ಜಾಝ್ vs ಎಲೈಟ್ ಐ20: ಪ್ರೀಮಿಯಂ ಹ್ಯಾಚ್ ಗಳ ಮಹಾಸಮರ

By Nagaraja

ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ಎಲ್ಲ ಹೊಸತನದ ಆನ್ ನ್ಯೂ ಜಾಝ್ ಬಂದೇ ಬಿಟ್ಟಿದೆ. ಇದರೊಂದಿಗೆ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳ ವಿಭಾಗದಲ್ಲಿ ಹೊಸ ಪ್ರತಿಸ್ಪರ್ಧಿಯೊಂದು ಹುಟ್ಟಿಕೊಂಡಿದ್ದು, ಮಹಾಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ.

ಈ ವಿಭಾಗದಲ್ಲಿ ಈಗಾಗಲೇ ಭಾರಿ ಸದ್ದು ಮಾಡುತ್ತಿರುವ ಹ್ಯುಂಡೈ ಎಲೈಟ್ ಐ20 ಜನಮೆಚ್ಚುಗೆಗೆ ಕಾರಣವಾಗಿದೆ. ಹಾಗಿರುವಾಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿರುವ ಜಪಾನ್ ಮೂಲದ ಜಾಝ್ ಕಾರು ಹೇಗೆ ತನ್ನ ಪ್ರತಿಸ್ಪರ್ಧಿಯನ್ನು ಮೀರಿಸಲಿದೆ ಎಂಬುದಕ್ಕೆ ಈ ಲೇಖನವೊಂದು ಉದಾಹರಣೆಯಾಗಲಿದೆ. ಇಂದಿನ ವಿಮರ್ಶಾತ್ಮಕ ಲೇಖನದ ಮುಖಾಂತರ ಹೋಂಡಾ ಜಾಝ್ ಹಾಗೂ ಹ್ಯುಂಡೈ ಎಲೈಟ್ ಐ20 ಕಾರುಗಳನ್ನು ಹೋಲಿಸುವ ಪ್ರಯತ್ನ ಮಾಡಲಿದ್ದೇವೆ. ಸಮಗ್ರ ವಿವರಗಳಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಬೆಲೆ ಹೋಲಿಕೆ

ಬೆಲೆ ಹೋಲಿಕೆ

ಬೆಲೆಯ ವಿಚಾರದಲ್ಲಿ ನೂತನ ಹೋಂಡಾ ಜಾಝ್ ಮತ್ತು ಎಲೈಟ್ ಐ20 ಕಾರುಗಳು ಒಂದಕ್ಕೊಂದು ನಿಕಟ ಪೈಪೋಟಿಯನ್ನು ಕಾಯ್ದುಕೊಂಡಿದೆ.

ಹೋಂಡಾ ಜಾಝ್

ನೂತನ ಜಾಝ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಅನುಕ್ರಮವಾಗಿ 5.31 ಹಾಗೂ 6.50 ಲಕ್ಷ ರು.ಗಳ ಪ್ರಾರಂಭಿಕ ಬೆಲೆಯನ್ನು (ಎಕ್ಸ್ ಶೋ ರೂಂ ದೆಹಲಿ) ಹೊಂದಿದೆ.

ಹ್ಯುಂಡೈ ಎಲೈಟ್ ಐ20

ಅದೇ ಹೊತ್ತಿಗೆ ಹ್ಯುಂಡೈ ಎಲೈಟ್ ಐ20 ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಅನುಕ್ರಮವಾಗಿ 5.30 ಹಾಗೂ 6.42 ಲಕ್ಷ ರು.ಗಳ ಪ್ರಾರಂಭಿಕ ಬೆಲೆಯನ್ನು (ಎಕ್ಸ್ ಶೋ ರೂಂ ದೆಹಲಿ) ಹೊಂದಿದೆ.

ವಿನ್ಯಾಸ - ಹೋಂಡಾ ಜಾಝ್

ವಿನ್ಯಾಸ - ಹೋಂಡಾ ಜಾಝ್

ಹಿಂದಿನ ಜಾಝ್ ಮಾದರಿಯನ್ನು ಎಲ್ಲ ಹಂತದಲ್ಲಿಯೂ ಮೀರಿ ನಿಂತಿರುವ ಆಲ್ ನ್ಯೂ ಜಾಝ್ ಮನಮೆಚ್ಚುವ ಆಕ್ರಮಣಕಾರಿ ವಿನ್ಯಾಸ ತಂತ್ರಗಾರಿಕೆಯನ್ನು ಪಡೆದುಕೊಂಡಿದೆ. ಕಾರಿನಲ್ಲಿ ಪ್ರೀಮಿಯಂಗೆ ತಕ್ಕವಾಗಿ ಹೆಚ್ಚು ಕ್ರೋಮ್ ಸ್ಪರ್ಶವನ್ನು ಕಾಣಬಹುದಾಗಿದೆ.

ವಿನ್ಯಾಸ - ಹ್ಯುಂಡೈ ಎಲೈಟ್ ಐ20

ವಿನ್ಯಾಸ - ಹ್ಯುಂಡೈ ಎಲೈಟ್ ಐ20

ಹ್ಯುಂಡೈನ ತಾಜಾ ಫ್ಲೂಯಿಡಿಕ್ 2.0 ವಿನ್ಯಾಸ ತಂತ್ರಗಾರಿಕೆಯನ್ನು ಐ20 ಕಾರಿನಲ್ಲಿ ಬಳಕೆ ಮಾಡಲಾಗಿದೆ. ಇದು ನೂತನ ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಹಾಗೂ ಒಟ್ಟಾರೆ ಮನಮೆಚ್ಚುವ ವಿನ್ಯಾಸವನ್ನು ಪಡೆದುಕೊಂಡಿದೆ.

ವೈಶಿಷ್ಟ್ಯ - ಹೋಂಡಾ ಜಾಝ್

ವೈಶಿಷ್ಟ್ಯ - ಹೋಂಡಾ ಜಾಝ್

ಐದು ಇಂಚುಗಳ ಇಂಟೇಗ್ರೇಟಡ್ ಆಡಿಯೋ ಸಿಸ್ಟಂ ಜೊತೆ ಐಪೊಡ್ ಕನೆಕ್ಟಿವಿಟಿ, ಆಟೋಮ್ಯಾಟಿಕ್ ಎಸಿ, ಟಚ್ ಸ್ಕ್ರೀನ್ ಪ್ಯಾನೆಲ್, ಪ್ರೀಮಿಯಂ ಡ್ಯಾಶ್ ಬೋರ್ಡ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಎತ್ತರ ಹೊಂದಾಣಿಸಬಹುದಾದ ಸೀಟು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾಗಳು ಹೊಸ ಜಾಝ್ ಕಾರನ್ನು ಮತ್ತಷ್ಟು ವಿಶಿಷ್ಟವಾಗಿಸುತ್ತದೆ.

ವೈಶಿಷ್ಟ್ಯ - ಹ್ಯುಂಡೈ ಎಲೈಟ್ ಐ20

ವೈಶಿಷ್ಟ್ಯ - ಹ್ಯುಂಡೈ ಎಲೈಟ್ ಐ20

ಇನ್ನೊಂದೆಡೆ ಐ20 ಕಾರಿನಲ್ಲಿ ಡಬಲ್ ಡಿನ್ ಆಡಿಯೋ ಸಿಸ್ಟಂ ಜೊತೆ 1 ಜಿಟಿ ಇಂಟರ್ನಲ್ ಮೆಮರಿ, ಆಟೋಮ್ಯಾಟಿಕ್ ಎಸಿ, ಗ್ಲೋವ್ ಬಾಕ್ಸ್, ಕೂಲಿಂಗ್ ಕ್ರಿಯಾತ್ಮಕತೆ ಮತ್ತು ಎತ್ತರ ಹೊಂದಾಣಿಸಬಹುದಾದ ಸೀಟು ವ್ಯವಸ್ಥೆಗಳನ್ನು ಕಾಣಬಹುದಾಗಿದೆ.

ಎಂಜಿನ್ ತಾಂತ್ರಿಕತೆ - ಹೋಂಡಾ ಜಾಝ್

ಎಂಜಿನ್ ತಾಂತ್ರಿಕತೆ - ಹೋಂಡಾ ಜಾಝ್

ನೂತನ ಹೋಂಡಾ ಜಾಝ್ ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 90 ಅಶ್ವಶಕ್ತಿ ಉತ್ಪಾದಿಸಲಿದೆ. ಅದೇ ಹೊತ್ತಿಗೆ ಐ-ಡಿಟೆಕ್ ಡೀಸೆಲ್ ಎಂಜಿನ್ 100 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್ ಗೆ 18.7 ಹಾಗೂ 27.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಪ್ರಸ್ತುತ ಕಾರು ಮ್ಯಾನುವಲ್ ಜೊತೆಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಎಂಜಿನ್ ತಾಂತ್ರಿಕತೆ - ಹ್ಯುಂಡೈ ಎಲೈಟ್ ಐ20

ಎಂಜಿನ್ ತಾಂತ್ರಿಕತೆ - ಹ್ಯುಂಡೈ ಎಲೈಟ್ ಐ20

ಇನ್ನೊಂದೆಡೆ ಹ್ಯುಂಡೈ ಐ20 ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ 90 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್ ಗೆ 17.19 ಹಾಗೂ 21.19 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಪಡೆಯಲಿದೆ. ಇನ್ನು ಎಲೈಟ್ ಐ20 ಮ್ಯಾನುವಲ್ ಗೇರ್ ಬಾಕ್ಸ್ ನಲ್ಲಿ ಮಾತ್ರವೇ ಲಭ್ಯವಾಗಲಿದೆ.

ಸುರಕ್ಷತೆ

ಸುರಕ್ಷತೆ

ಸುರಕ್ಷತೆಯ ವಿಚಾರಕ್ಕೆ ಬಂದಾಗ ಎರಡು ಕಾರುಗಳು ಮುಂಭಾಗ ಏರ್ ಬ್ಯಾಗ್, ಎಬಿಎಸ್, ಇಬಿಡಿ, ರಿಯರ್ ಪಾರ್ಕಿಂಗ್ ಅಸಿಸ್ಟ್ ಮುಂತಾದ ಸೇವೆಗಳನ್ನು ಹೊಂದಿರುತ್ತದೆ. ಅದೇ ಹೊತ್ತಿಗೆ ಹೋಂಡಾ ಜಾಝ್ ಕಾರಿನಲ್ಲಿ ಸೀಟ್ ಬೆಲ್ಟ್ ಪ್ರಿ ಟೆನ್ಷನರ್ (ಅಪಘಾತ ವೇಳೆ ಬಿಗುಗೊಳಿಸುವಿಕೆ) ಮತ್ತು ಪಿಂಚ್ ಗಾರ್ಡ್ (ನಿಮ್ಮ ಕೈ ಸಿಕ್ಕಿ ಹಾಕಿಕೊಂಡಿದ್ದರೆ ಡೋರ್ ಲಾಕ್ ಆಗುವುದನ್ನು ತಡೆಯಲಿದೆ) ಸೇವೆಗಳಿರಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಒಟ್ಟಾರೆಯಾಗಿ ಎಂಜಿನ್ ಪವರ್, ಸುರಕ್ಷತೆ, ವೈಶಿಷ್ಟ್ಯಗಳಿಂದ ಹಿಡಿದು ನಿರ್ವಹಣೆಯ ವರೆಗೆ ಹ್ಯುಂಡೈ ಎಲೈಟ್ ಐ20 ಕಾರನ್ನು ಹಿಂದಿಕ್ಕುವಲ್ಲಿ ಹೋಂಡಾ ಜಾಝ್ ಯಶ ಕಂಡಿದೆ.

ಮ್ಯಾಜಿಕ್ ಮಾಡಿತೇ?

ಮ್ಯಾಜಿಕ್ ಮಾಡಿತೇ?

ಒಟ್ಟಿನಲ್ಲಿ ಹ್ಯುಂಡೈ ಎಲೈಟ್ ಐ20 ಕಾರಿಗೆ ನೇರ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಜಾಝ್ ಮುಂದಿನ ದಿನಗಳಲ್ಲಿ ಮೋಡಿ ಮಾಡಿತೇ ಎಂಬುದು ಬಹಳ ಕುತೂಹಲವನ್ನುಂಟು ಮಾಡಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Honda Jazz vs Hyundai Elite i20 comparison. Now what happens when the newcomer, the Jazz takes on the king of hot hatches, the Elite i20? Let’s find out!
Story first published: Thursday, July 9, 2015, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X