ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

Written By:

ಅದು 1999, ಮೊಟ್ಟ ಮೊದಲ ಬಾರಿಗೆ ಎಕ್ಸ್ 5 ಐಷಾರಾಮಿ ಕಾರು ಸರಣಿ ಪರಿಚಯಿಸಿದ್ದ ಬಿಎಂಡಬ್ಲ್ಯು, ಆಟೋ ಮೊಬೈಲ್ ಉದ್ಯಮದಲ್ಲಿ ಉಂಟಾದ ಹತ್ತಾರು ಬದಲಾವಣೆಗಳೊಂದಿಗೆ ಇಂದು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಅಭಿವೃದ್ಧಿಗೊಳಿಸಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಜರ್ಮನ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಬಿಎಂಡಬ್ಲ್ಯು ಹೊಸ ಮಾದರಿಯ ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಎಸ್‌ಯುವಿ ಬಿಡುಗಡೆ ಮಾಡಿದ್ದು, ವಿನೂತನ ಮಾದರಿಯ ಮೊದಲ ಚಾಲನಾ ವಿಮರ್ಶೆ ಇಲ್ಲಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಐಷಾರಾಮಿ ಎಸ್‌ಯುವಿಗಳಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು, ಮೊದಲ ಬಾರಿಗೆ ಎಕ್ಸ್5 ಇ53 ಪರಿಚಯಿಸಿತ್ತು. ಆದಾದ ಬಳಿಕ 2006ರಲ್ಲಿ ಎರಡನೇ ತಲೆಮಾರಿನ ಎಕ್ಸ್5 ಇ70 ಬಿಡುಗಡೆ ಮಾಡಿ ಭಾರೀ ಪ್ರಮಾಣದ ಮಾರಾಟ ಕಂಡಿತ್ತು.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಈ ಹಿನ್ನೆಲೆ ಎಕ್ಸ್‌5 ಸರಣಿಯನ್ನು ಮುಂದುವರಿಸಿರುವ ಬಿಎಂಡಬ್ಲ್ಯು, ಸ್ಪೋಟ್ಸ್ ಆವೃತ್ತಿಯಲ್ಲಿ ಸಿದ್ಧಗೊಂಡಿರುವ ಎಕ್ಸ್‌ ಡ್ರೈವ್ 30ಡಿ ಬಿಡುಗಡೆ ಮಾಡುವ ಮೂಲಕ ಹೊಸ ಭರವಸೆ ಹುಟ್ಟುಹಾಕಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಹೊರ ವಿನ್ಯಾಸ

ಈ ಹಿಂದಿನ ಎಕ್ಸ್5 ಆವೃತ್ತಿಗಳಿಂತಲೂ ಹೆಚ್ಚು ಸುಧಾರಿತ ವಿನ್ಯಾಗಳನ್ನು ಹೊಂದಿರುವ ಎಕ್ಸ್‌ ಡ್ರೈವ್ 30ಡಿ ಮಾದರಿಯೂ ಟ್ವಿನ್ ಸರ್ಕ್ಯೂಲರ್ ಎಲ್‌ಇಡಿ ಹೆಡ್‌ಲ್ಯಾಂಪ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಪ್ರಿಮಿಯಂ ಲುಕ್ ಪಡೆದುಕೊಂಡಿದ್ದು, ಸುಮಾರು 100 ಕೆಜಿ ತೂಕದಲ್ಲಿ ಕಡಿತಗೊಳಿಸಲಾಗಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಜೊತೆಗೆ ಎಲ್‌ಇಡಿ ಟೈಲ್ ಲೈಟ್, ರಿರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಆಕರ್ಷಕ ಎಕ್ಸ್5 ಬ್ಯಾಡ್ಜ್ ಪಡೆದುಕೊಂಡಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಒಳವಿನ್ಯಾಸ

ಐಷಾರಾಮಿ ಒಳವಿನ್ಯಾಸ ಹೊಂದಿರುವ ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮಾದರಿಯೂ, ಐವೆರಿ ವೈಟ್ ಸೀಟುಗಳ ವ್ಯವಸ್ಥೆ ಹೊಂದಿದೆ. ಜೊತೆಗೆ ಹಿಂದಿನ ಆವೃತ್ತಿಗಳಿಂತಲೂ ಹೆಚ್ಚಿನ ಬೂಟ್ ಸ್ಪೇಸ್ ಪಡೆದುಕೊಂಡಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಅದಲ್ಲದೇ ದೂರದ ಪ್ರಮಾಣಕ್ಕೆ ಅನುಕೂಲವಾಗುವಂತೆ ಒಳವಿನ್ಯಾಸವನ್ನು ಕೈಗೊಳ್ಳಲಾಗಿದ್ದು, ಮನರಂಜನೆ ಹಾಗೂ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಎಂಜಿನ್ ಸಾಮರ್ಥ್ಯ

3-ಲೀಟರ್ ಇನ್‌ಲೈನ್-6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 255 ಬಿಎಚ್‌ಪಿ ಹಾಗೂ 560ಎನ್‌ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಕೇವಲ 6.5 ಸೇಕೆಂಡ್‌ಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿರುವ ಎಕ್ಸ್5 ಎಕ್ಸ್‌ ಡ್ರೈವ್ 30ಡಿ, ಗಂಟೆಗೆ 230 ಕಿಮಿ ಕ್ರಮಿಸಬಲ್ಲದು.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಇನ್ನು 8-ಸ್ಪೀಡ್ ಸ್ಪೋರ್ಟ್ ಆಟೋಮ್ಯಾಟಿಕ್ ಟಾರ್ನ್‌ಮಿಷನ್ ಹೊಂದಿರುವ ಎಕ್ಸ್5 ಎಕ್ಸ್‌ ಡ್ರೈವ್ 30ಡಿ, ಎಬಿಎಸ್ ಹಾಗೂ ಕ್ರೂಜ್ ಕಂಟ್ರೋಲರ್ ವ್ಯವಸ್ಥೆ ಪಡೆದುಕೊಂಡಿದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಮೈಲೇಜ್

ಸುಧಾರಿತ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆ ಮೈಲೇಜ್ ವಿಚಾರದಲ್ಲಿ ಉತ್ತಮವಾಗಿರು ಎಕ್ಸ್5 ಎಕ್ಸ್‌ ಡ್ರೈವ್ 30ಡಿ, ಪ್ರತಿ ಲೀಟರ್‌ಗೆ 8.2 ಕಿ.ಮಿ ಮೈಲೇಜ್ ನೀಡುತ್ತೆ. ಅದೇ ರೀತಿಯಾಗಿ ಹೆದ್ದಾರಿಗಳಲ್ಲಿ ಅದರ ಮೈಲೇಜ್ ಪ್ರಮಾಣ 12. 8 ಕಿ.ಮಿ ಆಗಿರುತ್ತದೆ.

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಬೆಲೆಗಳು( ದೆಹಲಿ ಎಕ್ಸ್‌ಶೋರಂ ಪ್ರಕಾರ)

ಎಕ್ಸ್5 ಎಕ್ಸ್‌ ಡ್ರೈವ್ 30ಡಿ- ರೂ. 74.3 ಲಕ್ಷ

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮೊದಲ ಚಾಲನಾ ವಿಮರ್ಶೆ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಕ್ಸ್5 ಸರಣಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತೆ ಬಂದಿರುವ ಬಿಎಂಡಬ್ಲ್ಯು, ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಮಾದರಿಯನ್ನು ಪ್ರಸ್ತುತ ಐಷಾರಾಮಿ ಕಾರು ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಉದ್ದೇಶದಿಂದಲೇ ಅಭಿವೃದ್ಧಿ ಮಾಡಲಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎಕ್ಸ್5 ಎಕ್ಸ್‌ ಡ್ರೈವ್ 30ಡಿ ಅತ್ಯುತ್ತಮ ಕಾರು ಮಾದರಿಯಾವುದರಲ್ಲಿ ಯಾವುದೇ ಸಂದೇಹವಿಲ್ಲ.

English summary
Read in Kannada about BMW X5 xDrive30d First Drive Review.
Story first published: Friday, June 30, 2017, 12:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark