ಯಮಹಾ ಆರ್3 Vs ಕವಾಸಕಿ ನಿಂಜಾ 300 Vs ಕೆಟಿಎಂ ಆರ್‌ಸಿ 390

By Nagaraja

ಅಪ್ಪಟ ವಾಹನ ಪ್ರೇಮಿಯ ಹೊರತಾಗಿ ನಿರ್ವಹಣಾ ಬೈಕ್ ಗಳ ಪರಿಜ್ಞಾನವನ್ನು ಎಲ್ಲರೂ ಹೊಂದಿರುವುದಿಲ್ಲ. ಬೆಲೆ ಕೂಡಾ ದುಬಾರಿಯಾಗಿರುವುದರಿಂದ ಇದರ ಬಗ್ಗೆ ಚಿಂತನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಈ ಎಲ್ಲ ವಿಚಾರಗಳು ಒಂದೆಡೆಯಾದರೆ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯು ನಿಧಾನವಾಗಿ ನಿರ್ವಹಣಾ ಬೈಕ್ ಗಳತ್ತ ವಾಲುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಇದು ಉತ್ತಮ ಸಂಕೇತವೂ ಹೌದು.

Also Read: ಆಕ್ಟಿವಾ ತ್ರಿಜಿ Vs ಮಹೀಂದ್ರ ಗಸ್ಟೊ; ಯಾವುದು ಬೆಸ್ಟ್

ನಿಮ್ಮ ಮಾಹಿತಿಗಾಗಿ ಇತ್ತೀಚೆಗಷ್ಟೇ ಯಮಹಾ ಸಂಸ್ಥೆಯು ಶಕ್ತಿಶಾಲಿ ಆರ್3 ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದು ಈಗಾಗಲೇ ಮಾರುಕಟ್ಟೆಯಲ್ಲಿರುವ ಕವಾಸಕಿ ನಿಂಜಾ 300 ಹಾಗೂ ಕೆಟಿಎಂ ಆರ್‌ಸಿ 390 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ. ಈ ಮೂರು ಶಕ್ತಿಶಾಲಿ ಬೈಕ್ ಗಳ ಪೈಕಿ ಯಾವುದು ಅತ್ಯುತ್ತಮ ಎಂಬುದನ್ನು ಬೇರ್ಪಡಿಸಿ ಹೇಳುವುದು ಸ್ವಲ್ಪ ಕಷ್ಟವಾಗಬಹುದು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

  • ಯಮಹಾ ಆರ್3: 3.25 ಲಕ್ಷ ರು.
  • ಕವಾಸಕಿ ನಿಂಜಾ 300: 3.60 ಲಕ್ಷ ರು.
  • ಕೆಟಿಎಂ ಆರ್‌ಸಿ 390: 2.10 ಲಕ್ಷ ರು.
  • ವಿನ್ಯಾಸ: ಯಮಹಾ ಆರ್3

    ವಿನ್ಯಾಸ: ಯಮಹಾ ಆರ್3

    ಸಂಪೂರ್ಣ ಫೇರ್ಡ್ ವರ್ಷನ್ (fully faired) ಇದಾಗಿದ್ದು, ಸಂಸ್ಥೆಯ ಸೂಪರ್ ಸ್ಪೋರ್ಟ್ ಮಾದರಿಯಿಂದ ಪ್ರೇರಣೆ ಪಡೆದು ರಚಿಸಲಾಗಿದೆ. ಮುಂಭಾಗದಲ್ಲಿ ಟ್ವಿನ್ ಹೆಡ್ ಲೈಟ್, ಹಗುರ ಭಾರದ ಡೈಮಂಡ್ ವಿಧದ ಲೋಹದ ಫ್ರೇಮ್ ಜೊತೆಗೆ ಅತ್ಯುತ್ತಮ ಚಾಲನಾ ಸ್ಥಾನವನ್ನು ಹೊಂದಿದೆ.

     ವಿನ್ಯಾಸ: ಕವಾಸಕಿ ನಿಂಜಾ 300

    ವಿನ್ಯಾಸ: ಕವಾಸಕಿ ನಿಂಜಾ 300

    ಆಕ್ರಮಣಕಾರಿ ವಿನ್ಯಾಸವು ಈ ಹಸಿರು ವರ್ಣದ ಪವರ್ ಫುಲ್ ಬೈಕ್‌ಗೆ ಆಸರೆಯಾಗಲಿದೆ. ಇದನ್ನು ಐಕಾನಿಕ್ ಝಡ್‌ಎಕ್ಸ್-10ಆರ್ ಮಾದರಿಯಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ. ಆರಾಮದಾಯಕ ಆಸನ ಸ್ಥಾನ ಜೊತೆಗೆ ಸಂಪೂರ್ಣ ಫೇರ್ಡ್ ವರ್ಷನ್ ಇದಾಗಿರಲಿದೆ.

     ವಿನ್ಯಾಸ: ಕೆಟಿಎಂ ಆರ್‌ಸಿ 390

    ವಿನ್ಯಾಸ: ಕೆಟಿಎಂ ಆರ್‌ಸಿ 390

    ಒಂದು ಕೋನಿಯ ಫೇರಿಂಗ್ ಆವರಿಸಿಕೊಂಡಿರುವ ಕೆಟಿಎಂ ತನ್ನ ಟ್ರೇಡ್ ಮಾರ್ಕ್ ಕೇಸರಿ ಹಾಗೂ ಕಪ್ಪು ವರ್ಣಗಳಿಂದ ಕಂಗೊಳಿಸಲಿದೆ. ಇದು ಜನಪ್ರಿಯ ಆರ್‌ಸಿ8 ಮಾದರಿಯಿಂದ ಪ್ರೇರಣೆ ಪಡೆದಿದೆ. ಒಟ್ಟಿನಲ್ಲಿ ಸವಾರನಿಗೆ ಕಂಪ್ಲೀಟ್ ರೇಸಿಂಗ್ ಅನುಭವ ನೀಡಲು ಬದ್ಧವಾಗಿದೆ.

    ವೈಶಿಷ್ಟ್ಯಗಳು: ಯಮಹಾ ಆರ್3

    ವೈಶಿಷ್ಟ್ಯಗಳು: ಯಮಹಾ ಆರ್3

    ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅನಲಾಗ್ ಟ್ಯಾಕೋಮೀಟರ್, ಡಿಜಿಟಲ್ ಸ್ಪೀಡೋಮೀಟರ್, ಟ್ರಿಪ್ ಮೀಟರ್, ಫ್ಲೂಯಲ್ ಗೇಜ್, ಗೇರ್ ಇಂಡಿಕೇಟರ್ ಹಾಗೂ ಹಿಂದುಗಡೆ ಹಾಗೂ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ. ಆದರೆ ಎಬಿಎಸ್ ಕೊರತೆ ಕಾಡಲಿದೆ.

    ವೈಶಿಷ್ಟ್ಯಗಳು: ಕವಾಸಕಿ ನಿಂಜಾ 300

    ವೈಶಿಷ್ಟ್ಯಗಳು: ಕವಾಸಕಿ ನಿಂಜಾ 300

    ನಿಂಜಾ 300 ಮಾದರಿಯಲ್ಲೂ ಡಿಜಿಟಲ್ ಅನಲಾಗ್ ಮೀಟರ್ ಇರಲಿದೆ. ಇನ್ನು ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವೂ ಇರಲಿದೆ. ಆದರೆ ಇಲ್ಲೂ ಎಬಿಎಸ್ ಅಲಭ್ಯತೆ ಕಾಡಲಿದೆ.

    ವೈಶಿಷ್ಟ್ಯಗಳು: ಕೆಟಿಎಂ ಆರ್‌ಸಿ 390

    ವೈಶಿಷ್ಟ್ಯಗಳು: ಕೆಟಿಎಂ ಆರ್‌ಸಿ 390

    ಕೆಟಿಎಂ 390ಯಲ್ಲಿ ಸಂಪೂರ್ಣ ಡಿಜಿಟಲ್ ಮೀಟರ್ ಸೌಲಭ್ಯವನ್ನು ಅನುಭವಿಸಬಹುದಾಗಿದೆ. ಇದರಲ್ಲಿ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ದೊರಕಲಿದ್ದು, ಸೈಡ್ ಸ್ಟ್ಯಾಂಡ್ ವಾರ್ನಿಂಗ್ ವೈಶಿಷ್ಟ್ಯತೆಯೂ ಇರಲಿದೆ.

     ಎಂಜಿನ್ ತಾಂತ್ರಿಕತೆ: ಯಮಹಾ ಆರ್3

    ಎಂಜಿನ್ ತಾಂತ್ರಿಕತೆ: ಯಮಹಾ ಆರ್3

    • 321 ಸಿಸಿ, ಲಿಕ್ವಿಡ್ ಕೂಲ್ಡ್, ಟ್ವಿನ್ ಸಿಲಿಂಡರ್ ಎಂಜಿನ್
    • 41.4 ಅಶ್ವಶಕ್ತಿ, 29.6 ಎನ್‌ಎಂ ತಿರುಗುಬಲ
    • 6 ಸ್ಪೀಡ್ ಗೇರ್ ಬಾಕ್ಸ್
    • ಇಂಧನ ಟ್ಯಾಂಕ್ ಸಾಮರ್ಥ್ಯ: 14 ಲೀಟರ್
    • ಎಂಜಿನ್ ತಾಂತ್ರಿಕತೆ: ಕವಾಸಕಿ ನಿಂಜಾ 300

      ಎಂಜಿನ್ ತಾಂತ್ರಿಕತೆ: ಕವಾಸಕಿ ನಿಂಜಾ 300

      • 296 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್
      • 39 ಅಶ್ವಶಕ್ತಿ, 27 ಎನ್‌ಎಂ ತಿರುಗುಬಲ
      • 6 ಸ್ಪೀಡ್ ಗೇರ್ ಬಾಕ್ಸ್
      • ಇಂಧನ ಟ್ಯಾಂಕ್ ಸಾಮರ್ಥ್ಯ: 17 ಲೀಟರ್
      • ಎಂಜಿನ್ ತಾಂತ್ರಿಕತೆ: ಕೆಟಿಎಂ ಆರ್390

        ಎಂಜಿನ್ ತಾಂತ್ರಿಕತೆ: ಕೆಟಿಎಂ ಆರ್390

        • 373 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್
        • 43 ಅಶ್ವಶಕ್ತಿ, 35 ಎನ್‌ಎಂ ಟಾರ್ಕ್
        • 6 ಸ್ಪೀಡ್ ಗೇರ್ ಬಾಕ್ಸ್
        • ಇಂಧನ ಟ್ಯಾಂಕ್ ಸಾಮರ್ಥ್ಯ: 10 ಲೀಟರ್
        • ಅಂತಿಮ ತೀರ್ಪು

          ಅಂತಿಮ ತೀರ್ಪು

          ಎಂಜಿನ್, ನಿರ್ವಹಣೆ, ಬೆಲೆ ಹೀಗೆ ಎಲ್ಲ ಹಂತದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಕೆಟಿಎಂ 390 ಹಿಂದಿಕ್ಕಿದೆ. ಹಾಗಿದ್ದರೂ ಕವಾಸಕಿ ನಿಂಜಾ 300 ಹಾಗೂ ಯಮಹಾ ಆರ್3 ತನ್ನದೇ ಆದ ವೈಶಿಷ್ಟ್ಯದೊಂದಿಗೆ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಹಾಗಾಗಿ ನಿಮಗೆ ದುಡ್ಡಿನ ಯಾವುದೇ ತೊಂದರೆಯಿಲ್ಲದಿದ್ದಲ್ಲಿ ನಿಮ್ಮ ನೆಚ್ಚಿನ ಬೈಕ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯಾಕೆಂದರೆ ವಿಶ್ವಾಸಾರ್ಹತೆಯಲ್ಲಿ ಈ ಮೂರು ಸಂಸ್ಥೆಗಳು ಅತ್ಯುತ್ತಮ ಗ್ರಾಹಕ ಸ್ನೇಹಿ ಎನಿಸಿಕೊಂಡಿದೆ.


Most Read Articles

Kannada
English summary
Yamaha R3 Vs Kawasaki Ninja 300 Vs KTM RC 390
Story first published: Monday, August 24, 2015, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X