ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಸದ್ಯ ದೇಶದಲ್ಲಿ ವಿವಿಧ ಉದ್ದೇಶಕ್ಕಾಗಿ ಬಳಕೆಯಾಗುವ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಈ ವಿಭಾಗದಲ್ಲಿ ಇಷ್ಟು ದಿನಗಳ ಕಾಲ ಅಧಿಪತ್ಯ ಸಾಧಿಸಿರುವ ಟೊಯೊಟಾ ಇನೋವಾ ಕಾರುಗಳಿಗೆ ನೀಡುವ ಉದ್ದೇಶದಿಂದ ಮಹೀಂದ್ರಾ ಸಂಸ್ಥೆಯು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿಶೇಷ ಸೌಲಭ್ಯ ಪ್ರೇರಿತ ಮರಾಜೊ ಕಾರುನ್ನು ಬಿಡುಗಡೆಗೊಳಿಸಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳನ್ನು ಪರಿಚಯಿಸಿ ಯಶಸ್ವಿಯಾಗಿರುವ ಮಹೀಂದ್ರಾ ಸಂಸ್ಥೆಯು ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದು, ಎಂಪಿವಿ ಕಾರುಗಳ ವಿಭಾಗಕ್ಕೆ ಹೊಚ್ಟ ಹೊಸ ಮರಾಜೊ ಕಾರುಗಳನ್ನು ಪರಿಚಯಿಸಿದೆ. ಮಹೀಂದ್ರಾ ಆಹ್ವಾನದ ಮೇರೆಗೆ ಡ್ರೈವ್‌ಸ್ಪಾರ್ಕ್ ತಂಡವು ಮರಾಜೊ ಕಾರಿನ ಟೆಸ್ಟ್ ಡ್ರೈವ್ ಕೈಗೊಂಡಿದ್ದಲ್ಲದೇ ಎಂಪಿವಿ ವಿಭಾಗದಲ್ಲಿ ಮರಾಜೊ ಹೇಗೆ ವಿಭಿನ್ನವಾಗಿದೆ ಎನ್ನುವ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಮಹೀಂದ್ರಾ ಸಂಸ್ಥೆಯು ಪ್ರತಿ ಬಾರಿಯು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದಾಗಲೂ ಎನಾದ್ರೂ ಒಂದು ವಿಶೇಷತೆಯನ್ನು ಇಟ್ಟುಕೊಂಡೇ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಲ್ಲಿ ಎತ್ತಿದ ಕೈ. ಇದೀಗ ಬಿಡುಗಡೆ ಮಾಡಲಾಗಿರುವ ಮರಾಜೊ ಕೂಡಾ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಈ ಹೊಸ ಕಾರಿನ ಅಭಿವೃದ್ಧಿ ಹಿಂದಿನ ವಿಶೇಷತೆಗಳನ್ನು ನೀವು ತಿಳಿಯಲೇಬೇಕು.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಉತ್ತರ ಅಮೆರಿಕದ ಮಿಚೆಗನ್‌ನಗರದಲ್ಲಿರುವ ಮಹೀಂದ್ರಾ ಟೆಕ್ನಿಕಲ್ ಸೆಂಟರ್‌ನಲ್ಲಿ ಹೊಸ ಮರಾಜೊ ಕಾರಿನ ರೂಪರೇಷಗಳು ಸಿದ್ದಗೊಂಡಿದ್ದು, ಇದುವರೆಗೆ ಮಹೀಂದ್ರಾ ನಿರ್ಮಾಣ ಮಾಡಿರುವ ಇತರೆ ಕಾರುಗಳಿಂತಲೂ ಇದು ಭಿನ್ನವಾಗಿ ಸಿದ್ದಗೊಂಡಿದೆ ಎನ್ನುಬಹುದು.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಮರಾಜೊ ಅಂದ್ರೆ ಏನು?

ಶಾರ್ಕ್ ಡಿಸೈನ್ ಆಧಾರಿತ ಮಹೀಂದ್ರಾ ಮರಾಜೊ ಕಾರುಗಳ ಹೆಸರಿನ ಹಿಂದೆ ಒಂದು ವಿಶೇಷತೆಯಿದೆ. ಅದು ಏನು ಅಂದ್ರೆ 'ಮರಾಜೊ' ಎನ್ನುವುದು ಸ್ಪಾನಿಷ್ ಭಾಷೆಯಲ್ಲಿ ತಿಮಿಂಗಿಲು(ಶಾರ್ಕ್) ಎಂದರ್ಥ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಹೀಗಾಗಿ ಶಾರ್ಕ್‌ನಂತೆಯೇ ಆಕಾರವನ್ನು ಹೊಂದಿರುವ ಈ ಕಾರು ಸಹ ಸದ್ದುಗದ್ದಲವಿಲ್ಲದೇ ಸರಾಗವಾಗಿ ನೂಗ್ಗಬಲ್ಲ ಗುಣಹೊಂದಿದ್ದು, ಎಂಟ್ರಿ ಲೆವಲ್ ಎಂಪಿವಿ ಮಾದರಿಯಾದ ಮಾರುತಿ ಸುಜುಕಿ ಎರ್ಟಿಗಾ ಹಾಗೂ ದುಬಾರಿ ಬೆಲೆಯ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಅಂತರವನ್ನು ತುಂಬಲು ಈ ಹೊಸ ಉತ್ಪನ್ನವನ್ನು ಸಿದ್ದಗೊಳಿಸಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಹೌದು, ಶಾರ್ಕ್ ಡಿಸೈನ್ ಆಧಾರಿತ ಈ ಕಾರು ನೇರವಾಗಿ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಕಾರುಗಳಿಗೆ ಪೈಪೋಟಿ ನೀಡಬಲ್ಲ ವಿನ್ಯಾಸವನ್ನು ಹೊಂದಿದ್ದು, ಕಾರಿನ ಬೆಲೆಗಳು, ಲಭ್ಯವಿರುವ ಬಣ್ಣಗಳ ಆಯ್ಕೆ, ಎಂಜಿನ್ ವೈಶಿಷ್ಟ್ಯತೆ ಮತ್ತು ಕಾರು ವೆರಿಯೆಂಟ್ ಕುರಿತಾಗಿ ಮುಂದಿನ ಸ್ಲೈಡರ್‌ಗಳನ್ನು ನೋಡಿ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಮಹೀಂದ್ರಾ ಸಂಸ್ಥೆಯು ಎಸ್‌ಯುವಿ ಕಾರು ಮಾರಾಟದಲ್ಲಿ ಈಗಾಗಲೇ ಹಲವು ಪ್ರಯೋಗಗಳ ಮೂಲಕ ಯಶಸ್ವಿ ಕಂಡುಕೊಂಡಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊತ್ತು ಬಂದಿರುವ ಮರಾಜೊ ಎಂಪಿವಿ ಮಾದರಿಯು ಇದೀಗ ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯಲಿರುವ ಮರಾಜೊ ಕಾರುಗಳ ಬೆಲೆ ಪಟ್ಟಿಯು ಸಹ ಗ್ರಾಹಕರ ಪರವಾಗಿದೆ ಎನ್ನಬಹುದು.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಕಾರಿನ ಒಳಾಂಗಣ ವಿನ್ಯಾಸ

ಮಹೀಂದ್ರಾ ಮರಾಜೊ ಕಾರುಗಳಲ್ಲಿ ಡ್ಯುಯಲ್ ಟೋನ್ ಥೀಮ್ ಇಂಟಿರಿಯರ್ ಮತ್ತು ಕ್ಲಟರ್ ಫ್ರಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಾಪ್ ರೂಫ್‌ನಲ್ಲಿ ಸರೌಂಡ್‌ ಎಸಿ ವೆಂಟ್ಸ್, ಡ್ಯುಯಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್‌ ಕಮಾಂಡ್‌ ಮತ್ತು ಏರ್‌ಕ್ರಾಫ್ಟ್ ಸ್ಟೈಲ್ ಹ್ಯಾಂಡಲ್‌ಬ್ರೇಕ್ ವಿನ್ಯಾಸ ಪಡೆದುಕೊಂಡಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಇದಲ್ಲದೇ ಕೆಲವು ಸುಧಾರಿತ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿದ್ದು, ಇವುಗಳಲ್ಲಿ ವೀಲ್ಹ್ ಮೌಟೆಂಡ್ ಆಡಿಯೋ ಕಂಟ್ರೋಲರ್, ತುರ್ತುನಿರ್ವಹಣಾ ಕರೆ ಸೌಲಭ್ಯ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಕ್ರೂಸ್ ಕಂಟ್ರೋಲ್ ಆಯ್ಕೆಯಾಗಿ ಪಡೆಯಬಹುದುದಾಗಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಮರಾಜೊ ಕಾರುಗಳಲ್ಲಿ 690 ಲೀಟರ್ ಬೂಟ್ ಸ್ಪೆಸ್ ನೀಡಲಾಗಿದ್ದು, ಒಂದು ವೇಳೆ ಪ್ರಯಾಣಿಕನ್ನು ಹೊರತುಪಡಿಸಿ ಹೆಚ್ಚಿನ ಮಟ್ಟದ ಲಗೇಜ್ ಸಾಗಿಸುವ ಉದ್ದೇಶ ಇದ್ದಲ್ಲಿ ಮೂರನೇ ಸಾಲಿನ ಸೀಟುಗಳನ್ನು ಮಡಿಚಿ ಹೆಚ್ಚಿನ ಪ್ರಮಾಣದ ಸ್ಥಳವಾಕಾಶ ಮಾಡಿಕೊಳ್ಳಬಹುದು. ಇದರಿಂದ 1055 ಲೀಟರ್ ಸಾಮರ್ಥ್ಯದಷ್ಟು ಲಗೇಜ್ ಶೇಖರಣೆ ಸಾಧ್ಯವಾಗಲಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 121-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಆದ್ರೆ ಮರಾಜೊ ಕಾರುಗಳಲ್ಲಿ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒದಗಿಸಿಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಕಾರನ್ನು 7- ಸೀಟರ್ ಮತ್ತು 8-ಸೀಟರ್ ಮಾದರಿಯಾಗಿ ಪರಿಚಯಿಸಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಕಾರಿನ ನಿರ್ವಹಣೆ

ಹೊಸ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ದೊರೆಯಲಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಸ್ಯಾಂಟ್ರೋದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಇದಲ್ಲದೇ 7-ಸೀಟರ್ ಮರಾಜೊ ಕಾರಿಗೂ ಮತ್ತು 8-ಸೀಟರ್ ಮರಾಜೊ ಮಾದರಿಗಳಿಗೂ ಕೇವಲ ರೂ.5 ಸಾವಿರ ಬೆಲೆ ವ್ಯತ್ಯಾಸಗಳಿದ್ದು, ಮೇಲೆ ನೀಡಲಾಗಿರುವ ಬೆಲೆ ಪಟ್ಟಿಯು 7-ಸೀಟರ್ ಕಾರುಗಳಿಗೆ ಮಾತ್ರವೇ ಅನ್ವಯವಾಗುತ್ತೆ. ಹೀಗಾಗಿ 8-ಸೀಟರ್ ಖರೀದಿಸುವ ಗ್ರಾಹಕರು ಹೆಚ್ಚುವರಿ ದರ ಪಾವತಿಸಬೇಕಾಗುತ್ತೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಮಾರಾಜೊ ಕಾರುಗಳು ಬೆಲೆ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು - ಬೆಲೆಗಳು

ಮರಾಜೊ ಎಂ2 -ರೂ. 9,99,000

ಮರಾಜೊ ಎಂ4 -ರೂ. 10,95,000

ಮರಾಜೊ ಎಂ6 -ರೂ. 12,40,000

ಮರಾಜೊ ಎಂ8 -ರೂ. 13,90,000

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಸುರಕ್ಷಾ ಸೌಲಭ್ಯಗಳು

ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಸೌಲಭ್ಯವನ್ನು ಇರಿಸಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಮಾರಾಟದಲ್ಲೂ ಕಮಾಲ್

ಕಳೆದ ತಿಂಗಳು ಬಿಡುಗಡೆಯಾಗಿರುವ ಮಾರಾಜೊ ಕಾರುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸೃಷ್ಠಿಯಾಗಿದ್ದು, ಬಿಡುಗಡೆಯಾದ 1 ತಿಂಗಳ ಅವಧಿಯಲ್ಲಿ 10 ಸಾವಿರ ಹೆಚ್ಚು ಕಾರುಗಳಿಗೆ ಬೇಡಿಕೆ ಕಂಡುಬಂದಿದ್ದು, ದೇಶದ ವಿವಿಧಡೆ ಈಗಾಗಲೇ ಹೊಸ ಕಾರಿನ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಈ ಮೂಲಕ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ, ಟಾಟಾ ಹೆಕ್ಸಾ, ರೆನಾಲ್ಟ್ ಲೋಡ್ಜಿ ಸೇರಿದಂತೆ ವಿವಿಧ ಎಂಪಿವಿ ಕಾರುಗಳಿಗೆ ನೇರ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಸ್ವಂತ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲಿ ಈ ಹೊಸ ಕಾರು ಭಾರೀ ಬೇಡಿಕೆ ದಾಖಲಿಸುವ ನೀರಿಕ್ಷೆಗಳಿವೆ.

ಟೆಸ್ಟ್ ಡ್ರೈವ್ ರಿವ್ಯೂ: ಇನೋವಾ ಕಾರಿಗೆ ಟಕ್ಕರ್ ನೀಡುತ್ತಿದೆ ಮಹೀಂದ್ರಾ ಹೊಸ ಮರಾಜೊ.!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಮರಾಜೊ ಹೊಸ ನೀರಿಕ್ಷೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಅದಕ್ಕೆ ತಕ್ಕಂತೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಕೈಗೆಟುಕುವ ಬೆಲೆಯೊಂದು ಉತ್ತಮ ಡಿಸೈನ್ ಮತ್ತು ಬಲಶಾಲಿ ಕಾರು ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಕಾರು ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

ಮಹೀಂದ್ರಾ ಮರಾಜೊ ಕಾರಿನ ಫೋಟೋ ಗ್ಯಾಲರಿ..!

Kannada
Read more on mahindra car review
English summary
Mahindra Marazzo Road Test Review — The MPV Which Does All?

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more