ರಾಂಚಿಯಲ್ಲಿ ಸೂಪರ್ ಬೈಕ್ ಶೋ ರೂಂ ತೆರೆಯಲಿರುವ ಧೋನಿ

By Nagaraja

'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತಿ ಪಡೆದಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಆಟದ ಮೇಲೆ ಎಷ್ಟು ಪ್ರೀತಿಯಿದೆಯೋ ಬೈಕ್‌ಗಳ ಮೇಲೂ ಅಷ್ಟೇ ಕ್ರೇಜ್ ಹೊಂದಿದ್ದಾರೆ.

ಧೋನಿ ಮೊದಲ ಬೈಕ್ ಯಾವುದು ಗೊತ್ತಾ?

ತಮ್ಮ ಶೇಖರಣೆಯಲ್ಲಿ ಜಗತ್ತಿನ ಅತ್ಯಂತ ವಿಶಿಷ್ಟ ಬೈಕ್‌ಗಳನ್ನು ಹೊಂದಿರುವ ಧೋನಿ, ಮೊದಲ ರಾಜದೂತ ಬೈಕನ್ನು ಈಗಲೂ ಭದ್ರವಾಗಿಟ್ಟುಕೊಂಡಿರುವುದು ಇದಕ್ಕೊಂದು ನಿದರ್ಶನವಷ್ಟೇ! ಸದ್ಯ ಧೋನಿ ಬೈಕ್ ಕ್ರೇಜ್ ಮತ್ತೆ ಪ್ರಸ್ತಾಪಿಸಲು ಕಾರಣವೊಂದಿದೆ. ಈ ರಾಂಚಿ ಬಾಯ್ ತಮ್ಮ ಹುಟ್ಟೂರಲ್ಲಿ ಸೂಪರ್ ಬೈಕ್ ಶೋ ರೂಂವೊಂದನ್ನು ತೆರೆಯಲು ಹೊರಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಚಿತ್ರ ಪುಟದತ್ತ ಸಾಗಿರಿ...

ರಾಂಚಿಯಲ್ಲಿ ಸೂಪರ್ ಬೈಕ್ ಶೋ ರೂಂ ತೆರೆಯಲಿರುವ ಧೋನಿ

ತಮ್ಮದೇ ಆದ ಮಹಿ ರೇಸಿಂಗ್ ತಂಡವನ್ನು ಹೊಂದಿರುವ ಧೋನಿ, ಜನವರಿ ತಿಂಗಳಲ್ಲಿ ನಡೆದ ಬೈಕ್ ಫೆಸ್ಟಿವಲ್ ಆಫ್ ಇಂಡಿಯಾ (ಬಿಎಫ್‌ಐ) ಯಶಸ್ಸಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 2014 ಜನವರಿ ತಿಂಗಳಲ್ಲಿ ನಡೆದ ಈ ಹಬ್ಬದಲ್ಲಿ 120ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಇಲ್ಲಿ ವಿಜೇತರಾದವರು ಪ್ರಸಕ್ತ ಸಾಲಿನಲ್ಲೇ (ಅಕ್ಟೋಬರ್) ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾಗವಹಿಸಲಿದ್ದಾರೆ.

ರಾಂಚಿಯಲ್ಲಿ ಸೂಪರ್ ಬೈಕ್ ಶೋ ರೂಂ ತೆರೆಯಲಿರುವ ಧೋನಿ

ಈ ನಡುವೆ ಮಹೇಂದ್ರ ಸಿಂಗ್ ಧೋನಿ, ಪೂರ್ಣವಾಗಿಯೂ ತಮ್ಮದೇ ಹೂಡಿಕೆಯಲ್ಲಿ ಸೂಪರ್ ಬೈಕ್ ಶೋ ರೂಂ ತೆರೆಯುವ ಉತ್ಸುಕತೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಾಂಚಿಯಲ್ಲಿ ಶಾಂಪಿಂಗ್ ಕಾಂಪ್ಲೆಕ್ಸ್ ತೆರೆಯುವ ಇರಾದೆಯಲ್ಲಿದ್ದಾರೆ.

ರಾಂಚಿಯಲ್ಲಿ ಸೂಪರ್ ಬೈಕ್ ಶೋ ರೂಂ ತೆರೆಯಲಿರುವ ಧೋನಿ

10 ಅಂತಸ್ತಿನ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲೇ ಈ ಸೂಪರ್ ಬೈಕ್ ಶೋ ರೂಂ ತೆರೆಯಲಾಗುವುದು. ಈ ಸಂಬಂಧ ಮಹಾನಗರ ಪಾಲಿಕೆಯಿಂದಲೂ ಅನುಮತಿ ಪಡೆಯಲಾಗಿದೆ.

ರಾಂಚಿಯಲ್ಲಿ ಸೂಪರ್ ಬೈಕ್ ಶೋ ರೂಂ ತೆರೆಯಲಿರುವ ಧೋನಿ

ಈ ಮೂಲಕ ಸೂಪರ್ ಬೈಕ್‌ಗಳ ಮೇಲಿನ ಪ್ರೇಮವನ್ನು ಮಹೇಂದ್ರ ಸಿಂಗ್ ಮಗದೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಹೆಲಿಕ್ಯಾಟ್, ಹರ್ಲಿ ಡೇವಿಡ್ಸನ್, ಬಿಎಂಡಬ್ಲ್ಯು, ಡುಕಾಟಿ, ಯಮಹಾಗಳಂತಹ ಸೂಪರ್ ಬೈಕ್‌ಗಳ ದೊಡ್ಡ ಶೇಖರಣೆಯಿದೆ.

ಮಹಿ ಬೈಕ್ ಕಲೆಕ್ಷನ್

ಧೋನಿ ಹರ್ಲಿ ರೈಡಿಂಗ್ ಮಜಾ

ಮಹಿ ಬೈಕ್ ಕಲೆಕ್ಷನ್

ಮತ್ತೆ ಬಯಲಾಯ್ತು ಧೋನಿ ಬೈಕ್ ಪ್ರೇಮ

ಮಹಿ ಬೈಕ್ ಕಲೆಕ್ಷನ್

ಮಹೇಂದ್ರ ಧೋನಿಯ ರೇಸಿಂಗ್ ಟೀಮ್ ಪ್ರಕಟ

ಮಹಿ ಬೈಕ್ ಕಲೆಕ್ಷನ್

ಧೋನಿ ಮೊದಲ ಬೈಕ್ ರಿಪೇರಿ ಮಾಡಲು ಯಾರಿಂದ ಸಾಧ್ಯ?

Most Read Articles

Kannada
English summary
The Ranchi born Cricket star has shown Interest in inaugurating a superbike showroom as a personal investment.
Story first published: Thursday, June 19, 2014, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X