ಹೋಂಡಾ ಸಿಬಿ ಹಾರ್ನೆಟ್ 160ಆರ್ vs ಸುಜುಕಿ ಜಿಕ್ಸರ್

By Nagaraja

ಇಂದಿನ ಯುವ ಜನಾಂಗ ಪ್ರಯಾಣಿಕ ಬೈಕ್ ಗಳಿಂದ ನಿಧಾನವಾಗಿ ನಿರ್ವಹಣಾ ಬೈಕ್ ಗಳತ್ತ ವಾಲುತ್ತಿದ್ದಾರೆ. ಇದನ್ನು ಮನಗಂಡಿರುವ ವಾಹನ ತಯಾರಿಕ ಸಂಸ್ಥೆಗಳು 150 ಅಥವಾ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಬೈಕ್ ಗಳ ಬಿಡುಗಡೆಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದಾರೆ.

Also Read: ಕಡಿಮೆ ಎತ್ತರದ ಸವಾರರಿಗಾಗಿ ಆಕರ್ಷಕ ಸ್ಕೂಟರ್ ಗಳು ಮುಂದಕ್ಕೆ ಓದಿ

ಈ ವಿಭಾಗದಲ್ಲಿ ಸುಜುಕಿ ಈಗಾಗಲೇ ಆಕರ್ಷಕ ಜಿಕ್ಸರ್ ಬೈಕ್ ಬಿಡುಗಡೆಗೊಳಿಸಿದ್ದರೆ ಹೋಂಡಾ ಸಿಬಿ ಹಾರ್ನೆಟ್ 160ಆರ್ ಹೊಸ ಸೇರ್ಪಡೆಯಾಗಿದೆ. ಇದರೊಂದಿಗೆ ಒಂದು ಕಾಲದಲ್ಲಿ ಯಮಹಾ ಮಾತ್ರ ಸದ್ದು ಮಾಡುತ್ತಿದ್ದು 150 ಸಿಸಿ ಪ್ಲಸ್ ವಿಭಾಗದಲ್ಲೀಗ ಹೊಸ ಹೊಸ ಬೈಕ್ ಗಳು ರಾರಾಜಿಸತೊಡಗಿದೆ. ಪ್ರಸ್ತುತ ಲೇಖನದಲ್ಲಿ ಸುಜುಕಿ ಜಿಕ್ಸರ್ ಹಾಗೂ ನೂತನ ಹೋಂಡಾ ಸಿಬಿ ಹಾರ್ನೆಟ್ 160ಆರ್ ನಡುವೆ ಬೆಲೆ, ಎಂಜಿನ್, ವಿನ್ಯಾಸ, ನಿರ್ವಹಣೆ, ವೈಶಿಷ್ಟ್ಯ ಹಾಗೂ ವಿಶಿಷ್ಟತೆಗಳ ಬಗ್ಗೆ ಹೋಲಿಕೆ ಮಾಡುವ ಪ್ರಯತ್ನ ಮಾಡಲಾಗುವುದು.

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಬೆಲೆ ಮಾಹಿತಿ (ಆನ್ ರೋಡ್ ಬೆಂಗಳೂರು)

ಹೋಂಡಾ ಸಿಬಿ ಹಾರ್ನೆಟ್ 160ಆರ್: ಸ್ಟ್ಯಾಂಡರ್ಡ್ 94,064 ರು. | ಸಿಬಿಎಸ್: 99,217 ರು.

ಸುಜುಕಿ ಜಿಕ್ಸರ್: 93359 ರು.

ವಿನ್ಯಾಸ - ಹೋಂಡಾ ಸಿಬಿ ಹಾರ್ನೆಟ್ 160ಆರ್

ವಿನ್ಯಾಸ - ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಸಿಬಿ ಹಾರ್ನೆಟ್ 160ಆರ್ ನಿಖರವಾದ ರೇಖೆ, ಮುಂದುಗಡೆ ಚೊಕ್ಕದಾದ ಫೇರಿಂಗ್, ಮಸಲರ್ ಟ್ಯಾಂಕ್, ಅಗ್ರೊ ಹೆಡ್ ಲ್ಯಾಂಪ್ ಹಾಗೂ ಎಕ್ಸ್ ಆಕಾರದ ಎಲ್‌ಇಡಿ ಟೈಲ್ ಲೈಟ್ ಕಂಡುಬರಲಿದೆ.

ವಿನ್ಯಾಸ - ಸುಜುಕಿ ಜಿಕ್ಸರ್

ವಿನ್ಯಾಸ - ಸುಜುಕಿ ಜಿಕ್ಸರ್

ಆಧುನಿಕ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಆಯ್ಕೆ ಮಾಡುವವರಿಗೆ ಸುಜುಕಿ ಜಿಕ್ಸರ್ ಮನ ಸೆಳೆಯಲಿದೆ. ಸುಜುಕಿ ಕೂಡಾ ಮುಂದುಗಡೆ ಸಣ್ಣದಾದ ಫೇರಿಂಗ್ ಪಡೆದುಕೊಂಡಿದೆ.

ವಿಶಿಷ್ಟತೆ ಕಾಪಾಡುವ ಎಕ್ಸಾಸ್ಟ್ ಹಾಗೂ ಮುಂದುಗಡೆ ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಲಿದೆ.

ಎಂಜಿನ್ ತಾಂತ್ರಿಕತೆ - ಹೋಂಡಾ ಸಿಬಿ ಹಾರ್ನೆಟ್ 160ಆರ್

ಎಂಜಿನ್ ತಾಂತ್ರಿಕತೆ - ಹೋಂಡಾ ಸಿಬಿ ಹಾರ್ನೆಟ್ 160ಆರ್

ಎಂಜಿನ್ ಸಾಮರ್ಥ್ಯ: 162.71 ಸಿಸಿ,

ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್,

15.6 ಅಶ್ವಶಕ್ತಿ, 14.7 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: ಫೈವ್ ಸ್ಪೀಡ್

ಮೈಲೇಜ್: 58.9 ಕೀ.ಮೀ.

ಎಂಜಿನ್ ತಾಂತ್ರಿಕತೆ - ಸುಜುಕಿ ಜಿಕ್ಸರ್

ಎಂಜಿನ್ ತಾಂತ್ರಿಕತೆ - ಸುಜುಕಿ ಜಿಕ್ಸರ್

ಎಂಜಿನ್ ಸಾಮರ್ಥ್ಯ: 154.9 ಸಿಸಿ,

ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್,

15 ಅಶ್ವಶಕ್ತಿ, 14 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: ಫೈವ್ ಸ್ಪೀಡ್

ಮೈಲೇಜ್: 45 ಕೀ.ಮೀ.

ಭಾರ, ಇಂಧನ ಟ್ಯಾಂಕ್

ಭಾರ, ಇಂಧನ ಟ್ಯಾಂಕ್

ಜಿಕ್ಸರ್: 135 ಕೆ.ಜಿ/12 ಲೀಟರ್

ಹಾರ್ನೆಟ್: 140 ಕೆ.ಜಿ/12 ಲೀಟರ್

ವೈಶಿಷ್ಟ್ಯ - ಹಾರ್ನೆಟ್

ವೈಶಿಷ್ಟ್ಯ - ಹಾರ್ನೆಟ್

  • ಸಂಪೂರ್ಣ ಡಿಜಿಟಲ್ ಮೀಟರ್,
  • ಅಗ್ರೊ ಹೆಡ್ ಲ್ಯಾಂಪ್,
  • ಡ್ಯುಯಲ್ ಪೆಡಲ್ ಡಿಸ್ಕ್ ಬ್ರೇಕ್,
  • 5 ಸ್ಪೋಕ್ ವಿಭಜಿತ ಅಲಾಯ್ ವೀಲ್,
  • ಕಾಂಬಿ ಬ್ರೇಕ್ ಸಿಸ್ಟಂ,
  • ಕಾಂಪಾಕ್ಟ್ ಮಫ್ಲರ್,
  • ಮೊನೊ ಸಸ್ಪೆನ್ಷನ್,
  • ಹಿಂದುಗಡೆ ಅಗಲವಾದ ಚಕ್ರ,
  • ಹೋಂಡಾ ಎಚ್‌ಇಟಿ ತಂತ್ರಗಾರಿಕೆ.
  • ವೈಶಿಷ್ಟ್ಯ - ಜಿಕ್ಸರ್

    ವೈಶಿಷ್ಟ್ಯ - ಜಿಕ್ಸರ್

    ಸಂಪೂರ್ಣ ಡಿಜಿಟಲ್ ಮೀಟರ್ ಕನ್ಸೋಲ್, ಟೆಲೆಸ್ಕಾಪಿಕ್ ಫ್ರಂಟ್ ಸಸ್ಪೆನ್ಷನ್, ಹಿಂದುಗಡೆ ಮೊನೊಶಾಕ್, ಅಲಾಯ್ ವೀಲ್, ಸ್ಟ್ಟಾಂಡರ್ಡ್ ಡಿಸ್ಕ್ ಬ್ರೇಕ್, ಎಲ್‌ಇಡಿ ಟೈಲ್ ಲೈಟ್ ಸೇರಿದಂತೆ ಇತ್ಯಾದಿ ಅನೇಕ ವೈಶಿಷ್ಟ್ಯಗಳು ಕಂಡುಬರಲಿದೆ.

    ಅಂತಿಮ ತೀರ್ಪು

    ಅಂತಿಮ ತೀರ್ಪು

    ಸುಜುಕಿ ಜಿಕ್ಸರ್ ಹಾಗೂ ಹೋಂಡಾ ಸಿಬಿ ಹಾರ್ನೆಟ್ 160ಆರ್ ವಿನ್ಯಾಸದಿಂದ ಹಿಡಿದು ಎಂಜಿನ್, ನಿರ್ವಹಣೆ ಹಾಗೂ ವೈಶಿಷ್ಟ್ಯಗಳಲ್ಲಿ ಒಂದಕ್ಕೊಂದು ಮೀರಿಸುವಂತಹ ವಿಶಿಷ್ಟತೆಗಳನ್ನು ಪಡೆದುಕೊಂಡಿದೆ. ಇಲ್ಲಿ ಗ್ರಾಹಕರ ಅಭಿರುಚಿ ಅತ್ಯಂತ ಮಹತ್ವವೆನಿಸಿಕೊಳ್ಳುತ್ತದೆ. ಮೈಲೇಜ್ ಪರಿಗಣಿಸಿದರೆ ಹೋಂಡಾ ಒಂದು ಹೆಜ್ಜೆ ಮೇಲುಗೈ ಪಡೆದಿರುವುದಂತೂ ನಿಜ. ಇವೆರಡು ಬೈಕ್ ಗಳು ಅತ್ಯುತ್ತಮ ಚಾಲನಾ ಅನುಭವ ಒದಗಿಸುವುದರಿಂದ ನಿಮ್ಮ ದೇಹಕಾಯಕ್ಕೆ ತಕ್ಕಂತೆ ಒಮ್ಮೆ ಟೆಸ್ಟ್ ಡ್ರೈವ್ ಮಾಡ್ಕೊಂಡು ಬೈಕ್ ಆರಿಸಿಕೊಳ್ಳುವುದು ಉತ್ತಮ.

    ಇವನ್ನೂ ಓದಿ

    ಮಹೀಂದ್ರ ಮೊಜೊ ವಿಮರ್ಶೆ; ಬ್ರಾಂಡ್ ಅಲ್ಲ ಗುಣಮಟ್ಟ ಮುಖ್ಯ! ಮುಂದಕ್ಕೆ ಓದಿ

Most Read Articles

Kannada
English summary
Honda CB Hornet 160R vs Suzuki Gixxer Comparo
Story first published: Monday, December 21, 2015, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X