ಫಸ್ಟ್ ಡ್ರೈವ್: ನಿಸ್ಸಾನ್ ಇವಾಲಿಯಾ ಎಂಪಿವಿ

Posted By:
<ul id="pagination-digg"><li class="next"><a href="/car-reviews/nissan-evalia-first-look-002756.html">Next »</a></li></ul>

ಕುಟುಂಬ ಸವಾರಿಗೆ ಸೂಕ್ತವಾದ ಕಾರೊಂದನ್ನು ದೇಶಕ್ಕೆ ಪರಿಚಯಿಸುವ ನಿಸ್ಸಾನ್ ಉದ್ದೇಶ ಸಫಲವಾಗುವ ಸೂಚನೆಗಳು ದಟ್ಟವಾಗಿವೆ. ಬಹುನಿರೀಕ್ಷಿತ ನಿಸ್ಸಾನ್ ಇವಾಲಿಯಾ ಮುಂದಿನ ತಿಂಗಳು ಆಗಮಿಸಲಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನವೇ ಈ ಕಾರಿಗೊಂದು ಷರಾ ಬರೆಯುವ ಅಪೂರ್ವ ಅವಕಾಶ "ಡ್ರೈವ್‌ಸ್ಪಾರ್ಕ್ ತಂಡ"ಕ್ಕೆ ಲಭಿಸಿದೆ.

ನಾವು ಬೆಂಗಳೂರಿನಿಂದ ನಂದಿಹಿಲ್ಸ್ ವರೆಗೆ ಈ ಕಾರನ್ನು ರೋಡ್ ಟೆಸ್ಟ್ ಮಾಡಿದ್ದೇವೆ. ನಮಗೆ ಇದರಲ್ಲಿ ಇಷ್ಟವಾಗಿರೋದು ಏನು? ಇಷ್ಟವಾಗದ್ದು ಏನು? ಇದನ್ನು ಖರೀದಿಸಲು ಬಯಸುವರಿಗೆ ಇದರ ಸಂಪೂರ್ಣ ವಿವರ, ಚಿತ್ರ ಸಮೇತ ಇಲ್ಲಿ ನೀಡಿದ್ದೇವೆ.

Road Test: Nissan Evalia Review

ಆರಂಭದಲ್ಲಿಯೇ ಹೇಳಿಬಿಡುತ್ತೇವೆ- ಇದು ನೀವು ಬಯಸುವ ಕಣ್ಮನ ಸೆಳೆಯುವ ಅಂದದ ವಿನ್ಯಾಸದ ಬಂಡಿಯಲ್ಲ. ನೀವು ಸ್ಟೈಲಿಶ್ ಅಥವಾ ಅಂದದ ಯುಟಿಲಿಟಿ ವಾಹನ ಎದುರು ನೋಡುತ್ತಿದ್ದರೆ ಬೇರೆ ಬಂಡಿ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ನಿಮಗೆ ನಗರ ಕ್ಲಾಸ್ ಯುಟಿಲಿಟಿ ವಾಹನದ ಕುರಿತು ಆಸಕ್ತಿ ಇದ್ದರೆ ಓದು ಮುಂದುವರೆಸಿ!

ಟೆಕ್ ವಿಶೇಷತೆ ಮೇಲೊಂದು ಇಣುಕುನೋಟ
 ಸೀಟ್ ಸಾಮರ್ಥ್ಯ  7
 ಎಂಜಿನ್ ಸಿಸಿ  1461
 ಅಶ್ವಶಕ್ತಿ  85
 ಟಾರ್ಕ್  200
 ಸುರಕ್ಷತೆಯ ಫೀಚರುಗಳು  ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್
 ಬ್ರೇಕು  ಮುಂಭಾಗದಲ್ಲಿ ಡಿಸ್ಕ್, ಹಿಂಭಾಗದಲ್ಲಿ ಡ್ರಮ್
 ಆವೃತ್ತಿ  ಎಕ್ಸ್ ಇ, ಎಕ್ಸ್ ಇ ಪ್ಲಸ್, ಎಕ್ಸ್ಎಲ್, ಎಕ್ಸ್ ವಿ

ಜಪಾನಿನ ದೈತ್ಯ!

ನಿಸ್ಸಾನ್ ಇವಾಲಿಯಾ ಕಾರಿನ ಪಕ್ಕದಲ್ಲಿ ನಿಂತು ಪೋಸ್ ನೀಡಿದರೆ ನಿಮಗೆ ನೀವು ಕುಳ್ಳ ಅಥವಾ ಕುಬ್ಜರಂತೆ ಭಾಸವಾಗುತ್ತದೆ. ಹಾಗಂತ ಇದು ದೈತ್ಯ ವಾಹನವೆಂದು ನೀವು ಹಿಂದೆ ಸರಿಯಬೇಕಿಲ್ಲ. ಒಮ್ಮೆ ಡ್ರೈವಿಂಗ್ ಸ್ಟಾರ್ಟ್ ಮಾಡಿದಾಗ ನಮ್ಮೆಲ್ಲ ಲೆಕ್ಕಾಚಾರಗಳು ಕೊಂಚ ಉಲ್ಟಾ ಪಲ್ಟಾ ಆಗುತ್ತದೆ. ಅಂತಹದ್ದೇನಿದೆ ಅದರಲ್ಲಿ ಎಂದು ಕೇಳುವಿರಾ? ಮುಂದಿನ ಪುಟ ಪ್ರವೇಶಿಸಿರಿ.

<ul id="pagination-digg"><li class="next"><a href="/car-reviews/nissan-evalia-first-look-002756.html">Next »</a></li></ul>
English summary
Nissan's intention of providing India with a people carrier seems to be shaping out as planned. Next month, Nissan will launch the much awaited Evalia. Team Drivespark had the rare opportunity to ignite the roads and get a feel of what Nissan's newest has to offer.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark