ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಜಪಾನಿನ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಮ್ಯಾಗ್ನೈಟ್ ಎಸ್‌ಯುವಿಯನ್ನು ಅಕ್ಟೋಬರ್ 21ರಂದು ಜಾಗತಿಕವಾಗಿ ಅನಾವರಣಗೊಳಿಸಿತ್ತು. ಈ ತಿಂಗಳ ಕೊನೆಯ ಭಾಗದಲ್ಲಿ ಈ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಹೊಸ ಮ್ಯಾಗ್ನೈಟ್ ಎಸ್‌ಯುವಿಯನ್ನು ಸಬ್ 4 ಮೀಟರ್ ಕಾಂಪ್ಯಾಕ್ಟ್-ಎಸ್‌ಯುವಿ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗುವುದು. ನಾವು ಇತ್ತೀಚಿಗೆ ಈ ಹೊಸ ಎಸ್‌ಯುವಿಯನ್ನು ನಗರದಲ್ಲಿ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಚಾಲನೆಯ ಬಗೆಗಿನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಡಿಸೈನ್ ಹಾಗೂ ಸ್ಟೈಲ್

ಮೊದಲಿಗೆ ಈ ಎಸ್‌ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ ಈ ಕಾಂಪ್ಯಾಕ್ಟ್ ಎಸ್‌ಯುವಿಯು ಸುತ್ತಲೂ ಶಾರ್ಪ್ ಲೈನ್, ಕ್ರೀಸ್‌ ಹಾಗೂ ಕಪ್ಪು ಕ್ಲಾಡಿಂಗ್ ಗಳನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ ಎಲ್ಇಡಿ ಹೆಡ್‌ಲೈಟ್‌, ಡಿಆರ್‌ಎಲ್‌, ಫಾಗ್ ಲೈಟ್ ಪ್ರೊಜೆಕ್ಟರ್‌ ಹಾಗೂ ಎಲ್‌ಇಡಿ ಬಲ್ಬ್‌ಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಎಸ್‌ಯುವಿಯ ಮುಂಭಾಗದಲ್ಲಿರುವ ಗ್ರಿಲ್‌ ಸಾಕಷ್ಟು ಪ್ರಮಾಣದ ಕ್ರೋಮ್ ಅಂಶವನ್ನು ಹೊಂದಿದೆ. ಮುಂಭಾಗದಲ್ಲಿರುವ ಬಂಪರ್ ಈ ಎಸ್‌ಯುವಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಎಸ್‌ಯುವಿಯು ಮಷಿನ್ದ್ ಐದು-ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಅಲಾಯ್ ವ್ಹೀಲ್ ನ ವಿನ್ಯಾಸವು ಸ್ಕೋಡಾ ಆಕ್ಟೇವಿಯಾ ವಿಆರ್ ಎಸ್ ನಲ್ಲಿರುವ ವಿನ್ಯಾಸವನ್ನು ಹೋಲುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಕಾಂಪ್ಯಾಕ್ಟ್ ಎಸ್‌ಯುವಿಯು ಇಂಟಿಗ್ರೇಟೆಡ್ ಎಲ್‌ಇಡಿ ಇಂಡಿಕೇಟರ್ ಹೊಂದಿರುವ ಕಪ್ಪು ಬಣ್ಣದ ಒಆರ್‌ವಿಎಂಗಳನ್ನು ಹೊಂದಿದೆ. ಈ ಒಆರ್‌ವಿಎಂಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಎಸ್‌ಯುವಿಯಲ್ಲಿ ಈ ಸೆಗ್ ಮೆಂಟಿನಲ್ಲಿಯೇ ಮೊದಲ ಬಾರಿಗೆ 360 ಡಿಗ್ರಿ ಕ್ಯಾಮೆರಾ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿರುವ ಈ ಎಸ್‌ಯುವಿಯ ಮೇಲಿನ ಅರ್ಧ ಭಾಗವು ಕಪ್ಪು ಬಣ್ಣವನ್ನು ಹೊಂದಿದ್ದರೆ, ಡೋರ್ ಹ್ಯಾಂಡಲ್‌ಗಳು ಕ್ರೋಮ್‌ ಬಣ್ಣವನ್ನು ಹೊಂದಿವೆ. ಇನ್ನೂ ರೂಫ್ ರೇಲ್ ಗಳು ಸಿಲ್ವರ್ ಬಣ್ಣವನ್ನು ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಎಸ್‌ಯುವಿ ಹಿಂಭಾಗದಲ್ಲಿ ಎಲ್‌ಇಡಿಗಳಂತೆ ಕಾಣುವ ಟೇಲ್ ಲೈಟ್ ಅಳವಡಿಸಲಾಗಿದೆ. ಲೋಗೋದ ಮಧ್ಯದಲ್ಲಿ ಮ್ಯಾಗ್ನೈಟ್ ಬ್ಯಾಡ್ಜಿಂಗ್ ಅನ್ನು ಕಾಣಬಹುದು. ಇಕ್ಕಟ್ಟಾದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲು ನೆರವಾಗುವ ಸಲುವಾಗಿ ಈ ಎಸ್‌ಯುವಿಯಲ್ಲಿ ಪಾರ್ಕಿಂಗ್ ಸೆನ್ಸಾರ್ ಹಾಗೂ ಅಡಾಪ್ಟಿವ್ ಗೈಡ್ ಲೈನ್ಸ್ ಗಳನ್ನು ನೀಡಲಾಗಿದೆ. ಕ್ಯಾಮೆರಾದಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ಗುಣಮಟ್ಟವಿರಬೇಕಾಗಿತ್ತು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಇಂಟಿರಿಯರ್ ಹಾಗೂ ಫೀಚರ್

ಈ ಎಸ್‌ಯುವಿಯ ಇಂಟಿರಿಯರ್ ನಲ್ಲಿ ಕಪ್ಪುಬಣ್ಣದ ಡ್ಯಾಶ್‌ಬೋರ್ಡ್, ಲ್ಯಾಂಬೊರ್ಗಿನಿ ಕಾರಿನಲ್ಲಿರುವಂತಹ ಎಸಿ ವೆಂಟ್ ಗಳನ್ನು ನೀಡಲಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳನ್ನು ಹೊಂದಿರುವ 8 ಇಂಚಿನ ಇನ್ಫೋಟೇನ್ ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಸ್ಟಾರ್ಟ್ /ಸ್ಟಾಪ್ ಬಟನ್ ಗಳನ್ನು ಎಸಿ ಕಂಟ್ರೋಲ್ ಕೆಳಗೆ ನೀಡಲಾಗಿದೆ. ಈ ಎಸ್‌ಯುವಿಯಲ್ಲಿ ಚಾರ್ಜಿಂಗ್ ಸಾಕೆಟ್‌ ಹಾಗೂ ವಸ್ತುಗಳನ್ನು ಇಡಲು ಸ್ಟೋರೆಜ್ ಸ್ಪೇಸ್ ನೀಡಲಾಗಿದೆ. ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಎರಡೂ ಬದಿಯಲ್ಲಿ ಕಂಟ್ರೋಲ್ ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಎಡಭಾಗದಲ್ಲಿರುವ ಬಟನ್ ಗಳು ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಕಂಟ್ರೋಲ್ ಮಾಡಿದರೆ, ಬಲ ಭಾಗದಲ್ಲಿರುವ ಬಟನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕಂಟ್ರೋಲ್ ಮಾಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಎಸ್‌ಯುವಿಯಲ್ಲಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಏಳು ಇಂಚಿನ ಎಂಐಡಿ ಪರದೆಯನ್ನು ಹೊಂದಿದ್ದು ಎಸ್‌ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಇನ್ನೂ ಕಪ್ಪು ಬಣ್ಣದ ಸೀಟುಗಳು ಸಾಕಷ್ಟು ಆರಾಮದಾಯಕವಾಗಿವೆ. ಚಾಲಕನ ಬದಿಯಲ್ಲಿ ಸೀಟಿನಲ್ಲಿ ಮಾತ್ರ ಹೈಟ್ ಅಡ್ಜಸ್ಟಬಲ್ ನೀಡಲಾಗಿದೆ. ಮುಂಭಾಗದ ಸೀಟುಗಳು ಥೈ ಸಪೋರ್ಟ್ ಹಾಗೂ ಸೈಡ್ ಬೋಲ್‌ಸ್ಟರ್‌ಗಳನ್ನು ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಹಿಂಭಾಗದ ಸೀಟುಗಳು ಉತ್ತಮ ಬ್ಯಾಕ್ ರೆಸ್ಟ್ ನೀಡುತ್ತವೆಯಾದರೂ ಹೈಟ್ ಇರುವ ಪ್ರಯಾಣಿಕರಿಗೆ ಯಾವುದೇ ಲೆಗ್ ರೂಂ ಇಲ್ಲದಿರುವುದರಿಂದ ಕಷ್ಟವಾಗಬಹುದು. ಆದರೂ ಹೆಡ್ ರೂಮ್ ಎತ್ತರದ ಪ್ರಯಾಣಿಕರಿಗೆ ಸಮಸ್ಯೆ ಎನಿಸುವುದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಹಿಂಭಾಗದಲ್ಲಿರುವ ಎಸಿ ವೆಂಟ್ ಗಳ ಕಾರಣದಿಂದ ಈ ಎಸ್‌ಯುವಿಯ ಕ್ಯಾಬಿನ್ ಬಿಸಿಯಾದಷ್ಟೇ ವೇಗವಾಗಿ ತಣ್ಣಗಾಗುತ್ತದೆ. ಮ್ಯಾಗ್ನೈಟ್ ಎಸ್‌ಯುವಿಯ ಟಾಪ್ ಎಂಡ್ ಮಾದರಿಯು ಸಹ ಸನ್ ರೂಫ್ ಅನ್ನು ಹೊಂದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು 336-ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಲಗೇಜ್ ಗಳಿಗೆ ಹೆಚ್ಚಿನ ಸ್ಪೇಸ್ ಬೇಕಾದಲ್ಲಿ ಹಿಂಭಾಗದ ಸೀಟುಗಳನ್ನು 60:40ರಷ್ಟು ಸ್ಪ್ಲಿಟ್ ಮಾಡಬಹುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಚಾಲನಾ ಅನಿಸಿಕೆ

ಹೊಸ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯಲ್ಲಿ 1.0-ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಹಾಗೂ 1.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಗಳನ್ನು ಅಳವಡಿಸಲಾಗಿದೆ. 1.0-ಲೀಟರಿನ ಎನ್‌ಎ ಎಂಜಿನ್ 71 ಬಿಹೆಚ್‌ಪಿ ಪವರ್ ಹಾಗೂ 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಎಂಜಿನ್ ನೊಂದಿಗೆ ಐದು-ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ಈ ಎಂಜಿನ್ ಅನ್ನು ಲೋ ಎಂಡ್ ಮಾದರಿಗಳಲ್ಲಿ ಮಾತ್ರ ನೀಡಲಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಇನ್ನು 1.0-ಲೀಟರಿನ ಟರ್ಬೊ-ಪೆಟ್ರೋಲ್ ಎಂಜಿನ್ 100 ಬಿಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ನಾವು ಏಳು-ಹಂತದ ಸಿವಿಟಿ ಮಾದರಿಯನ್ನು ಚಾಲನೆ ಮಾಡಿದೆವು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಇದು ಅದ್ಭುತ ಗೇರ್‌ಬಾಕ್ಸ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮಾದರಿಯಲ್ಲಿ ನೀಡಲಾಗುವ ಐದು-ಸ್ಪೀಡಿನ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅದೇ ರೀತಿಯ ಅಂಕಿ ಅಂಶಗಳನ್ನು ಉತ್ಪಾದಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಸಿವಿಟಿ ಗೇರ್ ಬಾಕ್ಸ್ ನಯವಾಗಿದೆ. ಗೇರ್‌ಬಾಕ್ಸ್‌ನಲ್ಲಿ ಡಿ ಮೋಡ್‌ನ ಹಿಂದೆಯೇ ಕಡಿಮೆ ವೇಗದ ಎಲ್ ಮೋಡ್ ನೀಡಲಾಗಿದೆ. ಡಿ ಮೋಡ್‌ನಲ್ಲಿ 40ರಿಂದ 50 ಕಿ.ಮೀ ವೇಗದಲ್ಲಿ ಚಾಲನೆ ಮಾಡುವಾಗ ಇದ್ದಕ್ಕಿದ್ದಂತೆ ಎಲ್ ಮೋಡ್‌ಗೆ ಬದಲಾದರೆ ಆರ್‌ಪಿಎಂ 2,500 ರಿಂದ 4,000 ಆರ್‌ಪಿಎಂಗೆ ಹೋಗುವುದನ್ನು ಕಾಣಬಹುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಮೊದಲ ಎರಡು ಗೇರ್‌ಗಳಲ್ಲಿ ಹೆಚ್ಚಿನ ಟಾರ್ಕ್ ಲಭ್ಯವಿದ್ದು, ಎಸ್‌ಯುವಿಯು ಕಡಿದಾದ ಇಳಿಜಾರಿನಲ್ಲಿ ಸಾಗುವಾಗ ನೆರವಾಗಲಿದೆ. ಎಂಜಿನ್ ಉತ್ತಮವಾದ ಮಿಡ್ ರೇಂಜ್ ಹಾಗೂ ಹೈ ರೇಂಜ್ ಹೊಂದಿರುವುದರಿಂದ ಯಾವುದೇ ಸಮಯದಲ್ಲಿ ಮೂರು-ಅಂಕಿಯ ವೇಗವನ್ನು ತಲುಪಬಹುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಎನ್‌ವಿಹೆಚ್ ಲೆವೆಲ್ ನ ಕಾರಣಕ್ಕೆ ಕಡಿಮೆ ವೇಗದಲ್ಲಿ ಎಸ್‌ಯುವಿಯ ಕ್ಯಾಬಿನ್ ಸಾಕಷ್ಟು ಶಾಂತವಾಗಿರುತ್ತದೆ. ಆದರೆ 80 ಕಿಮೀ ವೇಗದಲ್ಲಿ ಸಾಗುವಾಗ ಎಂಜಿನ್ ನ ಶಬ್ದ ಕೇಳಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಶಬ್ದವು ಕೆಲವೊಮ್ಮೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಎಸ್‌ಯುವಿಯಲ್ಲಿರುವ ಸಸ್ಪೆಂಷನ್ ಸೆಟಪ್ ಉತ್ತಮವಾಗಿದ್ದು, ಸಿಟಿಯೊಳಗಿನ ಚಾಲನೆಗೆ ಸೂಕ್ತವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಎಸ್‌ಯುವಿಯ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಸ್ವಲ್ಪ ಪ್ರಮಾಣದ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ಉತ್ತಮವಾದ ಗ್ರಿಪ್ ಹೊಂದಿದೆ. ಆದರೆ ಹೆಚ್ಚಿನ ವೇಗದಲ್ಲಿ ಈ ಲೈಟ್ ಸ್ಟೀಯರಿಂಗ್ ವ್ಹೀಲ್ ಅಪಾಯಕಾರಿಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಾವು ಕೇವಲ ಒಂದು ದಿನ ಮಾತ್ರ ಈ ಎಸ್‌ಯುವಿಯನ್ನು ಚಾಲನೆ ಮಾಡಿದ ಕಾರಣ ಮೈಲೇಜ್ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಮ್ಯಾನುವಲ್ ಗೇರ್‌ಬಾಕ್ಸ್ ಸಿವಿಟಿಗಿಂತ ಹೆಚ್ಚಿನ ಫ್ಯೂಯಲ್ ಎಫಿಶಿಯನ್ಸಿಯನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ವಿಶಾಲವಾಗಿದ್ದು ಉತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಆದರೆ ಈ ಎಸ್‌ಯುವಿಯು ಸನ್‌ರೂಫ್ ಕೊರತೆ, ಸಾಫ್ಟ್ ಟಚ್ ವಸ್ತುಗಳ ಕಡಿಮೆ ಬಳಕೆ ಹಾಗೂ ಬೂಟ್ ಡೋರುಗಳನ್ನು ಸಂಪೂರ್ಣವಾಗಿ ಮುಚ್ಚಲು ಕಷ್ಟಪಡುವ ಸಮಸ್ಯೆಗಳನ್ನು ಹೊಂದಿರುವುದನ್ನು ಹೊರತುಪಡಿಸಿದರೆ ಈ ಸೆಗ್ ಮೆಂಟಿನಲ್ಲಿರುವ ಅತ್ಯುತ್ತಮ ಎಸ್‌ಯುವಿಯೆಂದು ಹೇಳಬಹುದು.

ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕಮಾಲ್ ಮಾಡುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಿಸ್ಸಾನ್ ಮ್ಯಾಗ್ನೈಟ್‌ನ ಎಸ್‌ಯುವಿಯ ಮೂಲ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.50 ಲಕ್ಷಗಳಾಗುವ ನಿರೀಕ್ಷೆಗಳಿವೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಮ್ಯಾಗ್ನೈಟ್ ಎಸ್‌ಯುವಿಯು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರಾ ಎಕ್ಸ್‌ಯುವಿ 300 ಹಾಗೂ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Nissan Magnite First Drive Review, interiors features driving impressions and other details. Read in Kannada.
Story first published: Friday, November 20, 2020, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X