ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಬಹುನೀರಿಕ್ಷಿತ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್ ಭಾರೀ ಬೇಡಿಕೆ ಪಡೆಯುವ ನೀರಿಕ್ಷೆಯಲ್ಲಿದ್ದು, ಮೊದಲ ಚಾಲನಾ ವಿಮರ್ಶೆಯನ್ನು ಇಲ್ಲಿ ನೀಡಲಾಗಿದೆ.

ಜಪಾನ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಲೆಕ್ಸಸ್ ಸದ್ಯಕ್ಕೆ ಭಾರತೀಯ ಮಾರುಕಟ್ಟೆಗಾಗಿ ವಿವಿಧ ಮಾದರಿಯ ಎನ್‌ಎಕ್ಸ್ ಎಸ್‌ಯುವಿ ಆವೃತ್ತಿಗಳನ್ನು ಹೊರತರುತ್ತಿದೆ. ಸದ್ಯ ಬಿಡುಗಡೆಯಾಗಿರುವ ಬಹುನೀರಿಕ್ಷಿತ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್ ಭಾರೀ ಬೇಡಿಕೆ ಪಡೆಯುವ ನೀರಿಕ್ಷೆಯಲ್ಲಿದ್ದು, ಮೊದಲ ಚಾಲನಾ ವಿಮರ್ಶೆಯನ್ನು ಇಲ್ಲಿ ನೀಡಲಾಗಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

2013ರ ಫ್ರಾಂಕ್ಫರ್ಟ್ ಆಟೋ ಮೇಳದಲ್ಲಿ ಎಲ್ಎಫ್-ಎನ್ಎಕ್ಸ್ ಎಸ್‌ಯುವಿ ಆವೃತ್ತಿಯನ್ನು ಪ್ರದರ್ಶನಗೊಳಿಸಿದ್ದ ಲೆಕ್ಸಸ್, 2014ರಲ್ಲಿ ಮಧ್ಯಮ ಗಾತ್ರದ ಐಷಾರಾಮಿ ಎನ್ಎಕ್ಸ್ ಉತ್ಪಾದನೆಗೆ ಚಾಲನೆ ನೀಡಿತ್ತು. ನಂತರ 2017ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಅನೇಕ ಐಷಾರಾಮಿ ಎಸ್‌ಯುವಿ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗುತ್ತಿದೆ.

Recommended Video

2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಶಾಂಘೈ ಮೋಟಾರ್ ಶೋ ನಂತರದಲ್ಲಿ ಭಾರತೀಯ ಮಾರುಕಟ್ಟೆ ಎಂಟ್ರಿ ನೀಡಿರುವ ಎನ್ಎಕ್ಸ್ ಆವೃತ್ತಿಗಳಲ್ಲಿ ಸದ್ಯಕ್ಕೆ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದೆ. ಸ್ಪೋರ್ಟ್ ಮತ್ತು ಲಗ್ಷುರಿ ಆವೃತ್ತಿಗಳಲ್ಲಿ ಕಾರುಗಳನ್ನು ಆಯ್ಕೆ ಕೂಡಾ ಮಾಡಬಹುದಾಗಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಡಿಸೈನ್ ಮತ್ತು ಸುರಕ್ಷಾ ವಿಧಾನಗಳು

ಶಾರ್ಪ್ ಲುಕ್, ಸ್ಪ್ಲಿಂಡಲ್ ಗ್ರಿಲ್ ವಿನ್ಯಾಸಗಳಿಂದ ಐಷಾರಾಮಿ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಮಾರುಕಟ್ಟೆಯಲ್ಲಿರುವ ಮರ್ಸಿಡಿಸ್ ಜಿಎಲ್‌ಸಿ, ಬಿಎಂಡಬ್ಲ್ಯು ಎಕ್ಸ್3 ಮತ್ತು ಆಡಿ ಕ್ಯೂ5 ಕಾರುಗಳಿಗೆ ತೀವ್ರ ಸ್ಪರ್ಧಿಯಾಗಿರಲಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಆಂಗ್ಯುಲರ್ ಹೆಡ್‌ಲ್ಯಾಂಪ್, ಎಲ್ಇಡಿ ಪೋಜೆಕ್ಟರ್ ಲೈಟ್ಸ್‌ಗಳನ್ನು ಹೊಂದಿರುವ ಲೆಕ್ಸಸ್ ಎನ್ಎಕ್ಸ್ 300ಹೆಚ್ ಮಾದರಿಯು, ಹೆಡ್‌ಲ್ಯಾಂಪ್ ಮೇಲ್ಬಾಗದಲ್ಲಿ ಹಾರ್ಪೂನ್ ಸೇಫ್ ಡಿಎಲ್ಆರ್‌ಎಲ್ ಮತ್ತು ಆಟೋ ಪ್ಲೋಡಿಂಗ್ ರಿರ್ ವಿವ್ಯೂ ಮಿರರ್ ಪಡೆದುಕೊಂಡಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಎಂಜಿನ್ ಸಾಮರ್ಥ್ಯ

ಹೊಸ ಲೆಕ್ಸಸ್ ಎನ್‌ಎಕ್ಸ್ 300ಎಚ್ ವಾಹನವು 2.5 ಲೀಟರ್ ನಾಲ್ಕು ಸಿಲಿಂಡರ್ ನೈಸರ್ಗಿಕವಾಗಿ ಆವಿಷ್ಕರಿಸಿದ ಎಂಜಿನ್‌ನೊಂದಿಗೆ ವಿದ್ಯುತ್ ಮೋಟಾರ್ ಆಯ್ಕೆಯನ್ನು ಪಡೆದುಕೊಂಡಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಹೈಬ್ರಿಡ್ ಪವರ್ಟ್ರೈನ್ ಕಾರಿನ ಎರಡು ಮಾರ್ಗದಿಂದ ಒಟ್ಟು 194 ಬಿಎಚ್‌ಪಿ ಅಶ್ವಶಕ್ತಿ ಮತ್ತು 210 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು ನಾಲ್ಕು ಚಕ್ರಗಳಿಗೂ ವಿದ್ಯುತ್ ಪೂರೈಸುವ ಇ-ಸಿವಿಟಿ ಗೇರ್ ಬಾಕ್ಸ್ ಎಂಜಿನ್ ಅಳವಡಿಸಲಾಗಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಇ-ಸಿವಿಟಿ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿರುವ ಈ ಮಾದರಿಯು ಕೇವಲ 9.2 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ. ಈ ಕಾರಿನ ಮುಂಭಾಗದ ತಂತುಕೋಶವು ಸಿಗ್ನೇಚರ್ ಸ್ಪಿಂಡಲ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಹಗಲಿನ ಹೊತ್ತು ಬೆಳಗುವ ಎಲ್ಇಡಿ ದೀಪಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಕಾರಿನ ಒಳವಿನ್ಯಾಸ

ಹೊಸದಾಗಿ ಬಿಡುಗಡೆಯಾದ ಲೆಕ್ಸಸ್ ಎನ್‌ಎಕ್ಸ್ 300ಎಚ್ ಎಸ್‌ಯುವಿ ಕಾರಿನ ಒಳಭಾಗವು 360 ಡಿಗ್ರಿ ಪನೋರಮಿಕ್ ಸರೌಂಡ್ ವೀಕ್ಷಣೆ ಮಾನಿಟರ್ ಹೊಂದಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಈ ಮಾನಿಟರ್‌ನಲ್ಲಿ 10.3-ಇಂಚಿನ ವಿಭಜನೆಗೊಂಡ ಸ್ಕ್ರೀನ್ ಮಲ್ಟಿಮೀಡಿಯಾ ಪರದೆ, ಪ್ರಥಮ ದರ್ಜೆಯ ಪವರ್ ಫೋಲ್ಡಿಂಗ್ ಮತ್ತು ಪವರ್ ರೆಕ್ಲೈನಿಂಗ್ ಹಿಂಭಾಗದ ಸೀಟ್‌ಗಳು ಮತ್ತು ಕ್ಲಾರಿಫಿ ತಂತ್ರಜ್ಞಾನ ಹೊಂದಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಸುರಕ್ಷಾ ತಂತ್ರಜ್ಞಾನಗಳು

ಲೆಕ್ಸಸ್ ಹೊಸ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಒಟ್ಟು 8 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಜೊತೆಗೆ ಎಬಿಎಸ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೊಲರ್, ರಿರ್ ವಿವ್ಯೂ ಕ್ಯಾಮೆರಾ ಮತ್ತು ವೈಡ್ ಆ್ಯಂಗಲ್ ಕಾರ್ನರ್ ಲೈಟ್ಸ್ ಕೂಡಾ ಹೊಂದಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಮೈಲೇಜ್

ಲೆಕ್ಸಸ್ ಎನ್ಎಕ್ಸ್ 300ಹೆಚ್ ಕಾರುಗಳಲ್ಲಿ ವಿದ್ಯುತ್ ಮೋಟಾರ್ ಬಳಕೆ ಹಿನ್ನೆಲೆ ಇಂಧನ ಕಾರ್ಯಕ್ಷಮತೆ ಹೆಚ್ಚಲಿದ್ದು, 56 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್‌ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 18.32 ಕಿಮಿ ಮೈಲೇಜ್ ಒದಗಿಸಬಲ್ಲವು.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಇದಲ್ಲದೇ ಕಾರಿನಲ್ಲಿರುವ ಮನರಂಜನಾ ವಿಭಾಗಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ಚಕ್ರಗಳನ್ನು ಹೊಂದಿದೆ. ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ರಿಡ್ಜ್‌ಸ್ಟೋನ್ 225/60 ಆರ್18 ಟೈರ್ ಬಳಕೆ ಮಾಡಲಾಗಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಕಾರಿನ ಬೆಲೆಗಳು

ನೂತನ ವಿನ್ಯಾಸದ ಲೆಕ್ಸಸ್ ಎನ್ಎಕ್ಸ್ 300ಎಚ್ ವಾಹನವು ಕೆಳೆದ ನವೆಂಬರ್ 17ರಂದು ಭಾರತದಲ್ಲಿ ಅನಾವರಣಗೊಂಡಿತು. ಮೂಲತಃ ಐಷಾರಾಮಿ ಎಸ್‌ಯುವಿ ಕಾರಿನ ಬೇಸಿಕ್ ಆವೃತಿಯು ರೂ.53,18 ಲಕ್ಷ ಮತ್ತು ಉನ್ನತ ಮಾದರಿಯ ಎಫ್ ಸ್ಪೋರ್ಟ್ ಟ್ರಿಮ್ ಮಾದರಿಯು ರೂ.55.58 ಲಕ್ಷ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿವೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಕಾರಿನ ಪ್ರಮುಖಾಂಶಗಳು

ಟೆಸ್ಟ್ ಡ್ರೈವ್ ಕಾರು -ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಎಂಜಿನ್ -2.5 ಲೀಟರ್, 4 ಸಿಲಿಂಡರಿನ ಪೆಟ್ರೋಲ್, 2 ಎಲೆಕ್ಟ್ರಿಕ್ ಮೋಟಾರ್

ಗೇರ್‌ಬಾಕ್ಸ್ - ಇ-ಸಿವಿಟಿ

ಎಂಜಿನ್ ಪವರ್ - 194 ಬಿಎಚ್‌ಪಿ, 210ಎನ್ಎಂ ಟಾರ್ಕ್

ಫ್ಯೂಲ್ ಟ್ಯಾಂಕ್ - 56 ಲೀಟರ್

ಮೈಲೇಜ್ - 18.32 ಕಿಮಿ (ಪ್ರತಿ ಲೀಟರ್ ಪೆಟ್ರೋಲ್)

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಲೆಕ್ಸಸ್ ಎನ್ಎಕ್ಸ್ 300ಹೆಚ್ ಕುರಿತು ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರತಿಷ್ಠಿತ ಟೊಯೊಟಾ ಅಂಗಸಂಸ್ಥೆಯಾಗಿರುವ ಲೆಕ್ಸಸ್ ಕಳೆದ 2 ವರ್ಷಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆದಿದ್ದು, ಅತ್ಯುತ್ತಮ ಐಷಾರಾಮಿ ಕಾರು ಮಾದರಿಗಳನ್ನು ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿದೆ.

ಕಾರ್ ರಿವ್ಯೂ- ಹಲವು ವಿಶೇಷತೆಗಳೊಂದಿಗೆ ಬಂದ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್

ಸದ್ಯ ಭಾರತದಲ್ಲಿ ಬಿಡುಗಡೆ ಮಾಡಲಾಗಿರುವ ಲೆಕ್ಸಸ್ ಎನ್ಎಕ್ಸ್ 300ಹೆಚ್ ಎಫ್-ಸ್ಪೋರ್ಟ್ ಆವೃತ್ತಿಯು ಟೊಯೊಟಾ ಕ್ಯಾಮ್ರಿ ಪವರ್‌ಟ್ರೈನ್ ಆಧರಿಸಿದ್ದು, ಶಾರ್ಪ್ ಲುಕ್‌ನಿಂದಾಗಿ ಮಾರುಕಟ್ಟೆಯಲ್ಲಿರುವ ಜಿಎಲ್‌ಸಿ, ಬಿಎಂಡಬ್ಲ್ಯು ಎಕ್ಸ್3 ಮತ್ತು ಆಡಿ ಕ್ಯೂ5 ಐಷಾರಾಮಿ ಕಾರುಗಳಿಗೆ ತೀವ್ರ ಸ್ಪರ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Lexus NX 300h F-Sport First Drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X