ಆಕ್ಟಿವಾ 125 vs ಆಕ್ಸೆಸ್ vs ಡ್ಯೂರೊ ಡಿಝಡ್; ಯಾವುದು ಶ್ರೇಷ್ಠ ಸ್ಕೂಟರ್?

By Nagaraja

ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸುವಾಗ ಒಳ್ಳೆಯದೊಂದು ಕೊಂಡುಕೊಳ್ಳಣವೇ ಎಂಬುದು ಪ್ರತಿಯೊಬ್ಬರ ಅಭಿಲಾಷೆಯಾಗಿರುತ್ತದೆ. ಮಗನಿದೊಂದು ಬೈಕ್, ಮಗಳಿಗೊಂದು ಸ್ಕೂಟಿ! ಹೀಗೆ ಯೋಚಿಸುವ ಕಾಲ ಬದಲಾಗಿದೆ. ಇದೀಗ ಏನೇ ಇದ್ದರೂ ಇಂದಿನ ಯುವ ಜನಾಂಗ ಬೈಕ್ ಅಥವಾ ಸ್ಕೂಟರ್ ಎರಡನ್ನೂಭೇದಭಾವವಿಲ್ಲದೆಯೇ ಒಂದೇ ದೃಷ್ಟಿಯಲ್ಲಿ ನೋಡಿಕೊಳ್ಳುತ್ತಾರೆ.

ಗರಿಷ್ಠ ಇಂಧನ ಕ್ಷಮತೆಯುಳ್ಳ ಟಾಪ್ 5 ಸ್ಕೂಟರ್

ಇದರ ಪರಿಣಾಮವಾಗಿಯೇ ದೇಶದಲ್ಲಿ ಸ್ಕೂಟರ್ ಮಾರುಕಟ್ಟೆ ಶಿಪ್ರಗತಿಯಲ್ಲಿ ವೃದ್ಧಿ ಸಾಧಿಸುತ್ತಿದೆ. ಆದರೆ 125ಸಿಸಿ ಸ್ಕೂಟರ್ ವಿಭಾಗದಲ್ಲಿ ಇದುವರೆಗೆ ನಿರೀಕ್ಷಿಸಿದಷ್ಟು ಬೇಡಿಕೆ ಕಂಡುಬಂದಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಹೋಂಡಾ ಆಕ್ಟಿವಾ 125 ಪ್ರವೇಶದೊಂದಿಗೆ ಚಿತ್ರಣ ಬದಲಾಗುತ್ತಿದೆ. ಈ ವಿಭಾಗದಲ್ಲಿ ಸುಜುಕಿ ಆಕ್ಸೆಸ್, ಸ್ವಿಸ್, ಮಹೀಂದ್ರ ಡ್ಯೂರೊ ಡಿಝಡ್ ಮತ್ತು ರೊಡಿಯೋ ಆರ್‌ಝಡ್ ಆವೃತ್ತಿಗಳು ಸ್ಪರ್ಧಾ ಕಣದಲ್ಲಿವೆ.

ದೇಶದ ಅತ್ಯುತ್ತಮ 150ಸಿಸಿ ಮೈಲೇಜ್ ಬೈಕ್‌ಗಳು

ಸಹಜವಾಗಿಯೇ ನೂತನ ಆಕ್ಟಿವಾ, ಸುಜುಕಿ ಹಾಗೂ ಮಹೀಂದ್ರ ಸ್ಕೂಟರ್‌ಗಳಿಗಿಂತ ಹೇಗೆ ಭಿನ್ನವಾಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿರಬಹುದು. ಇದರಂತೆ ಹೋಂಡಾ ಆಕ್ಟಿವಾ 125, ಸುಜುಕಿ ಆಕ್ಸೆಸ್ ಹಾಗೂ ಮಹೀಂದ್ರ ಡ್ಯೂರೊ ಡಿಝಡ್ ಆವೃತ್ತಿಗಳ ಹೋಲಿಕೆ ಮಾಡಲಾಗಿದ್ದು, ಸಂಪೂರ್ಣ ವೈಶಿಷ್ಟ್ಯ, ಮೈಲೇಜ್, ಎಂಜಿನ್ ಎಂಬಿತ್ಯಾದಿ ಮಾಹಿತಿಗಳೊಂದಿಗೆ ಮುಂದೆ ಬಂದಿದ್ದೇವೆ.

ಆಕ್ಟಿವಾ 125 vs ಆಕ್ಸೆಸ್ vs ಡ್ಯೂರೊ ಡಿಝಡ್; ಯಾವುದು ಶ್ರೇಷ್ಠ ಸ್ಕೂಟರ್?

ಅಷ್ಟಕ್ಕೂ ಈ ಮೂರು 125 ಸಿಸಿ ಸ್ಕೂಟರ್‌ಗಳ ಪೈಕಿ ಖರೀದಿ ಯೋಗ್ಯ ಸ್ಕೂಟರ್ ಯಾವುದು? ಅಗತ್ಯ ಮಾಹಿತಿಗಳಿಗಾಗಿ ಫೋಟೊ ಸ್ಲೈಡರ್‌ನತ್ತ ಮುಂದುವರಿಯಿರಿ...

ಹೋಂಡಾ ಆಕ್ಟಿವಾ 125

ಹೋಂಡಾ ಆಕ್ಟಿವಾ 125

ದಶಕದಷ್ಟು ಕೀರ್ತಿ ಹೊಂದಿರುವ ಆಕ್ಟಿವಾ, ಸ್ಪ್ಲೆಂಡರ್‌ಗಳಂತಹ ಪ್ರಖ್ಯಾತ ಬೈಕ್‌ಗಳನ್ನೇ ಹಿಂದಿಕ್ಕಿರುವ ಹಿರಿಮೆಗೆ ಪಾತ್ರವಾಗಿದೆ. ಇದೀಗ ಹಳೆ ವರ್ಷನ್ ಸ್ಥಿರತೆ ಕಾಪಾಡಲು ಮುಂದಾಗಿರುವ ಹೋಂಡಾ, ನೂತನ 125 ಸಿಸಿ ಬೈಕ್ ಲಾಂಚ್ ಮಾಡಿತ್ತು. ನೂತನ ಆಕ್ಟಿವಾದಲ್ಲಿ ದೊಡ್ಡದಾದ ಎಂಜಿನ್ ಇರುವುದಷ್ಟೇ ಅಲ್ಲದೆ ತಾಜಾ ವಿನ್ಯಾಸವನ್ನು ಕಾಯ್ದುಕೊಂಡಿದೆ.

ದರ: ರು. 52,447 (ದೆಹಲಿ ಎಕ್ಸ್ ಶೋ ರೂಂ)

ಸುಜುಕಿ ಆಕ್ಸೆಸ್

ಸುಜುಕಿ ಆಕ್ಸೆಸ್

ನೆನಪಿರಲಿ, 125 ಸಿಸಿ ವಿಭಾಗದಲ್ಲಿ ಅತ್ಯುತ್ತಮ ಮಾರಾಟ ಬೈಕ್‌ವೆಂಬ ಪಟ್ಟವನ್ನು ಸುಜುಕಿ ಆಕ್ಸೆಸ್ ಪಡೆದುಕೊಂಡಿದೆ. ಸಹಜವಾಗಿಯೇ ಇದು ಫ್ಯಾಮಿಲಿ ಪಯಣಕ್ಕೆ ಹೆಚ್ಚು ಆದ್ಯತೆ ಕೊಡುತ್ತದೆ. ಇದು ಶಕ್ತಿಶಾಲಿ ಎಂಜಿನ್ ಜತೆ ಉತ್ತಮ ನಿರ್ಮಾಣ ಗುಣಮಟ್ಟವನ್ನು ಪಡೆದುಕೊಂಡಿದೆ.

ದರ: ರು. 47,251 (ದೆಹಲಿ ಎಕ್ಸ್ ಶೋ ರೂಂ)

ಮಹೀಂದ್ರ ಡ್ಯೂರೊ ಡಿಝಡ್

ಮಹೀಂದ್ರ ಡ್ಯೂರೊ ಡಿಝಡ್

ಡ್ಯೂರೊದ ಅಪ್‌ಗ್ರೇಡ್ ವರ್ಷನ್ ಆಗಿದೆ ಮಹೀಂದ್ರ ಡ್ಯೂರೊ ಡಿಝಡ್. ಆದರೆ ತನ್ನ ಜನಪ್ರಿಯತೆ ಕಾಪಾಡಿಕೊಳ್ಳುವಲ್ಲಿ ಇದು ವಿಫಲವಾಗಿದೆ. ಮುಂಭಾಗದಲ್ಲಿ ಆಕ್ಸೆಸ್‌ಗೆ ಸಮಾನವಾದ ವಿನ್ಯಾಸವನ್ನು ಹೊಂದಿದೆ.

ದರ: ರು. 43,788 (ದೆಹಲಿ ಎಕ್ಸ್ ಶೋ ರೂಂ)

ವಿನ್ಯಾಸ - ಹೋಂಡಾ ಆಕ್ಟಿವಾ 125

ವಿನ್ಯಾಸ - ಹೋಂಡಾ ಆಕ್ಟಿವಾ 125

ಹೋಂಡಾ ಆಕ್ಟಿವಾ 125, ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇದರ ಇಂಡಿಕೇಟರ್ ಲ್ಯಾಂಪ್ ನಡುವೆ ಲೋಹದ ಹೋದಿಕೆ ಹಾದು ಹೋಗುತ್ತಿದ್ದು, ಪ್ರೀಮಿಯಂ ಸ್ಪರ್ಶ ನೀಡುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಹೆಡ್‌ಲ್ಯಾಂಪ್ ಮೇಲ್ಗಡೆ ಕಪ್ಪು ಮುಕುಟ ಇರಿಸಿದಂತಿದೆ.

 ವಿನ್ಯಾಸ - ಸುಜುಕಿ ಆಕ್ಸೆಸ್

ವಿನ್ಯಾಸ - ಸುಜುಕಿ ಆಕ್ಸೆಸ್

ನಮ್ಮ ಆಡುಭಾಷೆಯಲ್ಲಿ ಹೇಳುವಂತೆಯೇ ಸುಜುಕಿ ಆಕ್ಸೆಸ್, ಯಾವುದೇ ಬೆಲ್ ಅಥವಾ ಸೀಟಿಯಿಲ್ಲದ ಸರಳ ನೋಟದ ಸ್ಕೂಟರ್ ಆಗಿದೆ. ಇದು ಯಾವುದೇ ಕುಂದು ಕೊರತೆಗಳನ್ನು ಹೊಂದಿರದ ಹೊರತಾಗಿಯೂ ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಆದರೂ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಬಳಕೆ ಮಾಡುವಂತಹ ಸ್ಕೂಟರ್ ಆಗಿ ವಿನ್ಯಾಸಗೊಳಿಸಲಾಗಿದೆ ಎಂಬುದು ಸಹ ಅಷ್ಟೇ ಸತ್ಯ. ಇದು ದೊಡ್ಡದಾದ ಸೈಲನ್ಸರ್ ಸಹ ಪಡೆದುಕೊಂಡಿದೆ.

ವಿನ್ಯಾಸ - ಮಹೀಂದ್ರ ಡ್ಯೂರೊ ಡಿಝಡ್

ವಿನ್ಯಾಸ - ಮಹೀಂದ್ರ ಡ್ಯೂರೊ ಡಿಝಡ್

ಆಕ್ಟಿವಾದಷ್ಟು ಆಕರ್ಷಣೀಯ ವಿನ್ಯಾಸವನ್ನು ಡ್ಯೂರೊ ಪಡೆದುಕೊಂಡಿಲ್ಲ. ಈ ಮೊದಲು ತಿಳಿಸಿರುವಂತೆಯೇ ಮುಂಭಾಗದಲ್ಲಿ ಆಕ್ಸೆಸ್‌ಗೆ ಸಮಾನವಾದ ವಿನ್ಯಾಸ ಪಡೆದುಕೊಂಡಿದೆ.

ಆಸನ ವ್ಯವಸ್ಥೆ, ಆರಾಮದಾಯಕತೆ - ಆಕ್ಟಿವಾ 125

ಆಸನ ವ್ಯವಸ್ಥೆ, ಆರಾಮದಾಯಕತೆ - ಆಕ್ಟಿವಾ 125

ವಿಶಾಲವಾದ ಹಾಗೂ ನೆಟ್ಟಗಿನ ಆಸನ ವ್ಯವಸ್ಥೆಯು ಸವಾರ ಸೇರಿದಂತೆ ಸಹ ಪ್ರಯಾಣಿಕರಿಗೂ ಆರಾಮದಾಯಕ ಪಯಣವನ್ನು ಖಾತ್ರಿಪಡಿಸಲಿದೆ. ದೊಡ್ಡದಾದ ಅಲಾಯ್ ಗ್ರಾಬ್ ಹ್ಯಾಂಡಲ್, ಅಲಾಯ್ ಫೂಟ್ ರೆಸ್ಟ್ ಸಹ ಪ್ರಯಾಣಿಕರನ್ನು ಸುರಕ್ಷಿತವಾಗಿಸಲಿದೆ. ಮುಂಭಾಗದಲ್ಲಿರುವ ಫ್ಲೋರ್ ಬೋರ್ಡ್ ಸಹ ಸಮತಲವಾಗಿದ್ದು, ದಣಿವು ರಹಿತ ಚಾಲನೆ ಪ್ರದಾನ ಮಾಡಲಿದೆ.

ಆಸನ ವ್ಯವಸ್ಥೆ, ಆರಾಮದಾಯಕತೆ - ಆಕ್ಸೆಸ್

ಆಸನ ವ್ಯವಸ್ಥೆ, ಆರಾಮದಾಯಕತೆ - ಆಕ್ಸೆಸ್

ಬಹುತೇಕ ಆಕ್ಟಿವಾ ರೀತಿಯಲ್ಲಿಯೇ ಆಕ್ಸೆಸ್ ಸಹ ಚಪ್ಪಟೆ ಹಾಗೂ ಅಗಲವಾದ ಆಸನ ವ್ಯವಸ್ಥೆವನ್ನು ಒದಗಿಸುತ್ತದೆ. ದೊಡ್ಡದಾದ ಗ್ರಾಬ್ ಹ್ಯಾಂಡಲ್ ಹಾಗೂ ಫೂಟ್ ರೆಸ್ಟ್ ಸಹ ಸರಿಯಾದ ಸ್ಥಾನದಲ್ಲಿಯೇ ಲಗತ್ತಿಸಲಾಗಿದೆ. ಆದರೆ ಆಕ್ಟಿವಾಗೆ ಹೋಲಿಸಿದರೆ ವ್ಯತ್ಯಾಸ ಏನೆಂದರೆ ಇದರ ಫ್ಲೋರ್ ಬೋರ್ಡ್ (ಚಿತ್ರದಲ್ಲಿ ತೋರಿಸಿರುವಂತೆಯೇ) ಸಮತಲವಾಗಿದ್ದರೂ ಚೊಕ್ಕದಾಗಿದೆ. ಇನ್ನು ಕೆಲವೊಂದು ಬಾರಿ ಇದರ ದೊಡ್ಡದಾದ ಸೈಲನ್ಸರ್, ನಮ್ಮಲ್ಲಿ ಫೂಟ್ ರೆಸ್ಟ್ ಎಂಬ ಭಾವನೆಯನ್ನುಂಟು ಮಾಡುತ್ತಿದೆ.

ಆಸನ ವ್ಯವಸ್ಥೆ, ಆರಾಮದಾಯಕತೆ - ಡ್ಯೂರೊ ಡಿಝಡ್

ಆಸನ ವ್ಯವಸ್ಥೆ, ಆರಾಮದಾಯಕತೆ - ಡ್ಯೂರೊ ಡಿಝಡ್

ಇತರೆರಡು ಆವೃತ್ತಿಗಳಂತೆಯೇ ಮಹೀಂದ್ರ ಡ್ಯೂರೊ ಡಿಝಡ್ ಆಸನ ಸಹ ಆರಾಮದಾಯಕವೆನಿಸಿದೆ. ಹಾಗಿದ್ದರೂ ಫ್ಲೋರ್ ಬೋರ್ಡ್ ಸ್ಥಾನ ಮೇಲ್ಗುಖವಾಗಿ ಹೆಚ್ಚಿಸಿರುವುದರಿಂದ ಉದ್ದನೆಯ ಸವಾರರಿಗೆ ತಮ್ಮ ಕಾಲುಗಳನ್ನು ಹೊಂದಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಲಿದೆ.

ಎಂಜಿನ್, ಟ್ರಾನ್ಸ್‌ಮಿಷನ್, ಮೈಲೇಜ್ - ಆಕ್ಟಿವಾ 125

ಎಂಜಿನ್, ಟ್ರಾನ್ಸ್‌ಮಿಷನ್, ಮೈಲೇಜ್ - ಆಕ್ಟಿವಾ 125

124.9 ಸಿಸಿ ವಿ-ಮ್ಯಾಟಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್, 8.6 ಅಶ್ವಶಕ್ತಿ (10.12 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್ - ಪ್ರತಿ ಲೀಟರ್‌ಗೆ 59 ಕೀ.ಮೀ.

(ಆಕ್ಟಿವಾ 110 ಸಿಸಿ ಮೈಲೇಜ್ 62)

ಎಂಜಿನ್, ಟ್ರಾನ್ಸ್‌ಮಿಷನ್, ಮೈಲೇಜ್ - ಆಕ್ಸೆಸ್

ಎಂಜಿನ್, ಟ್ರಾನ್ಸ್‌ಮಿಷನ್, ಮೈಲೇಜ್ - ಆಕ್ಸೆಸ್

124 ಸಿಸಿ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್, 8.58 ಅಶ್ವಶಕ್ತಿ (9.8 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್ - ಪ್ರತಿ ಲೀಟರ್‌ಗೆ 40ರಿಂದ 50 ಕೀ.ಮೀ. (ರಸ್ತೆ ಪರಿಸ್ಥಿತಿಗಾನುಸಾರವಾಗಿ)

ಎಂಜಿನ್, ಟ್ರಾನ್ಸ್‌ಮಿಷನ್, ಮೈಲೇಜ್ - ಡ್ಯೂರೊ ಡಿಝಡ್

ಎಂಜಿನ್, ಟ್ರಾನ್ಸ್‌ಮಿಷನ್, ಮೈಲೇಜ್ - ಡ್ಯೂರೊ ಡಿಝಡ್

124.6 ಸಿಸಿ ವಿ-ಮ್ಯಾಟಿಕ್ ಟ್ರಾನ್ಸ್‌ಮಿಷನ್, 8 ಅಶ್ವಶಕ್ತಿ (9 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್ - ಪ್ರತಿ ಲೀಟರ್‌ಗೆ 56.25 ಕೀ.ಮೀ. (ಎಆರ್‌ಎಐ ಮಾನ್ಯತೆ ಪ್ರಕಾರ)

ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ ಪ್ರತಿ ಲೀಟರ್‌ಗೆ 40ರಿಂದ 45 ಕೀ.ಮೀ. ಮೈಲೇಜ್ ನೀಡುವಷ್ಟು ಶಕ್ತವಾಗಿದೆ.

ಸಸ್ಪೆಷನ್, ಚಕ್ರ, ಬ್ರೇಕ್ - ಆಕ್ಟಿವಾ 125

ಸಸ್ಪೆಷನ್, ಚಕ್ರ, ಬ್ರೇಕ್ - ಆಕ್ಟಿವಾ 125

ಫ್ರಂಟ್ ಟೆಲಿಸ್ಕಾಪಿಕ್ ಫಾರ್ಕ್, ಹೋಂಡಾ ಆಕ್ಟಿವಾ 125 ಸಿಸಿ ಸ್ಕೂಟರಿನ ಪ್ಲಸ್ ಪಾಯಿಂಟ್ ಆಗಿದೆ. 5 ಸ್ಪೋಕ್ ಅಲಾಯ್ ವೀಲ್ ಹಾಗೆಯೇ ಹಿಂದುಗಡೆ 130 ಎಂಎಂ ಡ್ರಾಮ್ ಕೂಡಾ ಸೌಲಭ್ಯವಿದೆ. ಅದೇ ರೀತಿ ಇದರ ನಂಬಿಕೆಗ್ರಸ್ತ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಿಂ ನೆರವಿನಿಂದ ನಿಲ್ಲಿಸುವ ಅಂತರ ಕಡಿಮೆ ಮಾಡಲಿದೆ.

ಸಸ್ಪೆಷನ್, ಚಕ್ರ, ಬ್ರೇಕ್ - ಸುಜುಕಿ ಆಕ್ಸೆಸ್

ಸಸ್ಪೆಷನ್, ಚಕ್ರ, ಬ್ರೇಕ್ - ಸುಜುಕಿ ಆಕ್ಸೆಸ್

ಇದರ ಸಸ್ಪೆಷನ್ ಸ್ಟಾಂಡರ್ಡ್ ಆಗಿದ್ದು, ಮುಂದುಗಡೆ ಟೆಲಿಸ್ಕಾಪಿಕ್ ಫಾರ್ಕ್ ಹಾಗೆಯೇ ಹಿಂದುಗಡೆ ಸುರುಳಿ ವಿಧವಾಗಿದೆ. ಇದರ ಎರಡು ಚಕ್ರಗಳು 10 ಇಂಚುಗಳಾಗಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯಿರುವುದಿಲ್ಲ. ಬದಲಾಗಿ ಎರಡು ಬದಿಗಳಲ್ಲಿ ಡ್ರಮ್ ಬ್ರೇಕ್ ಇರುತ್ತದೆ.

 ಸಸ್ಪೆಷನ್, ಚಕ್ರ, ಬ್ರೇಕ್ - ಡ್ಯೂರೊ ಡಿಝಡ್

ಸಸ್ಪೆಷನ್, ಚಕ್ರ, ಬ್ರೇಕ್ - ಡ್ಯೂರೊ ಡಿಝಡ್

ಆಕ್ಸೆಸ್ ತರಹನೇ ಡ್ಯೂರೊ ಡಿಝಡ್ ಸಹ 10 ಇಂಚು ಚಕ್ರಗಳನ್ನು ಪಡೆದುಕೊಂಡಿದೆ. ಹಾಗೆಯೇ ಮುಂಭಾಗ ಹಾಗೂ ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳಿವೆ. ಇನ್ನುಳಿದಂತೆ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಮತ್ತು ಹಿಂದುಗಡೆ ಹೈಡ್ರಾಲಿಕ್ ಸ್ವಿಂಗ್ ಆರ್ಮ್ ವಿಧವಿದೆ.

ಇತರ ವೈಶಿಷ್ಟ್ಯ - ಆಕ್ಟಿವಾ 125

ಇತರ ವೈಶಿಷ್ಟ್ಯ - ಆಕ್ಟಿವಾ 125

ಇನ್ಸ್ಟ್ರುಮೆಂಟ್ ಪ್ಯಾನೆಲ್: ಆಧುನಿಕ ಇನ್ಸ್ಟ್ರುಮೆಂಟ್ ಪ್ಯಾನೆಲ್ ಆಕ್ಟಿವಾ 125 ಅಂದತೆ ಹೆಚ್ಚಿಸಿದೆ. ಇದರಲ್ಲಿ ದೊಡ್ಡದಾದ ಅನಾಲಾಗ್ ಸ್ಪೀಡೋಮೀಟರ್ ಜತೆಗೆ ಡಿಜಿಟಲ್ ಫ್ಯೂಯಲ್ ಲೆವೆಲ್ ಇಂಡಿಕೇಟರ್, ಓಡೋಮೀಟರ್ ಮತ್ತು ಟ್ರಿಪ್ ಮೀಟರ್‌ ಸೌಲಭ್ಯಗಳಿವೆ. ಹಾಗೆಯೇ ಟರ್ನ್ ಇಂಡಿಕೇಟರ್‌ ವಿಭಿನ್ನವಾಗಿ ಗುರುತಿಸಿಕೊಳ್ಳಲಿದೆ.

ಸ್ಟೋರೆಜ್: ನಿಮ್ಮ ಮಾಹಿತಿಗಾಗಿ, ಆಕ್ಟಿವಾ 110 ಆವೃತ್ತಿಯಲ್ಲಿ ಸೀಟು ಕೆಳಗಡೆ 18 ಲೀಟರ್ ಸ್ಟೋರೆಜ್ ಜಾಗ ಲಭ್ಯವಿರಲಿದೆ. ಆಕ್ಟಿವಾದಲ್ಲೂ ಇದಕ್ಕೆ ಸಮಾನವಾದ ಸ್ಟೋರೆಜ್ ಜಾಗ ಲಭ್ಯವಿರಲಿದೆ.

ಇತರ ವೈಶಿಷ್ಟ್ಯ - ಆಕ್ಟಿವಾ 125

ಇತರ ವೈಶಿಷ್ಟ್ಯ - ಆಕ್ಟಿವಾ 125

ಇಂಧನ ಟ್ಯಾಂಕ್ - 6.0 ಲೀಟರ್

ಸ್ಲೈಡಿಂಗ್ ಕವರ್‌ನಲ್ಲಿ ಬೀಗದ ತೂತು ಇರುವುದರಿಂದ ಹೆಚ್ಚಿನ ಭದ್ರತೆ ಲಭ್ಯವಾಗಲಿದೆ. ಸಂಸ್ಥೆಯು ಹೇಳುವಂತೆಯೇ ಆಕ್ಟಿವಾ 125, ಕನ್ವಿನಿಯಂಟ್ ಲಿಫ್ಟ್ ಅಪ್ ಇಂಡಿಪೆಂಡೆಂಟ್ ಕವರ್‌ನಿಂದ ಆಗಮಿಸುತ್ತಿದ್ದು, ಸೀಟುಗಳ ಕೆಳಗಡೆ ಲಗತ್ತಿಸಲಾಗಿರುವ ಯಾಂತ್ರಿಕ ಭಾಗಗಳನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ.

ಇತರ ವೈಶಿಷ್ಟ್ಯ - ಆಕ್ಸೆಸ್

ಇತರ ವೈಶಿಷ್ಟ್ಯ - ಆಕ್ಸೆಸ್

ಇನ್ಸ್ಟ್ರುಮೆಂಟ್ ಪ್ಯಾನೆಲ್: ಸ್ಪೀಡೋಮೀಟರ್ ಹಾಗೂ ಫ್ಯೂಯಲ್ ಲೆವೆಲ್ ಇಂಡಿಕೇಟರ್ ಸೇರಿದ ಆಲ್ ಅನಾಲಾಗ್ ಕ್ಲಸ್ಟರ್ ಇದು ಪಡೆದಿದೆ. ಇದು ನೋಡಲು ಆಕರ್ಷಣೀಯವಾಗಿಲ್ಲ.

ಸ್ಟೋರೇಜ್: ಇದು ಸೀಟು ಕೆಳಗಡೆ 20 ಲೀಟರ್ ಸ್ಟೋರೆಜ್ ಜಾಗ ಪಡೆದುಕೊಂಡಿದೆ. ಹೆಲ್ಮೆಟ್ ಜತೆಗೆ ಇತರ ಅಗತ್ಯ ವಸ್ತುಗಳಿನ್ನಿಡಲು ಇದು ಬೇಕಾದಷ್ಟಾಗಿದೆ. ಹಾಗೆಯೇ ಅನುಕೂಲಕ್ಕಾಗಿ ಮುಂದುಗಡೆ ಬ್ಯಾಗ್ ಕೊಂಡಿ ಸಹ ಲಗತ್ತಿಸಲಾಗಿದೆ.

ಇತರ ವೈಶಿಷ್ಟ್ಯ - ಆಕ್ಸೆಸ್

ಇತರ ವೈಶಿಷ್ಟ್ಯ - ಆಕ್ಸೆಸ್

ಇಂಧನ ಟ್ಯಾಂಕ್ - 6.0 ಲೀಟರ್

ರಿಯರ್ ಬ್ರೇಕ್ ಲಿವರ್‌ಗೆ ಬ್ರೇಕ್ ಲಾಕ್ ವ್ಯವಸ್ಥೆ

ಅದೇ ರೀತಿ ಆಕ್ಟಿವಾ ತರಹನೇ ಕಿ ತೂತುಗಾಗಿ ಸ್ಲೈಡಿಂಗ್ ಕವರ್ ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ ಅಂಡರ್ ಸೀಟ್ ಸ್ಟೋರೆಜ್ ಅನ್‌ಲಾಕ್ ಮಾಡಲು ಇಗ್ನಿಷನ್ ಕಿ ಸ್ಲಾಟ್ ಸಹ ಲಭ್ಯವಿರಲಿದೆ.

ಇತರ ವೈಶಿಷ್ಟ್ಯ - ಮಹೀಂದ್ರ ಡ್ಯೂರೊ ಡಿಝಡ್

ಇತರ ವೈಶಿಷ್ಟ್ಯ - ಮಹೀಂದ್ರ ಡ್ಯೂರೊ ಡಿಝಡ್

ಇನ್ಸ್ಟ್ರುಮೆಂಟ್ ಪ್ಯಾನೆಲ್: ಸರಳವಾಗಿ ಸ್ಪೀಡೋಮೀಟರ್ ಹಾಗೂ ಫ್ಯೂಯಲ್ ಲೆವೆಲ್ ಇಂಡಿಕೇಟರ್ ಲಗತ್ತಿಸಲಾಗಿದೆ. ಹಾಗಿದ್ದರೂ ಹೆಚ್ಚು ವಿಸ್ತಾರವಾಗಿದೆ. ಅಂತೆಯೇ ಹೆಡ್ ಲ್ಯಾಂಪ್ ಇಂಡಿಕೇಟರ್ ಹಾಗೂ ಟರ್ನ್ ಇಂಡಿಕೇಟರ್ ಲ್ಯಾಂಪ್‌ಗಳು ಇನ್ಸ್ಟ್ರುಮೆಂಟ್ ಕ್ಲಸ್ಟರನ್ನು ಪೂರ್ಣಗೊಳಿಸಲಿದೆ.

ಸ್ಟೋರೆಜ್: ಮಹೀಂದ್ರ ಡ್ಯೂರೊ ಡಿಝಡ್ ಸಹ 20 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಪಡೆದುಕೊಂಡಿದೆ. ಇದರ ಜತೆಗೆ ಇತರೆರಡು ಮಾದರಿಗಳಿಗಿಂತ ಭಿನ್ನವಾಗಿ ಡ್ಯೂರೊದಲ್ಲಿ ಫ್ರಂಟ್ ಗ್ಲೋವ್ ಬಾಕ್ಸ್ ಸ್ಟಾಂಡರ್ಡ್ ಫೀಚರ್ ಆಗಿ ದೊರಕಲಿದೆ.

ಇಂಧನ ಟ್ಯಾಂಕ್ - 6.0 ಲೀಟರ್

ರಿಯರ್ ಬ್ರೇಕ್ ಲಿವರ್‌ಗೆ ಬ್ರೇಕ್ ಲಾಕ್ ವ್ಯವಸ್ಥೆ.

ನಿಮ್ಮ ಮಾಹಿತಿಗಾಗಿ, (ಚಿತ್ರದಲ್ಲಿ)

ನಿಮ್ಮ ಮಾಹಿತಿಗಾಗಿ, (ಚಿತ್ರದಲ್ಲಿ)

ಹೋಲಿಕೆ- ವೈಶಿಷ್ಟ್ಯ, ಆಯಾಮ ಹಾಗೂ ದರ

ಹಣದ ಮೌಲ್ಯ, ಅಂತಿಮ ತೀರ್ಪು

ಹಣದ ಮೌಲ್ಯ, ಅಂತಿಮ ತೀರ್ಪು

ಮೊದಲ ನೋಟದಲ್ಲೇ ಹೋಂಡಾ ಆಕ್ಟಿವಾದ 125 ಸ್ಟೈಲಿಷ್ ಲುಕ್ ಹಾಗೂ ಆಧುನಿಕತೆ, ಸ್ಪರ್ಧೆಯಲ್ಲಿ ಇತರೆರಡು ಆವೃತ್ತಿಗಳನ್ನು ಹಿಂದಕ್ಕೆ ತಳ್ಳಲಿದೆ. ಇಲ್ಲಿ ಸತ್ಯಾಂಶ ಏನೆಂದರೆ ಇದರ ಗಟ್ಟಿಮುಟ್ಟಾದ ಲೋಹದ ದೇಹ ವಿನ್ಯಾಸ ತುಂಬಾನೇ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್ ವಿಚಾರಕ್ಕೂ ಬಂದಾಗಲೂ ತನ್ನ ಪ್ರತಿಸ್ಪರ್ಧಿಗಳನ್ನು ಆಕ್ಟಿವಾ ಹಿಂದಕ್ಕೆ ತಳ್ಳಿವೆ.

ಹಾಗೆಯೇ ಆಕ್ಟಿವಾ 125, ಹೆಚ್ಚು ಶಕ್ತಿಶಾಲಿ ಕೂಡಾ ಆಗಿದೆ. ಆದರೆ ಮೈಲೇಜ್ ವಿಚಾರಕ್ಕೆ ಬಂದಾಗ ಎಲ್ಲ ಮೂರು ಆವೃತ್ತಿಗಳು ಸಮಾನತೆಯನ್ನು ಹೊಂದಿದ್ದರೂ, ರಸ್ತೆ ಪರಿಸ್ಥಿತಿಗಾನುಸಾರವಾಗಿ ವಿಭಿನ್ನತೆ ಕಂಡುಬರಲಿದೆ.

ಇದರ ಜತೆಗೆ ಐಚ್ಛಿಕ ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ, ಆಕ್ಟಿವಾಗೆ ಅತ್ಯುತ್ತಮ ಬ್ರೇಕಿಂಗ್ ವ್ಯವಸ್ಥೆಯನ್ನು ಪ್ರದಾನ ಮಾಡಲಿದೆ.

ಇಲ್ಲಿ ಗಮನಾರ್ಹವೆಂದರೆ, ಆಕ್ಟಿವಾ 125 ಹಾಗೂ ಆಕ್ಸೆಸ್‌ಗೆ ಹೋಲಿಸಿದಾಗ ಸ್ಪರ್ಧೆಯಲ್ಲಿ ಡ್ಯೂರೊ ತುಂಬಾನೆ ಹಿಂದೆ ಬಿದ್ದಿದೆ. ಹಾಗಿದ್ದರೂ ಎಂಜಿನ್ ಮಾನದಂಡ, ಸ್ಟೋರೆಜ್ (ಸ್ಟಾಂಡರ್ಡ್ ಗ್ಲೋವ್ ಬಾಕ್ಸ್) ವಿಚಾರಕ್ಕೆ ಬಂದಾಗ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಹಣದ ಮೌಲ್ಯ, ಅಂತಿಮ ತೀರ್ಪು

ಹಣದ ಮೌಲ್ಯ, ಅಂತಿಮ ತೀರ್ಪು

ನಿರೀಕ್ಷೆಯಂತೆಯೇ ಹೋಂಡಾ ಆಕ್ಟಿವಾ 125 ವಿಜೇತರಾಗಿ ಘೋಷಿಸಲ್ಪಟ್ಟರೂ, ಈ ಎಲ್ಲ ಪ್ರೀಮಿಯಂ ಸೌಲಭ್ಯಗಳಿಗಾಗಿ ನೀವು ಹೆಚ್ಚು ಬೆಲೆಯನ್ನು ಪಾವತಿಸಬೇಕಾಗಿದೆ. ಇಲ್ಲಿ ಆಕ್ಸೆಸ್ 5000 ರು.ಗಳಷ್ಟು ಕಡಿಮೆ ದರದಲ್ಲಿ ಲಭ್ಯವಾದರೆ, ಹೋಂಡಾ ಹಾಗೂ ಮಹೀಂದ್ರ ಸ್ಕೂಟರುಗಳ ನಡುವಣ ವ್ಯತ್ಯಾಸ ಸರಿ ಸುಮಾರು 10 ಸಾವಿರು ರು.ಗಳಿಷ್ಟಿದೆ. ಹಾಗೊಂದು ವೇಳೆ ನೀವು ಆಕ್ಟಿವಾದಲ್ಲಿ ಡಿಸ್ಕ್ ಬ್ರೇಕ್ ಬಯಸಿದ್ದಲ್ಲಿ ವ್ಯತ್ಯಾಸ ಇನ್ನು ಹೆಚ್ಚಾಗಲಿದೆ. ಇಲ್ಲಿ ಆಕ್ಟಿವಾ ದೆಹಲಿ ಎಕ್ಸ್ ಶೋ ರೂಂ ದರ 58,156 ರು.ಗಳಾಗಿವೆ.

ಅಂತಿಮವಾಗಿ ದರ ಒಂದು ಸಮಸ್ಯೆಯಲ್ಲದಿದ್ದಲ್ಲಿ ನಿಮಗೆ ಆಕ್ಟಿವಾ ನೈಜ ಅನುಭವ ನೀಡಲಿದೆ. ಹಾಗೆಯೇ ಬಜೆಟ್ ಬಗ್ಗೆ ಗಮನಕೊಡುವುದಾದ್ದಲ್ಲಿ ಡ್ಯೂರೊ ಈ ಸೆಗ್ಮೆಂಟ್‌ನಲ್ಲಿ ಉಪಯುಕ್ತವೆನಿಸಲಿದೆ. ಅದೇ ಹೊತ್ತಿಗೆ ಸುಜುಕಿ ಆಕ್ಸೆಸ್, ದರ ಹಾಗೂ ವೈಶಿಷ್ಟ್ಯಗಳ ವಿಚಾರದಲ್ಲಿ ಇವೆರಡ ನಡುವೆ ಗುರುತಿಸಿಕೊಂಡಿದೆ. ಆದರೂ ಗರಿಷ್ಠ ವೈಶಿಷ್ಟ್ಯಗಳೊಂದಿಗೆ ಕೂಡಿದ ಆಕ್ಟಿವಾ 125 ತಮ್ಮದಾಗಿಸಲು ಮೇಲೆ ಸೂಚಿಸಲಾದ 5,000 ರು.ಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಲಾರರು ಎಂಬುದು ನಮ್ಮ ನಂಬಿಕೆ.

ಇದೀಗ ಹೋಂಡಾ ಆಕ್ಟಿವಾ 125, ಸುಜುಕಿ ಆಕ್ಸೆಸ್ ಹಾಗೂ ಮಹೀಂದ್ರ ಡ್ಯೂರೊ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...

Most Read Articles

Kannada
English summary
The natural question that now arises is how the new Activa compares to the two other 125cc scooters from Suzuki and Mahindra? The following is a brief comparison of price, mileage, feature and specification between the three.
Story first published: Monday, May 5, 2014, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X