ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಆರಂಭದಲ್ಲಿ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಟಾಟಾ ಆಲ್‌ಟ್ರೊಜ್ ಬ್ರ್ಯಾಂಡ್‌ನ ಹೊಸ 'ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್' (ಆಲ್ಫಾ) ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ. ಈ ಹೊಸ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಟಾಟಾ ಮುಂದಿನ ಎಲ್ಲಾ ಸಣ್ಣ ಮತ್ತು ಮಧ್ಯಮ ಗಾತ್ರದ ಮಾದರಿಗಳನ್ನು ತಯಾರಿಸಲಾಗುತ್ತದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಟಾಟಾ ಆಲ್‌ಟ್ರೊಜ್ ಅತ್ಯಾಧುನಿಕ ಫೀಚರ್ ಗಳೊಂದಿಗೆ ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ. ಇನ್ನು ಟಾಟಾ ಆಲ್‌ಟ್ರೊಜ್ ಕಾರಿನಲ್ಲಿ ಬಿಎಸ್ 6 ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಇನ್ನು ನಾವು ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ಅನ್ನು ಡ್ರೈವ್ ಮಾಡಿದ ಅನುಭವ, ಫೀಚರ್, ಪರ್ಫಾಮೆನ್ಸ್, ಎಂಜಿನ್ ಮತ್ತು ಇತರ ಎಂಜಿನ್ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೇವೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ವಿನ್ಯಾಸ ಮತ್ತು ಫೀಚರ್‌ಗಳು

ಕಂಪನಿಯ ‘ಇಂಪ್ಯಾಕ್ಟ್ 2.0' ವಿನ್ಯಾಸ ಒಳಗೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯ ಎರಡನೇ ಮಾದರಿ ಆಲ್‌ಟ್ರೊಜ್ ಆಗಿದೆ. 2.0' ವಿನ್ಯಾಸವನ್ನು ಟಾಟಾ ಹ್ಯಾರಿಯರ್ ಎಸ್‍ಯುವಿ ಕೂಡ ಒಳಗೊಂಡಿದೆ. ಇನ್ನು ಟಾಟಾ ಆಲ್‌ಟ್ರೊಜ್ ಕಾರಿನ ವಿನ್ಯಾಸವನ್ನು ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅಗ್ರೇಸಿವ್ ಮತ್ತು ಹೆಚ್ಚು ಪ್ರೀಮಿಯಂ ಆಗಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಲೋ ಬೀಮ್ ಪ್ರೊಜೆಕ್ಟರ್ ಮತ್ತು ಸ್ಲೀಕ್ ಹೆಡ್‌ಲೈಟ್‌ಗಳನ್ನು ಹೊಂದಿದೆ. ಬಂಪರ್‌ನ ಕೆಳಗಿನ ಭಾಗದಲ್ಲಿ ಫಾಗ್ ಲ್ಯಾಂಪ್ ಪಕ್ಕದಲ್ಲಿ ಇರಿಸಲಾಗಿರುವ ಡಿಆರ್‌ಎಲ್‌ಗಳನ್ನು ಹೊರತುಪಡಿಸಿ ಆಲ್‌ಟ್ರೊಜ್ ಎಲ್ಇಡಿ ಲೈಟ್ ಅನ್ನು ಹೊಂದಿಲ್ಲ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಶಾರ್ಪ್ ಲೈನ್ ನೊಂದಿಗೆ ಬಾನೆಟ್ ಅನ್ನು ಸಹ ಹೊಂದಿದೆ, ಇದು ಶಾರ್ಕ್-ನೋಸ್ ವಿನ್ಯಾಸವನ್ನು ನೀಡುತ್ತದೆ ಮತ್ತು ಬ್ಲ್ಯಾಕ್ ಗ್ರಿಲ್ ಅನ್ನು ಸಹ ಒಳಗೊಂಡಿರುತ್ತದೆ. ಮುಂಭಾಗ ಸಂಪೂರ್ಣವಾಗಿ ಕ್ರೋಮ್ ಅಲಂಕರಿಸುವಿಕೆಯ ತೆಳುವಾದ ಸ್ಟ್ರಿಪ್ ಹೊಂದಿದೆ. ಇದು ಟಾಟಾ ಆಲ್‌ಟ್ರೊಜ್ ಕಾರಿಗೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಲೋವರ್ ಬಂಪರ್ ಮೇಲಿರುವ ಏರ್ ಇನ್ ಟೆಕ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಇನ್ನು ಟಾಟಾ ಆಲ್‌ಟ್ರೊಜ್ ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಉನ್ನತ ವಿಂಡೋ ಲೈನ್ ಅನ್ನು ಪಡೆಯುತ್ತದೆ, ಅದು ಹ್ಯಾಚ್‌ಬ್ಯಾಕ್‌ಗೆ ಸ್ಪೋರ್ಟಿ ನಿಲುವನ್ನು ನೀಡುತ್ತದೆ. ವಿಂಡೋ ಲೈನ್ ಹಿಂಭಾಗಕ್ಕೆ ತಕ್ಕಂತೆ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಟಾಟಾ ಆಲ್‌ಟ್ರೊಜ್ 16 ಇಂಚಿನ, ಡ್ಯುಯಲ್-ಟೋನ್ ಲೇಸರ್-ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿರುವ ಫ್ಲೇರ್ಡ್ ವ್ಹೀಲ್ ಆರ್ಚ್‌ಗಳನ್ನು ಸಹ ಹೊಂದಿದೆ, ಇದು ಕಾರಿನ ಒಟ್ಟಾರೆ ನೋಟಕ್ಕೆ ಪೂರಕವಾಗಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಹಿಂದಿನ ಡೋರಿನ ಹ್ಯಾಂಡಲ್‌ಗಳು ಸಿ-ಪಿಲ್ಲರ್‌ನೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಹ್ಯಾಚ್‌ಬ್ಯಾಕ್ ಕ್ಲೀನ್ ಮತ್ತು ಸ್ಪೋರ್ಟಿ ಪ್ರೊಫೈಲ್ ನೀಡುತ್ತದೆ. ಡೋರುಗಳ ಬಗ್ಗೆ ಇನ್ನೊಂದು ವಿಷಯವೆಂದರೆ ಅವು 90 ಡಿಗ್ರಿಗಳವರೆಗೆ ತೆರೆಯುತ್ತವೆ, ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಆರಾಮದಾಯಕವಾಗಿ ಒಳ ಭಾಗವನ್ನು ಪ್ರವೇಶಿಸಬಹುದು.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಹಿಂಭಾಗದ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ನಯವಾಗಿ ಕಾಣುವ ಟೈಲ್ ಲೈಟ್ ಯುನಿಟ್ ಅನ್ನು ಅಳವಡಿಸಲಾಗಿದ್ದು, ಇದು ಬ್ಲ್ಯಾಕ್ಡ್ ಔಟ್ ಆಗಿದೆ. ಹಿಂಭಾಗದಲ್ಲಿ ಸಾಕಷ್ಟು ಪಿಯಾನೋ ಬ್ಲ್ಯಾಕ್ ಫಿನಿಶಿಂಗ್‌ಗಳಿವೆ ಮತ್ತು ಕ್ರೋಮ್‌ ಫಿನಿಶಿಂಗ್ ಹೊಂದಿರುವ ಏಕೈಕ ವಿಷಯವೆಂದರೆ ಬೂಟ್‌ನ ಮಧ್ಯಭಾಗದಲ್ಲಿರುವ ಆಲ್‌ಟ್ರೊಜ್ ಮತ್ತು ಟಾಟಾ ಬ್ಯಾಡ್ಜಿಂಗ್ ಆಗಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಒಟ್ಟಾರೆಯಾಗಿ ಟಾಟಾ ಆಲ್‌ಟ್ರೊಜ್ ಅತ್ಯಂತ ಅದ್ಭುತ ಮತ್ತು ಸ್ಪೋರ್ಟಿ ಆಗಿ ಕಾಣುತ್ತದೆ. ಕಾರು ಅಗ್ರೇಸಿವ್ ಲೈನ್ ಗಳು ಮತ್ತು ಕ್ರೀಸ್‌ಗಳನ್ನು ಹೊಂದಿದೆ ಮತ್ತು ಕಾರಿಗೆ ಸ್ಪೋರ್ಟಿ ಲುಕ್ ನೀಡುವ ಕ್ರೋಮ್ ಗಳನ್ನು ಕೂಡ ಒಳಗೊಂಡಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಇಂಟಿರಿಯರ್

ಇನ್ನು ಟಾಟಾ ಆಲ್‌ಟ್ರೊಜ್ ಇಂಟಿರಿಯರ್ ನಲ್ಲಿ ಸಾಕಷ್ಟು ಪ್ರಮಾಣದ ಸ್ಪೇಸ್ ಅನ್ನು ಹೊಂದಿದೆ. ಟಾಟಾ ಆಲ್‌ಟ್ರೊಜ್ ಕ್ಯಾಬಿನ್ ಪ್ರೀಮಿಯಂ-ನೆಸ್ ಅನ್ನು ನೀಡುತ್ತದೆ, ಇದು ಟಾಟಾದ ಇತರ ಮಾದರಿಗಳಲ್ಲಿ ಕಂಡುಬರುವುದಿಲ್ಲ. ಡ್ಯಾಶ್‌ಬೋರ್ಡ್‌ನಲ್ಲಿ ಉತ್ತಮ ಪ್ರೀಮಿಯಂ ಸಾಫ್ಟ್-ಟಚ್ ವಸ್ತುಗಳೊಂದಿಗೆ ನೀಡಲಾಗುತ್ತದೆ, ಜೊತೆಗೆ ಸೆಂಟರ್ ಕನ್ಸೋಲ್‌ನಲ್ಲಿರುವ ಬಟನ್ ಗಳು ಕೂಡ ಆಕರ್ಷಕವಾಗಿ ಮತ್ತು ಪ್ರಯೋಜನಕಾರಿಯಾಗಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಇಂಟಿರಿಯರ್ ನಲ್ಲಿ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ನೀಡಲಾಗಿದೆ. ಈ ಸಿಸ್ಟಂನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಒಳಗೊಂಡಿದೆ. ಇನ್ನು ಡ್ಯಾಶ್ ಬೋರ್ಡ್ ಅಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ. ಇನ್ನು ಮೌಂಟಡ್ ಕಂಟ್ರೋಲ್ ಗಳೊಂದಿಗೆ ಸ್ಪೋರ್ಟಿ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಸಹ ಒಳಗೊಂಡಿವೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಲೆದರ್ ನಿಂದ ಸುತ್ತುವರಿಂದ ಸ್ಟೀಯರಿಂಗ್, ಮೌಂಟಡ್ ಕಂಟ್ರೋಲ್ ಗಳ ಎಡಭಾಗವು ಇನ್ಫೋಟೈನ್‌ಮೆಂಟ್ ಸಿಸ್ಟಂ, ಬಲಭಾಗವು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕ್ರೂಸ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ..

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಈ ಕಾರಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬಗ್ಗೆ ಹೇಳುವುದಾದರೆ, ಇದು ಸೆಮಿ-ಡಿಜಿಟಲ್ ಕನ್ಸೋಲ್ ಆಗಿದ್ದು ಅದು ಅನಲಾಗ್ ಸ್ಪೀಡೋಮೀಟರ್ ಅನ್ನು ಒಳಗೊಂಡಿರುತ್ತದೆ, ಉಳಿದ ಎಲ್ಲಾ ಮಾಹಿತಿಗಳು ಡಿಜಿಟಲ್ ಪ್ರದರ್ಶನವನ್ನು ಹೊಂದಿವೆ. ಇದು ಡ್ರೈವರ್‌ಗೆ ಟ್ಯಾಕೋಮೀಟರ್, ಗೇರ್ ಇಂಡಿಕೇಟರ್, ರೇಂಜ್ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಇನ್ನು ಟಾಟಾ ಆಲ್‌ಟ್ರೊಜ್ ಇಂಟಿರಿಯರ್ ನಲ್ಲಿರುವ ಪ್ರೀಮಿಯಂ ಫ್ಯಾಬ್ರಿಕ್ ಸೀಟುಗಳು ಉತ್ತಮ ಆರಾಮದಾಯಕವಾಗಿದೆ. ಚಾಲಕ ಮತ್ತು ಮುಂಭಾಗದ ಪ್ರಯಾಣಿಕರು ಸ್ಲೈಡಿಂಗ್ ಸೆಂಟ್ರಲ್ ಆರ್ಮ್‌ಸ್ಟ್ರೆಸ್ಟ್‌ಗಳನ್ನು ಸಹ ಪಡೆಯುತ್ತಾರೆ, ಇದು ಇನ್ನಷ್ಟು ಆರಾಮದಾಯಕ ಅನುಭವನ್ನು ನೀಡುತ್ತದೆ. ಇದು ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್ ಹೊಂದಾಣಿಕೆಗಳ ಜೊತೆಗೆ ಉತ್ತಮ ಸೀಟಿಂಗ್ ಪೊಷಿಸನ್ ಅನ್ನು ಹೊಂದಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಈ ಕಾರಿನ ಹಿಂಭಾಗದ ಸೀಟ್ ಹೆಡ್‌ರೂಮ್ ಮತ್ತು ಲೆಗ್ ರೂಂ ಸ್ವಲ್ಪ ಕಡಿಮೆ ಅನುಭವಿಸುತ್ತದೆ, ವಿಶೇಷವಾಗಿ ನೀವು 6 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದ್ದರೆ. ಇನ್ನು ಈ ಸೀಟಿನಲ್ಲಿ ಮೂರು ಜನರು ಸುಲುಭವಾಗಿ ಕುಳಿತಕೊಳ್ಳಬಹುದು. ಹಿಂಭಾಗದ ಪ್ರಯಾಣಿಕರು ಕೇಂದ್ರ ಆರ್ಮ್ ರೆಸ್ಟ್ ಅನ್ನು ಪಡೆಯುತ್ತಾರೆ, ಜೊತೆಗೆ ಹಿಂಭಾಗದಲ್ಲಿ ಎಸಿ ವೆಂಟ್ ಗಳನ್ನು ಹೊಂದಿವೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಕಾರು 345-ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇನ್ನು ದೂರ ಪ್ರಯಾಣ ಮಾಡುವಾಗ ಮತ್ತು ಶಾಪಿಂಗ್ ನಡೆಸಿದ ಸಂದರ್ಭದಲ್ಲಿ ಲಗೇಜ್ ಗಳನ್ನು ಇಡಲು ಹೆಚ್ಚಿನ ಸ್ಪೇಸ್ ಅಗತ್ಯವಿದ್ದರೆ, 60:40 ಸ್ಪ್ಲಿಟ್ ಹಿಂಭಾಗದ ಸೀಟನ್ನು ಕೆಳಕ್ಕೆ ಮಡಚಿದಾಗ 665 ಲೀಟರ್ ವರೆಗೆ ಬೂಟ್ ಸ್ಪೇಸ್ ಹೆಚ್ಚಾಗುತ್ತದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಎಂಜಿನ್

ಇನ್ನು ಈ ಟಾಟಾ ಆಲ್‌ಟ್ರೊಜ್ ಕಾರಿನಲ್ಲಿ 1.5-ಲೀಟರ್, ನಾಲ್ಕು-ಸಿಲಿಂಡರ್ ರೆವೊಟೊರ್ಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಟಾಟಾ ನೆಕ್ಸಾನ್ ಕಾರಿನಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಸಿಟಿ ಡ್ರೈವಿಂಗ್ ಎಂದರೆ ಎಂಜಿನ್ ಹೆಚ್ಚು ಪರಿಣಾಮಕಾರಿಯಾಗಿದೆ. ಭಾರೀ ಟ್ರಾಫಿಕ್ ನಡುವೆ ಸಹ ಲೈಟ್-ಕ್ಲಚ್ ಆರಾಮದಾಯಕ ಚಾಲನೆಗೆ ಅವಕಾಶ ನೀಡುತ್ತದೆ. ಹೆದ್ದಾರಿಗಳಲ್ಲಿ ಟಾಟಾ ಆಲ್‌ಟ್ರೊಜ್ ಉತ್ತಮ ಪರ್ಫಾಮೆನ್ಸ್ ಅನ್ನು ಹೊಂದಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಗೇರ್ ಶಿಫ್ಟ್‌ಗಳು ಸುಗಮವಲ್ಲ, ಇದರಿಂದಾಗಿ ಒಬ್ಬರು ನಿರೀಕ್ಷಿಸಿದಷ್ಟು ಸುಲಭವಾಗಿ ತ್ವರಿತ ಗೇರ್ ಬದಲಾವಣೆ ಮಾಡಲು ಚಾಲಕನಿಗೆ ಸಾಧ್ಯವಾಗುವುದಿಲ್ಲ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಇನ್ನು ಈ ಕಾರಿನ ಡ್ರೈವ್ ಮೋಡ್ ಗಳ ಬಗ್ಗೆ ಹೇಳುವುದಾದರೆ, ‘ಸಿಟಿ' ಮೋಡ್‌ನಲ್ಲಿ ಥ್ರೊಟಲ್ ಪ್ರತಿಕ್ರಿಯೆ ಯೋಗ್ಯವಾಗಿದ್ದರೆ, ‘ಇಕೋ' ಮೋಡ್‌ನಲ್ಲಿರುವ ಕಾರು ನಿಜವಾಗಿಯೂ ನಿಧಾನವಾಗಿದೆ. ಈ ಎರಡು ಡ್ರೈವ್ ಮೋಡ್ ಗಳಲ್ಲಿ ಸಿಟಿ ಮೋಡ್ ಹೆಚ್ಚು ಉತ್ತಮವಾಗಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಕಾರಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಹೆಚ್ಚಿನ ವೇಗದಲ್ಲಿ ಹೆದ್ದಾರಿಗೆ ಸೂಕ್ತವಾಗಿರುತ್ತದೆ. ಆದರೆ ಕೆಲವು ಗ್ರಾಮಿಣ ಭಾಗದ ಗುಂಡಿ ಮತ್ತು ಹಳ್ಳಗಳನ್ನು ತುಂಬಿರುವ ರಸ್ತೆಗಳಲ್ಲಿ ಅಷ್ಟು ಉತ್ತಮವಾಗಿಲ್ಲ. ಆದರೆ ಟಾಟಾ ಆಲ್‌ಟ್ರೊಜ್ ಕಾರಿನ ಬ್ರೇಕಿಂಗ್ ಸಿಸ್ಟಂ ಅತ್ಯುತ್ತಮವಾಗಿದೆ. ಈ ಕಾರಿನಲ್ಲಿ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಕಾರಿನ ಪ್ಲಸ್ ಪಾಯಿಂಟ್ ಅಂದರೆ, ‘ಆಲ್ಫಾ' ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ, ಇದು ವೇಗದಲ್ಲಿ ಚಲಿಸುವಾಗಲೂ ಉತ್ತಮ ಕಂಟ್ರೋಲ್ ಅನ್ನು ಹೊಂದಿದೆ. ಅಲ್ಲದೇ ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಸ್ಟೀಯರಿಂಗ್ ರೆಸ್ಪಾನ್ಸ್ ಉತ್ತಮವಾಗಿದೆ. ಹೆಚ್ಚಿನ ವೇಗ ಮತ್ತು ಕಡಿವೆ ವೇಗದಲ್ಲಿಯು ಸಾಕಷ್ಟು ಸುಲಭವಾಗಿ ಡ್ರೈವಿಂಗ್ ಅನ್ನುಭವನ್ನು ನೀಡುತ್ತದೆ. ಟಾಟಾ ಆಲ್‌ಟ್ರೊಜ್ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂಬುದು ಎಂದು ಹಲವರ ಪ್ರಮುಖ ಪ್ರಶ್ನೆಯಾಗಿದೆ. ಟಾಟಾ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸಿಟಿಗಳಲ್ಲಿ ಪ್ರತಿ ಲೀಟರ್ಗೆ 14 ರಿಂದ 17 ಕಿ.ಮೀ ಮೈಲೇಜ್ ಅನ್ನು ನೀಡಿದರೆ, ಹೆದ್ದಾರಿಯಲ್ಲಿ ಸುಮಾರು 19 ರಿಂದ 22 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.09 ಲಕ್ಷಗಳಾಗಿದೆ. ಇದು ಅತ್ಯುತ್ತಮ ಫ್ಯಾಮಿಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಈ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇದರ ಒಳಭಾಗದಲ್ಲಿಯು ಸಾಕಷ್ಟು ಸ್ಪೇಸ್ ಅನ್ನು ಹೊಂದಿದೆ.

ಜನಪ್ರಿಯ ಟಾಟಾ ಆಲ್‌ಟ್ರೊಜ್ ಡೀಸೆಲ್ ವೆರಿಯೆಂಟ್ ರಿವ್ಯೂ

ಟಾಟಾ ಆಲ್‌ಟ್ರೊಜ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಗ್ಲಾಂಝಾ, ಹ್ಯುಂಡೈ 20, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಫೋಟಿ ನೀಡುತ್ತದೆ. ಅತ್ಯಂತ ಸುರಕ್ಷಿತವಾದ ಫ್ಯಾಮಿಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿಸಲು ಬಯಸುವವರಿಗೆ ಟಾಟಾ ಆಲ್‌ಟ್ರೊಜ್ ಉತ್ತಮ ಆಯ್ಕೆಯಾಗಿದೆ. ಈ ಟಾಟಾ ಆಲ್‌ಟ್ರೊಜ್ ಕಾರಿಗೆ ಕ್ರ್ಯಾಶ್ ಟೆಸ್ಟ್ ನಲ್ಲಿ 5-ಸ್ಟಾರ್ ಗ್ಲೋಬಲ್ ಎನ್‌ಸಿಎಪಿ ರೇಟಿಂಗ್ ಅನ್ನು ಪಡೆದುಕೊಂಡಿದೆ.

Most Read Articles

Kannada
English summary
Tata Altroz BS6 Diesel Review (Road Test). Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X