ನಿಮ್ಮ ಅಭಿಲಾಷೆಗೆ ತಕ್ಕ ಕಾರು: ಫೋರ್ಡ್ ಫಿಗೊ ಆಸ್ಪೈರ್ ಸಮಗ್ರ ವಿಮರ್ಶೆ

Written By:

ಯುರೋಪಿಯನ್ನರು ಹ್ಯಾಚ್ ಬ್ಯಾಕ್ ಕಾರನ್ನು ಅದೇ ರೀತಿ ಅಮೆರಿಕನ್ನರು ಪಿಕಪ್ ವಾಹನಗಳನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಹಾಗಿದ್ದರೆ ಭಾರತೀಯರಿಗೆ ಯಾವ ಕಾರಿಷ್ಟ? ಸಂಶಯವೇ ಬೇಡ ಅದುವೇ 'ಸೆಡಾನ್' ಕಾರು. ಅದರಲ್ಲೂ ವಾಹನ ದಟ್ಟಣೆ ಕಡಿಮೆ ಮಾಡುವ ಏಕ ಉದ್ದೇಶದೊಂದಿಗೆ ಕೇಂದ್ರ ಸರಕಾರದ ನಿರ್ದೇಶನದೊಂದಿಗೆ ತಯಾರಾಗಿರುವ ನೂತನ ನಾಲ್ಕು ಮೀಟರ್ ನೊಳಗಿನ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಇತ್ತೀಚೆಗಿನ ವರ್ಷಗಳಿಂದ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.

Also Read : ವಾರೆ ವ್ಹಾ ಬಂದೇ ಬಿಡ್ತು ಹೊಸ ಹೋಂಡಾ ಜಾಝ್

ಇದರಿಂದ ನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆಯಾಗುತ್ತದೆಯಲ್ಲದೆ ಅಬಕಾರಿ ತೆರಿಗೆ ವಿನಾಯಿತಿಯೂ ಸಿಗುತ್ತದೆ. ದೇಶದ ಅತ್ಯಂತ ಜನಪ್ರಿಯ ವಿಭಾಗಗಳಲ್ಲಿ ಕಾಂಪಾಕ್ಟ್ ಸೆಡಾನ್ ಒಂದಾಗಿದೆ. ಇದರಿಂದಾಗಿಯೇ ಫೋರ್ಡ್ ನ ನೂತನ ಆಸ್ಪೈರ್ ಕಾರಿಗೆ ಎದುರಾಗುವ ಸವಾಲು ಅಷ್ಟಿಷ್ಟಲ್ಲ. ಇಡೀ ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್ ಸೆಂಟ್ ಮತ್ತು ಟಾಟಾ ಜೆಸ್ಟ್ ಗಳಂತಹ ಸಾಲು ಸಾಲು ಕಾರುಗಳ ಸವಾಲುಗಳನ್ನೇ ಇದು ಎದುರಿಸಬೇಕಾಗುತ್ತದೆ. ಈ ಎಲ್ಲ ಸವಾಲುಗಳನ್ನು ಎದುರಿಸುವಲ್ಲಿ ಫೋರ್ಡ್ ಫಿಗೊ ಆಸ್ಪೈರ್ ಹೇಗೆ ಯಶಸ್ವಿಯಾಗಲಿದೆ ಹಾಗೂ ನಿಮ್ಮ ಅಭಿಲಾಷೆಗಳನ್ನು ಹೇಗೆ ಪೂರೈಸಲಿದೆ ಎಂಬುದಕ್ಕೆ ಮುನ್ನುಡಿಯಾಗಿ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ರಾಜಸ್ತಾನದ ಉದೈಪುರದಲ್ಲಿ ನಡೆಸಿರುವ ಮೊದಲ ಚಾಲನಾ ಪರೀಕ್ಷಾ ವರದಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಓದಲು ಮರೆಯದಿರಿ...

To Follow DriveSpark On Facebook, Click The Like Button
ವಿನ್ಯಾಸ

ವಿನ್ಯಾಸ

ಮುಂಭಾಗದಲ್ಲಿ ಐಕಾನಿಕ್ ಆಸ್ಟನ್ ಮಾರ್ಟಿನ್ ಕಾರಿನಿಂದ ಸ್ಪೂರ್ತಿ ಪಡೆದ ಫ್ರಂಟ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಿದೆ. ನೂತನ ಫೋರ್ಡ್ ಆಸ್ಪೈರ್ ಕ್ಲಾಸಿಕ್, ಸಕ್ರಿಯ ಹಾಗೂ ಸೊಗಸಾದ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ವಿನ್ಯಾಸ

ವಿನ್ಯಾಸ

ಆಕರ್ಷಕ ಹೆಡ್ ಲ್ಯಾಂಪ್, ಕ್ರೋಮ್ ಸ್ಪರ್ಶತೆ, ಸ್ಪಷ್ಟ ದೇಹ ರೇಖೆಗಳು ಏರೋಡೈನಾಮಿಕ್ ನಿರ್ವಹಣೆಯ ಸಂಕೇತಗಳಾಗಿದ್ದು, ಕ್ರಿಯಾತ್ಮಕ ಹಾಗೂ ಸೊಗಸಾದ ಬಾಹ್ಯ ರಚನೆಯನ್ನು ಪಡೆದುಕೊಂಡಿದೆ.

ವಿನ್ಯಾಸ

ವಿನ್ಯಾಸ

ಹಿಂದುಗಡೆ ಸೂಕ್ಷ್ಮವಾಗಿ ಗಮನಿಸಿದರೆ ಹಿಂದೆಂದಿಗಿಂತಲೂ ವಿಭಿನ್ನವಾಗಿ ಫೋರ್ಡ್ ಸಂಸ್ಥೆಯು ಹೆಚ್ಚು ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಟ್ಟಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಫೋರ್ಡ್ ಸಿಗ್ನೇಚರ್ ಶೈಲಿಯನ್ನು ನೀವಿಲ್ಲಿ ಕಾಣಬಹುದು.

ಒಳಮೈ

ಒಳಮೈ

ಫೋರ್ಡ್ ಆಸ್ಪೈರ್ ಕಾರಿನಲ್ಲಿ ಕೊಡಲಾಗಿರುವ ಹೆಚ್ಚು ಸ್ಥಳಾವಕಾಶಯುಕ್ತ ಪ್ರೀಮಿಯಂ ಇಂಟಿರಿಯರ್ ಭಾಗಗಳು ಅತ್ಯುತ್ತಮ ಚಾಲನಾ ಅನುಭವವನ್ನು ನಿಮ್ಮದಾಗಿಸಲಿದೆ. ನಿಸ್ಸಂಶಯವಾಗಿಯೂ ಇದು ಗುಣಮಟ್ಟದಲ್ಲಿ ಯಾವುದೇ ರಾಜಿಗೂ ತಯಾರಾಗದೆ ವಿಶ್ವಾಸಭರಿತ ಒಳಮೈ ಹಾಗೂ ಹೆಚ್ಚು ಅನುಕೂಲತೆಯನ್ನು ನೀಡುತ್ತದೆ.

ಒಳಮೈ - ಮುಂಭಾಗ

ಒಳಮೈ - ಮುಂಭಾಗ

ವಿಶಾಲವಾದ ಪ್ರೀಮಿಯಂ ಒಳಭಾಗಗಳ ಜೊತೆಗೆ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಲೆಥರ್ ಸೀಟುಗಳ ಆಯ್ಕೆ, ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಜೊತೆಗೆ ಬೀಜ್ ಹಾಗೂ ಪಿಯಾನೊ ಬ್ಲ್ಯಾಕ್ ಡ್ಯಾಶ್ ಬೋರ್ಡ್ ಫೋರ್ಡ್ ಪ್ರಯಾಣಿಕರಿಗೆ ಹೆಚ್ಚಿನ ಐಷಾರಾಮಿ ಸೌಲಭ್ಯಗಳನ್ನು ಖಾತ್ರಿಪಡಿಸಲಿದೆ.

ಒಳಮೈ - ಹಿಂಭಾಗ

ಒಳಮೈ - ಹಿಂಭಾಗ

ಫಿಗೊ ಆಸ್ಪೈರ್ ಅಸಾಧಾರಣ ಆಂತರಿಕ ಕಲೆಗಾರಿಕೆಗೆ ಹಾಗೂ ಬಣ್ಣಗಳ ಆಯ್ಕೆಯು ಸಂಪೂರ್ಣವಾಗಿಯೂ ಭಾರತೀಯ ಕುಟುಂಬಕ್ಕೆ ಹೇಳಿ ಮಾಡಿಸಿದಂತಹ ಕಾರು ಇದಾಗಿದೆ. ಉತ್ತಮ ಹೆಡ್ ರೂಂ ಜೊತೆಗೆ ಹಿಂದುಗಡೆ ಸೀಟಿನಲ್ಲಿ ಮೂವರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ.

ಢಿಕ್ಕಿ ಜಾಗ

ಢಿಕ್ಕಿ ಜಾಗ

ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಸ್ವಲ್ಪ ಹಿಂದೆ ಬಿದ್ದರೂ ವಾರಂತ್ಯದ ಪಯಣಕ್ಕೆ ಬೇಕಾದಷ್ಟು ಲಗ್ಗೇಜ್ ಜಾಗ ಖಾತ್ರಿ ಪಡಿಸುವಲ್ಲಿ ಫೋರ್ಡ್ ಯಶ ಕಂಡಿದೆ.

 • ಫೋರ್ಡ್ ಫಿಗೊ ಆಸ್ಪೈರ್: 359 ಲೀಟರ್
 • ಹ್ಯುಂಡೈ ಎಕ್ಸ್ ಸೆಂಟ್: 407 ಲೀಟರ್
 • ಹೋಂಡಾ ಅಮೇಜ್: 400 ಲೀಟರ್
 • ಟಾಟಾ ಜೆಸ್ಟ್: 360 ಲೀಟರ್
 • ಮಾರುತಿ ಸುಜುಕಿ ಡಿಜೈರ್: 315 ಲೀಟರ್

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೀರಿಂಗ್ ವೀಲ್

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೀರಿಂಗ್ ವೀಲ್

ನೂತನ ಫೋರ್ಡ್ ಫಿಗೊ ಆಸ್ಪೈರ್ ಸ್ಟೀರಿಂಗ್ ವೀಲ್ ಅನ್ನು ವಿಶೇಷವಾಗಿ ಗುರುತಿಸಬೇಕಾಗುತ್ತದೆ. ಇದು ವಿಶ್ವಾಸಾರ್ಹ ಚಾಲನೆಯನ್ನು ನೀಡುತ್ತಿದ್ದು, ಇದರ ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಗಳು ಫಿಟ್ ಆ್ಯಂಡ್ ಫಿನಿಶ್ ವಿಚಾರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದೆ.

ಎದ್ದು ಕಾಣಿಸುವ ವೈಶಿಷ್ಟ್ಯ - ಮೈ ಫೋರ್ಡ್ ಡಾಕ್

ಎದ್ದು ಕಾಣಿಸುವ ವೈಶಿಷ್ಟ್ಯ - ಮೈ ಫೋರ್ಡ್ ಡಾಕ್

ಫೋರ್ಡ್ ನಲ್ಲಿರುವ ಮೈ ಫೋರ್ಡ್ ಡಾಕ್ ವ್ಯವಸ್ಥೆಯು ಈ ವಿಭಾಗದ ಕಾರುಗಳಲ್ಲಿ ಮೊದಲ ಅನುಭವವಾಗಿದ್ದು, ಮೊಬೈಲ್ ಫೋನ್ ಗಳನ್ನು ಇಡಲು, ಚಾರ್ಚ್ ಮಾಡಿಸಲು, ಎಂಪಿ3 ಪ್ಲೇಯರ್ ಅಥವಾ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಮೊದಲಾದ ವ್ಯವಸ್ಥೆಗಳು ಕಾರಿನ ಮಾಹಿತಿ ಮನರಂಜನಾ ವ್ಯವಸ್ಥೆಗೆ ಸಂಯೋಜಿಸಲು ಸಹಕಾರಿಯಾಗಲಿದೆ. ಇದರಿಂದಾಗಿಯೇ ಇದರ ಬಳಕೆಯು ಬಹಳ ಸುಲಭವಾಗಲಿದೆ.

ಎದ್ದು ಕಾಣಿಸುವ ವೈಶಿಷ್ಟ್ಯ - ಸಿಂಕ್ ವಿತ್ ಆಪ್ ಲಿಂಕ್

ಎದ್ದು ಕಾಣಿಸುವ ವೈಶಿಷ್ಟ್ಯ - ಸಿಂಕ್ ವಿತ್ ಆಪ್ ಲಿಂಕ್

ಕೆಲವೊಮ್ಮೆ ನಿಮ್ಮ ಕಾರಿಗೆ ಬೇಸಿಕ್ ತಂತ್ರಗಾರಿಕೆಗಳು ಸಾಕಾಗುದಿಲ್ಲ. ಈ ಸಂದರ್ಭದಲ್ಲಿ ಫೋರ್ಡ್ ನಲ್ಲಿರುವ ಹೊಸತಾದ ಸಿಂಕ್ ವಿತ್ ಆಪ್ ಲಿಂಕ್ ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ. ಫೋರ್ಡ್ ನ ಕನೆಕ್ಟಿವಿಟಿ ಸಿದ್ಧಾಂತವು ಹ್ಯಾಂಡ್ಸ್ ಫ್ರೀಯಾಗಿ (ಕೈಗಳ ಸಹಾಯವಿಲ್ಲದೆ) ಮೊಬೈಲ್ ಫೋನ್ ನಿಯಂತ್ರಿಸಲು ಸಹಕಾರಿಯಾಗಲಿದೆ. ನಿಮ್ಮ ನೆಚ್ಚಿನ ಹಾಡು ಆಲಿಸಲು, ಬ್ಲೂಟೂತ್ ನೆರವಿನಿಂದ ಫೋನ್ ಸಂಭಾಷಣೆ ಮಾಡಲು ಇದು ನೆರವಾಗಲಿದೆ. ಅಷ್ಟೇ ಯಾಕೆ ಸ್ಟೀರಿಂಗ್ ಮೌಂಟೆಡ್ ಸ್ಟೀರಿಂಗ್ ವೀಲ್ ನಿಂದಲೇ ಇದರ ನಿಯಂತ್ರಣ ಸಾಧಿಸಬಹುದಾಗಿದೆ. ಕ್ರಿಕೆಟ್ ಸ್ಕೋರ್ ತಿಳಿಯಲು ಅಥವಾ ಮೈಮ್ಯಾಪ್ ಇಂಡಿಯಾ ಸೇವೆಯು ಪಡೆಯಬಹುದು.

ಎದ್ದು ಕಾಣಿಸುವ ವೈಶಿಷ್ಟ್ಯ - ಎಮರ್ಜನ್ಸಿ ಅಸಿಸ್ಟನ್ಸ್

ಎದ್ದು ಕಾಣಿಸುವ ವೈಶಿಷ್ಟ್ಯ - ಎಮರ್ಜನ್ಸಿ ಅಸಿಸ್ಟನ್ಸ್

ಜನಪ್ರಿಯ ಇಕೊಸ್ಪೋರ್ಟ್ ಮಾದರಿಯಲ್ಲಿ ಮೊದಲ ಬಾರಿಗೆ ಪರಿಚವಾಗಿದ್ದ ಎಮರ್ಜನ್ಸಿ ಅಸಿಸ್ಟನ್ಸ್ ಸೇವೆಯು ಹೆಚ್ಚು ಪರಿಣಾಮಕಾರಿಯೆನಿಸಿತ್ತು. ಇದು ಅಪಘಾತದಂತಹ ಸಂದರ್ಭದಲ್ಲಿ ಜಿಪಿಎಸ್ ಲೋಕೆಷನ್ ಮುಖಾಂತರ ತುರ್ತು ಸಂದೇಶವನ್ನು ರವಾನಿಸಲಿದೆ. ಸಿಂಕ್ ಹಾಗೂ ಬ್ಲೂಟೂತ್ ಸಂಪರ್ಕಿತ ಫೋನ್ ನೆರವಿನಿಂದ ವಾಹನ ಅಪಘಾತ ನಡೆದ ಸ್ಥಳ ಕಂಡುಹಿಡಿಯಲು ನೆರವಾಗುತ್ತದೆ.

ಎದ್ದು ಕಾಣಿಸುವ ವೈಶಿಷ್ಟ್ಯ - ಫೋರ್ಡ್ ಕೀ

ಎದ್ದು ಕಾಣಿಸುವ ವೈಶಿಷ್ಟ್ಯ - ಫೋರ್ಡ್ ಕೀ

ಜವಾಬ್ದಾರಿಯುತ ಚಾಲನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫೋರ್ಡ್ ಫಿಗೊ ಆಸ್ಪೈರ್ ಕಾರಿನಲ್ಲಿ ಮೈ ಕೀ ತಂತ್ರಜ್ಞಾನವನ್ನು ನೀಡಲಾಗಿದೆ. ಇದರ ಮುಖಾಂತರ ಚಾಲನಾ ಮೋಡ್ ಸೆಟ್ಟಿಂಗ್ ಮುಖಾಂತರ ವೇಗಮಿತಿಯ ನಿಯಂತ್ರಣ, ಸೀಟು ಬೆಲ್ಟ್ ಎಚ್ಚರ, ಆಡಿಯೋ ಧ್ವನಿ ನಿಯಂತ್ರಣ ಮುಂತಾದ ಉತ್ತಮ ಚಾಲನಾ ಹವ್ಯಾಸಗಳನ್ನು ರೂಢಿ ಮಾಡಿಸಿಕೊಳ್ಳಬಹುದಾಗಿದೆ.

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೋರೆಜ್

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೋರೆಜ್

ಹೆಚ್ಚು ಸ್ಟೋರೆಜ್ ಜಾಗವು ಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿ ಬಾಟಲಿಗಳನ್ನಿಡಲು ಕಪ್ ಹೋಲ್ಡರ್ ಹಾಗೂ ಮ್ಯಾಗಜೀನ್ ಗಳಿನ್ನಡಲು ಸೈಡ್ ಕಂಪಾರ್ಟ್ ಗಳಿವೆ.

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೋರೆಜ್

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೋರೆಜ್

ಸ್ಟೋರೆಜ್ ಜಾಗದ ವಿಸೃತ ಚಿತ್ರಣ - ಮುಂಭಾಗದ ಸೀಟಿನಲ್ಲಿ ತ್ರಿ ಕಪ್ ಹೋಲ್ಡರ್ ಮತ್ತು ಮ್ಯಾಗಜೀನ್ ಇಡಲು ಪಾಕೆಟ್.

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೋರೆಜ್

ಎದ್ದು ಕಾಣಿಸುವ ವೈಶಿಷ್ಟ್ಯ - ಸ್ಟೋರೆಜ್

ಸ್ಟೋರೆಜ್ ಜಾಗದ ವಿಸೃತ ಚಿತ್ರಣ - ಇದರಲ್ಲಿ ಸೀಕ್ರೆಟ್ ಸೈಡ್ ಕಂಫಾರ್ಟ್ ಮೆಂಟ್ ಸಹ ಕಾಣಬಹುದಾಗಿದೆ. ಚಾಲಕ ಬದಿಯ ಡೋರ್ ತೆರೆದಾಗ ಮಾತ್ರ ಇದರ ಕಾರ್ಯ ನಿರ್ವಹಿಸಬಹುದಾಗಿದೆ.

ವಿ.ಸೂ: ಯಾವುದೇ ಕಾರಣಕ್ಕೂ ಬೆಲೆ ಬಾಳುವ ವಸ್ತುಗಳನ್ನು ಕಾರಿನಲ್ಲಿಟ್ಟು ತೆರಳಬೇಡಿರಿ.

ಇನ್ನಿತರ ಗಮನಾರ್ಹ ವೈಶಿಷ್ಟ್ಯಗಳು

ಇನ್ನಿತರ ಗಮನಾರ್ಹ ವೈಶಿಷ್ಟ್ಯಗಳು

ಯುಎಸ್ ಬಿ ಮತ್ತು ಆಕ್ಸ್ ಇನ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಹ ನಮ್ಮ ಮೆಚ್ಚುಗೆಗೆ ಪಾತ್ರವಾಗಿದ್ದು, ಒಟ್ಟಾರೆ ಚಾಲನಾ ಅನುಭವವನ್ನು ಹೆಚ್ಚಿಸಲಿದೆ.

ಚಾಲನಾ ಸಾಮರ್ಥ್ಯ

ಚಾಲನಾ ಸಾಮರ್ಥ್ಯ

ನೂತನ ಫೋರ್ಡ್ ಫಿಗೊ ಆಸ್ಪೈರ್ ಎರಡು ಪೆಟ್ರೋಲ್ ಹಾಗೂ ಏಕಮಾತ್ರ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಸಂದೇಹವೇ ಬೇಡ. ಇದರ ಡ್ಯುಯಲ್ ಕ್ಲಚ್ ಶಿಫ್ಟಿಂಗ್ ವ್ಯವಸ್ಥೆಯು (6 ಸ್ಪೀಡ್ ಪವರ್ ಶಿಫ್ಟ್ ಗೇರ್ ಬಾಕ್ಸ್) ನಯವಾದ ಗೇರ್ ಬದಲಾವಣೆ ಹಾಗೂ ಉನ್ನತ ಇಂಧನ ಕ್ಷಮತೆಗೆ ಸಹಕಾರಿಯಾಗಲಿದೆ.

ಎಂಜಿನ್ ಆಯ್ಕೆಗಳು

 • 1.2 ಲೀಟರ್ ಪೆಟ್ರೋಲ್ ಮ್ಯಾನುವಲ್: 88 ಅಶ್ವಶಕ್ತಿ, 112 ಎನ್ಎಂ ತಿರುಗುಬಲ
 • 1.5 ಲೀಟರ್ ಆಟೋಮ್ಯಾಟಿಕ್: 112 ಅಶ್ವಶಕ್ತಿ, 136 ಎನ್ಎಂ ತಿರುಗುಬಲ
 • 1.5 ಲೀಟರ್ ಡೀಸೆಲ್ ಮ್ಯಾನುವಲ್: 100 ಅಶ್ವಶಕ್ತಿ, 215 ಎನ್ಎಂ ತಿರುಗುಬಲ

ಮೈಲೇಜ್

ಮೈಲೇಜ್

ದೇಶದ ಪ್ರತಿಯೊಬ್ಬ ಗ್ರಾಹಕನಂತೆ ನಿಮ್ಮಲ್ಲೂ ಫೋರ್ಡ್ ಫಿಗೊ ಆಸ್ಪೈರ್ ಮೈಲೇಜ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿರಬಹುದು. ನಮ್ಮ ಚಾಲನಾ ವರದಿ ಪ್ರಕಾರ ನೈಜ ರಸ್ತೆ ಪರಿಸ್ಥಿತಿಯಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳು ಅನುಕ್ರಮವಾಗಿ 15 ಹಾಗೂ 11 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ARAI ಮೈಲೇಜ್:

ಪೆಟ್ರೋಲ್: 18.2 km/L, ಡೀಸೆಲ್: 25.8 km/L

ಇಂಧನ ಟ್ಯಾಂಕ್ ಸಾಮರ್ಥ್ಯ (ಲೀಟರ್)

ಪೆಟ್ರೋಲ್ - 42, ಡೀಸೆಲ್ - 40

ನಾಯ್ಸ್,ವೈಬ್ರೇಷನ್, ಹಾರ್ಶ್ ನೆಶ್

ನಾಯ್ಸ್,ವೈಬ್ರೇಷನ್, ಹಾರ್ಶ್ ನೆಶ್

ಎನ್‌ವಿಎಚ್ ಅಥವಾ ನಾಯ್ಸ್, ವೈಬ್ರೇಷನ್ ಹಾಗೂ ಹಾರ್ಶ್ ನೆಶ್ ಇನ್ನು ಸ್ವಲ್ಪ ಸುಧಾರಣೆಗೊಂಡಿದ್ದರೆ ಮತ್ತಷ್ಟು ಅಭಿನಂದನೆಗೆ ಪಾತ್ರವಾಗುತ್ತಿತ್ತು. ಡೀಸೆಲ್ ಹೊರತಾಗಿ ಪೆಟ್ರೋಲ್ ಮಾದರಿಗಳಲ್ಲೂ ಎನ್‌ವಿಎಚ್ ಕೊಂಚ ಹಿನ್ನೆಡೆಗೆ ಗ್ರಾಸವಾಗಿದೆ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

ಅತ್ಯಧಿಕ ವೇಗದಲ್ಲೂ ಅತ್ಯುತ್ತಮ ಹ್ಯಾಂಡ್ಲಿಂಗ್ ಅನ್ನು ಫೋರ್ಡ್ ಫಿಗೊ ಆಸ್ಪೈರ್ ಪ್ರದಾನ ಮಾಡುತ್ತದೆ. ಇಲ್ಲಿ ಅಮೆರಿಕದ ಪ್ರಖ್ಯಾತ ಸಂಸ್ಥೆಯು ತನ್ನ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಈ ಮೊದಲೇ ತಿಳಿಸಿರುವಂತೆಯೇ ಮಾರುಕಟ್ಟೆಯಲ್ಲಿ ಈಗಾಗಲೇ ಅಧಿಪತ್ಯ ಸ್ಥಾಪಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್ ಸೆಂಟ್ ಹಾಗೂ ಟಾಟಾ ಜೆಸ್ಟ್ ಗಳಂತಹ ಸವಾಲುಗಳನ್ನು ಫೋರ್ಡ್ ಎದುರಿಸಬೇಕಾಗುತ್ತದೆ.

ನಿರೀಕ್ಷಿತ ಬೆಲೆ

ಆಸ್ಪೈರ್ ಪೆಟ್ರೋಲ್ - 5ರಿಂದ 7 ಲಕ್ಷ ರು.

ಆಸ್ಪೈರ್ ಡೀಸೆಲ್ - 6ರಿಂದ 8 ಲಕ್ಷ ರು.

ಪ್ರತಿಸ್ಪರ್ಧಿಗಳ ಬೆಲೆಗಳು ವೀಕ್ಷಿಸಿ

ಮಾರುತಿ ಸ್ವಿಫ್ಟ್ ಡಿಜೈರ್ ಆನ್ ರೋಡ್ ಬೆಲೆ

ಹ್ಯುಂಡೈ ಎಕ್ಸ್ ಸೆಂಟ್ ಆನ್ ರೋಡ್ ಬೆಲೆ

ಹೋಂಡಾ ಅಮೇಜ್ ಆನ್ ರೋಡ್ ಬೆಲೆ

ರೇಟಿಂಗ್

ರೇಟಿಂಗ್

ಮುನ್ನಡೆ

 • ಹೆಚ್ಚು ಸ್ಥಳಾವಕಾಶ,
 • ನಿರ್ಮಾಣ ಗುಣಮಟ್ಟತೆ, ವಿನ್ಯಾಸ,
 • ಡೀಸೆಲ್ ವೆರಿಯಂಟ್ ನಲ್ಲಿ ಮೋಜಿನ ಚಾಲನೆ,
 • ಲೆಥರ್ ಸೀಟು,
 • ಎಸಿ ವ್ಯವಸ್ಥೆ,
 • ಸ್ಟ್ಯಾಂಡರ್ಡ್ ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್,
 • ಟಾಪ್ ಎಂಡ್ ವೆರಿಯಂಟ್ ನಲ್ಲಿ ಆರು ಏರ್ ಬ್ಯಾಗ್ ಸೌಲಭ್ಯ

ಹಿನ್ನಡೆ

 • ಪೆಟ್ರೋಲ್ ಎಂಜಿನ್ ನಲ್ಲೂ ವಾಯ್ಸ್, ವೈಬ್ರೇಷನ್, ಹಾರ್ಶ್ ನೆಶ್

ಹಣಕ್ಕೆ ತಕ್ಕ ಮೌಲ್ಯ: 4/5

ಅಂತಿಮ ತೀರ್ಪು

ಅಂತಿಮ ತೀರ್ಪು

ಆಕರ್ಷಕ ಸ್ಟೈಲಿಂಗ್, ಬಾಹ್ಯ ವಿನ್ಯಾಸ, ಆರಾಮದಾಯಕ ಆಂತರಿಕ, ಶೇಖರಣಾ ಸ್ಥಳ, ತಾಜಾ ಸ್ಮಾರ್ಟ್ ತಂತ್ರಜ್ಞಾನ, ಸಮರ್ಥ ಎಂಜಿನ್, ಇಂಧನ ದಕ್ಷತೆ ಇವೆಲ್ಲವನ್ನೂ ನೀವು ನಿರೀಕ್ಷೆ ಮಾಡುವುದದ್ದಲ್ಲಿ ನೂತನ ಫೋರ್ಡ್ ಫಿಗೊ ಆಸ್ಪೈರ್ ಇಂದೇ ನಿಮ್ಮದಾಗಿಸಿ. ಅಂತಿಮವಾಗಿ ಬಿಡುಗಡೆಯ ವೇಳೆಯಲ್ಲಿ ಸ್ಪರ್ಧಾತ್ಮಕ ಬೆಲೆ ಕಾಪಾಡುವಲ್ಲಿ ಯಶಸ್ವಿಯಾದ್ದಲ್ಲಿ ನಿಸ್ಸಂಶವಾಗಿಯೂ ವಿಜಯಶಾಲಿಯಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ.

 

English summary
Ford's much awaited sub-compact sedan is here — the Figo Aspire. Whether it is set to become an instant hit like the EcoSport and Figo models from their stable, it remains to be seen. Does it have what it take to topple the segment leader — Swift Dzire? Let's find out, together.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark