ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ನಿನ್ಸಾಸ್ ಸಂಸ್ಥೆಯು ಭಾರತ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ವಿವಿಧ ಮಾದರಿಯ ವಾಹನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಯುರೋಪ್ ರಾಷ್ಟ್ರಗಳಲ್ಲಿ ಜನಪ್ರಿಯತೆ ಸಾಧಿಸಿದಷ್ಟು ಭಾರತೀಯ ಮಾರುಕಟ್ಟೆಯಲ್ಲಿ ಅಷ್ಟಾಗಿ ಬೆಳವಣಿಗೆ ಕಾಣುತ್ತಿಲ್ಲ. ಹೀಗಾಗಿ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಈ ಬಾರಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದು ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಹೊಂದಿದ್ದರೂ ಸಹ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಹಿಂದೆ ಬಿದ್ದಿರುವ ನಿಸ್ಸಾನ್ ಸಂಸ್ಥೆಯು ಈ ಬಾರಿ ಹೊಸ ಕಾರು ಉತ್ಪನ್ನದೊಂದಿಗೆ ಹೊಸ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕಿಕ್ಸ್ ಹೆಸರಿನೊಂದಿಗೆ ಬಿಡುಗಡೆ ಮಾಡಲಾಗುತ್ತಿರುವ ಹೊಸ ಕಾರು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಜಾಗತಿಕ ಮಾರುಕಟ್ಟೆಗಳಲ್ಲಿ 2017ರ ಅವಧಿಯ ಬೆಸ್ಟ್ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಕ್ಸ್ ಕಾರು ಇದೀಗ ಭಾರತದಲ್ಲೂ ಕಮಾಲ್ ಮಾಡಲು ಸಜ್ಜಾಗಿದ್ದು, ಆಕರ್ಷಕ ನೋಟ, ಗಮನಸೆಳೆಯುವ ಎಂಜಿನ್ ಪರ್ಫಾಮೆನ್ಸ್ ಮತ್ತು ಕೈಗೆಟುಕುವ ಬೆಲೆಗಳೇ ಈ ಹೊಸ ಕಾರಿನ ಪ್ರಮುಖ ಹೈಲೆಟ್ಸ್.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಸುಮಾರು 2 ಎರಡು ವರ್ಷಗಳ ಹಿಂದೆಯೇ ಕಿಕ್ಸ್ ಕಾರುನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಹೇಳುತ್ತಲೇ ಬಂದಿದ್ದ ನಿಸ್ಸಾನ್ ಸಂಸ್ಥೆಯು ಈಗ ಹೊಸ ಕಾರಿನ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಮುಂದಿನ 2019ರ ಜನವರಿ ಮೊದಲಾರ್ಧದಲ್ಲಿ ಬಿಡುಗಡೆಗೊಳಿಸುವುದು ಖಚಿತವಾಗಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿದ್ದ ನಿಸ್ಸಾನ್ ಸಂಸ್ಥೆಯು ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಗುಜರಾತ್‌ನ ಕಚ್‌ನಲ್ಲಿ ಎರಡು ದಿನಗಳ ಕಾಲ ಟೆಸ್ಟ್ ಡ್ರೈವ್ ಕಾರ್ಯಗಾರ ಕೈಗೊಳ್ಳುವ ಮೂಲಕ ಡ್ರೈವ್‌ಸ್ಪಾರ್ಕ್ ತಂಡಕ್ಕೂ ಸಹ ಕಿಕ್ಸ್ ವಿಶೇಷ ಡ್ರೈವ್ ಕಲ್ಪಿಸಿತ್ತು.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

2016ರಲ್ಲೇ ಬ್ರೆಜಿಲ್ ಸೇರಿದಂತೆ ಯುರೋಪಿನ ಪ್ರಮುಖ ಮಾರುಕಟ್ಟೆಯಲ್ಲಿ ಕಿಕ್ಸ್ ಕಾರು ಬಿಡುಗಡೆಗೊಂಡಿದ್ದು, ವಿಶ್ವದರ್ಜೆಯ ಡಿಸೈನ್ ಲಾಂಗ್ವೆಜ್ ವಿನ್ಯಾಸವಾದ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಹೊಸ ಕಾರನ್ನು ಅಭಿವೃದ್ಧಿಗೊಳಿಸಲಾಗಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಹೀಗಾಗಿ ಜಾಗತಿಕವಾಗಿ ಯಶಸ್ವಿಯಾಗಿರುವ ಕಿಕ್ಸ್ ಕಾರು ಭಾರತದಲ್ಲೂ ಕೊರಿಯಾ ಬ್ರಾಂಡ್‌ ಹ್ಯುಂಡೈ ಕ್ರೆಟಾ ಕಾರುಗಳಿಗೆ ಭಾರೀ ಪೈಪೋಟಿ ನೀಡುವ ನಿರೀಕ್ಷೆಯೊಂದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ರಗಡ್ ಲುಕ್‌ನೊಂದಿಗೆ ಎಲ್ಲಾ ವರ್ಗದವರನ್ನು ಸೆಳೆಯಬಲ್ಲ ಗುಣಹೊಂದಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಡಿಸೈನ್ ಮತ್ತು ಸ್ಟೈಲಿಂಗ್

ರೆನಾಲ್ಟ್ ಕ್ಯಾಪ್ಚರ್‌ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿರುವ ಕಿಕ್ಸ್ ಕಾರು, ರೆನಾಲ್ಟ್ ಡಸ್ಟರ್ ಮತ್ತು ಟೆರಾನೋ ಮಾದರಿಗಳಿಂತಲೂ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಎಸ್‌ಯುವಿ ಪ್ರಿಯರಿಗೆ ಇಷ್ಟವಾಗುವ ಬಹುತೇಕ ಅಂಶಗಳು ಇದರಲ್ಲಿವೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ವೈಶಿಷ್ಟ್ಯತೆಯು ಮೆರಗು ತಂದಿದ್ದು, ವಿ ಮೊಷನ್ ಗ್ರಿಲ್, ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಕೆಳಭಾಗದಲ್ಲಿ ಅಳವಡಿಸಲಾಗಿರುವ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಪ್ರೋಫೈಲ್ ನೀಡಲಾಗಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್‌ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್‌ಗೆ ಲುಕ್ ನೀಡಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಇನ್ನು ಕಾರಿನಲ್ಲಿ 17-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ, 210 ಎಂಎಂ ನಷ್ಟು ಗ್ರೌಂಡ್ ಕ್ಲಿಯೆರೆನ್ಸ್, ಬೂಮೆರ್ಗ್ ಟೈಲ್ ಲ್ಯಾಂಪ್ಸ್, ಗಮನ ಸೆಳೆಯುವ ರಿಯರ್ ಬಂಪರ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳು ಕಿಕ್ಸ್ ಕಾರಿನಲ್ಲಿವೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಕಾರಿನ ಒಳವಿನ್ಯಾಸ

ಗ್ಲಿಡಿಂಗ್ ವಿಂಗ್ ಡ್ಯಾಶ್‌ಬೋರ್ಡ್ ಹೊಂದಿರುವ ಕಿಕ್ಸ್ ಕಾರಿನಲ್ಲಿ ಒಳಾಂಗಣ ವಿಸ್ತಿರ್ಣವು ಚಿಕ್ಕದು ಎನಿಸಿದರೂ ಆಧುನಿಕ ಕಾರುಗಳಲ್ಲಿ ಇರಬೇಕಾದ ಬಹುತೇಕ ಸೌಲಭ್ಯವು ಇದರಲ್ಲಿವೆ. ಬ್ಲ್ಯಾಕ್ ಪ್ಲಾಸ್ಟಿಕ್ ಪ್ಯಾನೆಲ್, ಬ್ರೌನ್ ಲೆದರ್‌ನಿಂದ ಸಿದ್ದವಾದ ಡ್ಯಾಶ್‌ಬೋರ್ಡ್, ಲೆದರ್ ಹೊದಿಕೆಯುಳ್ಳ ಸ್ಟೀರಿಂಗ್ ವೀಲ್ಹ್ ಹೊಂದಿರುವುದು ಕಾರು ಚಾಲನೆಯಲ್ಲಿ ಐಷಾರಾಮಿ ಅನುಭವ ನೀಡುತ್ತೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಅದರ ಹೊರತಾಗಿ ಮತ್ತಷ್ಟು ಹೊಸ ಸೌಲಭ್ಯವನ್ನು ಬಯಸುವ ಎಸ್‌ಯುವಿ ಪ್ರಿಯರಿಗೆ ಕಿಕ್ಸ್ ತುಸು ನಿರಾಶೆ ಮೂಡಿಸಬಹುದಾಗಿದ್ದು, ಬೆಲೆಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಇರುವುದರಲ್ಲೇ ಬೆಸ್ಟ್ ಎನ್ನುವ ರೀತಿಯಲ್ಲಿ ಕಿಕ್ಸ್ ಕಾರು ಹೊರತಂದಿರುವ ನಿಸ್ಸಾನ್ ಪ್ರಯತ್ನವನ್ನು ಮೆಚ್ಚಲೇಬೇಕು.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಇದಕ್ಕೆ ಉದಾಹರಣೆ ಅಂದ್ರೆ, ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಈ ಕಾರು ವಿಶೇಷ ಎನ್ನಿಸಲಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಇದಲ್ಲದೇ ನಿಸ್ಸಾನ್ ಮುಂಬರುವ ಮತ್ತೊಂದು ಕಾರು ಮಾದರಿಯಾದ ಅಲ್ಟಿಮಾ ಸೆಡಾನ್ ಕಾರಿನಿಂದಲೂ ಕೆಲವು ಫೀಚರ್ಸ್‌ಗಳನ್ನು ಕಿಕ್ಸ್ ಕಾರಿನಲ್ಲಿ ಎರವಲು ಪಡೆದುಕೊಳ್ಳಲಾಗಿದ್ದು, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಧ್ವನಿ ಗ್ರಹಿಸಿ ಕಾರ್ಯನಿರ್ವಹಿಸುವ "Hey Siri" ಮತ್ತು "Okay Google" ಆ್ಯಪ್ ಸೌಲಭ್ಯವಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಜೊತೆಗೆ ನಿಸ್ಸಾನ್ ಕನೆಕ್ಟ್ ಆ್ಯಪ್ ಸೌಲಭ್ಯವು ಸಹ ವಿವಿಧ ಕಾರ್ಯಗಳಿಗೆ ಬಳಕೆಯಾಗಲಿದ್ದು, ಚಾಲಕನಿಗೆ ಸರ್ವಿಸ್ ಬುಕ್ಕಿಂಗ್ ರಿಮೆಂಡರ್, ಕಾರಿನ ಆರೋಗ್ಯ(ಎಂಜಿನ್, ಬ್ಯಾಟರಿ, ಬ್ರೇಕಿಂಗ್) ಮತ್ತು ಡೋರ್ ಲಾಕ್/ಅನ್ ಲಾಕ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತಾಗಿ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡುತ್ತೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಕಾರಿನ ಅಳತೆ ಮತ್ತು ಆಸನ ಸೌಲಭ್ಯ

ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯ ಕಿಕ್ಸ್ ಕಾರು ಉತ್ತಮ ಉದ್ದಳತೆ ಹೊಂದಿದ್ದು, 4,384ಎಂಎಂ ಉದ್ದ, 1,813ಎಂಎಂ ಅಗಲವಾಗಿದೆ. ಜೊತೆಗೆ 2,673 ಎಂಎಂ ಎತ್ತರವಾಗಿದ್ದು, ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಇನ್ನುಳಿದಂತೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಅಂಡ್ರಾಯಿಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಯುಎಸ್‌ಬಿ ಪೋರ್ಟ್, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆರ್ಮ್ ರೆಸ್ಟ್, ಹಿಂಬದಿಯಲ್ಲಿ ಎಸಿ ವೆಂಟ್ಸ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್/ಅನ್‌ಲಾಕ್ ಸೌಲಭ್ಯ, ರಿಯರ್ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಈ ಪೆಟ್ರೋಲ್ ಮಾದರಿಯು 104-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 108-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿವೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಇದರೊಂದಿಗೆ ಗಂಟೆಗೆ 170 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಕಿಕ್ಸ್ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡುವ ಕುರಿತಾಗಿ ಯಾವುದೇ ಮಾಹಿತಿ ಇಲ್ಲವಾದ್ರು ಮುಂಬರುವ ದಿನಗಳಲ್ಲಿ ಕಿಕ್ಸ್ ಆಟೋ ಮ್ಯಾಟಿಕ್ ರಸ್ತೆಗಿಳಿಯುವ ಸಾಧ್ಯತೆಗಳಿವೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಸುರಕ್ಷಾ ಸೌಲಭ್ಯಗಳು

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಕಿಕ್ಸ್ ಕಾರಿನ ಕ್ವಿಕ್ ರೌಂಡ್ ಮಾಹಿತಿ

ಎಂಜಿನ್ ಸಾಮರ್ಥ್ಯ 1.5-ಲೀಟರ್ (1461ಸಿಸಿ)
ಇಂಧನ ಮಾದರಿ ಡಿಸೇಲ್ ಹಾಗೂ ಪೆಟ್ರೋಲ್
ಸಿಲಿಂಡರ್ ಸಂಖ್ಯೆ ಇನ್ ಲೈನ್ ಫೋರ್
ಪವರ್(ಬಿಎಚ್‌ಪಿ) 108 ಬಿಎಚ್‌ಪಿ
ಟಾರ್ಕ್(ಎನ್ಎಂ) 240 ಎನ್ಎಂ
ಟ್ರಾನ್‌ಮಿಷನ್ 6-ಸ್ಪೀಡ್ ಮ್ಯಾನುವಲ್
ಟೈರ್ ಸೈಜ್ 215/60 ಆರ್17
ಕಾರಿನ ತೂಕ 1110 ಕೆ.ಜಿ(ಅಂದಾಜು)
ಇಂಧನ ಟ್ಯಾಂಕ್ ಸಾಮರ್ಥ್ಯ 50 ಲೀಟರ್

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಕಿಕ್ಸ್ ಉದ್ದಳತೆ

ಉದ್ದಳತೆ ಗಾತ್ರ (ಮಿಲಿ ಮೀಟರ್‌ಗಳಲ್ಲಿ)
ಉದ್ದ 4384 ಎಂಎಂ
ಅಗಲ 1813 ಎಂಎಂ
ಎತ್ತರ 1656 ಎಂಎಂ
ವೀಲ್ಹ್ ಬೆಸ್ 2673 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಪ್ರತಿಸ್ಪರ್ಧಿ ಕಾರುಗಳಿಂತ ಕಿಕ್ಸ್ ಹೇಗೆ ಭಿನ್ನ?

ತಾಂತ್ರಿಕ ವೈಶಿಷ್ಟ್ಯತೆ ನಿಸ್ಸಾನ್ ಕಿಕ್ಸ್ ಹ್ಯುಂಡೈ ಕ್ರೆಟಾ ಮಾರುತಿ ಸುಜುಕಿ ಎಸ್-ಕ್ರಾಸ್
ಎಂಜಿನ್ 1.5-ಲೀಟರ್ ಡಿಸೇಲ್ 1.4-ಲೀಟರ್ ಡಿಸೇಲ್ 1.3-ಲೀಟರ್ ಡಿಸೇಲ್
ಪವರ್ (ಬಿಎಚ್‌ಪಿ) 108 89 89

ಎನ್ಎಂ ಟಾರ್ಕ್ 240 220 200
ಟ್ರಾನ್‌ಮಿಷನ್ 6-ಸ್ಪೀಡ್ ಎಂಟಿ 6-ಸ್ಪೀಡ್ ಎಂಟಿ 5-ಸ್ಪೀಡ್ ಎಂಟಿ
ಉದ್ದಳತೆ 4384 ಎಂಎಂ 4270 ಎಂಎಂ 4300 ಎಂಎಂ

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಕಾರಿನ ಮೈಲೇಜ್ ಮತ್ತು ಬಣ್ಣದ ಆಯ್ಕೆ

ಕಿಕ್ಸ್ ಕಾರಿನ ಮೈಲೇಜ್ ಕುರಿತಾಗಿ ಅಧಿಕೃತ ಮಾಹಿತಿ ಇಲ್ಲವಾದ್ರು ಟೆಸ್ಟ್ ಡ್ರೈವ್ ಸಂದರ್ಭದಲ್ಲಿ ಹೊಸ ಕಿಕ್ಸ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್ 12 ರಿಂದ 14ಕಿ.ಮಿ ಮತ್ತು ಡಿಸೇಲ್ ಕಾರುಗಳು 16 ರಿಂದ 18 ಇಂಧನ ದಕ್ಷತೆಯೊಂದಿದೆ 11 ವಿವಿಧ ಬಣ್ಣಗಳಲ್ಲಿ(5 ಡ್ಯುಯಲ್ ಟೋನ್) ಲಭ್ಯವಾಗಲಿವೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ನಿಸ್ಸಾನ್ ಕಿಕ್ಸ್ ಕಾರುಗಳು 2019ರ ಜನವರಿಯಲ್ಲಿ ಖರೀದಿಗೆ ಲಭ್ಯವಾಗುವುದು ಬಹುತೇಕ ಖಚಿತವಾಗಿದ್ದು, ಕಾರಿನ ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.15 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ.

ಎಸ್‌ಯುವಿ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ನಿಸ್ಸಾನ್ ಕಿಕ್ಸ್ ಫಸ್ಟ್ ಡ್ರೈವ್ ರಿರ್ಪೋಟ್

ಹೀಗಾಗಿ ಹೊಸ ಕಿಕ್ಸ್ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಎಸ್ ಕ್ರಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮಟ್ಟದಲ್ಲಿ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿಗಳಿಂತಲೂ ವಿಶೇಷ ಎನ್ನಿಸಲಿವೆ.

Most Read Articles

Kannada
English summary
Nissan Kicks Review — KICK-starting A New Statement Among Five-Seater SUVs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X