ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಫ್ರೆಂಚ್ ಆಟೋ ಉತ್ಪಾದನಾ ಕಂಪನಿಯಾದ ರೆನಾಲ್ಟ್ ತನ್ನ ಬಹುನೀರಿಕ್ಷಿತ ಟ್ರೈಬರ್ ಆಟೋಮ್ಯಾಟಿಕ್ ಆವೃತ್ತಿಯನ್ನು ಕಳೆದ ಮೇ ನಲ್ಲಿ ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಜೆಟ್ ಬೆಲೆಯ ಎಂಪಿವಿ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ರೆನಾಲ್ಟ್ ಕಂಪನಿಯು ಕಳೆದ ವರ್ಷ ಅಗಸ್ಟ್‌ನಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಟ್ರೈಬರ್ ಬಿಡುಗಡೆ ಮಾಡುವ ಮೂಲಕ ಬಜೆಟ್ ಬೆಲೆಯ 7 ಸೀಟರ್ ಎಂಪಿವಿ ಕಾರುಗಳ ಮಾರಾಟದಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿತ್ತು. ಇದರ ಜೊತೆಗೆ ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಆವೃತ್ತಿಗೂ ಸಾಕಷ್ಟು ಬೇಡಿಕೆ ಹರಿದು ಬಂದಿತ್ತು. ಈ ಹಿನ್ನಲೆಯಲ್ಲಿ ಟ್ರೈಬರ್ ಮಾದರಿಯಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಟ್ರೈಬರ್ ಕಾರು ಮಾದರಿಯು ಕೇವಲ ಮ್ಯಾನುವಲ್ ಮಾದರಿಯೊಂದಿಗೆ ಇದುವರೆಗೆ 40 ಸಾವಿರ ಮಾರಾಟ ದಾಖಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಲಿರುವ ಆಟೋಮ್ಯಾಟಿಕ್ ಆವೃತ್ತಿಯು ಮತ್ತಷ್ಟು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಹಾಗಾದ್ರೆ ಹೊಸ ಟ್ರೈಬರ್ ಎಎಂಟಿ ಆವೃತ್ತಿಯು ಮ್ಯಾನುವಲ್ ಮಾದರಿಗಿಂತ ಹೇಗೆ ಭಿನ್ನವಾಗಿದೆ? ಯಾವೆಲ್ಲಾ ಅಂಶಗಳು ಗ್ರಾಹಕರನ್ನು ಸೆಳೆಯಲಿವೆ? ಪ್ರತಿಸ್ಪರ್ಧಿ ಕಾರು ಮಾದರಿಗಳಿಂತ ಟ್ರೈಬರ್ ಎಎಂಟಿ ಆಯ್ಕೆಯು ಉತ್ತಮವೇ? ಎನ್ನುವಂತಹ ಓದುಗರ ಪ್ರಶ್ನೆಗಳಿಗೆ ಉತ್ತರವಾಗಿ ಈ ವಿಮರ್ಶೆಯುಲ್ಲಿ ಹಂತಹಂತವಾಗಿ ಚರ್ಚಿಸಿದ್ದೇವೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಟ್ರೈಬರ್ ಎಂಪಿವಿ ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಹೊಸದಾಗಿ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಟ್ರೈಬರ್ ಮಾದರಿಯಲ್ಲಿ ಈಗಾಗಲೇ 5-ಸ್ಪೀಡ್ ಮ್ಯಾನುವಲ್ ಮಾದರಿಯು ಸಹ ಖರೀದಿಗೆ ಲಭ್ಯವಿದ್ದು, ಆಟೋಮ್ಯಾಟಿಕ್ ಆವೃತ್ತಿಯು ತುಸು ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಡಿಸೈನ್ ಮತ್ತು ಸ್ಟೈಲ್

ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವನ್ನು ಹೊರತುಪಡಿಸಿ ಹೊಸ ಕಾರು ಮ್ಯಾನುವಲ್ ಕಾರು ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಬಜೆಟ್ ಬೆಲೆಯಲ್ಲಿ ಅಚ್ಚುಕಟ್ಟಾದ ವಿನ್ಯಾಸ ಹೊಂದಿರುವ 7 ಸೀಟರ್ ಕಾರು ಮಾದರಿಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಹೊಸ ಕಾರು ಸಬ್ 4 ಮೀಟರ್ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ವಿಡ್ ಸಿಎಂಎಫ್-ಎ ಪ್ಲ್ಯಾಟ್‌ಫಾರ್ಮ್ ಆಧಾರದ ಮೇಲೆಯೇ ಟ್ರೈಬರ್ ಕೂಡಾ ಅಭಿವೃದ್ದಿಗೊಂಡಿದೆ. ಹೊಸ ಕಾರು ಮಾಲೀಕರು ತಮ್ಮ ಬೇಡಿಕೆಯೆಂತೆ ಹೊಸ ಕಾರನ್ನು ಮಾಡಿಫೈಗೊಳಿಸುವ ಮೂಲಕ 5 ಸೀಟರ್ ಅಥವಾ 7 ಸೀಟರ್ ಕಾರು ಮಾದರಿಯನ್ನಾಗಿ ಪರಿವರ್ತಿಸಿಕೊಳ್ಳಬಹುದು.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ರೆನಾಲ್ಟ್ ಕಂಪನಿಯು ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವನ್ನು ಸಂಪೂರ್ಣ ಬದಲಾವಣೆಗೊಳಿಸಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಟ್ರೈಬರ್ ಎಂಪಿವಿ ಕಾರು ಕೂಡಾ ಹೊಸ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿಗೊಳಿಸಿದೆ. ಹೀಗಾಗಿ ಕ್ವಿಡ್ ವಿನ್ಯಾಸವನ್ನೇ ಹೊತ್ತಿರುವ ಟ್ರೈಬರ್ ಕಾರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ 7 ಸೀಟರ್ ಸೌಲಭ್ಯವನ್ನು ಜೋಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಮುಂಭಾಗದಲ್ಲಿರುವ ಡಿಸೈನ್ ಮಾದರಿಯು ಹೊಸ ಕಾರಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಲುಕ್ ನೀಡುವುದರ ಜೊತೆಗೆ ರಗಡ್ ಸ್ಟೈಲ್‌ ಹೊತ್ತು ಬಂದಿದ್ದು, ಈ ಮೂಲಕ ಎಂಟ್ರಿ ಲೆವಲ್ ಕಾರುಗಳಲ್ಲಿ ವಿಭಿನ್ನ ಎನ್ನಿಸುವ ಹೊಸ ಕಾರು ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ಪವರ್ ವಿಂಡೋ ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಸೈಡ್ ಪ್ರೋಫೈಲ್‌ನಲ್ಲೂ ಕಾರು ಖರೀದಿದಾರರನ್ನು ಆಕರ್ಷಿಸುವ ಟ್ರೈಬರ್ ಕಾರು ಬಾಕ್ಸಿ ಡಿಸೈನ್ ವಿನ್ಯಾಸದ ವೀಲ್ಹ್ ಆರ್ಚ್, ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲ್ಯಾಡಿಂಗ್, ರೂಫ್ ರೈಲ್ಸ್, 15-ಇಂಚಿನ ಅಲಾಯ್ ವೀಲ್ಹ್, ವೀಲ್ಹ್ ಆರ್ಚ್‌ಗೆ ಹೊಂದಿಕೊಂಡಂತೆ ವೀಂಡೋ ಗಾತ್ರವು ಕೂಡಾ ಆಕರ್ಷಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಹಾಗೆಯೇ ಕಾರಿನ ಹಿಂಭಾಗ ಡಿಸೈನ್ ಕೂಡಾ ಸಂಪೂರ್ಣ ಹೊಸ ವಿನ್ಯಾಸವನ್ನು ಪಡೆದಿದ್ದು, 'TRIBER' ಬ್ರಾಂಡ್ ಬ್ಯಾಡ್ಜ್ ಜೊತೆಗೆ ಆಟೋಮ್ಯಾಟಿಕ್ ಮಾದರಿಗೆ ನೀಡಲಾಗಿರುವ 'Easy-R' ಬ್ಯಾಡ್ಜ್, ಸ್ಲಿಕ್ ವ್ಯಾರ್ಪ್ ಟೈಲ್‌ಗೇಟ್, ರೂಫ್ ಮೌಟೆಂಡ್ ಸ್ಪಾಯ್ಲರ್, ಇಂಟ್ರಾಗ್ರೆಟೆಡ್ ಬ್ರೇಕ್ ಲೈಟ್, ಸ್ಪೋರ್ಟಿ ಬಂಪರ್ ಮತ್ತು ,ಸಿಲ್ವರ್ ಸ್ಕಫ್ ಪ್ಲೇಟ್ ಒದಗಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಕಾರಿನ ಒಳಾಂಗಣ ವಿನ್ಯಾಸ

ಟ್ರೈಬರ್ ಎಎಂಟಿ ಕಾರು ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಡ್ಯುಯಲ್ ಟೋನ್ ಬಣ್ಣದ ಬ್ಲ್ಯಾಕ್-ಬಿಜ್ ಫಿನಿಶಿಂಗ್ ಇಂಟಿಯರ್ ಪಡೆದುಕೊಂಡಿದೆ. ಡ್ಯಾಶ್‌ಬೋರ್ಡ್ ತಾಂತ್ರಿಕ ಸೌಲಭ್ಯಗಳು ಅತ್ಯುತ್ತಮ ಆಯ್ಕೆ ಹೊಂದಿದ್ದು, ಟಿಕ್ ಸಿಲ್ವರ್ ಪ್ಯಾನೆಲ್ ಸೌಲಭ್ಯವನ್ನು ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಕೀ ಲೆಸ್ ಎಂಟ್ರಿ, ಮೂರು ಸಾಲುಗಳಲ್ಲೂ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ ಮತ್ತು ರಿಯರ್ ವಾಷ್ ವೈಪರ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಹಾಗೆಯೇ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, ಗ್ಲೋ ಬಾಕ್ಸ್, ಲೈಟ್ ಕಲರ್ ಸೀಟುಗಳ ಜೊತೆಗೆ ಎಲ್ಲಾ ಆವೃತ್ತಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಿರುವುದು ಕಾರು ಖರೀದಿಯ ಮೌಲ್ಯವನ್ನು ಹೆಚ್ಚಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ಅನುಕೂಲ ಮಾಡಿಕೊಳ್ಳಬಹುದ್ದು, ಮೂರನೇ ಸಾಲನ್ನು ಮಡಿಕೆ ಮಾಡದ್ದಿಲ್ಲಿ 625-ಲೀಟರ್‌ನಷ್ಟು ಸ್ಥಳಾವಕಾಶ ಸಿಕ್ಕಲ್ಲಿ ಮೂರನೇ ಸಾಲು ಬಳಕೆ ಮಾಡಿದ್ದಲ್ಲಿ ಸುಮಾರು 84-ಲೀಟರ್‌ನಷ್ಟು ಬೂಟ್‌ಸ್ಪೆಸ್ ಲಭ್ಯವಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ ಅಂದ್ರೆ ಅದು 3ನೇ ಸಾಲಿನಲ್ಲಿರುವ ಆಸನ ಸೌಲಭ್ಯ ಬಗೆಗೆ. ಟ್ರೈಬರ್ ಕಾರು ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವುದು ಉತ್ತಮವಾಗಿದ್ದರೂ ಮೊದಲೆರಡು ಸಾಲುಗಳಲ್ಲಿನ ಆಸನಗಳನ್ನು ಹೊರತುಪಡಿಸಿ ಹಿಂಬದಿಯ ಸಾಲಿನಲ್ಲಿ ಮಕ್ಕಳನ್ನು ಹೊರತುಪಡಿಸಿ ವಯಸ್ಕ ಪ್ರಯಾಣಿಕರ ದೂರದ ಪ್ರಯಾಣಕ್ಕೆ ಅನುಕೂರವಾಗಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

3ನೇ ಸಾಲಿನ ಆಸನ ಸೌಲಭ್ಯವನ್ನು ಬೂಟ್ ಸ್ಪೆಸ್ ಮತ್ತು ಮಧ್ಯದ ಸಾಲಿನ ಸ್ಥಳಾವಕಾಶದಲ್ಲೇ ಹೊಂದಾಣಿಕೆ ಮಾಡಿರುವ ಹಿನ್ನಲೆ ದೂರಕ್ಕೆ ಪ್ರಯಾಣಕ್ಕೆ ಅನುಕೂಲಕವಲ್ಲ ಎನ್ನಬಹುದಾಗಿದ್ದು, ಮುಂಬದಿಯಲ್ಲಿರುವ 5 ಆನಸಗಳು ಉತ್ತಮ ಸ್ಥಳಾವಕಾಶಗೊಂದಿಗೆ ಅರಾಯದಾಯಕ ಪ್ರಯಾಣಕ್ಕೆ ಪೂರಕವಾದ ವಿನ್ಯಾಸವನ್ನ ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಎಂಜಿನ್ ಮತ್ತು ಪರ್ಫಾಮೆನ್ಸ್

ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಂಜಿನ್ ಪ್ರೇರಿತ 1.0-ಲೀಟರ್(999ಸಿಸಿ) ನ್ಯಾಚುರಲಿ ಆಸ್ಪೆರೆಟೆಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟ್ರೈಬರ್ ಕಾರಿನಲ್ಲಿ ಈ ಹಿಂದಿನ 5-ಸ್ಪೀಡ್ ಮ್ಯಾನುವಲ್ ಜೊತೆಗೆ ಇದೀಗ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಎಎಂಟಿ ಆವೃತ್ತಿಯು 72-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಎಎಂಟಿ ಆಯ್ಕೆಯಲ್ಲೂ ಸಾಂಪ್ರದಾಯಿಕ ಗೇರ್‌ಲಿವರ್ ಪರಿಚಯಿಸಿದ್ದರು ಅದು ಚಾಲಕನಿಗೆ ಕೈಪಿಡಿಯ ಆಯ್ಕೆಯನ್ನು ನೀಡುತ್ತದೆ. ಈ ಮೂಲಕ ಚಾಲನೆ ಸಂದರ್ಭದಲ್ಲಿ ಆಟೋ ಮ್ಯಾನುವಲ್ ಮಾದರಿಯಾಗಿ ಚಾಲನೆ ಮಾಡಬಹುದಾಗಿದ್ದು, ಹೊಸ ಕಾರಿನಲ್ಲಿ ಬ್ರೇಕ್ ಮತ್ತು ಆಕ್ಸಿಲೆಟರ್ ಪೆಡಲ್ ಅಂತರ ತುಂಬಾ ಹತ್ತಿರವಾಗಿರುವುದು ಚಾಲನೆ ವೇಳೆ ಗೊಂದಲಕ್ಕಿಡು ಮಾಡುತ್ತಿರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಆದರೆ ಹೊಸ ಕಾರಿನಲ್ಲಿ ನೀಡಲಾಗಿರುವ ಕ್ರಿಪ್ ಮೋಡ್ ಕೆಲವು ಬಾರಿ ಉತ್ತಮ ಎನಿಸಿದರೂ ವೇಗದ ಚಾಲನೆ ಬ್ರೇಕ್ ಹಾಕುತ್ತದೆ. ಹಾಗೆಯೇ ಗೇರ್ ಶಿಫ್ಟ್‌ಗಳು ಸುಗಮವಾಗಿಲ್ಲ ಮತ್ತು ಮೇಲಕ್ಕೆ ಅಥವಾ ಕೆಳಕ್ಕೆ ಚಲಿಸುವಾಗ ಸಾಕಷ್ಟು ವಿಳಂಬವಾಗುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಉದಾಹರಣೆಗೆ ಎರಡನೆ ಗೇರ್‌ನಿಂದ ಮೂರನೇ ಗೇರ್‌ಗೆ ಬದಲಾಯಿಸಿದಾಗ ಗೇರ್‌ ಬದಲಾವಣೆಯು ತ್ವರಿತಗತಿಯಲ್ಲಿ ಬದಲಾಗದೆ ತುಸು ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಅಂಶವು ತುರ್ತು ಚಾಲನೆ ವೇಳೆ ಕೆಲವೊಮ್ಮೆ ಗೊಂದಲಕ್ಕಿಡು ಮಾಡಬಹುದಾಗಿದ್ದು, ಇನ್ನುಳಿದಂತೆ ಹೊಸ ಕಾರಿನಲ್ಲಿ ಎಂಆರ್‌ಎಫ್ 185/65/ಆರ್15 ಟೈರ್‌ನೊಂದಿಗೆ ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಈ ಮೂಲಕ ಉತ್ತಮ ಇಂಧನ ದಕ್ಷತೆಯನ್ನು ಪಡೆದುಕೊಂಡಿರುವ ಟ್ರೈಬರ್ ಆವೃತ್ತಿಯು ಪೆಟ್ರೋಲ್ ಮಾನ್ಯುವಲ್‌ನಲ್ಲಿ ಪ್ರತಿ ಲೀಟರ್‌ಗೆ 20ರಿಂದ 21 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ, ಹೊಸದಾಗಿ ಬಿಡುಗಡೆಯಾಗಿರುವ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು 18 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಟ್ರೈಬರ್ ಕಾರು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡ ನಂತರ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.4.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 7.29 ಲಕ್ಷ ಬೆಲೆ ಪಡೆದುಕೊಂಡಿರುತ್ತದೆ. ಇದರಲ್ಲಿ ಎಎಂಟಿ ಮಾದರಿಯು ಆರಂಭಿಕವಾಗಿ ರೂ.6.25 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ.7.29 ಲಕ್ಷ ಬೆಲೆ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೈ ಎಂಡ್ ವೆರಿಯೆಂಟ್‌ನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯ ರೆನಾಲ್ಟ್ ಟ್ರೈಬರ್‌ನಲ್ಲಿ ಎಎಂಟಿ ಸದ್ದು..!

ಇದರೊಂದಿಗೆ ಬಜೆಟ್ ಬೆಲೆ ಎಂಪಿವಿ ಕಾರು ಮಾದರಿಯಲ್ಲೇ ವಿಶೇಷ ಎನ್ನಿಸಲಿರುವ ರೆನಾಲ್ಟ್ ಟ್ರೈಬರ್ ಕಾರು ಮಾದರಿಯು ಗ್ರಾಹಕರ ಆಕರ್ಷಕಣೆ ಕಾರಣವಾಗಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತ ಅತಿ ಕಡಿಮೆ ಬೆಲೆ ಜೊತೆಗೆ ಉತ್ತಮ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಗರಿಷ್ಠ ಬೇಡಿಕೆಗಳನ್ನು ಪೂರೈಸುತ್ತಿದೆ. ಇದಲ್ಲದೆ ಹೊಸ ಕಾರಿನಲ್ಲಿ ಟರ್ಬೋ ಪೆಟ್ರೋಲ್ ಮಾದರಿಯು ಕೂಡಾ ಬಿಡುಗಡೆಯ ಸಿದ್ದತೆಯಲ್ಲಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಅಧಿಕ ಬಿಎಚ್‌ಪಿ ಪ್ರೇರಿತ ಎಂಜಿನ್ ಆಯ್ಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

Most Read Articles

Kannada
English summary
Renault Triber AMT Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X