ರಾಯಲ್ ಎನ್‌ಫೀಲ್ಡ್ ಹಿರಿಮೆ; ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500

Written By:

ರಾಯಲ್ ಎನ್ ಫೀಲ್ಡ್ ಬುಲೆಟ್ ಗಳನ್ನು ಖರೀದಿಸುವುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಇದು ನನಸಾಗದಿದ್ದಲ್ಲಿ ಕನಿಷ್ಠ ಪಕ್ಷ ಒಮ್ಮೆಯಾದರೂ ಇದನ್ನು ಓಡಿಸಬೇಕೆಂಬ ಕನಸನ್ನು ಹಲವರು ಕಟ್ಟಿಕೊಂಡಿರುತ್ತಾರೆ. ಭಾರತ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಐತಿಹಾಸಿಕ ಇತಿಹಾಸ ಹೊಂದಿರುವ ರಾಯಲ್ ಎನ್ ಫೀಲ್ಡ್ ಏಳಿಗೆಯಲ್ಲಿ ಬುಲೆಟ್ ಕ್ಲಾಸಿಕ್ 350 ಹಾಗೂ ಕ್ಲಾಸಿಕ್ 500 ವಹಿಸಿರುವ ಪಾತ್ರ ಅಷ್ಟಿಷ್ಟಲ್ಲ.

Also Read: ಮೊದಲ ನೋಟ; ಬಲಿಷ್ಠ ಬಜಾಜ್ ವಿ15 ಖರೀದಿಗೆ ಯೋಗ್ಯವೇ?

ಈಗಲೂ ರಾಯಲ್ ಎನ್ ಫೀಲ್ಡ್ ಬುಲೆಟ್ ಎಂದಾಕ್ಷಣ ವಾಹನ ಪ್ರೇಮಿಗಳು ಕ್ಲಾಸಿಕ್ 350 ಹಾಗೂ ಕ್ಲಾಸಿಕ್ 500 ಖರೀದಿಸಲು ಹೆಚ್ಚು ಆದ್ಯತೆ ಕೊಡುತ್ತಾರೆ. ಇದು ಭಾರತೀಯ ರಸ್ತೆಗಳಲ್ಲಿ ಮಾಡಿರುವ ಪರಿಣಾಮ ಇದನ್ನು ಬಿಂಬಿಸುತ್ತದೆ. ದೂರದಿಂದಲೇ ಬರುವಾಗ ಕಿವಿಯಲ್ಲಿ ಕೇಳಿಸುವ ಆ ಗುಡ ಗುಡ ಶಬ್ದ ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

ವಿನ್ಯಾಸ

ವಿನ್ಯಾಸ

ಹೆಸರಲ್ಲೇ ಸೂಚಿಸಿರುವಂತೆಯೇ ಆಧುನಿಕ ಎಂಜಿನಿಯರಿಂಗ್ ತಂತ್ರಗಾರಿಕೆಯೊಂದಿಗೆ ಕ್ಲಾಸಿಕ್ ಅನುಭವವನ್ನು ನೀಡಲಿದೆ. ಇದರ ದಿಟ್ಟತನದ ನೋಟ ಪ್ರಮುಖ ಆಕರ್ಷಣೆಯಾಗಿದೆ.

ವಿನ್ಯಾಸ

ವಿನ್ಯಾಸ

ಎದೆಗಾರಿಕೆಯನ್ನು ಬಿಂಬಿಸುವಂತಹ ದೃಢವಾದ ಟ್ಯಾಂಕ್ ಮುಂಭಾಗದಲ್ಲಿ ಎದ್ದು ಕಾಣಿಸಲಿದೆ. ಇನ್ನು ನಿರ್ಮಾಣ ಗುಣಮಟ್ಟತೆ ಬಗ್ಗೆ ಪ್ರಶ್ನೆಯೇ ಎತ್ತುವಂತಿಲ್ಲ.

ರಾಯಲ್ ಎನ್‌ಫೀಲ್ಡ್ ಹಿರಿಮೆ; ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500

ಬದಿಯಲ್ಲಿ ಲಗತ್ತಿಸಲಾಗಿರುವ ಬಾಕ್ಸ್ ವಿ ಆಕಾರವನ್ನು ಪಡೆದಿದೆ. ನೂರು ವರ್ಷಗಳಿಗೂ ಹಿಂದೆಯೇ ಇದರ ನಿರ್ಮಾಣ ಆರಂಭವಾಗಿದ್ದು, ಈಗಲೂ ವಾಹನ ಪ್ರೇಮಿಗಳ ನೆಚ್ಚಿನ ಬೈಕ್ ಎನಿಸಿಕೊಂಡಿದೆ.

ರಾಯಲ್ ಎನ್‌ಫೀಲ್ಡ್ ಹಿರಿಮೆ; ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500

ಹೆಡ್ ಲ್ಯಾಂಪ್ ಮತ್ತು ಮಿರರ್ ಗಳು ವೃತ್ತಕಾರದೊಂದಿಗೆ ಹೆಚ್ಚು ಮನ ಸೆಳೆಯುತ್ತಿದೆ. ಇನ್ನು ಟೈಲ್ ಲೈಟ್ ಮತ್ತು ಇಂಡಿಕೇಟರ್ ಗಳು ಸಹ ವೃತ್ತಕಾರದ ವಿನ್ಯಾಸವನ್ನೇ ಕಾಪಾಡಿಕೊಂಡಿದೆ.

ರಾಯಲ್ ಎನ್‌ಫೀಲ್ಡ್ ಹಿರಿಮೆ; ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500

ಕ್ಲಾಸಿಕ್ 350 ಮತ್ತು 500 ಮಾದರಿಗಳು ಬಹುತೇಕ ಸಮಾನ ವಿನ್ಯಾಸ ನೀತಿಯನ್ನು ಕಾಪಾಡಿಕೊಂಡರೂ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಬಣ್ಣಗಳು

ಬಣ್ಣಗಳು

ಕ್ಲಾಸಿಕ್ 350 - ಮಿಂಟ್, ಆಶ್, ಚೆಸ್ಟ್ ನಟ್, ಲ್ಯಾಗೂನ್, ಸಿಲ್ವರ್ ಮತ್ತು ಬ್ಲ್ಯಾಕ್

ಕ್ಲಾಸಿಕ್ 500 - ಕ್ಲಾಸಿಕ್ ಸಿಲ್ವರ್, ಕ್ಲಾಸಿಕ್ ಬ್ಲ್ಯಾಕ್, ಕ್ಲಾಸಿಕ್ ಟ್ಯಾನ್, ಸ್ಕ್ವಾಡ್ರಾನ್ ಬ್ಲೂ, ಡೆಸರ್ಟ್ ಸ್ಟ್ರೋಮ್, ಬ್ಯಾಟಲ್ ಗ್ರೀನ್, ಕ್ರೋಮ್ ಗ್ರಾಫೈಟ್ ಮತ್ತು ಕ್ರೋಮ್ ಗ್ರೀನ್.

ರಾಯಲ್ ಎನ್‌ಫೀಲ್ಡ್ ಹಿರಿಮೆ; ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500

ಅಷ್ಟೇ ಯಾಕೆ ಸಿಂಗಲ್ ಸೀಟಿನ ಆಯ್ಕೆಗಳಲ್ಲೂ ಲಭ್ಯವಾಗುತ್ತಿರುವುದು ಮತ್ತಷ್ಟು ರಮ್ಯತೆಯ ಅನುಭವ ನೀಡಲಿದೆ.

ಎಂಜಿನ್ ತಾಂತ್ರಿಕತೆ - ಕ್ಲಾಸಿಕ್ 350

ಎಂಜಿನ್ ತಾಂತ್ರಿಕತೆ - ಕ್ಲಾಸಿಕ್ 350

346 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 28 ಎನ್ ಎಂ (4000 ಆರ್‌ಪಿಎಂ) ತಿರುಗುಬಲದಲ್ಲಿ 19.8 (5250 ಆರ್‌ಪಿಎಂ) ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಎಂಜಿನ್ ತಾಂತ್ರಿಕತೆ - ಕ್ಲಾಸಿಕ್ 500

ಎಂಜಿನ್ ತಾಂತ್ರಿಕತೆ - ಕ್ಲಾಸಿಕ್ 500

ಇನ್ನೊಂದೆಡೆ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 500, 499 ಸಿಸಿ, ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಟ್ವಿನ್ ಸ್ಪಾರ್ತಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 41.3 ಎನ್ ಎಂ (4000 ಆರ್‌ಪಿಎಂ) ತಿರುಗುಬಲದಲ್ಲಿ 27.2 (5250 ಆರ್‌ಪಿಎಂ) ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಕೂಡಾ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುತ್ತದೆ.

ಚಾಸೀ, ಸಸ್ಪೆನ್ಷನ್ - ಕ್ಲಾಸಿಕ್ 350

ಚಾಸೀ, ಸಸ್ಪೆನ್ಷನ್ - ಕ್ಲಾಸಿಕ್ 350

ವಿಧ: ಸಿಂಗಲ್ ಡೌನ್ ಡ್ಯೂಬ್

ಫ್ರಂಟ್: ಟೆಲಿಸ್ಕಾಪಿಕ್, 35 ಎಂಎಂ ಫಾರ್ಕ್, 130 ಎಂಎಂ ಟ್ರಾವೆಲ್

ರಿಯರ್: ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್, 80 ಎಂಎಂ ಟ್ರಾವೆಲ್

ಆಯಾಮ (ಎಂಎಂ) - ಕ್ಲಾಸಿಕ್ 350

ಆಯಾಮ (ಎಂಎಂ) - ಕ್ಲಾಸಿಕ್ 350

ಉದ್ದ: 2180

ಅಗಲ: 790

ಎತ್ತರ: 1080

ಚಕ್ರಾಂತರ: 1370

ಗ್ರೌಂಡ್ ಕ್ಲಿಯರನ್ಸ್: 135

ಇಂಧನ ಟ್ಯಾಂಕ್ ಸಾಮರ್ಥ್ಯ: 13.5 ಲೀಟರ್

ಭಾರ: 187 ಕೆ.ಜಿ

ಬ್ರೇಕ್, ಚಕ್ರಗಳು - ಕ್ಲಾಸಿಕ್ 350

ಬ್ರೇಕ್, ಚಕ್ರಗಳು - ಕ್ಲಾಸಿಕ್ 350

ಬ್ರೇಕ್

ಮುಂಭಾಗ: 280 ಎಂಎಂ ಡಿಸ್ಕ್

ಹಿಂಭಾಗ: 153 ಎಂಎಂ ಡ್ರಮ್

ಚಕ್ರಗಳು

ಮುಂಭಾಗ: 90/90 - 19

ಹಿಂಭಾಗ: 110/90 - 18

ಆಯಾಮ (ಎಂಎಂ) - ಕ್ಲಾಸಿಕ್ 500

ಆಯಾಮ (ಎಂಎಂ) - ಕ್ಲಾಸಿಕ್ 500

ಉದ್ದ: 2140

ಅಗಲ: 790

ಎತ್ತರ: 1080

ಚಕ್ರಾಂತರ: 1360

ಗ್ರೌಂಡ್ ಕ್ಲಿಯರನ್ಸ್: 135

ಇಂಧನ ಟ್ಯಾಂಕ್ ಸಾಮರ್ಥ್ಯ: 13.5 ಲೀಟರ್

ಭಾರ: 190 ಕೆ.ಜಿ

ಬ್ರೇಕ್, ಚಕ್ರಗಳು - ಕ್ಲಾಸಿಕ್ 500

ಬ್ರೇಕ್, ಚಕ್ರಗಳು - ಕ್ಲಾಸಿಕ್ 500

ಬ್ರೇಕ್

ಮುಂಭಾಗ: 280 ಎಂಎಂ ಡಿಸ್ಕ್

ಹಿಂಭಾಗ: 153 ಎಂಎಂ ಡ್ರಮ್

ಚಕ್ರಗಳು

ಮುಂಭಾಗ: 90/90 - 19

ಹಿಂಭಾಗ: 120/80 - 18

ಬೆಲೆ

ಬೆಲೆ

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಶ್ರೇಣಿಯ ಬುಲೆಟ್ ಗಳು 1.25 ಲಕ್ಷ ರು.ಗಳಿಂದ 1.75 ಲಕ್ಷ ರು.ಗಳ (ಎಕ್ಸ್ ಶೋ ರೂಂ ದೆಹಲಿ) ವರೆಗೆ ದುಬಾರಿಯೆನಿಸುತ್ತದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500 ವಿನ್ಯಾಸದ ವಿಚಾರದಲ್ಲಿ ಒಂದಕ್ಕೊಂದು ಸಾಮತ್ಯೆಯನ್ನು ಪಡೆದಿದೆ. ಆದರೆ ಕ್ಲಾಸಿಕ್ 500 ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿರುವುದರಿಂದ ದೂರ ಪ್ರಯಾಣದ ವೇಳೆ ಮತ್ತಷ್ಟು ಅದ್ಭುತ ಚಾಲನಾ ಅನುಭವ ನಿಮ್ಮದಾಗಿಸಲಿದೆ. ಇನ್ನೊಂದೆಡೆ ಕ್ಲಾಸಿಕ್ 350 ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ. ಒಟ್ಟಿನಲ್ಲಿ ಈ ಎರಡೂ ಬುಲೆಟ್ ಗಳು ಭಾರತೀಯ ದ್ವಿಚಕ್ರ ವಾಹನ ಇತಿಹಾಸದಲ್ಲಿ ಛಾಪು ಒತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ.

ಇವನ್ನೂ ಓದಿ

ಅಪಾಚೆ ರಿ ಎಂಟ್ರಿ; ಡ್ಯೂಕ್ ಓವರ್ ಟೇಕ್ ಮಾಡಲು ಸಾಧ್ಯವೇ?

ಹೋಂಡಾ ಸಿಬಿ ಹಾರ್ನೆಟ್ 160ಆರ್ vs ಸುಜುಕಿ ಜಿಕ್ಸರ್ ಮುಂದಕ್ಕೆ ಓದಿ

English summary
Royal Rumble: Royal Enfield Classic 350 vs Classic 500
Story first published: Monday, March 14, 2016, 10:23 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more