ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಏಳು ಅತ್ಯಾಕರ್ಷಕ ಸ್ಕೂಟರ್ ಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

By Nagaraja

ಬೈಕ್ ಗಳೆಂತೆಯೇ ದೇಶದಲ್ಲಿ ಸ್ಕೂಟರ್ ಗಳಿಗೂ ಬೇಡಿಕೆ ಹೆಚ್ಚುತ್ತಲೇ ಇದೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಸ್ಕೂಟರ್ ಬಳಕೆ ಹಚ್ಚಾಗತೊಡಗಿದೆ. ಇದಕ್ಕನುಗುಣವಾಗಿ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಗಳು ನಿರಂತರ ಅಂತರಾಳದಲ್ಲಿ ಹೊಸ ಹಾಗೂ ನವೀಕೃತ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಆರಾಮ, ಅನುಕೂಲ ಜೊತೆಗೆ ನಿರ್ವಹಣೆ, ತಂತ್ರಜ್ಞಾನ ಮತ್ತು ಅತ್ಯುತ್ತಮ ಶೈಲಿಯ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿವೆ. ಸದ್ಯ ಲೇಖನದಲ್ಲಿ ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ಕೆಲವು ಅತ್ಯಾಕರ್ಷಕ ಸ್ಕೂಟರ್ ಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

ಟಿವಿಎಸ್ ಎನ್ ಟಾರ್ಕ್ 125

ಟಿವಿಎಸ್ ಎನ್ ಟಾರ್ಕ್ 125

2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭಾರತೀಯ ಮೂಲದ ಸಂಸ್ಥೆಯೇ ಆಗಿರುವ ಟಿವಿಎಸ್, ಅತಿ ನೂತನ ಎನ್ ಟಾರ್ಕ್ 125 ಸ್ಕೂಟರನ್ನು ಅನಾವರಣಗೊಳಿಸಿತ್ತು. ಪ್ರಸ್ತುತ ಸ್ಕೂಟರ್ ಎನ್ ಟಾರ್ಕ್ 210 ಕೋಡ್ ಪಡೆದಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಟಿವಿಎಸ್ ನೂತನ ಸ್ಕೂಟರ್ ಪ್ರಮುಖವಾಗಿಯೂ 125 ಸಿಸಿ ವಿಭಾಗದಲ್ಲಿ ಹೋಂಡಾ ಆಕ್ಟಿವಾ, ಸುಜುಕಿ ಆಕ್ಸೆಸ್ ಮತ್ತು ಇನ್ನಿತರ ಸ್ಕೂಟರ್ ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಸಿವಿಟಿ ಗೇರ್ ಬಾಕ್ಸ್ ಸಹ ಗಿಟ್ಟಿಸಿಕೊಳ್ಳಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಂದಾಜು ಬೆಲೆ: 70,000 ರು.ಗಳಿಂದ 85,000 ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ ಅಥವಾ 2017 ವರ್ಷಾರಂಭ

ವೆಸ್ಪಾ ಜಿಟಿಎಸ್ 300

ವೆಸ್ಪಾ ಜಿಟಿಎಸ್ 300

ಇಟಲಿಯ ಮೂಲದ ಪಿಯಾಜಿಯೊದ ಪ್ರತಿಷ್ಠಿತ ಸ್ಕೂಟರ್ ಬ್ರಾಂಡ್ ಆಗಿರುವ ವೆಸ್ಪಾ ಆಗಲೇ ದೇಶಕ್ಕೆ ಎಂಟ್ರಿ ಕೊಟ್ಟಿದ್ದು, ಈಗ ಮಗದೊಂದು ಮನಮೋಹಕ ಜಿಟಿಎಸ್ 300 ಪರಿಚಯಿಸುವ ಯೋಜನೆಯಲ್ಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಸಾಮಾನ್ಯ ಸ್ಕೂಟರ್ ಗಿಂತಲೂ ವಿಭಿನ್ನವಾಗಿ ವೆಸ್ಪಾ ಜಿಟಿಎಸ್ 300 ನಿರ್ವಹಣಾ ಸ್ಕೂಟರ್ ಎನಿಸಿಕೊಳ್ಳಲಿದ್ದು, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ ಸಿಡಿ ಪರದೆಯನ್ನು ಗಿಟ್ಟಿಸಿಕೊಳ್ಳಲಿದೆ. ವೆಸ್ಪಾ ಜಿಟಿಎಸ್ 300 ಜಾಗತಿಕ ಆವೃತ್ತಿಯು ಟ್ರಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಹೊಂದಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಂದಾಜು ಬೆಲೆ: 4 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ

ಹೀರೊ ಝಡ್ ಐಆರ್

ಹೀರೊ ಝಡ್ ಐಆರ್

ಬೈಕ್ ಮಾರುಕಟ್ಟೆಯಲ್ಲಿ ನಂ.1 ಎನಿಸಿಕೊಂಡಿರುವ ಹೀರೊ ಸ್ಕೂಟರ್ ವಿಭಾಗದಲ್ಲೂ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸಿದೆ. ಈಗ ಇನ್ನು ಒಂದು ಹೆಜ್ಜೆಯಿಡುತ್ತಿರುವ ಹೀರೊ, ಪ್ರೀಮಿಯಂ ಸ್ಕೂಟರ್ ವಿಭಾಗಕ್ಕೂ ಕಾಲಿಡಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಫ್ಲ್ಯಾಟ್ ಫ್ಲೋರ್ ಬೋರ್ಡ್ ಮತ್ತು ಯುರೋಪ್ ಸ್ಟೈಲ್ ಸ್ಟೆಪ್ ಥ್ರೂಗಳೆಂಬ ಎರಡು ವೆರಿಯಂಟ್ ಗಳಲ್ಲಿ ಹೀರೊ ಝಡ್ ಐಆರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರಲ್ಲಿರುವ 150 ಸಿಸಿ ಎಂಜಿನ್ 12.7 ಎನ್ ಎಂ ತಿರುಗುಬಲದಲ್ಲಿ 13.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಡೇಟೈಮ್ ರನ್ನಿಂಗ್ ಲೈಟ್ಸ್, ಟೈಲ್ ಲ್ಯಾಂಪ್ ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಂದಾಜು ಬೆಲೆ: 80,000 ರು.ಗಳಿಂದ 90,000 ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ

 ಟಿವಿಎಸ್ ಜೂಪಿಟರ್ ಎಫ್‌ಐ

ಟಿವಿಎಸ್ ಜೂಪಿಟರ್ ಎಫ್‌ಐ

ಟಿವಿಎಸ್ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ಜೂಪಿಟರ್ ಹೊಸ ಸ್ವರೂಪದಲ್ಲಿ ಪ್ರತ್ಯಕ್ಷಗೊಳ್ಳಲಿದೆ. ಚೆನ್ನೈ ಮೂಲದ ಟಿವಿಎಸ್ ಸಂಸ್ಥೆಯೀಗ ತನ್ನ ಅತ್ಯಂತ ಯಶಸ್ಸಿನ ಜೂಪಿಟರ್ ಫ್ಯೂಯಲ್ ಇಂಜೆಕ್ಟಡ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಹೀರೊ, ಹೋಂಡಾಗಳಂತಹ ಘಟಾನುಘಟಿ ಪ್ರತಿಸ್ಪರ್ಧೆಯ ನಡುವೆಯು ಟಿವಿಎಸ್ ಜೂಪಿಟರ್ ಗಮನಾರ್ಹ ಮಾರಾಟವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಯುರೋ IV ಎಮಿಷನ್ ಮಟ್ಟವನ್ನು ಕಾಯ್ದುಕೊಳ್ಳುವತ್ತ ಗಮನ ಕೇಂದ್ರಿತವಾಗಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಂದಾಜು ಬೆಲೆ: 55,000 ರು.ಗಳಿಂದ 65,000 ರು.

ನಿರೀಕ್ಷಿತ ಬಿಡುಗಡೆ: 2017 ವರ್ಷಾರಂಭ

ಹೀರೊ ಡೇರ್

ಹೀರೊ ಡೇರ್

ಅತಿ ಹೆಚ್ಚು ಮಾರಾಟದಲ್ಲಿರುವ ಹೀರೊ ಡಿಯೋಗೆ ಪ್ರತಿಸ್ಪರ್ಧಿಯೊಂದನ್ನು ರೂಪಿಸಲಾಗುತ್ತಿದೆ. ಡೇರ್ ಮುಖಾಂತರ ಯುವ ಗ್ರಾಹಕರನ್ನು ಗುರಿ ಮಾಡುವುದು ಹೀರೊ ಇರಾದೆಯಾಗಿದೆ. ಇದರಂತೆ 125 ಸಿಸಿ ವಿಭಾಗದಲ್ಲಿ ಆಕರ್ಷಕ ಸ್ಕೂಟರ್ ಬಿಡುಗಡೆ ಮಾಡಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ವರ್ಷಾರಂಭದಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಂಡಿರುವ ಹೀರೊ ಡೇರ್, ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಡಿಯೊ ಜೊತೆಗೆ ಆಕ್ಟಿವಾ 125 ಮತ್ತು ಸುಜುಕಿ ಆಕ್ಸೆಸ್ 125 ಸ್ಕೂಟರ್ ಗಳಿಗೂ ಪ್ರತಿಸ್ಪರ್ಧಿಯಾಗಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಂದಾಜು ಬೆಲೆ: 60,000 ರು.ಗಳಿಂದ 65,000 ರು.

ನಿರೀಕ್ಷಿತ ಬಿಡುಗಡೆ: 2017 ವರ್ಷಾರಂಭ

ಅಥೆರ್ ಎನರ್ಜಿ ಎಸ್340

ಅಥೆರ್ ಎನರ್ಜಿ ಎಸ್340

ದೇಶದ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಅಥೆರ್ ಎನರ್ಜಿ ಒಂದು ಭವಿಷ್ಯತ್ತಿನ ಉತ್ಪನ್ನವಾಗಿರಲಿದೆ. ಇದನ್ನು ಸಂಪೂರ್ಣವಾಗಿ ಸ್ಥಳೀಯವಾಗಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಲಾಗಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಥೆರ್ ಎಸ್340 ಸ್ಕೂಟರ್ ಕೇವಲ ಒಂದು ತಾಸಿನೊಳಗೆ ಶೇಕಡಾ 80ರಷ್ಟು ಚಾರ್ಜ್ ಮಾಡಿಸಬಹುದಾಗಿದೆ. ಹಾಗೆಯೇ ಗಂಟೆಗೆ 70 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಮರ್ಥವಾಗಿದೆ. ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್ ಜೊತೆಗೆ ನೇವಿಗೇಷನ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯು ಇದರಲ್ಲಿರುದ್ದು, ನಗರ ಪರಿಧಿಯಲ್ಲಿ 60 ಕೀ.ಮೀ. ದೂರದ ವರೆಗೆ ಸಂಚರಿಸಬಹುದಾಗಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಂದಾಜು ಬೆಲೆ: 1 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017 ಮಧ್ಯಂತರ ಅವಧಿ

ಯಮಹಾ ಎನ್ ಮ್ಯಾಕ್ಸ್ 155

ಯಮಹಾ ಎನ್ ಮ್ಯಾಕ್ಸ್ 155

ಕಳೆದ ಕೆಲವು ಸಮಯಗಳಿಂದ ಅತಿ ಹೆಚ್ಚು ಸುದ್ದಿಯಾಗಿರುವ ಯಮಹಾದ ಬೃಹತ್ತಾದ ಎನ್ ಮ್ಯಾಕ್ಸ್ 155 ಸ್ಕೂಟರ್ ಭಾರತಕ್ಕೆ ಪ್ರವೇಶಿಸಲು ಕಾಲ ಸನ್ನಿಹಿತವಾಗಿದೆ. ಯುರೋಪ್ ಶೈಲಿನ ಶಕ್ತಿಯುತ ವಿನ್ಯಾಸವು ಭಾರತೀಯರ ಪಾಲಿಗಿದು ಹೊಸತನವನ್ನು ತುಂಬಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

150 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಯಮಹಾ ಎನ್ ಮ್ಯಾಕ್ಸ್ ಸ್ಕೂಟರ್ ಪ್ರಮುಖವಾಗಿಯೂ ಹೀರೊ ಝಡ್ ಐಆರ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಅಂದಾಜು ಬೆಲೆ: 85,000 ರು.ಗಳಿಂದ 95,000 ರು.

ನಿರೀಕ್ಷಿತ ಬಿಡುಗಡೆ: 2017 ಮಧ್ಯಂತರ ಅವಧಿ

ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಅತ್ಯಾಕರ್ಷಕ ಸ್ಕೂಟರ್ ಗಳು

ಹಾಗೊಂದು ವೇಳೆ ನಿಕಟ ಭವಿಷ್ಯದಲ್ಲೇ ಅತ್ಯಾಕರ್ಷಕ ಸ್ಕೂಟರ್ ಖರೀದಿ ಮಾಡುವ ಯೋಜನೆಯಲ್ಲಿದ್ದರೆ ನೀವು ಕೂಡಾ ಈ ನವ ನವೀನ ಮಾದರಿಗಳ ಬಿಡುಗಡೆಗಾಗಿ ಕೊಂಚ ಸಮಯ ಕಾಯುವುದರಲ್ಲಿ ತಪ್ಪೇನಿಲ್ಲ.

Most Read Articles

Kannada
English summary
Upcoming Scooters In India — Exciting Lineup Ahead
Story first published: Monday, November 21, 2016, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X