ಬೆಂಗ್ಳೂರಿಗೆ ಕಿಚ್ಚು ಹಚ್ಚಿದ ಹೋಂಡಾ ಟ್ರಿಗರ್ ಭರ್ಜರಿ ಎಂಟ್ರಿ

Posted By:

ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ), ಶನಿವಾರದಂದು ಉದ್ಯಾನ ನಗರಿ ಬೆಂಗಳೂರಿನಲ್ಲಿ ನೂತನ 150 ಸಿಸಿ ಹೋಂಡಾ ಸಿಬಿ ಟ್ರಿಗರ್ ಬೈಕನ್ನು ಲಾಂಚ್ ಮಾಡುವ ಮೂಲಕ ಕರ್ನಾಟಕಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಪ್ರಮುಖ ವೈಶಿಷ್ಟ್ಯಗಳು:

  • ಹೆಚ್ಚಿನ ಫೀಚರ್ಸ್
  • ನೂತನ ತಂತ್ರಜ್ಞಾನ
  • ಪ್ರಯಾಣಿಕ ವಾಹನ
  • ಪ್ರೀಮಿಯಂ ಬೈಕ್
  • ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್)
  • ಎಕ್ಸ್ ಶೋ ರೂಂ ಆರಂಭಿಕ ದರ 70,733 ರು.

ದೇಶದ ದ್ವಿಚಕ್ರ ವಾಹನ ಸೆಗ್ಮೆಂಟ್‌ಗಳಲ್ಲಿ ಶೇಕಡಾ 10ರಷ್ಟು ಭಾಗವನ್ನು 150ರಿಂದ 180 ಸಿಸಿ ಬೈಕ್‌ಗಳು ನಿಯಂತ್ರಿಸುತ್ತಿವೆ. ಈ ಪೈಕಿ 18ರಿಂದ 24 ವರ್ಷದ ಯುವ ಜನತೆ ಹೋಂಡಾ ಬೈಕ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಒಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ತಾಜಾ ಬೈಕಿಗೆ ಸಿಬಿ ಟ್ರಿಗರ್ ಉತ್ತಮ ಉದಾಹರಣೆಯಾಗಿರಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಮೈಲೇಜ್, ಕಲರ್, ವೆರಿಯಂಟ್, ದರ ಹಾಗೂ ಹೆಚ್ಚಿನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಒಟ್ಟು 3 ವೆರಿಯಂಟ್‌ಗಳಲ್ಲಿ ಸಿಬಿ ಟ್ರಿಗರ್ ಆಗಮನ

  • ಸ್ಟಾಂಡರ್ಡ್: ಡಿಸ್ಕ್ ಬ್ರೇಕ್ (ಫ್ರಂಟ್), ಡ್ರಮ್ ಬ್ರೇಕ್ (ರಿಯರ್), ದರ- 70,733 ರು.
  • ಡಿಲಕ್ಸ್: ಡಿಸ್ಕ್ ಬ್ರೇಕ್ (ಫ್ರಂಟ್ ಆಂಡ್ ರಿಯರ್), ದರ- 73,786 ರು.
  • ಸಿಬಿಎಸ್: ಡಿಸ್ಕ್ ಬ್ರೇಕ್ (ಫ್ರಂಟ್ ಆಂಡ್ ರಿಯರ್) ಜತೆ ಸಿಬಿಎಸ್, ದರ- 80,402 ರು.
ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ನೂತನ ಹೋಂಡಾ ಟ್ರಿಗರ್ 150 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸ್ಪಾರ್ಕ್ ಇಗ್ನಿಷನ್ ಎಂಜಿನ್ ಹೊಂದಿದೆ. ಹಾಗೆಯೇ ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ ಗರಿಷ್ಠ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಒಟ್ಟು ಮೂರು ಕಲರ್ ವೆರಿಯಂಟ್‌ಗಳಲ್ಲಿ ಸಿಬಿ ಟ್ರಿಗರ್ ಆಗಮನವಾಗುತ್ತಿದೆ. ಅವುಗಳೆಂದರೆ

Meteor Green Metallic,

Pearl Siena Red,

Black

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ತನ್ನದೇ ಆದ ವಿಶಿಷ್ಟ ವಿನ್ಯಾಸ ಪಡೆದುಕೊಂಡಿರುವ ಹೋಂಡಾ ಟ್ರಿಗರ್ ಬೈಕನ್ನು ಯುವ ಜನತೆ ಹೆಚ್ಚು ಇಷ್ಟಪಡುವ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ. ಇದರಲ್ಲಿ ಸ್ಟೈಲಿಷ್ ಬ್ಲ್ಯಾಕ್ ಅಲಾಯ್ ವೀಲ್ ಜತೆ ಸಂಪೂರ್ಣ ಟ್ರೆಂಡಿ ಡಿಜಿಟಲ್ ಇನ್ಟ್ರುಮೆಂಟ್ ಪ್ಯಾನೆಲ್ ಪಡೆದುಕೊಂಡಿದೆ. ಇದರ ಆಕ್ರಮಣಕಾರಿ ಹೈಡ್‌ಲೈಟ್ ಜತೆ ಏರ್ ಸ್ಕೂಪ್ ಹಾಗೆಯೇ ಎಲ್‌ಇಡಿ ಟೈಲ್ ಲೈಟ್ ಹೊಂದಿದೆ.

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಕೊಂಬಿ ಬ್ರೇಕ್ ಸಿಸ್ಟಂ ಆಳವಡಿಸಲಾಗುತ್ತಿದೆ. ಇದರಲ್ಲಿ ಅತ್ಯಧಿಕ ಗುಣಮಟ್ಟದ ಮೊನೊ ಸಸ್ಫೆಷನ್ ಲಗತ್ತಿಸಲಾಗಿದ್ದು, ಇದರಿಂದ ಹೆಚ್ಚು ಸ್ಥಿತರತೆಯ ಪಯಣಕ್ಕೆ ನೆರವಾಗಲಿದೆ.

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಭಾರತೀಯ ರಸ್ತೆಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿಯೇ ಹೋಂಡಾ ಟ್ರಿಗರ್ ಸಿಟ್ಟಿಂಗ್ ವ್ಯವಸ್ಥೆ ಆಳವಡಿಸಲಾಗಿದೆ. ಇದು ನಗರ ಪ್ರದೇಶ ಸೇರಿದಂತೆ ದೂರ ಪ್ರಯಾಣಕ್ಕೂ ಹೆಚ್ಚು ಯೋಗ್ಯವಾಗಿದೆ. ವಾಹನ ದಟ್ಟಣೆಗಳನ್ನು ನಿಭಾಯಿಸುವುದಕ್ಕಾಗಿ ಕಿಕ್ ಸ್ಟಾರ್ಟ್ ಫೀಚರ್ ನೀಡಲಾಗಿದೆ.

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ನೂತನ ಹೋಂಡಾ ಟ್ರಿಗರ್ ಆರಾಮದಾಯಕ ಹಾಗೂ ಹೆಚ್ಚು ಅನುಕೂಲಕರವಾದ ಪಯಣವನ್ನು ಒದಗಿಸುತ್ತಿದ್ದು, 240 ಎಂಎಂ ಫ್ರಂಟ್ ಹಾಗೂ 220 ಎಂಎಂ ರಿಯರ್ ಡ್ಯುಯಲ್ ಡಿಸ್ಕ್ ಬ್ರೇಕ್ ಸಿಸ್ಟಂ ಹೊಂದಿದೆ. ಇದು ಚಾಲಕನ ಸುರಕ್ಷೆತೆಯನ್ನು ಖಾತ್ರಿಪಡಿಸುತ್ತಿದೆ. ಇದರ ಜತೆ ವೈಡ್ ಟ್ಯೂಬ್‌ಲೆಸ್ ಟೈರ್, ನಿರ್ವಹಣಾ ಉಚಿತ ಬ್ಯಾಟರಿ ಕೂಡಾ ಇದೆ.

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ (ಜೂ. 13ಕ್ಕೆ) ಆರಂಭಗೊಂಡಿದ್ದು, ಅಧಿಕೃತ ಹೋಂಡಾ ಡೀಲರ್‌ಗಳ ಬಳಿಯಿಂದ ಸಿಬಿ ಟ್ರಿಗರನ್ನು ನಿಮ್ಮದಾಗಿಸಬಹುದಾಗಿದೆ.

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

 ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

 ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

ಹೋಂಡಾ ಸಿಬಿ ಟ್ರಿಗರ್

English summary
Honda Motorcycle & Scooter India Pvt. Ltd. (HMSI) - the only 2Wheeler company of Honda in India has further fortified its presence in the premium 150cc segment with the launch of its new performance motorcycle – CB Trigger in Karnataka.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more