ನೀವು ಬೈಕ್ ಬಿಟ್ಟು ಎಪ್ರಿಲಿಯಾ ಸ್ಕೂಟರ್ ಏಕೆ ಖರೀದಿ ಮಾಡಬೇಕು?

Written By:

ಸಮಕಾಲೀನ ಮಾರುಕಟ್ಟೆಯಲ್ಲಿ ಸ್ಕೂಟರ್ ಸಹ ಬೈಕ್ ಗಳಷ್ಟೇ ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದೆ. ಹೋಂಡಾ ಆಕ್ಟಿವಾದಂತಹ ಸುಲಭ ಚಾಲನೆಯ ಆಟೋಮ್ಯಾಟಿಕ್ ಸ್ಕೂಟರ್ ಗಳು ಸ್ಪ್ಲೆಂಡರ್ ಗಳಂತಹ ಪ್ರಯಾಣಿಕ ಬೈಕ್ ಗಳನ್ನೇ ಹಿಂದಿಕ್ಕಿದೆ. ಹಾಗಿರುವಾಗ ಇಟಲಿ ಮೂಲದ ಪ್ರತಿಷ್ಠಿತ ಸ್ಕೂಟರ್ ಬ್ರಾಂಡ್ ಅತಿ ನೂತನ ಕೊಡುಗೆಯೊಂದಿಗೆ ಭಾರತಕ್ಕೆ ದಾಪುಗಾಲನ್ನಿಟ್ಟಿದೆ.

ಅದುವೇ, ಎಪ್ರಿಲಿಯಾ ಎಸ್ ಆರ್150.

ಸಾಮಾನ್ಯ ಸ್ಕೂಟರ್ ಗಿಂತಲೂ ವಿಭಿನ್ನತೆ ಕಾಪಾಡಿಕೊಂಡಿರುವ ಎಪ್ರಿಲಿಯಾ ಎಸ್‌ಆರ್150 ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ. ಸಹಜವಾಗಿಯೇ 150 ಸಿಸಿ ಎಂಜಿನ್ ನೊಂದಿಗೆ ಶಕ್ತಿಶಾಲಿ ಎನಿಸಿಕೊಂಡಿರುವ ಎಪ್ರಿಲಿಯಾ ಎಸ್‌ಆರ್150 ಗರಿಷ್ಠ ವೈಶಿಷ್ಟ್ಯಗಳನ್ನು ಪಡೆದಿದೆ. ಅಷ್ಟಕ್ಕೂ ಬೈಕ್ ಬಿಟ್ಟು ನೀವು ಎಪ್ರಿಲಿಯಾ ಸ್ಕೂಟರ್ ಏಕೆ ಖರೀದಿ ಮಾಡಬೇಕು ಎಂಬುದನ್ನು ವಿಮರ್ಶೆಯ ಮೂಲಕ ಇಲ್ಲಿ ವಿವರಿಸಲಾಗುವುದು.

ವಿನ್ಯಾಸ

ಆರ್‌ಎಸ್‌ವಿ1000 ಆರ್ ಮಾದರಿಯಿಂದ ಸ್ಪೂರ್ತಿ ಪಡೆದಿರುವ ಎಪ್ರಿಲಿಯಾ ಎಸ್ ಆರ್ 150 ಕ್ರಾಸೋವರ್ ಸ್ಪೋರ್ಟ್ ಸ್ಕೂಟರ್ ಆಕ್ರಮಣಕಾರಿ ಏರೋಡೈನಾಮಿಕ್ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದೆ. ಎಪ್ರಿಲಿಯಾ ಮುಖಾಂತರ ಯುರೋಪ್ ವಿನ್ಯಾಸ ತಂತ್ರಗಾರಿಕೆಯನ್ನು ಭಾರತಕ್ಕೂ ಪರಿಚಯಿಸಲಾಗಿದೆ.

ಬೆಲೆ ಮಾಹಿತಿ: 65,000 ರುಪಾಯಿ (ಎಕ್ಸ್ ಶೋ ರೂಂ ದೆಹಲಿ)

ಎಪ್ರಿಲಿಯಾ ಎಸ್ ಆರ್150 ಗಂಟೆಗೆ ಗರಿಷ್ಠ 95 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ನಮ್ಮ ಪರೀಕ್ಷಾರ್ಥ ಚಾಲನೆಯ ವೇಳೆ ಗಂಟೆಗೆ 120 ಕೀ.ಮೀ. ವೇಗ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಇದರಿಂದಲೇ ಬೈಕ್ ಗಿಂತಲೂ ಕಮ್ಮಿಯೇನಲ್ಲ ಎಂಬುದು ಸಾಬೀತಾಗಿದೆ. ಆರು ಲೀಟರ್ ಗಳ ಇಂಧನ ಟ್ಯಾಂಕ್ ಪದೇ ಪದೇ ಪೆಟ್ರೋಲ್ ಬಂಕ್ ಗಾಗಿ ಹುಡುಕಿ ಹೋಗ ಬೇಕಾದ ತೊಂದರೆಯನ್ನು ತಪ್ಪಿಸಲಿದೆ.

ಮೈಲೇಜ್: ಪ್ರತಿ ಲೀಟರ್ ಗೆ 45ರಿಂದ 50 ಕೀ.ಮೀ.

ಹ್ಯಾಂಡ್ಲಿಂಗ್

ಐಡ್ಲಿಂಗ್ ನಲ್ಲಿ ಎಪ್ರಿಲಿಯಾ ಎಸ್ ಆರ್ 150 ವೈಬ್ರೇಷನ್ ಅನುಭವಕ್ಕೆ ಬಂದರೂ ಒಮ್ಮೆ ಗಾಡಿ ಮುಂದಕ್ಕೆ ಚಲಿಸಿತೊಡಗಿದ ಬಳಿಕ ಇಂತಹ ಯಾವುದೇ ಸಮಸ್ಯೆಯು ಎದುರಾಗುವುದಿಲ್ಲ. ನಗರದಲ್ಲಿ ಸರಾಸರಿ ವೇಗದಲ್ಲಿ ಓಡಿಸುವಾಗ ಎಪ್ರಿಲಿಯಾ ನಿರ್ವಹಣೆಗೆ ಯಾವುದೇ ತೊಂದರೆಗಳು ಕಂಡುಬಂದಿಲ್ಲ. ಪರಿಣಾಮಕಾರಿ ಉರುಳಿಕೆ ಸಹ ಎಪ್ರಿಲಿಯಾ ಸ್ಕೂಟರ್ ಗೆ ನೆರವಾಗಿದೆ. ಇನ್ನು ಬ್ರೇಕ್ ಸಹ ಪ್ರಭಾವಶಾಲಿ ಎನಿಸಿಕೊಂಡಿದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಸ್ಪಿಡೋಮೀಟರ್ ಗಾಗಿ ಟ್ವಿನ್ ಪೊಡ್ ಅನಲಾಗ್ ಯುನಿಟ್, ಫ್ಲೂಯೆಲ್ ಗೇಜ್, ದೂರಮಾಪಕ

ಹ್ಯಾಂಡಲ್ ಬಾರ್

ವಿಶಿಷ್ಟ, ಕ್ರೀಡಾತ್ಮಕ ಜೊತೆಗೆ ಹ್ಯಾಂಡಲ್ ಬಾರ್ ನಲ್ಲೇ ಜೋಡಿಸಲ್ಪಟ್ಟ ಇಂಡಿಕೇಟರ್ ಲೈಟ್

ಹೆಡ್ ಲೈಟ್

ಅತ್ಯುತ್ತಮ ಗೋಚರತೆಗೆ ಡಬಲ್ ಬ್ಯಾರೆಲ್ ಹೆಡ್ ಲೈಟ್

ಡಿಸ್ಕ್ ಬ್ರೇಕ್

220 ಎಂಎಂ ವೆಂಟಿಲೇಟಡ್ ಫ್ರಂಟ್ ಡಿಸ್ಕ್ ಬ್ರೇಕ್ ಜೊತೆ ಟ್ವಿನ್ ಪಿಸ್ತಾನ್ ಕ್ಯಾಲಿಪರ್ ಮತ್ತು 240 ಎಂಎಂ ರಿಯರ್ ಡ್ರಮ್ ಬ್ರೇಕ್

ವಿಶಿಷ್ಟತೆ

 • ರೇಸರ್ ಬೈಕ್ ಶೈಲಿ,
 • ಸ್ಪೋರ್ಟಿ ಡ್ಯುಯಲ್ ಟೋನ್ ಆರ್ಟ್ ಲೆಥರ್ ಸೀಟು,
 • 14 ಇಂಚುಗಳ ಫೈವ್ ಸ್ಪೋಕ್ ಅಲಾಯ್ ಚಕ್ರಗಳು,
 • ಅಗಲವಾದ ಚಕ್ರಗಳು,
 • ಸ್ಟೈಲಿಷ್, ಸ್ಪೋರ್ಟಿ ಟೈಲ್ ಲೈಟ್,
 • ಬ್ಯಾಗ್ ಹೂಕ್,
 • ಕ್ರೀಡಾತ್ಮಕ ಶೈಲಿಯ ಎಕ್ಸಾಸ್ಟ್,
 • ಸಹ ಸವಾರರಿಗೆ ಫೂಟ್ ರೆಸ್ಟ್,
 • ಟ್ರೀಮ್ ಫ್ರೇಮ್ ರಚನೆಯಿಂದ ಹೆಚ್ಚಿನ ಬಿಗಿತ,
 • ಸೀಟು ಕೆಳಗಡೆ ಸ್ಟೋರೆಜ್ ಮತ್ತು ಫೋನ್ ಚಾರ್ಜ್ ಮಾಡಿಸಲು ಯುಎಸ್ ಬಿ ಕನೆಕ್ಟರ್,
 • ಸಹ ಸವಾರರಿಗೆ ಹಿಡಿಯಲು ಗ್ರಾಬ್ ಹ್ಯಾಂಡಲ್.

ಎಂಜಿನ್

150 ಸಿಸಿ ಎಂಜಿನ್,

10.4 ಅಶ್ವಶಕ್ತಿ @ 6750 ಆರ್ ಪಿಎಂ

11.4 ಎನ್ ಎಂ ತಿರುಗುಬಲ @ 500 ಆರ್ ಪಿಎಂ

ಸಿವಿಟಿ ಗೇರ್ ಬಾಕ್ಸ್

ಸಸ್ಪೆನ್ಷನ್

ಹೈಡ್ರಾಲಿಕ್ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಸಸ್ಪೆನ್ಷನ್ ಮತ್ತು ಹಿಂದುಗಡೆ ಸಿಂಗಲ್ ಆರ್ಮ್

ಬಣ್ಣಗಳು: ಮ್ಯಾಟ್ ಬ್ಲ್ಯಾಕ್, ಗ್ಲೋಸಿ ವೈಟ್

ನಮಗೆ ಲೈಕ್ ಆಗಿರೋದು...

 • ಫಿಟ್ ಆಂಡ್ ಫಿನಿಶ್,
 • ಒಟ್ಟಾರೆ ವಿನ್ಯಾಸ,
 • ಆಕ್ರಮಣಕಾರಿ ರಸ್ತೆ ಸಾನಿಧ್ಯ,
 • ತಿರುವುಗಳಲ್ಲಿ ಪ್ರಭಾವಶಾಲಿ,
 • ಡಿಸ್ಕ್ ಬ್ರೇಕ್

ನಮಗೆ ಇಷ್ಟವಾಗದೇ ಹೋಗಿರೋದು...

 • ಆರಂಭಿಕ ವೇಗವರ್ಧನೆಯ ಕೊರತೆ,
 • ಉದ್ದನೆಯ ಸವಾರರಿಗೆ ನಿರ್ವಹಣೆ ಸ್ವಲ್ಪ ಕಷ್ಟ,
 • ಸ್ಟೋರೆಜ್ ಜಾಗದ ಕೊರತೆ,
 • ದೂರ ಪ್ರಯಾಣಕ್ಕೆ ಸೂಕ್ತವಲ್ಲ
English summary
Aprilia SR150 MotoScooter Review — Is it Worth Buying?
Story first published: Wednesday, August 31, 2016, 17:33 [IST]
Please Wait while comments are loading...

Latest Photos

X