ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

Written By:

ಸ್ಪೋರ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಬೇಡಿಕೆಯುಳ್ಳ ಪೋರ್ಷೆ ಕಯೆನಿ ಮತ್ತು ಮಾಕನ್ ಕಾರು ಮಾದರಿಗಳು ಇತ್ತೀಚೆಗೆ ನಡೆಸಿದ ಆಪ್‌ರೋಡಿಂಗ್ ಪ್ರದರ್ಶನ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಕಳೆದ 15 ವರ್ಷಗಳಿಂದ ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಪೋರ್ಷೆ, ಇದೀಗ ಸ್ಪೋರ್ಟ್ ಮಾದರಿಯ ಕಯೆನಿ ಮತ್ತು ಮಾಕನ್ ಮಾದರಿಗಳ ಮೂಲಕ ಕಾರು ಮಾರಾಟದಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಹೀಗಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಐಷಾರಾಮಿ ಕಾರು ಪ್ರಿಯರಿಗಾಗಿ ಆಪ್ ರೋಡಿಂಗ್ ಪ್ರದರ್ಶನ ಏರ್ಪಡಿಸಿದ್ದ ಪೋರ್ಷೆ, ಕಯೆನಿ ಮತ್ತು ಮಾಕನ್ ನಡೆಸಿದ ವಿವಿಧ ಸಾಹನ ಪ್ರದರ್ಶನಗಳು ಎಲ್ಲರ ಗಮನಸೆಳೆದವು.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ವಿವಿಧ ವಿಭಾಗಗಳಲ್ಲಿ ನಡೆದ ಸಾಹಸ ಪ್ರದರ್ಶನದಲ್ಲಿ ಯಶಸ್ವಿಯಾಗಿ ಮುನ್ನುಗ್ಗಿದ ಕಯೆನಿ ಮತ್ತು ಮಾಕನ್ ಕಾರು ಮಾದರಿಗಳು, ಆಪ್ ರೋಡಿಂಗ್‌ನಲ್ಲಿ ಇತರೆ ಕಾರು ಮಾದರಿಗಳಿಂತ ಹೆಚ್ಚು ಬಲಿಷ್ಠತೆ ತೋರ್ಪಡಿಸಿದವು.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಕಯೆನಿ ಕಾರು ಮಾದರಿಯೂ 3.0-ಲೀಟರ್ ಟರ್ಬೋ ಡಿಸೇಲ್ ಎಂಜಿನ್ ಹೊಂದಿದ್ದು, 242ಬಿಎಚ್‌ಪಿ ಮತ್ತು 550ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಅಂತೆಯೇ ಮಾಕನ್ ಕಾರು ಆವೃತ್ತಿಯು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 248.5 ಬಿಎಚ್‌ಪಿ ಮತ್ತು 350ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಪೋರ್ಷೆಯ ಎರಡು ಕಾರು ಮಾದರಿಗಳು ಕೂಡಾ ಸ್ಪೋರ್ಟ್ ಎಸ್‌ಯುವಿ ವೈಶಿಷ್ಟ್ಯತಗಳನ್ನು ಪಡೆದುಕೊಂಡಿದ್ದು, ಆಪ್ ರೋಡಿಂಗ್ ಚಾಲನೆಗೆ ಅನುಕೂಲರವಾಗುವಂತೆ ಪೋರ್ಷೆ ಸ್ಟಾಬಿಲಿಟಿ ಮ್ಯಾನೆಜ್‌ಮೆಂಟ್ (ಪಿಎಸ್ಎಂ) ಸಿಸ್ಟಮ್ ಅಳವಡಿಕೆ ಮಾಡಲಾಗಿದೆ.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಪಿಎಸ್ಎಂ ವ್ಯವಸ್ಥೆ ಹಿನ್ನೆಲೆ ಆಪ್ ರೋಡಿಂಗ್ ಪ್ರದರ್ಶನ ಅನುಕೂಲವಾಗಿದ್ದು, ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲೂಅತ್ಯಂತ ಸುಲಭವಾಗಿ ಮುನ್ನುಗ್ಗಬಹುದಾಗಿದೆ.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ನೀವು ಚಿತ್ರದಲ್ಲಿ ನೋಡಿರುವಂತೆ ವಿವಿಧ ವಿಭಾಗಗಳಲ್ಲಿ ಪ್ರದರ್ಶನ ನಡೆಸಿರುವ ಕಯೆನ್ ಮತ್ತು ಮಕಾನ್ ಕಾರು ಆವೃತ್ತಿಗಳು ಅತಿ ವೇಗದ ಸಾಮರ್ಥ್ಯ ಪಡೆದುಕೊಂಡಿದ್ದು, 7.3 ಸೇಕೆಂಡುಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿವೆ.

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಬೆಲೆಗಳು (ಬೆಂಗಳೂರು ಎಕ್ಸ್‌ಶೋರಂ ಪ್ರಕಾರ)

ಮಾಕನ್(ಪೆಟ್ರೋಲ್) - ರೂ.78.97 ಲಕ್ಷ

ಕಯೆನಿ(ಡೀಸೆಲ್) - ರೂ.1.1 ಕೋಟಿ

ಪೋರ್ಷೆ ಕಯೆನಿ ಮತ್ತು ಮಾಕನ್ ಆಪ್‌-ರೋಡಿಂಗ್ ವಿಮರ್ಶೆ

ಹೊಸ ಕಾರುಗಳ ಬಗೆಗೆ ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸ್ಪೋರ್ಟ್ ಎಸ್‌ಯುವಿ ಮಾದರಿಗಳ ಖರೀದಿಗೆ ಮಾಕನ್ ಮತ್ತು ಕಯೆನಿ ಖರೀದಿ ಉತ್ತಮವಾಗಿದ್ದು, ಆಪ್ ರೋಡಿಂಗ್ ಪ್ರದರ್ಶನದಲ್ಲಿ ಇತರೆ ಕಾರು ಮಾದರಿಗಳಿಂತ ವಿಭಿನ್ನತೆ ಹೊಂದಿವೆ ಎಂದರೆ ತಪ್ಪಾಗಲಾರದು.

English summary
Read in Kannada about Porsche Cayenne and Macan Off-Road details.
Please Wait while comments are loading...

Latest Photos