ದಟ್ಸನ್ ರೆಡಿ ಗೊ; ನಿಮ್ಮ ಅಂತಸ್ತಿಗೆ ತಕ್ಕ ಕಾರು ಹೌದೇ?

By Nagaraja

ಹೇಳಿ ಕೇಳಿ ತಿಳಿದಂತೆ ಭಾರತೀಯರ ಪಾಲಿಗೆ ದಟ್ಸನ್ ಹೊಸ ಬ್ರಾಂಡ್. ನೂತನ ಬ್ರಾಂಡ್ ಆಗಿರುವಂತೆಯೇ ಕಾರು ಖರೀದಿಗಾರರಲ್ಲಿ ಹಲವಾರು ಗೊಂದಲಗಳಿರುವುದು ಸಹಜ. ಎರಡು ವರ್ಷಗಳ ಹಿಂದೆಯಷ್ಟೇ ಭಾರತ ಪ್ರವೇಶಿಸಿರುವ ದಟ್ಸನ್ ಈಗಗಾಲೇ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಎಂಪಿವಿಗಳೆಂಬ ಎರಡು ಮಾದರಿಗಳನ್ನು ಬಿಡುಗಡೆಗೊಳಿಸಿದರೂ ನಿರೀಕ್ಷಿಸಿದಷ್ಟು ಯಶ ದೊರಕಿರಲಿಲ್ಲ.

ಮೋಡಿ ಮಾಡಿದ ದಟ್ಸನ್ ರೆಡಿ ಗೊ ಜಾಗತಿಕ ಅನಾವರಣ

ಈ ಎಲ್ಲ ಅಂಶಗಳು ಒಂದೆಡೆಯಾದರೆ ವಿಶಾಲವಾಗಿ ಹರಡಿರುವ ಭಾರತೀಯ ಸಣ್ಣ ಕಾರು ಮಾರುಕಟ್ಟೆಯಲ್ಲಿ ಪ್ರಭಾವ ಬೀರುವ ನಿರೀಕ್ಷೆ ಹೊಂದಿರುವ ದಟ್ಸನ್, 'ರೆಡಿ ಗೊ' ಎಂಬ ಆಕರ್ಷಕ ಕಾರನ್ನು ಅನಾವರಣಗೊಳಿಸಿದೆ. ಅಷ್ಟಕ್ಕೂ ದಟ್ಸನ್ ರೆಡಿ ಗೊ ನಿಮ್ಮ ಅಂತಸ್ತಿಗೆ ತಕ್ಕ ಕಾರು ಹೌದೇ? ಎಂಬುದನ್ನು ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ಸಮಗ್ರ ವಿವರಣೆಯ ಮುಖಾಂತರ ಇಲ್ಲಿ ತಿಳಿಯುವ ಪ್ರಯತ್ನ ಮಾಡಲಿದ್ದೇವೆ.

ಅರ್ಬನ್ ಕ್ರಾಸ್

ಅರ್ಬನ್ ಕ್ರಾಸ್

ನೂತನ ದಟ್ಸನ್ ರೆಡಿ ಗೊ ತನ್ನನ್ನು ತಾನೇ ಅರ್ಬನ್ ಕ್ರಾಸ್ ಎಂದು ಬಿಂಬಿಸಿದ್ದು, ನಗರ ಪ್ರದೇಶದ ಯುವ ವಾಹನ ಖರೀದಿಗಾರರನ್ನು ಹೆಚ್ಚು ಗುರಿಯಾಗಿಸಿಕೊಂಡಿದೆ.

ಒಳಮೈ

ಒಳಮೈ

ಸಣ್ಣ ಕಾರು ಆಗಿರುವ ಹೊರತಾಗಿಯೂ ಕೈಗೆಟುಕುವ ದರಗಳಲ್ಲಿ ಗರಿಷ್ಠ ವೈಶಿಷ್ಟ್ಯಗಳನ್ನು ಒದಗಿಸುವುದರತ್ತ ದಟ್ಸನ್ ಗಮನ ಹರಿಸಿದೆ.

ಚಾರ್ಚಿಂಗ್ ಪೋರ್ಟ್

ಚಾರ್ಚಿಂಗ್ ಪೋರ್ಟ್

ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್ ಇಲ್ಲದೆಯೇ ಜೀವನ ಇಲ್ಲ ಎಂಬಂತಾಗಿದೆ. ಇದನ್ನು ಮನಗಂಡಿರುವ ದಟ್ಸನ್ 12 ವಾಟ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ನೀಡಿರುವುದು ಸ್ವಾಗತಾರ್ಹವೆನಿಸುತ್ತಿದೆ.

ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್

ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್

ತ್ರಿ ಸ್ಪೋಕ್ ಸ್ಟರೀಂಗ್ ವೀಲ್ ಸೇವೆಯೂ ಅತ್ಯುತ್ತಮ ಚಾಲನೆಯನ್ನು ಖಾತ್ರಿಪಡಿಸಲಿದೆ. ಇದರ ನಿರ್ಮಾಣ ಶೈಲಿ ಅತ್ಯಂತ ಸರಳವಾಗಿದ್ದು, ಎಂಟ್ರಿ ಲೆವೆಲ್ ಕಾರಿಗೆ ಸೂಕ್ತವೆನಿಸುತ್ತಿದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಸಿಂಗಲ್ ಡಯಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಸ್ಪೀಡೋಮೀಟರ್, ಡಿಜಿಟಲ್ ಮಾಹಿತಿ ಸ್ಕ್ರೀನ್, ಫ್ಯೂಯಲ್ ಗೇಜ್, ಓಡೋಮೀಟರ್ ಮತ್ತು ವೇಗ ಮಾಪಕ ಸೌಲಭ್ಯಗಳಿರಲಿದೆ.

ಆಡಿಯೋ ಸಿಸ್ಟಂ

ಆಡಿಯೋ ಸಿಸ್ಟಂ

ದಟ್ಸನ್ ರೆಡಿ ಗೊ ಆಡಿಯೋ ಸಿಸ್ಟಂ, ಸಿಡಿ, ಆಕ್ಸ್ ಇನ್, ಯುಎಸ್ ಬಿ, ರೆಡಿಯೋ, ಹೊಂದಾಣಿಸಬಹುದಾದ ಎಸಿ ವೆಂಟ್ಸ್ ಸೇವೆಗಳಿರಲಿದೆ.

ಸ್ಟೋರೆಜ್ ಜಾಗ

ಸ್ಟೋರೆಜ್ ಜಾಗ

ದಟ್ಸನ್ ರೆಡಿ ಗೊ ಸಣ್ಣ ಕಾರಿನಲ್ಲಿ ಬೇಕಾದಷ್ಟು ಸ್ಟೋರೆಜ್ ಜಾಗವನ್ನು ಕೊಡಲಾಗಿದೆ.

ಹೆಡ್ ರೆಸ್ಟ್

ಹೆಡ್ ರೆಸ್ಟ್

ಇನ್ನು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೀಟುನೊಂದಿಗೆ ಜೋಡಿಸಿದ ಹೆಡ್ ರೆಸ್ಟ್ ಗಳನ್ನು ನೀಡಲಾಗಿದೆ.

ಪ್ರಭಾವ

ಪ್ರಭಾವ

ಒಟ್ಟಾರೆಯಾಗಿ ಕಾರಿನ ಒಳಮೈ ಮಾರುತಿ ಆಲ್ಟೊ 800 ಮತ್ತು ಹ್ಯುಂಡೈ ಇಯಾನ್ ಗಳಿಗೆ ನಿಕಟ ಪ್ರತಿಸ್ಪರ್ಧೆಯನ್ನು ಒಡ್ಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಹೊರಮೈ ಚಿತ್ರಗಳು

ಹೊರಮೈ ಚಿತ್ರಗಳು

ಕ್ವಿಡ್ ತರಹನೇ 185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿರುವ ರೆಡಿ ಗೊ, ಗುಂಡಿಗಳಿಂದ ತುಂಬಿಕೊಂಡಿರುವ ಭಾರತೀಯ ರಸ್ತೆಯಲ್ಲಿ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ.

ಡಿ ಕಟ್ ಗ್ರಿಲ್

ಡಿ ಕಟ್ ಗ್ರಿಲ್

ಮುಂಭಾಗದಲ್ಲಿ ದೊಡ್ಡದಾದ 'ಡಿ ಕಟ್' ಗ್ರಿಲ್ ಪ್ರಮುಖ ಆಕರ್ಷಣೆಯಾಗಲಿದೆ. ಇದು ಇತರ ಸಣ್ಣ ಕಾರುಗಿಂತಲೂ ಹೊರತಾಗಿ ಎತ್ತರದ ರಸ್ತೆ ಸಾನಿಧ್ಯವನ್ನು ಪಡೆದಿದೆ.

ಸ್ವಭಾವ ರೇಖೆ

ಸ್ವಭಾವ ರೇಖೆ

ಬದಿಯಲ್ಲಿ ಸ್ವಭಾವ ರೇಖೆಗಳು ಹಾದು ಹೋಗುತ್ತಿದ್ದು, ಕಪ್ಪು ವರ್ಣದ ಪಿಲ್ಲರ್ ಗಳು ಕ್ರೀಡಾತ್ಮಕ ಲುಕ್ ನೀಡಲಿದೆ.

ಟೈಲ್ ಲ್ಯಾಂಪ್

ಟೈಲ್ ಲ್ಯಾಂಪ್

ಅಂತೆಯೇ ಹಿಂಭಾಗದಲ್ಲಿ ಬಾಗಿದ ಡೋರ್, ಟೈಲ್ ಲ್ಯಾಂಪ್ ಮತ್ತು ದಟ್ಸನ್ ಲಾಂಛನವು ಎದ್ದು ಕಾಣಿಸಲಿದೆ.

ಸಿಎಂಎಫ್-ಎ ತಳಹದಿ

ಸಿಎಂಎಫ್-ಎ ತಳಹದಿ

ಫ್ರಾನ್ಸ್ ಮೂಲದ ರೆನೊ ಜೊತೆ ಸಿಎಂಎಫ್-ಎ ತಹಹದಿ ಹಂಚಿಕೊಂಡಿರುವ ನಿಸ್ಸಾನ್, ದಟ್ಸನ್ ರೆಡಿ ಗೊ ಕಾರನ್ನು ಚೆನ್ನೈನಲ್ಲಿ ಸ್ಥಿತಗೊಂಡಿರುವ ಓರಂಗಡಂ ಘಟಕದಲ್ಲಿ ನಿರ್ಮಿಸಲಿದೆ

ಎಂಜಿನ್

ಎಂಜಿನ್

ರೆನೊ ಕ್ವಿಡ್‌ಗೆ ಸಮಾನವಾದ 800 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡುವ ದಟ್ಸನ್ ರೆಡಿ ಗೊ 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಇದು 74 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ

ಬುಕ್ಕಿಂಗ್, ಬಿಡುಗಡೆ

ಬುಕ್ಕಿಂಗ್, ಬಿಡುಗಡೆ

ವಿತರಣೆ ಜೂನ್ 01ರಂದು ಮಾರುಕಟ್ಟೆ ಪ್ರವೇಶಿಸಲಿರುವ ದಟ್ಸನ್ ರೆಡಿ ಗೊ ಬುಕ್ಕಿಂಗ್ ಪ್ರಕ್ರಿಯೆ ಮೇ ತಿಂಗಳಿಂದ ಆರಂಭವಾಗಲಿದೆ.

ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್

ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್

ಸಣ್ಣ ಕಾರು ಹೊರತಾಗಿಯೂ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸೇವೆಯನ್ನು ಒದಗಿಸುತ್ತಿರುವುದು ದಟ್ಸನ್ ರೆಡಿ ಗೊ ಕಾರನ್ನು ಇತರ ವಾಹನಗಳಿಗಿಂತ ಭಿನ್ನವಾಗಿಸಲಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಸಣ್ಣ ಕಾರು ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ರೆನೊ ಕ್ವಿಡ್, ಮಾರುತಿ ಆಲ್ಟೊ 800 ಮತ್ತು ಹ್ಯುಂಡೈ ಇಯಾನ್ ಮಾದರಿಗಳಿಗೆ ದಟ್ಸನ್ ರೆಡಿ ಗೊ ಪ್ರತಿಸ್ಪರ್ಧಿಯಾಗಲಿದೆ.

ಕಾನ್ಸೆಪ್ಟ್

ಕಾನ್ಸೆಪ್ಟ್

2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ದಟ್ಸನ್ ರೆಡಿ ಗೊ ಕಾನ್ಸೆಪ್ಟ್ ಕಾರು ಅನಾವರಣಗೊಂಡಿತ್ತು.

ಮೈಲೇಜ್

ಮೈಲೇಜ್

ನೂತನ ರೆಡಿ ಗೊ ಪ್ರತಿ ಲೀಟರ್ ಗೆ 25.17 ಕೀ.ಮೀ. ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಭವಿಷ್ಯದಲ್ಲಿ...

ಭವಿಷ್ಯದಲ್ಲಿ...

ನಿಕಟ ಭವಿಷ್ಯದಲ್ಲೇ ದಟ್ಸನ್ ರೆಡಿ ಗೊ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಡೀಸೆಲ್ ಎಂಜಿನ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒದಗಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಟೈಲ್ ಲ್ಯಾಂಪ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಿಕಟ ನೋಟದಲ್ಲಿ...

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಹಿಂಬದಿ ಆಸನಗಳು

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಮುಂಭಾಗದ ಭಂಗಿ

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಸ್ವಿಚ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಸ್ಟೀರಿಂಗ್ ವೀಲ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಡೋರ್ ಹ್ಯಾಂಡಲ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಡೋರ್ ಲಾಕ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಡಿ ಕಟ್ ಫ್ರಂಟ್ ಗ್ರಿಲ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ನಿಕಟ ನೋಟ

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಹಿಂಭಾಗದ ನೋಟ

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಗೇರ್ ನಾಬ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಟೈಲ್ ಲೈಟ್

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಚಕ್ರ

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ಮಗದೊಂದು ಭಂಗಿ

ದಟ್ಸನ್ ರೆಡಿ ಗೊ ಎಕ್ಸ್ ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

ದಟ್ಸನ್ ರೆಡಿ ಗೊ ರಿಯರ್ ಪ್ರೊಫೈಲ್

ಇವನ್ನೂ ಓದಿ...

ದಟ್ಸನ್‌ಗೆ ವರದಾನವಾದಿತೇ ಗೊ ಪ್ಲಸ್ ಎಂಪಿವಿ - ಓದಿ ಸಂಪೂರ್ಣ ವಿಮರ್ಶೆ

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

Most Read Articles

Kannada
English summary
Datsun's Latest Car For India - The RediGo - Exclusive Images [38 Photos]
Story first published: Friday, April 15, 2016, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X