಲಿದೆ. ಈ ಮೂಲಕ ವಾಹನ ಪ್ರೇಮಿಗಳಿಗೆ ಡಬಲ್ ಧಮಾಕಾ ಲಭಿಸಿದಂತಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಕೆಟಿಎಂ ಆರ್‌ಸಿ 390: 2.05 ಲಕ್ಷ ರು.

ಆರ್‌ಸಿ 200: 1.60 ಲಕ್ಷ ರು.

ಇವನ್ನೂ ಓದಿ: ಸುಜುಕಿ ಜಿಕ್ಸರ್ ಭರ್ಜರಿ ಲಾಂಚ್

ಈಗಿರುವ ಡ್ಯೂಕ್ ಬೈಕ್ ತಲಹದಿಯಲ್ಲಿ ನಿರ್ಮಾಣಗೊಂಡಿರುವ ಹೊಸ ಆರ್‌ಸಿ 390 ಹಾಗೂ ಆರ್‌ಸಿ 200 ಜೊತೆಗೆ ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹ ಹಂಚಿಕೊಳ್ಳಲಾಗಿದೆ. ಇದು ಪ್ರಮುಖವಾಗಿಯು ದೇಶದ ಯುವ ಗ್ರಾಹಕರನ್ನು ಗುರಿಯಾರಿಸಿಕೊಂಡು ಬಿಡುಗಡೆ ಮಾಡಲಾಗಿದೆ.

ಕೆಟಿಎಂ ಆರ್‌ಸಿ390, ಆರ್‌ಸಿ 200 ಲಾಂಚ್

ಸಂಪೂರ್ಣ ಫೇರ್ಡ್ ಶೈಲಿ ಮತ್ತು ಟ್ವಿನ್ ಹೆಡ್ ಲ್ಯಾಂಪ್, ಪರಿಷ್ಕೃತ ಇಂಧನ ಟ್ಯಾಂಕ್, ಸುಧಾರಿತ ಟೈಲ್ ವಿಭಾಗ, ಮಿರರ್ ಮೌಂಟೆಡ್ ಇಂಡಿಕೇಟರ್ ಮುಂತಾದ ಸೌಲಭ್ಯಗಳು ಇತರ ಕೆಟಿಎಂ ಬೈಕ್‌ಗಳಿಗಿಂತ ಹೊಸ ಆವೃತ್ತಿಗಳನ್ನು ವಿಭಿನ್ನವಾಗಿಸಲಿದೆ.

ಕೆಟಿಎಂ ಆರ್‌ಸಿ390, ಆರ್‌ಸಿ 200 ಲಾಂಚ್

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಕೆಟಿಎಂ ಆರ್‌ಸಿ 390 ಬೈಕ್ 372 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 43 ಅಶ್ವಶಕ್ತಿ (35 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅದೇ ರೀತಿ ಕೆಟಿಎಂ ಆರ್‌200, ಸಿಂಗಲ್ ಸಿಂಗಲ್ ಸಿಲಿಂಡರ್ ಎಂಜಿನ್ 24 ಅಶ್ವಶಕ್ತಿ (19ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ ಈ ಎರಡು ಬೈಕ್‌ಗಳು 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಕೆಟಿಎಂ ಆರ್‌ಸಿ390, ಆರ್‌ಸಿ 200 ಲಾಂಚ್

ಇನ್ನುಳಿದಂತೆ ಎಲ್‌ಇಡಿ ಡೈಟೈಮ್ ರನ್ನಿಂಗ್ ಲೈಟ್ಸ್, ಟ್ವಿನ್ ಹೆಡ್ ಲ್ಯಾಂಪ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ವಿಭಜಿತ ಸೀಟುಗಳು ಹೊಸ ಕೆಟಿಎಂ ಮಾದರಿಗಳನ್ನು ಹೆಚ್ಚು ಆಕರ್ಷಣೀಯವಾಗಿಸಲಿದೆ.

ಕೆಟಿಎಂ ಆರ್‌ಸಿ390, ಆರ್‌ಸಿ 200 ಲಾಂಚ್

ಅಲ್ಲದೆ ಮುಂದುಗಡೆ ಇನ್ವರ್ಟೆಡ್ ಟೆಲಿಸ್ಕಾಪಿಕ್ ಮತ್ತು ಹಿಂದುಗಡೆ ಮೊನೊ ಸಸ್ಪೆಷನ್ ಪಡೆದುಕೊಳ್ಳಲಿದೆ. ಹಾಗೆಯೇ ಸಿಂಗಲ್ ಡಿಸ್ಕ್ ಪಡೆದುಕೊಳ್ಳಲಿದ್ದು, ಎಬಿಎಸ್ ಕೊರತೆ ಅನುಭವಿಸಲಿದೆ.

ಕೆಟಿಎಂ ಆರ್‌ಸಿ390, ಆರ್‌ಸಿ 200 ಲಾಂಚ್

ಅಂದ ಹಾಗೆ ಹೊಸ ಕೆಟಿಎಂ ಬೈಕ್ ಬುಕ್ಕಿಂಗ್ ಪ್ರಕ್ರಿಯೆ ಸೆಪ್ಟೆಂಬರ್ 10ರಂದು ಆರಂಭವಾಗಲಿದೆ. ವಾಹನೋದ್ಯಮದ ನಿರಂತರ ಸುದ್ದಿಗಳಿಗಾಗಿ ಡ್ರೈವ್ ಸ್ಪಾರ್ಕ್ ಓದಲು ಮರೆಯದಿರಿ. ಇದೀಗ ಕೆಟಿಎಂ ಬೈಕ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಿರಿ.

English summary
KTM RC 200 and RC 390 Launched in India at Rs. 1.60 Lakh & Rs. 2.05 Lakh, Respectively.
Story first published: Tuesday, September 9, 2014, 15:20 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark