ಶ್ರೇಷ್ಠ 125 ಸಿಸಿ ಸ್ಕೂಟರ್‌ಗಳ ಮೈಲೇಜ್, ವೈಶಿಷ್ಟ್ಯ ಹೋಲಿಕೆ

Written By:

ದೇಶದ ಸ್ಕೂಟರ್ ಮಾರುಕಟ್ಟೆ, ಬೈಕ್‌ಗಳನ್ನು ಮೀರಿಸುವ ರೀತಿಯಲ್ಲಿ ಬೆಳೆದು ಬರುತ್ತಿದೆ. ಇದರ ಫಲವಾಗಿಯೇ ಗ್ರಾಹಕ ಸ್ನೇಹಿ ಸ್ಕೂಟರ್‌ಗಳ ಪರಿಚಯವಾಗುತ್ತಿದೆ. ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಪ್ರತಿಯೊಂದು ವಿಭಾಗದಲ್ಲೂ ತನ್ನದೇ ಆದ ವಿಶಿಷ್ಟತೆಗಳನ್ನು ಹೊಂದಿರುವ ನೂತನ ಸ್ಕೂಟರುಗಳನ್ನು ಪರಿಚಯಿಸುತ್ತಿದೆ.

ಆಕ್ಟಿವಾ 125 vs ಆಕ್ಸೆಸ್ vs ಡ್ಯೂರೊ ಡಿಝಡ್; ಯಾವುದು ಶ್ರೇಷ್ಠ ಸ್ಕೂಟರ್?

125 ಸಿಸಿ ವಿಭಾಗವನ್ನು ನೋಡಿದರೆ ಇತ್ತೀಚೆಗಷ್ಟೇ ಆಕ್ಟಿವಾ 125 ಲಾಂಚ್ ಮಾಡಲಾಗಿತ್ತು. ಈ ಸಂಬಂಧ ನಾವು ಆಕ್ಟಿವಾ vs ಆಕ್ಸೆಸ್ vs ಡ್ಯೂರೊ ಡಿಝಡ್ ಎಂಬ ವಿಶೇಷ ಲೇಖನವೊಂದನ್ನು ಬರೆದಿದ್ದೆವು. ಇದೀಗ ಈ ಪಟ್ಟಿಗೆ ಇನ್ನು ಹೆಚ್ಚಿನ ಆವೃತ್ತಿಗಳನ್ನು ಸೇರಿಸಲಾಗಿದ್ದು, ಪ್ರಮುಖವಾಗಿಯೂ ಮೈಲೇಜ್, ಎಂಜಿನ್ ಹಾಗೂ ಯಾಕೆ ಖರೀದಿಸಬೇಕು ಎಂಬುದರ ಬಗ್ಗೆ ಮಹತ್ವದ ವಿವರಗಳನ್ನು ಹಂಚಿಕೊಳ್ಳಲಿದ್ದೇವೆ.

ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ದೇಶದ 125 ಸಿಸಿ ಸ್ಕೂಟರ್‌ಗಳ ಮೈಲೇಜ್, ವೈಶಿಷ್ಟ್ಯ ಹೋಲಿಕೆ

ಇಲ್ಲಿ ಆಕ್ಟಿವಾ 125, ಸುಜುಕಿ ಆಕ್ಸೆಸ್, ಸುಜುಕಿ ಸ್ವಿಶ್, ಮಹೀಂದ್ರ ಡ್ಯೂರೊ ಡಿಝಡ್, ವೆಸ್ಪಾ ಎಲ್‌ಎಕ್ಸ್ ಹಾಗೂ ವೆಸ್ಪಾ ಎಸ್ ಸ್ಕೂಟರ್‌ಗಳ ಮೈಲೇಜ್, ಎಂಜಿನ್, ವೈಶಿಷ್ಟ್ಯಗಳ ಬಗೆಗಿನ ಮಹತ್ವದ ವಿವರಗಳನ್ನು ಕೊಡಲಾಗಿದೆ. ಜೊತೆಗೆ ಈ ಎಲ್ಲ ಸ್ಕೂಟರ್‌ಗಳು ಹೇಗೆ ಭಿನ್ನವಾಗಿದೆ ಮತ್ತು ಯಾಕೆ ಖರೀದಿಸಬೇಕು ಎಂಬುದರ ಕುರಿತು ವಿವರಣೆ ನೀಡುವ ಪ್ರಯತ್ನ ಮಾಡಲಾಗಿದೆ. ಇದಕ್ಕಾಗಿ ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ.

ಆಕ್ಟಿವಾ 125

ಆಕ್ಟಿವಾ 125

125 ಸಿಸಿ ಸ್ಕೂಟರ್‌ಗಳ ಪೈಕಿ ತಾಜಾ ವಿನ್ಯಾಸ ಪಡೆದುಕೊಂದಿರುವ ಆಕ್ಟಿವಾ 125 ಅತ್ಯುತ್ತಮ ವಿನ್ಯಾಸ ಗುಣಮಟ್ಟವನ್ನು ಕಾಪಾಡಿಕೊಂಡಿದೆ.

ಯಾಕೆ ಖರೀದಿಸಬೇಕು?

ವಿನ್ಯಾಸ, ಲುಕ್, ಉಪಯುಕ್ತ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೆಟಲ್ ಬಾಡಿ, ಪವರ್‌ಫುಲ್ ಮತ್ತು ಪರಿಷ್ಕೃತ ಎಂಜಿನ್, ಡಿಸ್ಕ್ ಬ್ರೇಕ್ (ಐಚ್ಛಿಕ).

ಆಕ್ಟಿವಾ 125

ಆಕ್ಟಿವಾ 125

ಮೈಲೇಜ್

ಹೋಂಡಾ ಪ್ರಕಾರ ನೂತನ ಆಕ್ಟಿವಾ 125, ಪ್ರತಿ ಲೀಟರ್‌ಗೆ 59 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗಿದ್ದರೂ ನೈಜ ಪರಿಸ್ಥಿತಿಯಲ್ಲಿ ನಗರದಲ್ಲಿ 50 ಕೀ.ಮೀ. ವರೆಗೂ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಇಂಧನ ಟ್ಯಾಂಕ್: 5.3 ಲೀಟರ್

ಎಂಜಿನ್: 124.9 ಸಿಸಿ, 8.6 ಅಶ್ವಶಕ್ತಿ (10.12 ಎನ್‌ಎಂ ಟಾರ್ಕ್)

ಸೀಟು ಕೆಳಗಡೆ ಸ್ಟೋರೆಜ್: 18 ಲೀಟರ್

ಬೆಲೆ: 57,531 ರು. , 63.645 ರು. (ಡಿಸ್ಕ್ ಬ್ರೇಕ್), ಆನ್ ರೋಡ್ ದೆಹಲಿ

ಸುಜುಕಿ ಆಕ್ಸೆಸ್

ಸುಜುಕಿ ಆಕ್ಸೆಸ್

ಇದುವರೆಗೆ 125 ಸಿಸಿ ವಿಭಾಗದಲ್ಲಿ ಅತ್ಯುತ್ತಮ ಮಾರಾಟದ ಸ್ಕೂಟರ್‌ ಎಂಬ ಹೆಗ್ಗಳಿಕೆಗೆ ಸುಜುಕಿ ಆಕ್ಸೆಸ್ ಪಾತ್ರವಾಗಿತ್ತು. ಇದು ಫ್ಯಾಮಿಲಿ ಸ್ಕೂಟರ್ ಪಟ್ಟ ಉಳಿಸಿಕೊಂಡಿದೆ. ಈ ಮೊದಲೇ ತಿಳಿಸಿರುವಂತೆಯೇ ಸರಳ ವಿನ್ಯಾಸ ಕಾಪಾಡಿಕೊಂಡಿದೆ.

ಯಾಕೆ ಖರೀದಿಸಬೇಕು?

ಪರಿಷ್ಕೃತ ಹಾಗೂ ಶಕ್ತಿಶಾಲಿ ಎಂಜಿನ್. ನಿಮ್ಮಲ್ಲಿ ಹೆಚ್ಚು ದುಡ್ಡಿಲ್ಲದಿದ್ದರೆ ಆಕ್ಟಿವಾಗೆ ಸಮಾನವಾದ ನಿರ್ವಹಣೆ ನೀಡಬಲ್ಲ ಆಕ್ಸೆಸ್ ಸ್ಕೂಟರನ್ನು ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಆದರೆ ಆಕ್ಟಿವಾದಲ್ಲಿರುವ ಮೆಟಲ್ ಬಾಡಿ ಹಾಗೂ ಸ್ಟೈಲಿಷ್ ಲುಕ್‌‌ನ ಅಭಾವ ಕಾಡಲಿದೆ.

ಸುಜುಕಿ ಆಕ್ಸೆಸ್

ಸುಜುಕಿ ಆಕ್ಸೆಸ್

ಮೈಲೇಜ್: ಸ್ಟಾಂಡರ್ಡ್ ರಸ್ತೆ ಪರೀಕ್ಷೆಯಲ್ಲಿ ಆಕ್ಸೆಸ್ ಪ್ರತಿ ಲೀಟರ್‌ಗೆ 57 ಕೀ.ಮೀ. ಮೈಲೇಜ್ ನೀಡುತ್ತಿದೆ. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ 45-50 ಕೀ.ಮೀ.ಗಳಷ್ಟು ಮೈಲೇಜ್ ನೀಡಬಲ್ಲದು.

ಇಂಧನ ಟ್ಯಾಂಕ್: 6.0 ಲೀಟರ್

ಎಂಜಿನ್: 124 ಸಿಸಿ, ಸಿಂಗಲ್ ಸಿಲಿಂಡರ್ (8.58 ಅಶ್ವಶಕ್ತಿ, 9.8 ಎನ್‌ಎಂ ಟಾರ್ಕ್)

ಸೀಟು ಕೆಳಗಡೆ ಸ್ಟೋರೆಜ್: 20 ಲೀಟರ್

ಭಾರ: 112 ಕೆ.ಜಿ

ಬೆಲೆ(ಆನ್ ರೋಡ್ ದೆಹಲಿ): ರು. 51,611, 53.350 (ವಿಶೇಷ ಆವೃತ್ತಿ)

ಸುಜುಕಿ ಸ್ವಿಶ್

ಸುಜುಕಿ ಸ್ವಿಶ್

ಹೆಚ್ಚು ಭಾರದ ಆಕ್ಸೆಸ್ ಬಯಸದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸ್ವಿಶ್ ಆವೃತ್ತಿಯನ್ನು ತಯಾರಿಸಲಾಗಿದೆ.

ಯಾಕೆ ಖರೀದಿಸಬೇಕು?

ತಾಂತ್ರಿಕವಾಗಿಯೂ ಆಕ್ಸೆಸ್‌ಗೆ ಸಮಾನವಾಗಿದ್ದರೂ ಕಡಿಮೆ ದರದಲ್ಲಿ ಹೊಳಪಾಗಿರುವ ವಿನ್ಯಾಸ ಪ್ರದಾನ ಮಾಡುತ್ತದೆ.

ಸುಜುಕಿ ಸ್ವಿಶ್

ಸುಜುಕಿ ಸ್ವಿಶ್

ಮೈಲೇಜ್ : ಆಕ್ಸೆಸ್‌ಗೆ ಸಮಾನ

ಇಂಧನ ಟ್ಯಾಂಕ್: 6.0 ಲೀಟರ್

ಎಂಜಿನ್: 124 ಸಿಸಿ, ಸಿಂಗಲ್ ಸಿಲಿಂಡರ್ (8.58 ಅಶ್ವಶಕ್ತಿ, 9.8 ಎನ್‌ಎಂ ಟಾರ್ಕ್)

ಸೀಟು ಕೆಳಗಡೆ ಸ್ಟೋರೆಜ್: 20 ಲೀಟರ್

ಭಾರ: 110 ಕೆ.ಜಿ

ಬೆಲೆ: ರು. 52,671 (ಆನ್ ರೋಡ್ ದೆಹಲಿ)

ಮಹೀಂದ್ರ ಡ್ಯೂರೊ ಡಿಝಡ್

ಮಹೀಂದ್ರ ಡ್ಯೂರೊ ಡಿಝಡ್

ಹಲವಾರು ಕಾರಣಗಳಿಂದಾಗಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಮಹೀಂದ್ರ ಡ್ಯೂರೊ ಡಿಝಡ್ ಎಡವಿದೆ. ಇದು ಕಡಿಮೆ ಶಕ್ತಿಶಾಲಿ ಎಂಜಿನ್ ಹಾಗೂ ಇಂಧನ ದಕ್ಷತೆಯನ್ನು ಹೊಂದಿರುವುದು ಹಿನ್ನಡೆಗೆ ಕಾರಣವಾಗಿದೆ.

ಯಾಕೆ ಖರೀದಿಸಬೇಕು?

ಮಹೀಂದ್ರ ಡ್ಯೂರೊ ಡಿಝಡ್ ಖರೀದಿಸಬೇಕಾಗಿರುವ ಏಕಮಾತ್ರ ಕಾರಣವೆಂದರೆ ಅದುವೇ ಬೆಲೆ. ನಿಮಗೆ 110ಸಿಸಿ ದರದಲ್ಲಿ 125 ಸಿಸಿ ಸ್ಕೂಟರ್ ಸಿಗುವುದೆಂದರೆ ಊಹಿಸಲು ಸಾಧ್ಯವೇ? ಇದನ್ನು ಡ್ಯೂರೊ ಮೂಲಕ ಮಹೀಂದ್ರ ಸಾಬೀತುಪಡಿಸಿದೆ.

ಮಹೀಂದ್ರ ಡ್ಯೂರೊ ಡಿಝಡ್

ಮಹೀಂದ್ರ ಡ್ಯೂರೊ ಡಿಝಡ್

ಮೈಲೇಜ್ : ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಮಹೀಂದ್ರ ಡ್ಯೂರೊ ಪ್ರತಿ ಲೀಟರ್‌ಗೆ 56.25 ಕೀ.ಮೀ. ಮೈಲೇಜ್ ನೀಡಲಿದೆ. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ 45ರಿಂದ 50 ಕೀ.ಮೀ.ಗಳಷ್ಟು ಮೈಲೇಜ್ ನಿರೀಕ್ಷಿಸಬಹುದು.

ಇಂಧನ ಟ್ಯಾಂಕ್: 6.5 ಲೀಟರ್

ಎಂಜಿನ್: 124.6 ಸಿಸಿ, ಸಿಂಗಲ್ ಸಿಲಿಂಡರ್ (8 ಅಶ್ವಶಕ್ತಿ, 9 ಎನ್‌ಎಂ ಟಾರ್ಕ್)

ಸೀಟು ಕೆಳಗಡೆ ಸ್ಟೋರೆಜ್: 20 ಲೀಟರ್ ಜತೆಗೆ ಸ್ಟಾಂಡರ್ಡ್ ಫ್ರಂಟ್ ಗ್ಲೋವ್ ಬಾಕ್ಸ್

ಭಾರ: 114 ಕೆ.ಜಿ

ಬೆಲೆ: ರು. 43,788 (ಎಕ್ಸ್ ಶೋ ರೂಂ ದೆಹಲಿ)

ವೆಸ್ಪಾ ಎಲ್‌ಎಕ್ಸ್ 125

ವೆಸ್ಪಾ ಎಲ್‌ಎಕ್ಸ್ 125

ವೆಸ್ಪಾ ಪ್ರವೇಶದೊಂದಿಗೆ 125 ಸಿಸಿ ಸ್ಕೂಟರ್‌ನ ಶೈಲಿಯೇ ಬದಲಾಗಿದೆ. ಇದು ನಿಜಕ್ಕೂ ಪ್ರೀಮಿಯಂ ಜೀವನ ಶೈಲಿಯ ಸ್ಕೂಟರ್ ಅಗಿದೆ. ಇದು ನಿಮಗೆ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ.

ಯಾಕೆ ಖರೀದಿಸಬೇಕು?

ಕೈಗೆಟಕುವ ದರದಲ್ಲಿ ಸಿಗುವ ವೆಸ್ಪಾ ಸ್ಕೂಟರ್, ಕ್ಲಾಸಿಕ್ ವಿನ್ಯಾಸ, ಶಕ್ತಿಯುತ ಮೆಟ್ಯಾಲಿಕ್ ಮೊನೊಕಾಕ್ ಬಾಡಿ, ಆರಾಮದಾಯಕ ಸೀಟು ಜೊತೆಗೆ ಶಕ್ತಿಶಾಲಿ 125 ಸಿಸಿ ಎಂಜಿನ್ ಮತ್ತು ಮೈಲೇಜ್‌ನಲ್ಲಿ ಯಾವುದೇ ರಾಜಿಗೆ ತಯಾರಾಗಿಲ್ಲ.

ವೆಸ್ಪಾ ಎಲ್‌ಎಕ್ಸ್ 125

ವೆಸ್ಪಾ ಎಲ್‌ಎಕ್ಸ್ 125

ಮೈಲೇಜ್ : ವೆಸ್ಪಾ ಪ್ರಕಾರ ಎಲ್‌ಎಕ್ಸ್125 ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ 55 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಧ್ಯತೆಯಿದೆ.

ಇಂಧನ ಟ್ಯಾಂಕ್: 8.5 ಲೀಟರ್

ಎಂಜಿನ್: 125 ಸಿಸಿ, ಸಿಂಗಲ್ ಸಿಲಿಂಡರ್ (10.06 ಅಶ್ವಶಕ್ತಿ, 10.60 ಎನ್‌ಎಂ ಟಾರ್ಕ್)

ಸೀಟು ಕೆಳಗಡೆ ಸ್ಟೋರೆಜ್: 16.5 ಲೀಟರ್

ಭಾರ: 114 ಕೆ.ಜಿ

ಬೆಲೆ: ರು. 56,996 (ಎಕ್ಸ್ ಶೋ ರೂಂ ದೆಹಲಿ)

ವೆಸ್ಪಾ ಎಸ್

ವೆಸ್ಪಾ ಎಸ್

ಇದು ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸ್ಕೂಟರ್ ಆಗಿರುತ್ತದೆ. ನೀವು ನೈಜ ಸ್ಕೂಟರ್ ಪ್ರೇಮಿಯಾದ್ದಲ್ಲಿ ವೆಸ್ಪಾ ಎಸ್ ನಿಮ್ಮ ಬಯಕೆಗಳನ್ನು ಈಡೇರಿಸಲಿದೆ.

ಯಾಕೆ ಖರೀದಿಸಬೇಕು?

ಸ್ಟಾಂಡರ್ಡ್ ಡಿಸ್ಕ್ ಬ್ರೇಕ್, ಕ್ರೀಡಾತ್ಮಕ ಹೆಡ್‌ಲ್ಯಾಂಪ್, ಕ್ಲಾಸಿಕ್ ವಿನ್ಯಾಸ, ಡಿಜಿಟಲ್ ಇನ್ಸ್ಟ್ರುಮೆಂಟ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಬಹುದಾಗಿದೆ.

ವೆಸ್ಪಾ ಎಸ್

ವೆಸ್ಪಾ ಎಸ್

ಮೈಲೇಜ್ : ಎಲ್‌ಎಕ್ಸ್/ವಿಎಕ್ಸ್ 125ಗೆ ಸಮಾನವಾದ ಮೈಲೇಜ್

ಇಂಧನ ಟ್ಯಾಂಕ್: 8.5 ಲೀಟರ್

ಎಂಜಿನ್: 125 ಸಿಸಿ, ಸಿಂಗಲ್ ಸಿಲಿಂಡರ್ (10.06 ಅಶ್ವಶಕ್ತಿ, 10.60 ಎನ್‌ಎಂ ಟಾರ್ಕ್)

ಸೀಟು ಕೆಳಗಡೆ ಸ್ಟೋರೆಜ್: 16.5 ಲೀಟರ್

ಭಾರ: 114 ಕೆ.ಜಿ

ಬೆಲೆ: ರು. 75.424 (ಎಕ್ಸ್ ಶೋ ರೂಂ ದೆಹಲಿ)

ದೇಶದ 125 ಸಿಸಿ ಸ್ಕೂಟರ್‌ಗಳ ಮೈಲೇಜ್, ವೈಶಿಷ್ಟ್ಯ ಹೋಲಿಕೆ

ಇದೀಗ ಮೇಲೆ ತಿಳಿಸಲಾದ 125 ಸಿಸಿ ಸ್ಕೂಟರ್‌ಗಳ ಪೈಕಿ ನಿಮ್ಮ ನೆಚ್ಚಿನ ಸ್ಕೂಟರ್ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಿರಿ...

English summary
The Indian scooter scene is bustling with activity. Realising the appetite of buyers for these convenient automatic scooter, manufacturers are coming out with new models constantly, each with their own unique offering.
Story first published: Friday, May 9, 2014, 10:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark