Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 4 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಸ್ಟ್ ಡ್ರೈವ್ ರಿವ್ಯೂ: ಆಡಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನ್ಯೂ ಜನರೇಷನ್ ಎ4 ಸೆಡಾನ್?
ಆಡಿ ಕಂಪನಿಯು ತನ್ನ ಎ 4 ಸೆಡಾನ್ ಕಾರ್ ಅನ್ನು ಮೊದಲ ಬಾರಿಗೆ 2008ರಲ್ಲಿ ಬಿಡುಗಡೆಗೊಳಿಸಿತು. ಎ 4 ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಐಷಾರಾಮಿ ಸೆಡಾನ್‌ಗಳಲ್ಲಿ ಒಂದು. ಹಲವಾರು ಫೀಚರ್'ಗಳನ್ನು ಹೊಂದಿರುವ ಈ ಸೆಡಾನ್ ಕಾರು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ.

ಆಡಿ ಕಂಪನಿಯು ಈಗ ಐದನೇ ತಲೆಮಾರಿನ ಎ 4 ಕಾರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಆಡಿ ಎ 4 ಕಾರಿನ ವಿನ್ಯಾಸ, ಇಂಟಿರಿಯರ್ ಹಾಗೂ ಎಂಜಿನ್'ನಲ್ಲಿ ಕೆಲವು ಅಪ್ ಡೇಟ್'ಗಳನ್ನು ಮಾಡಲಾಗಿದೆ. ಇತ್ತೀಚಿಗೆ ನಾವು ಹೊಸ ಎ 4 ಕಾರ್ ಅನ್ನು ಸಿಟಿಯ ಸುತ್ತ ಮುತ್ತ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. 2021ರ ಆಡಿ ಎ 4 ಕಾರಿನ ರಿವ್ಯೂವಿನ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಿನ್ಯಾಸ ಹಾಗೂ ಶೈಲಿ
ಹೊಸ ಕಾರಿನ ಮುಂಭಾಗದಲ್ಲಿರುವ ಹೊಸ ಹೆಡ್‌ಲೈಟ್‌ಗಳು ನಮ್ಮ ಗಮನ ಸೆಳೆಯುತ್ತವೆ. ಈ ಎಲ್‌ಇಡಿ ಹೆಡ್‌ಲೈಟ್‌ಗಳು ಡಿಆರ್‌ಎಲ್‌ಗಳನ್ನು ಹೊಂದಿವೆ. ಇವುಗಳು ಇಂಡಿಕೇಟರ್'ಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ಹೊಸ ಎ 4 ಸ್ವಲ್ಪ ದೊಡ್ಡದಾದ ಗ್ರಿಲ್ ಹೊಂದಿದೆ. ಈ ಕಾರು ಗ್ರಿಲ್‌ನಲ್ಲಿ ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದ್ದರೂ ಸಹ 360 ಡಿಗ್ರಿ ಪಾರ್ಕಿಂಗ್ ಫೀಚರ್ ಅನ್ನು ಹೊಂದಿಲ್ಲ.

ಟ್ವೀಕ್ ಮಾಡಲಾಗಿರುವ ಕಾರಿನ ಬಂಪರ್ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ. ಹೊಸ ಆಡಿ ಎ 4 ಬಂಪರ್‌ನಲ್ಲಿ ಡಮ್ಮಿ ಫಾಗ್ ಲ್ಯಾಂಪ್ ಹೌಸಿಂಗ್ ಅನ್ನು ಹೊಂದಿದೆ. ಗ್ರಾಹಕರು ಫಾಗ್ ಲ್ಯಾಂಪ್'ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಹೆಡ್‌ಲ್ಯಾಂಪ್‌ಗಳು ಹೆಚ್ಚು ಪ್ರಕಾಶಮಾನವಾಗಿರುವ ಕಾರಣಕ್ಕೆ ಫಾಗ್ ಲ್ಯಾಂಪ್'ಗಳ ಅವಶ್ಯಕತೆಯಿಲ್ಲ.

ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಹೊಸ ಎ 4 ಕಾರು 17 ಇಂಚಿನ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ. ಈ ಆಲಾಯ್ ವ್ಹೀಲ್ ಡಾರ್ಕ್ ಅಥವಾ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಬಹುದು ಎಂದು ನಾವು ಭಾವಿಸಿದ್ದೆವು.

ವಿಂಡೋ ಹಾಗೂ ಡೋರ್ ಹ್ಯಾಂಡಲ್ ಸುತ್ತಲೂ ಕ್ರೋಮ್ ಬಣ್ಣವನ್ನು ನೀಡಲಾಗಿದೆ. ಸಾಂಪ್ರದಾಯಿಕವಾಗಿರುವ ಡೋರ್ ಹ್ಯಾಂಡಲ್‌ಗಳು ತೆರೆಯಲು ಹೋದಾಗ ಮೇಲಕ್ಕೆ ತೆರೆದುಕೊಳ್ಳುತ್ತವೆ.

ಕಾರಿನ ಹಿಂಭಾಗದಲ್ಲಿರುವ ಸ್ಲೀಕ್ ಆದ ಎಲ್ಇಡಿ ಟೇಲ್‌ಲೈಟ್‌ಗಳಲ್ಲಿರುವ ಅಂಶಗಳು ಹೆಡ್‌ಲೈಟ್‌ನಲ್ಲಿರುವ ಅಂಶಗಳಿಗೆ ಹೊಂದಿಕೆಯಾಗುತ್ತವೆ. ಹಿಂಭಾಗದ ಬಂಪರ್'ನ ಕೆಳಗೆ ಕ್ರೋಮ್ ಗಾರ್ನಿಷಿಂಗ್ ಡಂಪಲ್ ಎಕ್ಸಾಸ್ಟ್ ಟಿಪ್'ಗಳನ್ನು ನೀಡಲಾಗಿದೆ.

ಈ ಎಕ್ಸಾಸ್ಟ್'ನ ಎರಡೂ ಬದಿಗಳು ಆಕ್ಟಿವ್ ಆಗಿದ್ದು, ಎ 4 ಕಾರು ಹಿಂಭಾಗದಿಂದಲೂ ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತವೆ.

ಇಂಟಿರಿಯರ್ ಹಾಗೂ ಫೀಚರ್
ಪ್ರೀಮಿಯಂ ಲುಕ್ ಹೊಂದಿರುವ ಹೊಸ ಆಡಿ ಎ 4 ಸೆಡಾನ್ ಕಾರಿನ ಡ್ಯಾಶ್‌ಬೋರ್ಡ್, ಡೋರ್ ಹಾಗೂ ಇತರ ಭಾಗಗಳಲ್ಲಿ ಸಾಫ್ಟ್ ಟಚ್ ಮೆಟಿರಿಯಲ್'ಗಳನ್ನು ಬಳಸಲಾಗಿದೆ. ಮಧ್ಯದಲ್ಲಿ 10.1-ಇಂಚಿನ ಟಚ್-ಸ್ಕ್ರೀನ್ ಇನ್ಫೋಟೇನ್'ಮೆಂಟ್ ಸಿಸ್ಟಂ ಅಳವಡಿಸಲಾಗಿದೆ.

ಸೂಕ್ಷ್ಮವಾಗಿರುವ ಈ ಟಚ್ ಸ್ಕ್ರೀನ್ ಸಿಸ್ಟಂ ಅನ್ನು ಮುಟ್ಟಿದಾಗೆಲ್ಲಾ ಕ್ಲಿಕ್ ಶಬ್ದ ಬರುತ್ತದೆ. ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳನ್ನು ಹೊಂದಿರುವ ಈ ಸಿಸ್ಟಂ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

ಹೊಸ ಎ 4 ಕಾರು ವರ್ಚುವಲ್ ಕಾಕ್‌ಪಿಟ್ ಎಂದು ಕರೆಯುವ 12.1-ಇಂಚಿನ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಕ್ಲಸ್ಟರ್‌ನಲ್ಲಿರುವ ಡಿಸ್ ಪ್ಲೇಯನ್ನು ಚಾಲಕನ ಅಗತ್ಯಕ್ಕೆ ತಕ್ಕಂತೆ ಕಾನ್ಫಿಗರ್ ಮಾಡಬಹುದು.

ಲೆದರ್'ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಗ್ರಿಪ್ ಹೊಂದಿದೆ. ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್'ಗಳನ್ನು ಸರಿಯಾದ ಕ್ರಮದಲ್ಲಿಡಲಾಗಿದೆ. ಸೀಟುಗಳನ್ನು ಪ್ರೀಮಿಯಂ ಲೆದರ್ ಅಪ್ ಹೊಲೆಸ್ಟರಿಯಿಂದ ವ್ರಾಪ್ ಮಾಡಲಾಗಿದೆ.

ಮುಂಭಾಗದಲ್ಲಿರುವ ಎರಡು ಸೀಟುಗಳು 12-ವೇ ಅಡ್ಜಸ್ಟಬಲ್ ಆಗಿದ್ದು, ಡ್ರೈವರ್ ಸೀಟಿನಲ್ಲಿ ಮಾತ್ರ ಸೀಟ್ ಮೆಮೊರಿ ಫಂಕ್ಷನ್ ನೀಡಲಾಗಿದೆ. ಈ ಕಾರಿನಲ್ಲಿ ಮ್ಯಾನುವಲ್ ಆಗಿ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ಸಹ ನೀಡಲಾಗಿದೆ.

ಎರಡನೇ ಸಾಲಿನಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳಬಹುದು. ಮೂರನೆಯ ವ್ಯಕ್ತಿ ಕುಳಿತು ಕೊಳ್ಳಬಹುದಾದರೂ ಲಾಂಗ್ ಡ್ರೈವ್'ನಲ್ಲಿ ತುಸು ಪ್ರಯಾಸ ಪಡಬೇಕಾಗುತ್ತದೆ.

ಎರಡನೇ ಸಾಲಿನಲ್ಲಿ ಬೇರೆಯವರು ಪ್ರವೇಶಿಸಲು ಸಾಧ್ಯವಾಗದಂತಹ ಲಾಕ್ ಅಂಡ್ ಕೀ ಸಿಸ್ಟಂ ಸುರಕ್ಷತಾ ಫೀಚರ್ ನೀಡಲಾಗಿದೆ. ಹೊಸ ಎ 4 ದೊಡ್ಡ ಬೂಟ್ ಹೊಂದಿದ್ದು ನಾಲ್ಕು ಜನರು ಲಗೇಜ್'ಗಳನ್ನಿಡಬಹುದು.

ಹೆಚ್ಚಿನ ಸ್ಥಳ ಬೇಕಾದಲ್ಲಿ ಎರಡನೇ ಸಾಲನ್ನು ಮಡಚಬಹುದು. ಈ ಕಾರು ಎಲೆಕ್ಟ್ರಾನಿಕ್ ಬೂಟ್ ಹೊಂದಿಲ್ಲದಿದ್ದರೂ ಬೂಟ್ ಲಿಡ್ ಅನ್ನು ಸುಲಭವಾಗಿ ತೆರೆಯಬಹುದು ಹಾಗೂ ಮುಚ್ಚಬಹುದು.

ಎಂಜಿನ್ ಹಾಗೂ ಹ್ಯಾಂಡ್ಲಿಂಗ್
ಹೊಸ ಆಡಿ ಎ 4 ಕಾರಿನಲ್ಲಿ ಅಳವಡಿಸಿರುವ ಹೊಸ 2.0-ಲೀಟರ್ ಟಿಎಫ್‌ಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್ 188 ಬಿಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ ಏಳು-ಸ್ಪೀಡಿನ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಜೋಡಿಸಲಾಗಿದೆ.

ಹೊಸ ಎ 4 ಕಾರು 7.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನಲ್ಲಿ ಎಫಿಶಿಯನ್ಸಿ, ಕಂಫರ್ಟ್, ಡೈನಾಮಿಕ್ ಹಾಗೂ ಇಂಡಿವಿಜುಯಲ್ ಎಂಬ ನಾಲ್ಕು ಡ್ರೈವಿಂಗ್ ಮೋಡ್'ಗಳಿವೆ.

ಎಫಿಶಿಯನ್ಸಿ ಮೋಡ್‌ನಲ್ಲಿ ಸ್ಟೀಯರಿಂಗ್ ಹಗುರವಾಗಿದ್ದು, ಥ್ರೊಟಲ್ ರೆಸ್ಪಾನ್ಸ್ ನಿಧಾನವಾಗಿರುತ್ತದೆ. ಆದರೆ ಇಂಧನ ಉಳಿತಾಯವಾಗುತ್ತದೆ. ಕಂಫರ್ಟ್ ಮೋಡ್‌ನಲ್ಲಿ ಸ್ಟೀಯರಿಂಗ್ ಹಾಗೂ ಥ್ರೊಟಲ್ ರೆಸ್ಪಾನ್ಸ್ ಸ್ವಲ್ಪ ಹೆಚ್ಚಾಗುತ್ತದೆ. ನಾವು ಸಿಟಿ ಹಾಗೂ ಹೆದ್ದಾರಿಗಳಲ್ಲಿ ಡ್ರೈವ್ ಮಾಡುವವರಿಗೆ ಈ ಮೋಡ್ ಅನ್ನು ಶಿಫಾರಸು ಮಾಡುತ್ತೇವೆ.

ಡೈನಾಮಿಕ್ ಮೋಡ್‌ನಲ್ಲಿ ಥ್ರೊಟಲ್ ರೆಸ್ಪಾನ್ಸ್ ತೀಕ್ಷ್ಣವಾಗಿದ್ದು, ಸ್ಟೀಯರಿಂಗ್ ಗಟ್ಟಿಯಾಗಿರುತ್ತದೆ. ಈ ಮೋಡ್‌ನಲ್ಲಿ ಕಾರಿನ ಗರಿಷ್ಠ ಸಾಮರ್ಥ್ಯವನ್ನು ಪಡೆಯಬಹುದು. ಗೇರ್ ಬಾಕ್ಸ್'ನಲ್ಲಿ ಡಿ ಹಾಗೂ ಎಸ್ ಮೋಡ್'ಗಳನ್ನು ನೀಡಲಾಗಿದೆ.

ಡಿ ಮೋಡ್ ಅನ್ನು ಸಿಟಿ ಹಾಗೂ ಹೈವೇಗಳಲ್ಲಿ ಬಳಸಬಹುದು. ಗೇರ್ ಬಾಕ್ಸ್'ನ ಉತ್ತಮ ನಿರ್ವಹಣೆಗೆ ಎಸ್ ಮೋಡ್ ಬಳಸುವುದು ಸೂಕ್ತ. ಈ ಮೋಡ್‌ನಲ್ಲಿ ಕಾರು ಸ್ವಲ್ಪ ಹೆಚ್ಚಿನ ರೆವ್ ರೇಂಜ್'ವರೆಗೆ ಗೇರ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತದೆ.

3,000 ಆರ್‌ಪಿಎಂ ನಂತರ ಕಾರಿನ ವೇಗವು ಹೆಚ್ಚಾಗುತ್ತದೆ. ಪ್ಯಾಡಲ್ ಶಿಫ್ಟರ್‌ಗಳು ಉಪಯುಕ್ತವಾಗಿದ್ದು, ಮ್ಯಾನುವಲ್ ಮೋಡ್‌ನಲ್ಲಿ ಇದ್ದಕ್ಕಿದ್ದಂತೆ ಡೌನ್‌ಶಿಫ್ಟ್ ಮಾಡಬೇಕಾದಾಗ ನೆರವಿಗೆ ಬರುತ್ತವೆ.

ಎ 4 ಕಾರಿನಲ್ಲಿ ಸಸ್ಪೆಂಷನ್ ಸಾಫ್ಟ್ ಆಗಿರುವ ಕಾರಣ ಈ ಕಾರು ಆರಾಮದಾಯಕ ಸವಾರಿಯನ್ನು ನೀಡುತ್ತದೆ. ಈ ಸಸ್ಪೆಂಷನ್ ಸೆಟಪ್'ನಿಂದಾಗಿ ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿಯೂ ಸರಾಗವಾಗಿ ಸಾಗಬಹುದು.

ಎನ್‌ವಿಹೆಚ್ ಹಾಗೂ ಇನ್ಸುಲೇಷನ್ ಲೆವೆಲ್ ಉತ್ತಮವಾಗಿರುವುದರಿಂದ ವಿಂಡೋಗಳನ್ನು ಮುಚ್ಚಿದಾಗ ಹೊರಗಿನ ಶಬ್ದವು ಕೇಳಿಸುವುದಿಲ್ಲ. ಈ ಕಾರಿನಲ್ಲಿರುವ ಸಾಫ್ಟ್ ಸಸ್ಪೆಂಷನ್'ನಿಂದಾಗಿ ಸ್ವಲ್ಪ ಪ್ರಮಾಣದ ಬಾಡಿ ರೋಲ್ ಅನುಭವಿಸಬಹುದು.

ಇನ್ನು ಮೈಲೇಜ್ ಬಗ್ಗೆ ಹೇಳುವುದಾದರೆ ಈ ಕಾರು ಸಿಟಿಯೊಳಗೆ 7.4 ಕಿ.ಮೀನಿಂದ 9.2 ಕಿ.ಮೀ ಮೈಲೇಜ್ ನೀಡಿತು. ನಾವು ಈ ಕಾರನ್ನು ಸ್ವಲ್ಪ ಸಮಯದವರೆಗೆ ಮಾತ್ರ ಹೆದ್ದಾರಿಯಲ್ಲಿ ಚಾಲನೆ ಮಾಡಿದ ಕಾರಣ ಹೆದ್ದಾರಿಯಲ್ಲಿನ ನಿಖರವಾದ ಮೈಲೇಜ್ ಬಗ್ಗೆ ತಿಳಿದು ಬಂದಿಲ್ಲ. ಆದರೆ ಈ ಕಾರು ಹೆದ್ದಾರಿಯಲ್ಲಿ 12ರಿಂದ 14 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆಗಳಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೊಸ ಆಡಿ ಎ 4 ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.42 ಲಕ್ಷಗಳಾಗಿದೆ. ಆಡಿ ಕಂಪನಿಯು ಐದನೇ ತಲೆಮಾರಿನ ಎ 4 ಕಾರಿನಲ್ಲಿ ಹಲವಾರು ಫೀಚರ್'ಗಳನ್ನು ನೀಡಿದೆ.

ಹೊಸ ಆಡಿ ಎ 4 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 3 ಸೀರಿಸ್, ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಹಾಗೂ ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ.