ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

Written By:

ಮಾರುಕಟ್ಟೆಯಲ್ಲಿನ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಹೊಸ ನಮೂನೆಯ ಟೈರ್ಸ್ ಮಾದರಿಯನ್ನು ಎಂಆರ್‌ಎಫ್ ಸಂಸ್ಥೆ ಬಿಡುಗಡೆಗೊಳಿಸಿದೆ.

ಟೈರ್ಸ್ ಉತ್ಪಾದನೆಯಿಂದ ಭಾರತೀಯ ಆಟೋ ಉದ್ಯಮ ವಲಯದಲ್ಲಿ ಚಿರಪರಿಚಿತವಾಗಿರುವ ಎಂಆರ್‌ಎಫ್ ಸಂಸ್ಥೆಯು, ಕಳೆದ 70 ವರ್ಷಗಳಿಂದ ನಂ.1 ಸ್ಥಾನ ಕಾಯ್ದುಕೊಳ್ಳುವ ಮೂಲಕ ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ವಿಶೇಷ ಟೈರ್ಸ್ ಮಾದರಿಗಳನ್ನು ಉತ್ಪಾದನೆ ಕೈಗೊಳ್ಳುತ್ತಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಇದುವರೆಗೆ ನೂರಾರು ವಿವಿಧ ಟೈರ್ಸ್ ಮಾದರಿಗಳನ್ನು ಸಿದ್ದಪಡಿಸಿರುವ ಎಂಆರ್‌ಎಫ್, ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಿತ ಮ್ಯಾಸಿಟರ್ ಟೈರ್ ಬಿಡುಗಡೆಗೊಳಿಸಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ದ್ವಿಚಕ್ರ ವಾಹನಗಳಿಗಾಗಿಯೇ ವಿನೂತನ ವಿನ್ಯಾಸದ ಮ್ಯಾಸಿಟರ್ ಟೈರ್ಸ್ ಪರಿಚಯಿಸಿರುವ ಎಂಆರ್‌ಎಫ್ ಸಂಸ್ಥೆಯು, ಟೆಸ್ಟ್ ಡ್ರೈವಿಂಗ್ ಮೂಲಕ ಹೊಸ ಟೈರ್ಸ್ ಉತ್ತಮ ನಿರ್ವಹಣಾ ಕೌಶಲ್ಯತೆ ಪ್ರದರ್ಶನ ಮಾಡಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಇನ್ನು ಹೊಸ ಉತ್ಪನ್ನ ಬಗೆಗೆ ಆಟೋ ಮೊಬೈಲ್ ತಂತ್ರಜ್ಞರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಆಪ್‍‌ ರೋಡಿಂಗ್ ಕೌಶಲ್ಯತೆ ಪ್ರದರ್ಶನಕ್ಕೆ ಮ್ಯಾಸಿಟರ್ ಟೈರ್ಸ್ ಹೇಳಿ ಮಾಡಿಸಿದಂತಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಕಳೆದ ಕೆಲವು ವರ್ಷಗಳಿಂದ ಇಂಡಿಯನ್ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಕೆಲವು ಕಠಿಣ ಬದಲಾವಣೆಯನ್ನು ಕಂಡಿರುವ ಎಂಆರ್‌ಎಫ್, ಬೈಕ್ ಚಾಲನೆ ವೇಳೆ ಸವಾರನಿಗೆ ಸಂಪೂರ್ಣ ಸುರಕ್ಷೆ ನೀಡುವ ನಿಟ್ಟಿನಲ್ಲಿ ತನ್ನ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಎಂಆರ್‌ಎಫ್ ಸಿದ್ಧಗೊಳಿಸಿರುವ ಮ್ಯಾಸಿಟರ್ ಟೈರ್ ಅಂತರಾಷ್ಟ್ರೀಯ ಗುಣಮಟ್ಟ ಹೊಂದಿದ್ದು, ಉತ್ತಮ ಕಾರ್ಯಕ್ಷಮತೆ ನೀಡಬಲ್ಲ ಟೈರ್ಸ್ ಮಾದರಿ ಇದಾಗಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಇನ್ನು ಹೊಚ್ಚ ಹೊಸ ಮ್ಯಾಸಿಟರ್ ಟೈರ್ಸ್ ಉತ್ಪನ್ನಗಳಿಗಾಗಿ ಪ್ರತ್ಯೇಕ ವೈಬ್‌ಸೈಟ್ ಆರಂಭ ಮಾಡಿರುವ ಎಂಆರ್‌ಎಫ್, ಉತ್ತಮ ಕೌಶಲ್ಯ ಪ್ರದರ್ಶನಕ್ಕೆ ಅನೂಕಲಕರವಾಗುವಂತೆ ಕೆಲವು ಮಹತ್ತರ ಪ್ರದೇಶಗಳನ್ನು ಕೂಡಾ ಸೂಚಿಸಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಈ ಮೂಲಕ ಆಪ್ ರೋಡಿಂಗ್ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಎಂಆರ್‌ಎಫ್, ಕಡಿದಾದ ರಸ್ತೆ ತಿರುವುಗಳಲ್ಲಿ ಉತ್ತಮ ಗ್ರೀಪ್‌ಗೆ ಅನುಕೂಲಕರವಾಗುವಂತೆ ಟೈರ್ಸ್ ವಿನ್ಯಾಸಗೊಳಿಸಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಮೋಟಾರ್ ಸ್ಪೋಟ್ಸ್ ಹಾಗೂ ದಿನನಿತ್ಯದ ಬಳಕೆಗೂ ಇದು ಉತ್ತಮವಾಗಿದ್ದು, ಟ್ರ್ಯಾಕ್‌ಗಳಲ್ಲಿ ಮತ್ತು ಕಡಿದಾದ ರಸ್ತೆ ತಿರುವುಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಬಹುದಾಗಿದೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಟೈರ್ಸ್ ಅಳತೆಗಳು (17 ಇಂಚಿನ ರಿಮ್‌ಗಳಲ್ಲಿ)

80/90-17

100/90-17

140/70-17

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಬೆಲೆಗಳು

ರೂ. 3500 ರಿಂದ ಪ್ರಾರಂಭವಾಗುವ ಮ್ಯಾಸಿಟೆರ್ ಟೈರ್ಸ್ ಬೆಲೆಗಳು ಉನ್ನತ ಮಟ್ಟದ ಟೈರ್ಸ್ ಮಾದರಿಯೂ ರೂ.5 ಸಾವಿರಕ್ಕೆ ಲಭ್ಯವಿವೆ.

ಖರೀದಿಗೆ ಸಿದ್ದ ವಿಶೇಷ ವಿನ್ಯಾಸ ಹೊಂದಿರುವ ಎಂಆರ್‌ಎಫ್ ಮ್ಯಾಸಿಟರ್ ಟೈರ್ಸ್

ಒಟ್ಟಿನಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಖರೀದಿ ಲಭ್ಯವಿರುವ ಮ್ಯಾಸಿಟರ್ ಟೈರ್ಸ್, ಗ್ರಾಹಕರಿಗೆ ಹೊಸ ಅನುಭೂತಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

Read more on ಟೈರ್ tyre
English summary
Read in Kannada about MRF masseter tyres product review.
Story first published: Friday, June 9, 2017, 14:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark