ಫಸ್ಟ್ ಡ್ರೈವ್ ರಿವ್ಯೂ: ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಸ್ಕೋಡಾ ನಿರ್ಮಾಣದ ಜನಪ್ರಿಯ ಕಾರುಗಳಲ್ಲಿ ರ‍್ಯಾಪಿಡ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಸೆಡಾನ್ ಕಾರು ಪ್ರಿಯರ ಪ್ರಮುಖ ಆಕರ್ಷಣೆಯಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕಳೆದ ಒಂದು ದಶಕದಿಂದಲೂ ಅತ್ಯುತ್ತಮ ಸೆಡಾನ್ ಕಾರು ಮಾದರಿಗಳಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

2011ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರ‍್ಯಾಪಿಡ್ ಸೆಡಾನ್ ಕಾರು ಮಾದರಿಯು ಇಂದಿಗೂ ಕೂಡಾ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ರ‍್ಯಾಪಿಡ್ ಕಾರಿನ ಹೈ ಎಂಡ್ ಮಾದರಿಯಾದ ಮಾಂಟೆ ಕಾರ್ಲೊ ಆವೃತ್ತಿಯು ಕೂಡಾ ಹಲವು ವಿಶೇಷತೆಗಳೊಂದಿಗೆ ಅಭಿವೃದ್ಧಿಗೊಂಡಿದೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಮಾಂಟೆ ಕಾರ್ಲೊ ಮಾದರಿಯನ್ನು ಪರಿಚಯಿಸಿದ್ದ ಸ್ಕೋಡಾ ಕಂಪನಿಯು ಇದೀಗ ಹೊಸ ಕಾರಿನಲ್ಲಿ ಬಿಎಸ್-6 ನಿಯಮ ಅನುಸಾರವಾಗಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಬಹುತೇಕ ಕಾರು ಕಂಪನಿಗಳು ತಮ್ಮ ವಾಹನಗಳ ಉತ್ಪಾದನೆಯಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಸ್ಕೋಡಾ ಇಂಡಿಯಾ ಕೂಡಾ ಹೊಸ ರ‍್ಯಾಪಿಡ್ ಕಾರಿನಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಹೊಸ ಎಮಿಷನ್ ನಿಯಮ ಜಾರಿಯಿಂದಾಗಿ ಹಲವಾರು ಜನಪ್ರಿಯ ಕಾರುಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನೇ ಸ್ಥಗಿತಗೊಳಿಸಲಾಗಿದ್ದು, ಸ್ಕೋಡಾ ರ‍್ಯಾಪಿಡ್‌ನಲ್ಲೂ ಕೂಡಾ ಬಿಎಸ್-6 ಜಾರಿ ನಂತರ ಈ ಹಿಂದಿನ ಡೀಸೆಲ್ ಮತ್ತು ಪೆಟ್ರೋಲ್ ಮಾದರಿಯನ್ನು ಸ್ಥಗಿತಗೊಳಿಸಿ ಹೊಸದಾಗಿ ಅಭಿವೃದ್ದಿಗೊಳಿಸಲಾದ ಪೆಟ್ರೋಲ್ ಟರ್ಬೋ ಎಂಜಿನ್ ಮಾದರಿಯನ್ನು ನೀಡಲಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಸದ್ಯಕ್ಕೆ ಟರ್ಬೋ ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಖರೀದಿ ಲಭ್ಯವಿರುವ ಸ್ಕೋಡಾ ರ‍್ಯಾಪಿಡ್ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ರೈಡರ್, ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೊ ಆವೃತ್ತಿಗಳೊಂದಿಗೆ ಮಾರಾಟವಾಗುತ್ತಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಮಾಂಟೆ ಕಾರ್ಲೊ ಮಾದರಿಯೇ ರ‍್ಯಾಪಿಡ್ ಮಾದರಿಯ ಉನ್ನತ ಮಾದರಿಯಾಗಿ ಮಾರಾಟವಾಗುತ್ತಿದ್ದು, ಮೊದಲ ಐದು ಆವೃತ್ತಿಗಳಿಂತಲೂ ವಿಭಿನ್ನವಾದ ತಾಂತ್ರಿಕ ಅಂಶಗಳನ್ನು ಹೊಂದಿದೆ. ಹಾಗಾದ್ರೆ ಹೊಸ ಕಾರು ಮೊದಲ ಐದು ಮಾದರಿಗಳಿಂತಲೂ ಹೇಗೆ ವಿಭಿನ್ನವಾಗಿದೆ ಮತ್ತು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಮಾಂಟೆ ಕಾರ್ಲೊ ಕಾರು ಹೇಗೆ ಪೈಪೋಟಿ ನೀಡಲಿದೆ ಎನ್ನುವುದನ್ನು ಈ ವಿಮರ್ಶೆಯ ಲೇಖನದಲ್ಲಿ ಹಂತ-ಹಂತವಾಗಿ ಚರ್ಚಿಸಲಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಮಾಂಟೆ ಕಾರ್ಲೊ ಡಿಸೈನ್ ಮತ್ತು ಸ್ಟೈಲ್

ಫ್ಲ್ಯಾಶ್ ರೆಡ್ ಬಣ್ಣದ ಆಯ್ಕೆ ಹೊಂದಿರುವ ರ‍್ಯಾಪಿಡ್ ಮಾಂಟೆ ಕಾರ್ಲೊ ಕಾರು ಸೆಡಾನ್ ಮಾದರಿಯು ಕಾರಿನ ಪರ್ಫಾಮೆನ್ಸ್‌ಗೆ ತಕ್ಕಂತೆ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ಜೋಡಣೆ ಮಾಡಲಾಗಿದ್ದು, ಬ್ಲ್ಯಾಕ್ಡ್ ಔಟ್ ಆಕ್ಸೆಂಟ್ ಸೌಲಭ್ಯವು ಕಾರಿನ ಖದರ್‌ಗೆ ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಯುನಿಟ್ ಕೂಡಾ ಬ್ಲ್ಯಾಕ್ಡ್ ಔಟ್ ಆಕ್ಸೆಂಟ್ ಹೊಂದಿದ್ದು, ಎಲ್ಇಡಿ ಡಿಆರ್‌ಎಲ್ಎಸ್‌ಗಳು ಉತ್ತಮವಾದ ಬೆಳಕು ಹೊರಸೂಸುವಲ್ಲಿ ಸಹಕಾರಿಯಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಹೊಲೊಜೆನ್ ಕಾರ್ನರ್ ಲೈಟ್ಸ್ ಕೂಡಾ ಜೋಡಣೆ ಮಾಡಲಾಗಿದ್ದು, ಮುಂಭಾಗದ ಸ್ಪೋರ್ಟಿ ವಿನ್ಯಾಸವು ಕೂಡಾ ಸೆಡಾನ್ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯಬಲ್ಲದು.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಹಾಗೆಯೇ ಹೊಸ ಕಾರಿನ ಸೈಡ್ ಪ್ರೊಫೈಲ್ ಕೂಡಾ ಆಕರ್ಷಕವಾಗಿದ್ದು, 16-ಇಂಚಿನ ಡ್ಯುಯಲ್ ಟೋನ್ ಅಯಾಲ್ ವೀಲ್ಹ್ ಗಮನಸೆಳೆಯುತ್ತವೆ. ಹಾಗೆಯೇ ಕಾರಿನಲ್ಲಿ ವೇಗ ಚಾಲನೆಯಲ್ಲೂ ನಿಖರವಾಗಿ ಹಿಡಿತ ಸಾಧಿಸುವಲ್ಲಿ ಉತ್ತಮ ಟೈರ್ ಕೂಡಾ ಅಗತ್ಯವಿದ್ದು, ಮಾಂಟೆ ಕಾರ್ಲೊ ಕಾರಿನಲ್ಲೂ ಕೂಡಾ ಎಂಆರ್‌ಎಫ್ ನಿರ್ಮಾಣದ 195/55/ಆರ್16 ಟೈರ್‌ಗಳನ್ನು ಬಳಕೆ ಮಾಡಲಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಹೊಸ ಕಾರಿನ ಪ್ರಮುಖ ಕಡೆಗಳಲ್ಲಿ ನೀಡಲಾಗಿರುವ 'MONTE CARLO ' ಬ್ಯಾಡ್ಜ್ ಕೂಡಾ ಆಕರ್ಷಕವಾಗಿದ್ದು, ಕಾರಿನ ಬಿ ಪಿಲ್ಲರ್ ಮತ್ತು ರೂಫ್ ಟಾಪ್ ಮಧ್ಯದಲ್ಲಿ ನೀಡಲಾಗಿದೆ. ಇನ್ನು ಹೊಸ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಬ್ರಾಂಡ್ ಬ್ಯಾಡ್ಜ್ ಜೊತೆ ಬ್ಲ್ಯಾಕ್ ಬೂಟ್ ಲಿಟ್ ಸ್ಪಾಯ್ಲರ್ ಜೊತೆಗೆ ಸ್ಪೋರ್ಟಿ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಆದರೆ ಹೊಸ ಕಾರಿನಲ್ಲಿ ಕ್ರೋಮ್ ಗಾರ್ನಿಶ್ ಸೌಲಭ್ಯವನ್ನು ಕೈಬಿಡಲಾಗಿದ್ದು, ಕೀ ಲೆಸ್ ಎಂಟ್ರಿ ಸೌಲಭ್ಯವು ಇಲ್ಲದಿರುವುದು ಕೂಡಾ ಕೆಲವು ಸೆಡಾನ್ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಬಹುದು. ಜೊತೆಗೆ ಹಿಂಬದಿಯ ಹಾಲೊಜೆನ್ ಟೈಲ್‌ಲೈಟ್ ಸೌಲಭ್ಯವನ್ನು ಕೂಡಾ ತುಸು ಶಾರ್ಪ್ ಮತ್ತು ಸ್ಲಿಕ್ ಮಾದರಿಯಲ್ಲಿ ನೀಡಿದ್ದರೆ ಕಾರಿನ ಹಿಂಬದಿಯ ನೋಟವು ಇನ್ನಷ್ಟು ಆಕರ್ಷಕವಾಗಿರುತ್ತಿತ್ತು ಎನ್ನಿಸದೆ ಇರಲಾರದು.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಆದರೂ ಹೊಸ ಕಾರಿನ ಬೆಲೆ ಮತ್ತು ಸೆಗ್ಮೆಂಟ್ ಇನ್ ಫೀಚರ್ಸ್ ಸೌಲಭ್ಯಗಳಲ್ಲಿ ಉತ್ತಮ ಆಯ್ಕೆ ಎನ್ನಬಹುದಾಗಿದ್ದು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್ ಸೌಲಭ್ಯವು ಇಕ್ಕಟ್ಟಿನ ಪಾರ್ಕಿಂಗ್ ಸ್ಥಳಗಳಲ್ಲೂ ಸುಲಭವಾಗಿ ಪಾರ್ಕ್ ಮಾಡಲು ಸಹಕಾರಿಯಾಗಿವೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಮಾಂಟೆ ಕಾರ್ಲೊ ಇಂಟಿರಿಯರ್ ಡಿಸೈನ್

ಸಾಮಾನ್ಯ ಮಾದರಿಯ ರ‍್ಯಾಪಿಡ್ ಕಾರಿಗಿಂತಲೂ ವಿಭಿನ್ನವಾಗಿರುವ ರ‍್ಯಾಪಿಡ್ ಮಾಂಟೆ ಕಾರ್ಲೊ ಕಾರು ಆಕರ್ಷಕವಾದ ಒಳಾಂಗಣ ವಿನ್ಯಾಸವನ್ನು ಹೊಂದಿದ್ದು, ಕಾರಿನ ಬಹುತೇಕ ಒಳಾಂಗಣ ಸೌಲಭ್ಯವು ಬ್ಲ್ಯಾಕ್ಡ್ ಔಟ್ ವಿನ್ಯಾಸದೊಂದಿಗೆ ಆಕರ್ಷಣೆಯಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಸ್ಟಿರಿಂಗ್ ವೀಲ್ಹ್, ಡೋರ್ ಪ್ಯಾನೆಲ್ ನೀಡಲಾಗಿದ್ದು, ಸಾಮಾನ್ಯ ಮಾದರಿಯ ರ‍್ಯಾಪಿಡ್ ಮಾದರಿಯಲ್ಲಿ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ನೀಡಲಾಗಿದೆ. ಆದರೆ ಮಾಂಟೆ ಕಾರ್ಲೊದಲ್ಲಿ ಕಾರಿನ ಸ್ಪೋರ್ಟಿ ವಿನ್ಯಾಸ ಹೆಚ್ಚಿಸಲು ಸಿಂಗಲ್ ಟೋನ್ ಇಂಟಿರಿಯರ್ ಬಣ್ಣವನ್ನು ನೀಡಲಾಗಿದ್ದು, ಸೀಟುಗಳು ಮಾತ್ರ ಡ್ಯುಯಲ್ ಟೋನ್ ಸೌಲಭ್ಯವನ್ನು ಹೊಂದಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಡ್ಯುಯಲ್ ಟೋನ್ ಸೀಟುಗಳಲ್ಲಿ ಮಾಂಟೆ ಕಾರ್ಲೊ ಬ್ಯಾಡ್ಜ್ ನೀಡಲಾಗಿದ್ದು, ಸ್ಪೋರ್ಟಿ ವಿನ್ಯಾಸವನ್ನು ಹೆಚ್ಚಿಸಲು ಸೀಟುಗಳಿಗೆ ಕೆಂಪು ಬಣ್ಣದ ಅಂಚು ನೀಡಲಾಗಿದೆ. ಜೊತೆಗೆ ಎತ್ತರ ಮತ್ತು ಪುಟ್‌ಬೋರ್ಡ್ ಹೊಂದಾಣಿಕೆ ಮಾಡಕೊಳ್ಳಬಹುದಾದ ಮ್ಯಾನುವಲ್ ಡ್ರವರ್ ಸೀಟ್‌ನೊಂದಿಗೆ ಹಿಂಬದಿಯ ಆಸನಗಳನ್ನು ಅರಾಮದಾಯಕ ಸೌಲಭ್ಯ ನೀಡಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಹಿಂಬದಿಯಲ್ಲಿ ಕೂರುವ ಪ್ರಯಾಣಿಕರಿಗೆ ಅರಾಮದಾಯಕವಾದ ಹೆಡ್ ರೆಸ್ಟ್, ಆರ್ಮ್ ರೆಸ್ಟ್ ಸೌಲಭ್ಯಗಳನ್ನು ನೀಡಲಾಗಿದ್ದು, ಹಿಂಭಾಗದಲ್ಲಿ ಪ್ರಯಾಣಿಕರ ಖಾಸಗಿತನಕ್ಕೆ ದಕ್ಕೆಯಾಗದಂತೆ ಹಿಂಬದಿಯಲ್ಲಿ ತೆಗೆದುಹಾಕಬಹುದಾದ ಸನ್‌ಶೆಡ್ಸ್ ಜೋಡಣೆ ಮಾಡಲಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಇದರ ಜೊತೆಗೆ ಹಿಂಬದಿಯ ಪ್ರಯಾಣಿಕರಿಗೆ ಮತ್ತಷ್ಟು ಅನುಕೂರಕವಾದ ಸೌಲಭ್ಯಗಳಾದ ರಿಯರ್ ಎಸಿ ವೆಂಟ್ಸ್, ಮಾಂಟೆ ಕಾರ್ಲೊ ಬ್ಯಾಡ್ಜ್ ಹೊಂದಿರುವ ಕೂಷನ್ಸ್ ನೀಡಿರುವ ಸ್ಕೋಡಾ ಕಂಪನಿಯು ಸೆಡಾನ್ ಕಾರು ಪ್ರಿಯರನ್ನು ಸೆಳೆಯುತ್ತಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಇನ್ನು ಹೊಸ ಕಾರಿನಲ್ಲಿ ಫ್ಯಾಟ್ ಬಾಟಮ್ ಸ್ಪೀರಿಂಗ್ ವೀಲ್ಹ್ ಕೂಡಾ ಪ್ರಮುಖ ಆಕರ್ಷಣೆಯಾಗಿದ್ದು, ಸ್ಟೀರಿಂಗ್ ವೀಲ್ಹ್‌ಗೆ ಲೆದರ್ ಹೊದಿಕೆ ನೀಡಲಾಗಿದೆ. ಸ್ಟೀರಿಂಗ್ ವೀಲ್ಹ್‌ನಲ್ಲಿ ಹಲವಾರು ತಾಂತ್ರಿಕ ಅಂಶಗಳನ್ನು ನಿರ್ವಹಣಾ ಬಟನ್ ಸೌಲಭ್ಯ ಹೊಂದಿದ್ದು, ಎಡಬದಿಯಲ್ಲಿ ಇನ್ಪೊಟೈನ್‌ಮೆಂಟ್ ಸೌಲಭ್ಯವಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ರ‍್ಯಾಪಿಡ್ ಮಾಂಟೆ ಕಾರ್ಲೊ ಮಾದರಿಯಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದ್ದು, ಆಂಡ್ರಾಯಿಡ್ ಆಡಿಯೋ ಸಿಸ್ಟಂ ಪ್ರೇರಣೆ ಹೊಂದಿದೆ. ಆದರೆ ಹೊಸ ಕಾರು ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸೌಲಭ್ಯಗಳಿಂದ ದೂರಉಳಿದ್ದು, ಸಿಮ್ ಕಾರ್ಡ್ ಸ್ಲಾಟ್ ಹೋಲ್ಡರ್ ಮೂಲಕ ಟ್ಯಾಬ್ಲೈಡ್ ಮಾದರಿಯಲ್ಲಿ ಬಳಕೆ ಮಾಡಿಕೊಂಡು ಇಂಟರ್‌ನೆಟ್ ಆಕ್ಸೆಸ್ ಮಾಡಬಹುದಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಸ್ಕೋಡಾ ಕಂಪನಿಯು ಹೊಸ ಕಾರಿನಲ್ಲಿ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸೌಲಭ್ಯಗಳನ್ನು ನೀಡಿಲ್ಲವಾದರೂ ಹಲವಾರು ಗ್ರಾಹಕರು ಆಫ್ಟರ್ ಮಾರ್ಕೆಟ್‌ನಲ್ಲಿ ಲಭ್ಯವಿರುವ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸೌಲಭ್ಯಗಳು ಕೆಲವು ಬಾರಿ ಅನಾಹುತಗಳಿಗೆ ಎಡೆಮಾಡಿಕೊಡುವುದಲ್ಲದೆ ಭೀಕರ ಅಪಘಾತಗಳಿಗೂ ಕಾರಣವಾದ ಹಲವು ಪ್ರಕರಣಗಳಿವೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

2020ರ ಸ್ಕೋಡಾ ರ‍್ಯಾಪಿಡ್‌ನಲ್ಲಿ ಕೆಲವು ಪ್ರಮುಖ ತಾಂತ್ರಿಕ ಅಂಶಗಳಿಂದ ದೂರವಾಗಿದ್ದರೂ ಅದಕ್ಕೆ ಪ್ರತಿಯಾಗಿ ಮತ್ತಷ್ಟು ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಲಾಗಿದ್ದು, ಇನ್‌ಸ್ಟುಮೆಂಟ್ ಕ್ಲಸ್ಟರ್ ಸೌಲಭ್ಯವು ಆಕರ್ಷಕವಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಎಂಐಡಿ ಸ್ಕ್ರೀನ್ ಮೂಲಕವೇ ಕಾರಿನ ಒಳಾಂಗಣದ ಉಷ್ಣಾಂಶ ತಿಳಿದುಕೊಳ್ಳಬಹುದಲ್ಲದೆ, ಟ್ರಿಪ್ ಮಾಹಿತಿ, ಸಾಗಬೇಕಿರುವ ಪ್ರಯಾಣದ ದೂರ, ಇಂಧನ ಲಭ್ಯತೆಗೆ ಅನುಗುಣವಾಗಿ ಮೈಲೇಜ್ ಲಭ್ಯತೆ ಮಾಹಿತಿ, ಕ್ಲಾಕ್ ಮತ್ತು ಅನ್‌ಲಾಗ್ ಸ್ಪೀಡೋಮೀಟರ್, ಟಾಚೋಮೀಟರ್ ಹೊಂದಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಹಾಗೆಯೇ ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ವೈಪರ್, ಹೆಡ್‌ಲೈಟ್ಸ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದ್ದು, ಚಾಲಕ ಸೇರಿ ಐದು ಜನ ಅರಾಮವಾಗಿ ಪ್ರಯಾಣಿಸಬಹುದು. ಹಿಂಬದಿಯಲ್ಲಿ ಆರ್ಮ್ ರೆಸ್ಟ್ ಬಳಕೆಯ ಅವಶ್ಯಕತೆಯಿದ್ದ ನಾಲ್ಕು ಜನ ಪ್ರಯಾಣವು ಉತ್ತಮವಾಗಿದ್ದು, ಕಪ್ ಹೋಲ್ಡರ್, 460-ಲೀಟರ್‌ನಷ್ಟು ಬೂಟ್ ಸ್ಪೆಸ್ ಸೌಲಭ್ಯವು ದೂರದ ಪ್ರಯಾಣಕ್ಕೆ ಅನೂಕಲಕರವಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಎಂಜಿನ್ ಮತ್ತು ಪರ್ಫಾಮೆನ್ಸ್

ಸದ್ಯ ಮಾರುಕಟ್ಟೆಯ್ಲಿರುವ ರ‍್ಯಾಪಿಡ್ ಹೊಸ ಕಾರಿನಲ್ಲಿ ಜೋಡಣೆ ಮಾಡಿರುವ 999-ಸಿಸಿ ಟರ್ಬೋ ಚಾರ್ಜ್ಡ್ ತ್ರಿ ಸಿಲಿಂಡರ್ ಪೆಟ್ರೋಲ್ ಮಾದರಿಯು 108-ಬಿಎಚ್‌ಪಿ ಮತ್ತು 175-ಎನ್ಎಂ ಟಾರ್ಕ್ ಉತ್ಪಾದನೆ ಉತ್ಪಾದನಾ ಗುಣಹೊಂದಿದ್ದು, ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಗಾಗಿ ಸಿದ್ದವಾಗಿರುವ ಆಟೋ ಮ್ಯಾಟಿಕ್ ಆವೃತ್ತಿಯು ಇನ್ನು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮಾದರಿಯಾಗಿರಲಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಹೊಸ ಎಂಜಿನ್ ಮಾದರಿಯನ್ನು ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಿಂದ ಎರವಲು ಪಡೆದುಕೊಳ್ಳಲಾಗಿದ್ದು, ಬಿಎಸ್-6 ನಿಯಮದಿಂದಾಗಿ ರ‍್ಯಾಪಿಡ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಎಂಪಿಐ ಪೆಟ್ರೋಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

999-ಸಿಸಿ ಟರ್ಬೋ ಪೆಟ್ರೋಲ್ ಮಾದರಿಯು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ನಗರ ಪ್ರದೇಶಗಳಲ್ಲಿ ಗರಿಷ್ಠ 13ರಿಂದ 15 ಕಿ.ಮೀ ಮತ್ತು ಹೈವೇ ಪ್ರಯಾಣದ ಸಂದರ್ಭದಲ್ಲಿ ಗರಿಷ್ಠ 17ರಿಂದ 19 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಹೊಸ ರ‍್ಯಾಪಿಡ್ ಕಾರಿನಲ್ಲಿ ಎಂಜಿನ್ ಬದಲಾವಣೆ ಹೊರತುಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನ ಮಾದರಿಯೆಂತೆ ಮುಂದುವರಿಸಲಾಗಿದ್ದು, ಸುರಕ್ಷತೆಗಾಗಿ ಸ್ ಕಂಟ್ರೋಲ್, 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ವ್ಯೂ ಕ್ಯಾಮೆರಾ ಮತ್ತು ಸೆನ್ಸಾರ್, ಬ್ರೇಕ್ ಅಸಿಸ್ಟ್ ಸೌಲಭ್ಯ ಹೊಂದಿದೆ. ಆದರೆ ಸನ್‌ರೂಫ್, ಕೀ ಲೆಸ್ ಎಂಟ್ರಿ ಮತ್ತು ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸೌಲಭ್ಯಗಳು ಇಲ್ಲದಿರುವುದು ಕೆಲವು ಗ್ರಾಹಕರಿಗೆ ಅಸಮಾಧಾನ ಉಂಟು ಮಾಡಬಹುದಾಗಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ರ‍್ಯಾಪಿಡ್ ಮಾದರಿಯಲ್ಲಿ ಜೋಡಣೆ ಮಾಡಬಹುದಾಗಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

2011ರಿಂದ ಸ್ಕೋಡಾ ಕಂಪನಿಯು ರ‍್ಯಾಪಿಡ್ ಕಾರಿನಲ್ಲಿ ಕಾಲಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದರೂ ಕೂಡಾ ಹೊಸ ತಲೆಮಾರಿನ ರ‍್ಯಾಪಿಡ್ ಮಾದರಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಮುಂಬರುವ 2021ರ ಹೊತ್ತಿಗೆ ಹೊಸ ತಲೆಮಾರಿನ ರ‍್ಯಾಪಿಡ್ ಕಾರು ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿಲಿದ್ದು, ಸದ್ಯಕ್ಕೆ ಬಿಎಸ್-6 ಮಾದರಿಯು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯೊಂದಿಗೆ ಖರೀದಿಗೆ ಲಭ್ಯವಿರಲಿವೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರ‍್ಯಾಪಿಡ್ ಸೆಡಾನ್ ಕಾರು ಆರಂಭಿಕವಾಗಿ ರೂ. 7.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11.79 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಮಾಂಟೆ ಕಾರ್ಲೊ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.

ಸೆಡಾನ್ ಪ್ರಿಯರ ಹಾಟ್ ಫೆವರಿಟ್ ಸ್ಕೋಡಾ ರ‍್ಯಾಪಿಡ್ ಮಾಂಟೆ ಕಾರ್ಲೊ

ಮಾಂಟೆ ಕಾರ್ಲೊ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಧ್ಯಮ ಕ್ರಮಾಂಕದ ಇತರೆ ಸೆಡಾನ್ ಕಾರು ಮಾದರಿಗಳಿಂತಲೂ ಉತ್ತಮ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆ ಹೊಂದಿರುವ ರ‍್ಯಾಪಿಡ್ ಮಾಂಟೆ ಕಾರ್ಲೊ ಕಾರು ಸೆಡಾನ್ ಪ್ರಿಯರ ಆಯ್ಕೆ ಮುಂಚೂಣಿ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕೆಲವು ತಾಂತ್ರಿಕ ಅಂಶಗಳ ಜೋಡಣೆಯಿಲ್ಲದಿರುವುದನ್ನು ಹೊರತುಪಡಿಸಿ ಹಲವಾರು ವಿಶೇಷತೆಗಳು ಖರೀದಿಗೆ ಪೂರಕವಾದ ಅಂಶಗಳು ಈ ಕಾರಿನಲ್ಲಿವೆ ಎನ್ನಬಹುದು.

Most Read Articles

Kannada
English summary
Skoda Rapid TSI Monte Carlo Edition Road Test Review. Read in Kannada.
Story first published: Wednesday, September 9, 2020, 20:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X