ಫಸ್ಟ್ ಡ್ರೈವ್ ರಿವ್ಯೂ: ಎಸ್‌ಯುವಿ, ಎಂಪಿವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ ಎಂಜಿ ಹೊಸ ಹೆಕ್ಟರ್ ಪ್ಲಸ್

ಬ್ರಿಟಿಷ್ ಕಾರು ಉತ್ಪಾದನಾ ಕಂಪನಿ ಮೊರಿಸ್ ಗ್ಯಾರೇಜ್(ಎಂಜಿ) ಮೋಟಾರ್ ಭಾರತದಲ್ಲಿ ಹೆಕ್ಟರ್ ಪ್ಲಸ್ ಎಸ್‌ಯುವಿ ಆವೃತ್ತಿ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೆಕ್ಟರ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ನಂತರ ಹೆಕ್ಟರ್ ಪ್ಲಸ್ ಮಾದರಿಯು ಕೂಡಾ ಭಾರೀ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಭಾರತದಲ್ಲಿ ಕಾರು ಮಾರಾಟಕ್ಕೆ ಚಾಲನೆ ನೀಡಿದ ಒಂದನೇ ವರ್ಷದ ಸಂಭ್ರಮದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಇದುವರೆಗೆ ಸುಮಾರು 40 ಸಾವಿರ ಕಾರುಗಳನ್ನು ಮಾರಾಟ ಮಾಡಿದ್ದು, ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೆಕ್ಟರ್ ಪ್ಲಸ್ ಕಾರು ಮತ್ತಷ್ಟು ಬೇಡಿಕೆ ಹೆಚ್ಚಿಸಲಿದೆ. ಸಾಮಾನ್ಯ ಮಾದರಿಯ ಹೆಕ್ಟರ್ ಮಾದರಿಯಲ್ಲೇ ಸಿದ್ದಗೊಂಡಿರುವ ಹೊಸ ಹೆಕ್ಟರ್ ಪ್ಲಸ್ ಕಾರು 6 ಸೀಟರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ಈಗಾಗಲೇ ಅಧಿತೃತವಾಗಿ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಅಧಿಕೃತ ಬಿಡುಗಡೆಗೂ ಮುನ್ನ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಸ್ಪೆಷಲ್ ಡ್ರೈವ್ ಕಲ್ಪಿಸಿತ್ತು. ಕರೋನಾ ವೈರಸ್ ಅಬ್ಬರದ ನಡೆವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಟೆಸ್ಟ್ ಡ್ರೈವ್ ಕಾರು ಹಸ್ತಾಂತರಿಸಿದ್ದ ಎಂಜಿ ಕಂಪನಿಯು ಗರಿಷ್ಠ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿರುವುದು ಕಾರು ಮಾರಾಟಕ್ಕೆ ಸಹಕಾರಿಯಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹಾಗಾದ್ರೆ ಹೆಕ್ಟರ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ನಂತರ ರಸ್ತೆಗಳಿದಿರುವ ಹೆಕ್ಟರ್ ಪ್ಲಸ್ ಮಾದರಿಯ ವಿಶೇಷತೆಗಳೇನು? ಹೆಕ್ಟರ್ ಪ್ಲ್ಯಾಟ್‌ಫಾರ್ಮ್ ನಡಿಯಲ್ಲೇ ಸಿದ್ದವಾಗಿರುವ 6 ಸೀಟರ್ ಆವೃತ್ತಿಯು ಸಾಮಾನ್ಯ ಕಾರಿಗಿಂತ ಹೇಗೆ ಭಿನ್ನವಾಗಿದೆ. 6 ಸೀಟರ್ ಖರೀದಿಯ ಪ್ಲಸ್ ಪಾಯಿಂಟ್ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಡಿಸೈನ್ ಮತ್ತು ಸ್ಟೈಲ್

ಹೊಸ ಹೆಕ್ಟರ್ ಪ್ಲಸ್ ಕಾರು ಹೊರಭಾಗದ ನೋಟದಲ್ಲಿ ಸಾಮಾನ್ಯ ಹೆಕ್ಟರ್ ಕಾರಿನಂತೆಯೇ ಕಂಡರೂ ವಿಭಿನ್ನ ತಾಂತ್ರಿಕ ಅಂಶಗಳು ಮತ್ತು ವಿನ್ಯಾಸವು ಕಾರಿನ ಬಲಿಷ್ಠತೆಗೆ ಪೂರಕವಾಗಿದ್ದು, ಸಾಮಾನ್ಯ ಕಾರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಜೊತೆಗೆ ಎಂಜಿ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಐ-ಸ್ಮಾರ್ಟ್ ಕನೆಕ್ಟೆಡ್ ಫೀಚರ್ಸ್ ಪ್ರೇರಣೆಯ ಎರಡನೇ ಕಾರು ಮಾದರಿಯಾಗಿದ್ದು, ಸಾಮಾನ್ಯ ಹೆಕ್ಟರ್ ಪ್ಲ್ಯಾಟ್‌ಫಾರ್ಮ್‌ನಲ್ಲೇ 6 ಆನಸಗಳ ಜೋಡಣೆಯನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೊಸ ಕಾರು 4,720-ಎಂಎಂ ಉದ್ದ, 1,835-ಎಂಎಂ ಅಗಲ, 1,760-ಎಂಎಂ ಅಗಲ ಮತ್ತು 2,720-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಇದು ಸಾಮಾನ್ಯ ಹೆಕ್ಟರ್ ಮಾದರಿಗಿಂತ 65-ಎಂಎಂ ಹೆಚ್ಚುವರಿ ಉದ್ದವನ್ನು ಪಡೆದುಕೊಂಡಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಈ ಮೂಲಕ ಎಸ್‌ಯುವಿ ಕಾರು ಮಾದರಿಗಳಿಗೆ ಮಾತ್ರವಲ್ಲದೆ ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿರುವ ಹೊಸ ಕಾರಿನಲ್ಲಿ ಆಕರ್ಷಕವಾದ ಎಲ್‌ಇಡಿ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್ ನೀಡಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೊಸ ಕಾರಿನ ಸೈಡ್ ಪ್ರೋಫೈಲ್ ಕೂಡಾ ಸಾಕಷ್ಟು ಆಕರ್ಷಕವಾಗಿದ್ದು, ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಲು ಕ್ರೋಮ್ ಸ್ಟ್ರಿಪ್, ಡಿ ಪ್ಲಿಲರ್‌ ಮೇಲೆ ಕಾಂಟ್ರಾಸ್ಟ್ ಜೋಡಣೆ ಮಾಡಲಾಗಿದೆ. ಹಾಗೆಯೇ ಡೋರ್ ಹ್ಯಾಂಡಲ್ ಮೇಲೂ ಕ್ರೋಮ್ ಒದಗಿಸಲಾಗಿದ್ದು, ಫುಶ್ ಬಟನ್, ಅನ್‌ಲಾಕ್ ಬಟನ್ ಮತ್ತು ಫ್ರಂಟ್ ಡೋರ್ ಹ್ಯಾಂಡಲ್ ಮೇಲೆ ಎಂಜಿ ಲೋಗೋ ಜೋಡಿಸಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಇದರೊಂದಿಗೆ ಹೊಸ ಕಾರಿನಲ್ಲಿ ಜೋಡಿಸಲಾಗಿರುವ ರೂಫ್ ರೈಲ್ಸ್ , ಶಾರ್ಕ್ ಫಿನ್ ಆಂಟಿನಾ, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್, ಪನೊರಮಿಕ್ ಸನ್‌ರೂಫ್ ಸೌಲಭ್ಯಗಳಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರಿನಲ್ಲೇ ಅತ್ಯಧಿಕ ಫೀಚರ್ಸ್ ಪಡೆದುಕೊಂಡಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಕಾರಿನ ಒಳಾಂಗಣ ವಿನ್ಯಾಸ

ಹೊಸ ಕಾರಿನಲ್ಲಿ ನೀಡಲಾಗಿರುವ ಪ್ರೀಮಿಯಂ ಒಳಾಂಗಣ ಸೌಲಭ್ಯಗಳೇ ಹೆಕ್ಟರ್ ಪ್ಲಸ್ ಪ್ರಮುಖ ಆಕರ್ಷಣೆಯಾಗಿದ್ದು, ಡ್ಯಾಶ್‌ಬೋರ್ಡ್ ಅನ್ನು ಗುಣಮಟ್ಟದ ಬಿಡಿಭಾಗಗಳಿಂದ ಸಿದ್ದಪಡಿಸಲಾಗಿದೆ. ಮಲ್ಟಿ ಫಂಕ್ಷನಲ್ ಲೆದರ್ ವ್ಯಾರ್ಪ್ ಸ್ಪೀರಿಂಗ್ ಕೂಡಾ ಗಮನಸೆಳೆಯಲಿದ್ದು, ಇದರಲ್ಲಿ ಧ್ವನಿ ನಿಯಂತ್ರಣ, ಮೊಬೈಲ್ ಕರೆಗಳ ನಿಯಂತ್ರಣ ಮತ್ತು ಕ್ರೂಸ್ ಕಂಟ್ರೋಲ್ ಬಟನ್‌ಗಳನ್ನು ನೀಡಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹಾಗೆಯೇ ಹೊಸ ಕಾರಿನಲ್ಲಿ ಲಂಬವಾಗಿ ಜೋಡಣೆ ಮಾಡಲಾಗಿರುವ 10.4-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಜೊತೆಗೆ ಎಸಿ ವೆಂಟ್ಸ್ ಕೂಡಾ ಲಂಬಾಕಾರವಾಗಿ ವಿನ್ಯಾಸಗೊಳಿಸಿದ್ದು, ಇನ್ಪೋಟೈನ್‌ಮೆಂಟ್ ಸಿಸ್ಟಂನಲ್ಲಿ ಈ ಬಾರಿ ಐ ಸ್ಮಾರ್ಟ್ ಟೆಕ್ನಾಲಜಿಯೊಂದಿಗೆ ಚಿಟ್-ಚಾಟ್ ಸೌಲಭ್ಯವನ್ನು ಒದಗಿಸಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಐ-ಸ್ಮಾಟ್ ಟೆಕ್ನಾಲಜಿಯಲ್ಲಿ ಇ-ಸಿಮ್ ಜೋಡಣೆ ಮಾಡಲಾಗಿದ್ದು, 55 ಕೆನೆಕ್ಟೆಡ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಹೊಸ ತಂತ್ರಜ್ಞಾನದಲ್ಲಿ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಕಾರಿನೊಂದಿಗೆ ಸಂಹವನ ಮಾಡಬಹುದಾದ ಸೌಲಭ್ಯ ಇದರಲ್ಲಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಇನ್ನು ಹೊಸ ಕೆನೆಕ್ಟೆಡ್ ಫೀಚರ್ಸ್‌ನಿಂದಾಗಿ ಹೊಸ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದ್ದು, ಜೀಯೋ ಫೆನ್ಸಿಂಗ್, ವಾಯ್ಸ್ ಅಸಿಸ್ಟ್, ರಿಮೋಟ್ ಫಂಕ್ಷನ್(ಸ್ಟಾರ್ಟ್/ಸ್ಟಾಪ್), ಏರ್ ಕಂಡೀಷನ್, ಎಮರ್ಜನ್ಸಿ ಕಾಲ್ ಸೌಲಭ್ಯವಿದ್ದು, ಮನರಂಜನೆಗಾಗಿ ಹೊಸ ಕಾರಿನಲ್ಲಿ ಎಂಟು ಇನ್ಪಿನಿಟಿ ಸ್ಪೀಕರ್ಸ್ ನೀಡಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೊಸ ಕಾರಿನಲ್ಲಿ ಇನ್ನು ಪವರ್ ಅಡ್ಜೆಸ್ಟೆಬಲ್ ಫ್ರಂಟ್ ಸೀಟ್‌ಗಳನ್ನು ನೀಡಲಾಗಿದ್ದು, ಸೆಪಿಯಾ ಬ್ರೌನ್ ಲೆದರ್ ಸೀಟುಗಳು ಕಾರಿನ ಐಷಾರಾಮಿ ಲುಕ್ ಹೆಚ್ಚಿಸಿವೆ. ಇದರಲ್ಲಿ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಪ್ರಮುಖ ಆಕರ್ಷಣೆಯಾಗಿದ್ದು, ಕ್ಯಾಪ್ಟನ್ ಸೀಟ್‌ನಲ್ಲಿ ಸೆಂಟರ್ ಆರ್ಮ್ ರೆಸ್ಟ್ ಮತ್ತು ಹೆಡ್ ರೆಸ್ಟ್ ಫೀಚರ್ಸ್ ನೀಡಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೆಕ್ಟರ್ ಪ್ಲಸ್ ಆಸನ ಸೌಲಭ್ಯವು 2+2+2 ಆಸನ ವಿನ್ಯಾಸ ಹೊಂದಿದ್ದು, ಮಧ್ಯಮದಲ್ಲಿರುವ ಕ್ಯಾಪ್ಟನ್ ಸೀಟ್‌ಗಳನ್ನು 50:50 ಅನುಪಾತದಲ್ಲಿ ಜೋಡಿಸಲಾಗಿದ್ದು, ಆರಾಮದಾಯಕವಾಗಿ ಪ್ರಮಾಣ ಮಾಡಬಹುದಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹಾಗೆಯೇ ಹಿಂಬದಿಯಲ್ಲಿರುವ ಸಾಲಿನಲ್ಲಿರುವ ಆಸನವು ಮಧ್ಯವಯಸ್ಕ ಪ್ರಯಾಣಿಕರಿಗೆ ಅಷ್ಟಾಗಿ ಅನುಕೂಲಕರವಾಗಿಲ್ಲವಾಗಿಲ್ಲವಾದರೂ ಮಕ್ಕಳು ಕುಳಿತುಕೊಳ್ಳಲು ಸುಲಭವಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರಿನಲ್ಲಿಯೇ 7 ಸೀಟರ್ ಮಾದರಿಯನ್ನು ಸಹ ಸಿದ್ದಪಡಿಸಲಾಗುತ್ತಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

7 ಸೀಟರ್ ಮಾದರಿಯಲ್ಲಿ ಮಧ್ಯದ ಸಾಲಿನಲ್ಲಿ ಮೂರು ಆಸನವನ್ನು ಹೊಂದಿರಲಿದ್ದು, ಎಂಪಿವಿ ಕಾರುಗಳಿಗೆ ಇದು ಸರಿಸಮಾನಾಗಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಆದರೆ ಮೊದಲ ಹಂತವಾಗಿ 6 ಸೀಟರ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಹೊಸ ಕಾರು ಕೂಡಾ ಖರೀದಿಗೆ ಲಭ್ಯವಿರಲಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಈ ಮೂಲಕ ಹೊಸ ಕಾರಿನಲ್ಲಿ ಮೂರನೇ ಸಾಲಿನ ಆಸನದೊಂದಿಗೆ 155 ಲೀಟರ್‌ನಷ್ಟು ಬೂಟ್‌ಸ್ಪೆಸ್ ನೀಡಲಾಗಿದ್ದು, ಅವಶ್ಯಕ ಸಂದರ್ಭಗಳಲ್ಲಿ ಮೂರನೇ ಸಾಲನ್ನು ಮಡಿಕೆ ಮಾಡಿಕೊಳ್ಳುವ ಮೂಲಕ 587 ಲೀಟರ್‌ನಷ್ಟು ಬೂಟ್ ಸ್ಪೆಸ್ ಅನುಕೂಲಕಲ ಮಾಡಿಕೊಳ್ಳಬಹುದಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಎಂಜಿನ್ ಸಾಮಾರ್ಥ್ಯ ಮತ್ತು ಪರ್ಫಾಮೆನ್ಸ್

ಸಾಮಾನ್ಯ ಮಾದರಿಯ 5 ಆಸನವುಳ್ಳ ಹೆಕ್ಟರ್ ಕಾರಿನಲ್ಲಿ ನೀಡಲಾಗಿರುವ ಎಂಜಿನ್ ಮಾದರಿಯೇ ಇದೀಗ ಹೊಸ ಹೆಕ್ಟರ್ ಪ್ಲಸ್‌ನಲ್ಲೂ ನೀಡಲಾಗಿದ್ದು, 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಜೋಡಣೆ ಮಾಡಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 170-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದರೆ 1.5-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 143-ಬಿಎಚ್‌ಪಿ ಮತ್ತು ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ 48ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದೆ.

ಎಂಜಿನ್ ವೈಶಿಷ್ಟ್ಯತೆ ಪೆಟ್ರೋಲ್ ಪೆಟ್ರೋಲ್ ಹೈಬ್ರಿಡ್ ಡೀಸೆಲ್
ಎಂಜಿನ್ ಸಿಸಿ 1541 1541 1956
ಸಿಲಿಂಡರ್ ಸಂಖ್ಯೆ 4 4 4
ಬಿಎಚ್‌ಪಿ ಪವರ್ 141 141 168
ಟಾರ್ಕ್ ಎನ್ಎಂ 250 250 350
ಟ್ರಾನ್ಸ್‌ಮಿಷನ್ 6-ಎಂಟಿ/7-ಡಿಸಿಟಿ 6-ಎಂಟಿ 6-ಎಂಟಿ
ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಇದರೊಂದಿಗೆ ಹೊಸ ಕಾರಿನ ಸೆಸ್ಪೆಷನ್ ಅತ್ಯತ್ತಮವಾಗಿದ್ದು, ಹೊಸ ಕಾರನ್ನು ವಿಶೇಷವಾಗಿ ಹೆದ್ದಾರಿ ಚಾಲನೆಗಾಗಿ ಸಿದ್ದಪಡಿಸಲಾಗಿದ್ದರೂ ನಗರದ ಸಂಚಾರ ದಟ್ಟಣೆಯಲ್ಲೂ ಉತ್ತಮ ಕಾರ್ಯನಿರ್ವಹಣೆ ಹೊಂದಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೊಸ ಕಾರಿನಲ್ಲಿ 17-ಇಂಚಿನ ಮಷಿನ್ ಕಟ್ ಅಲಾಯ್ ವೀಲ್ಹ್, ಆಲ್‌ವೀಲ್ಹ್ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಹೊಸ ಕಾರಿನಲ್ಲಿ ಬಿಎಸ್-6 ಎಂಜಿನ್ ಸೇರಿದಂತೆ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಸುರಕ್ಷಾ ಸೌಲಭ್ಯಗಳು

ಹೆಕ್ಟರ್ ಪ್ಲಸ್ ಕಾರಿನಲ್ಲಿ ಆರು ಏರ್‌ಬ್ಯಾಗ್, ಎಲೆಕ್ಟ್ರಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ವ್ಯೂ ಕ್ಯಾಮೆರಾ, ISOFIX ಚೈಲ್ಡ್ ಸೀಟ್, ಹೈ ಸ್ಪೀಡ್ ವಾರ್ನಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಕಾರ್ನರಿಂಗ್ ಫಾಗ್ ಲ್ಯಾಂಪ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯಗಳಿವೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೆಕ್ಟರ್ ಪ್ಲಸ್ ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಸ್ಟೈಲ್ ಪೆಟ್ರೋಲ್ ಮ್ಯಾನುವಲ್- ರೂ.13.49 ಲಕ್ಷ

ಸ್ಟೈಲ್ ಡಿಸೇಲ್ ಮ್ಯಾನುವಲ್- ರೂ. 14.44 ಲಕ್ಷ

ಸೂಪರ್ ಡಿಸೇಲ್ ಮ್ಯಾನುವಲ್- ರೂ. 15.65 ಲಕ್ಷ

ಸ್ಮಾರ್ಟ್ ಪೆಟ್ರೋಲ್ ಆಟೋಮ್ಯಾಟಿಕ್- ರೂ.16.65 ಲಕ್ಷ

ಸ್ಮಾರ್ಟ್ ಡೀಸೆಲ್ ಆಟೋಮ್ಯಾಟಿಕ್- ರೂ. 17.15 ಲಕ್ಷ

ಶಾರ್ಪ್ ಪೆಟ್ರೋಲ್ ಆಟೋಮ್ಯಾಟಿಕ್ ರೂ. 18.21 ಲಕ್ಷ

ಶಾರ್ಪ್ ಪೆಟ್ರೋಲ್ ಹೈಬ್ರಿಡ್ ರೂ. 17.29 ಲಕ್ಷ

ಶಾರ್ಪ್ ಡೀಸೆಲ್ ಆಟೋಮ್ಯಾಟಿಕ್ - ರೂ. 18.54 ಲಕ್ಷ

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೆಕ್ಟರ್ ಪ್ಲಸ್ ಕಾರನ್ನು ಅಗಸ್ಟ್ 13ರ ವರೆಗೆ ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ಎಂಜಿ ಕಂಪನಿಯು ಅಗಸ್ಟ್ 14ರ ನಂತರ ಕಾರಿನ ಬೆಲೆಯನ್ನು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.50 ಸಾವಿರ ಬೆಲೆ ಏರಿಕೆ ಮಾಡುವುದಾಗಿ ಹೇಳಿಕೊಂಡಿದ್ದು, ಮೊದಲ ಒಂದು ತಿಂಗಳು ಕಾರು ಖರೀದಿಸುವ ಗ್ರಾಹಕರಿಗೆ ಹೊಸ ಆಫರ್ ನೀಡಿದೆ.

ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಖರೀದಿಗೆ ಲಭ್ಯವಿರುವ ಬಣ್ಣಗಳು

ಹೆಕ್ಟರ್ ಪ್ಲಸ್ ಕಾರಿನಲ್ಲಿ ಒಟ್ಟು ಆರು ಬಣ್ಣಗಳ ಆಯ್ಕೆ ಲಭ್ಯವಿದ್ದು, ಸ್ಟೇರಿ ಸ್ಕೈ ಬ್ಲ್ಯೂ, ಗ್ಲೆಝ್ ರೆಡ್, ಬರ್ಗ್‌ಗ್ರಾಂಡಿ ರೆಡ್, ಸ್ಟೇರಿ ಬ್ಲ್ಯಾಕ್, ಕ್ಯಾಂಡಿ ವೈಟ್ ಮತ್ತು ಅರೋರಾ ಸಿಲ್ವರ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಪ್ರತಿಸ್ಪರ್ಧಿ ಕಾರುಗಳಿಂತ ಹೆಕ್ಟರ್ ಪ್ಲಸ್ ಹೇಗೆ ಭಿನ್ನ?

ಪ್ರತಿಸ್ಪರ್ಧಿ ಕಾರುಗಳಿಂತ ಹೆಕ್ಟರ್ ಪ್ಲಸ್ ಹೇಗೆ ಭಿನ್ನ?

ಪ್ರತಿಸ್ಪರ್ಧಿ ಕಾರುಗಳ ವೈಶಿಷ್ಟ್ಯತೆ ಎಂಜಿ ಹೆಕ್ಟರ್ ಪ್ಲಸ್ ಟೊಯೊಟಾ ಇನೋವಾ ಕ್ರಿಸ್ಟಾ ಟಾಟಾ ಗ್ರಾವಿಟಾಸ್
ಎಂಜಿನ್ 1.5 ಪೆಟ್ರೋಲ್/2.0 ಡೀಸೆಲ್ 2.7 ಪೆಟ್ರೋಲ್/2.4 ಡೀಸೆಲ್ 2.7 ಡೀಸೆಲ್
ಬಿಹೆಚ್‌ಪಿ ಪವರ್ 141/168 164/148 170
ಟಾರ್ಕ್ ಎನ್ಎಂ 250/350 245/343 350
ಟ್ರಾನ್ಸ್‌ಮಿಷನ್ 6-ಎಂಟಿ/ಡಿಸಿಟಿ 5-ಎಂಟಿ/6-ಎಂಟಿ/ಎಟಿ 6-ಎಂಟಿ/6-ಎಟಿ
ಬೆಲೆ(ಎಕ್ಸ್‌ಶೋರೂಂ ಪ್ರಕಾರ) ರೂ. 13.49 ಲಕ್ಷದಿಂದ-18.54 ಲಕ್ಷ ರೂ. 15.67 ಲಕ್ಷದಿಂದ - ರೂ. 24.68 ಲಕ್ಷ *ಇನ್ನು ಬಿಡುಗಡೆಗೊಂಡಿಲ್ಲ
ಹೊಸ ಚಾಲನಾ ಅನುಭವಕ್ಕಾಗಿ ರಸ್ತೆಗಿಳಿದ ಎಂಜಿ 6 ಸೀಟರ್ ಹೆಕ್ಟರ್ ಪ್ಲಸ್

ಹೆಕ್ಟರ್ ಪ್ಲಸ್ ಕುರಿತಾಗಿ ಡ್ರೈವ್‌ಸ್ಪಾಕ್ ಅಭಿಪ್ರಾಯ

ಸಾಮಾನ್ಯ ಹೆಕ್ಟರ್ ಪ್ಲ್ಯಾಟ್‌ಫಾರ್ಮ್‌ ಅಡಿಯಲ್ಲೇ ಅತ್ಯುತ್ತಮ ವಿನ್ಯಾಸ ಪ್ರೇರಿತ 6 ಸೀಟರ್ ಹೆಕ್ಟರ್ ಪ್ಲಸ್ ಸಿದ್ದಪಡಿಸಿರುವ ಎಂಜಿ ಮೋಟಾರ್ ಕಂಪನಿಯು ಎಸ್‌ಯುವಿ ಕಾರುಗಳ ಜೊತೆಗೆ ಎಂಪಿವಿ ಕಾರುಗಳಿಗೂ ಪೈಪೋಟಿ ನೀಡಲಿದ್ದು, ಬೆಲೆ ದುಬಾರಿಯಾಗಿರುವ ಇನೋವಾ ಕ್ರಿಸ್ಟಾ ಎಂಪಿವಿ ಕಾರಿಗಳಿಗೆ ಇದು ಪರ್ಯಾಯ ಕಾರು ಮಾದರಿಯಾಗಿದೆ. ಹಾಗೆಯೇ ಹೊಸದಾಗಿ ಬಿಡುಗಡೆಯಾಗುತ್ತಿರುವ ಟಾಟಾ ಗ್ರಾವಿಟಾಸ್ ಕಾರಿಗೂ ಉತ್ತಮ ಪೈಪೋಟಿ ನೀಡಲಿದೆ ಎನ್ನಬಹುದು.

Most Read Articles

Kannada
English summary
MG Hector Plus Review (First Drive). Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more