ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಇತ್ತೀಚೆಗೆ ಕಾರು ಖರೀದಿದಾರರ ಅಭಿರುಚಿಗಳು ಬದಲಾಗುತ್ತಿದ್ದು, ಹೊಸ ಕಾರು ಖರೀದಿಯ ವೇಳೆ ಇಷ್ಟು ದಿನ ಮೈಲೇಜ್ ಎಷ್ಟು ನೀಡುತ್ತೆ ಎಂದು ವಿಚಾರಿಸುತ್ತಿದ್ದ ಗ್ರಾಹಕರು ಇದೀಗ ಕಾರುಗಳ ಪರ್ಫಾಮೆನ್ಸ್ ಹೇಗೆ ಎನ್ನವಂತ ಪ್ರಶ್ನೆಗಳನ್ನು ಕೇಳಿ ಕಾರು ಖರೀದಿ ಮಾಡುತ್ತಿರುವ ಟ್ರೆಂಡ್ ಆಗ್ತಾ ಇದೆ. ಇದೇ ಕಾರಣಕ್ಕೆ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಟಾಟಾ ಸಂಸ್ಥೆಯು ಬಜೆಟ್ ಬೆಲೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಇದೇ ಮೊದಲ ಬಾರಿಗೆ ಪರ್ಫಾಮೆನ್ಸ್ ಕಾರು ಪ್ರಿಯರಿಗಾಗಿ ತನ್ನ ಬಹುನೀರಿಕ್ಷಿತ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳನ್ನು ಬಿಡುಗಡೆ ಮಾಡಿದ್ದು, ಹತ್ತು ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರುಗಳು ಭಾರೀ ಆಕರ್ಷಣೆ ಪಡೆದುಕೊಂಡಿವೆ. ಮಧ್ಯಮ ವರ್ಗದ ಗ್ರಾಹಕರು ಪರ್ಫಾಮೆನ್ಸ್ ಕಾರು ಖರೀದಿಸುವ ಯೋಜನೆಗೆ ಈ ಕಾರುಗಳು ಅತ್ಯುತ್ತಮ ಆಯ್ಕೆ ಎನ್ನಬಹುದಾಗಿದ್ದು, ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಡ್ರೈವ್‌ಸ್ಪಾರ್ಕ್ ತಂಡ ನಡೆಸಿದ ಮೊದಲ ಚಾಲನಾ ವಿಮರ್ಶೆ ಇಲ್ಲಿದೆ ನೋಡಿ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಇದೇ ವರ್ಷ ಫೆಬ್ರುವರಿ ನಡೆದಿದ್ದ 2018ರ ಆಟೋ ಎಕ್ಸ್‌ಪೋದಲ್ಲಿ ಟಾಟಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಜೆಟಿಪಿ ವರ್ಷನ್ ಟಿಯಾಗೊ ಮತ್ತು ಟಿಗೋರ್ ಕಾರುಗಳನ್ನು ಪ್ರದರ್ಶನ ಮಾಡಿದ್ದಲ್ಲದೆ ಹಲವಾರು ಬಾರಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಸಹ ಕೈಗೊಂಡಿತ್ತು.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಈ ವೇಳೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಅನುಕೂಲಕರವಾಗುವ ಹಲವಾರು ಬದಲಾವಣೆಗಳೊಂದಿಗೆ ಹೊಸ ಕಾರುಗಳನ್ನು ಸಿದ್ದಗೊಳಿಸಿದ ಟಾಟಾ ಸಂಸ್ಥೆಯು ಕಳೆದ ವಾರವಷ್ಟೇ ಅಂತಿಮವಾಗಿ ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕಾರುಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಜೆಟಿಪಿ ಹಿಂದಿನ ಗುಟ್ಟು..!

ತಮಿಳುನಾಡಿನ ಕೊಯಮತ್ತೂರು ಮೂಲದ ಜೇಯಮ್ ಟಾಟಾ ಪರ್ಫಾಮೆನ್ಸ್ (ಜೆಟಿಪಿ) ಸಂಸ್ಥೆಯೊಂದಿಗೆ ಜೊತೆಗೂಡಿರುವ ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಗಳಾದ ಟಿಯಾಗೊ ಮತ್ತು ಟಿಗೋರ್ ಆವೃತ್ತಿಗಳನ್ನು ಸ್ಪೋರ್ಟಿ ಲುಕ್ ಜೊತೆಗೆ ಪರ್ಫಾಮೆನ್ಸ್ ಬಳಕೆಯ ಉದ್ದೇಶಕ್ಕಾಗಿ ಹೆಚ್ಚಿನ ಮಟ್ಟದ ಎಂಜಿನ್ ದಕ್ಷತೆಯನ್ನು ಹೊಸ ಜೆಟಿಪಿ ಆವೃತ್ತಿಗಳಲ್ಲಿ ಒದಗಿಸಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಸಾಮಾನ್ಯ ಮಾದರಿಯ ಟಿಗೋರ್, ಟಿಯಾಗೊ ಕಾರುಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳು ಸ್ಪೋರ್ಟಿ ಲುಕ್‌ನೊಂದಿಗೆ ಪ್ರೀಮಿಯಂ ಫೀಚರ್ಸ್ ಹೊತ್ತು ಬಂದಿದ್ದು, ನೋಡಲು ಆಕರ್ಷಕ ತಾಂತ್ರಿಕ ವೈಶಿಷ್ಟ್ಯತೆ ಪಡೆದಿವೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಡಿಸೈನ್ ಮತ್ತು ಸ್ಟೈಲ್

ಮೇಲೆ ಹೇಳಿದ ಹಾಗೆ ಸಾಮಾನ್ಯ ಟಿಯಾಗೊ ಮತ್ತು ಟಿಗೋರ್ ಕಾರುಗಳಿಂತ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಆವೃತ್ತಿಗಳು, ಮುಂಭಾಗದ ಗ್ರಿಲ್‌ನಲ್ಲಿ ನೀಡಲಾಗಿರುವ 'JTP' ಬ್ಯಾಡ್ಜ್ ಆಕರ್ಷಣೆಯಾಗಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳು ಈ ಬಾರಿ ಹೊಸ ಅಪ್ಗ್ರೇಡ್‍ಗಳನ್ನು ಪಡೆದುಕೊಂಡಿದ್ದು, ಆಕ್ರಮಣಕಾರಿ ವಿನ್ಯಾಸವೇ ಇವುಗಳ ಪ್ರಮುಖ ಆಕರ್ಷಣೆ. ಹೀಗಾಗಿ ಕಾರಿನ ಮುಂಭಾಗದಲ್ಲಿ ಹೊಸ ಡಿಸೈನ್‍ನಿಂದ ಕೂಡಿದ ಅಗಲವಾದ ಲೋವರ್ ಗ್ರಿಲ್ ಹಾಗೂ ಬಂಪರ್ ಅನ್ನು ಅಳವಡಿಸಲಾಗಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಡ್ಯುಯಲ್ ವೇಂಬರ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ರೇಡಿಯೇಟರ್ ಗ್ರಿಲ್ ಅನ್ನು ಬಾನೆಟ್‍ನ ಮೇಲೆ ಅಳವಡಿಸುವ ಮೂಲಕ ಮುಂಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತರಲಾಗಿದ್ದು, ಕಾರಿನ ಸೈಡ್‍ನಲ್ಲಿ ಡೈಮಂಡ್ ಕಟ್ ಬ್ಲಾಕ್ ಮತ್ತು ಸಿಲ್ವರ್ ಬಣ್ಣದ 15-ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಇನ್ನು ಕಾರಿನ ರಿಯರ್ ವ್ಯೂ ಮಿರರ್ಸ್ ಕಾರಿನ ದೇಹದ ಬಣ್ಣವನ್ನು ಪಡೆದಿದ್ದು, ರೂಫ್ ಮತ್ತು ರಿಯರ್ ಸ್ಪಾಯ್ಲರ್‍‌ಗಳು ಗ್ಲಾಸಿ ಬ್ಲಾಕ್ ಬಣ್ಣದಿಂದ ಸಜ್ಜುಗೊಂಡಿದೆ. ಹಾಗಿಯೇ ಕಾರಿನ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಸಿಗ್ನೇಚರ್ ಎಲ್ಇಡಿ ಲೈಟ್‍ಗಳು ಮತ್ತು ಜೆಟಿಪಿ ಬ್ಯಾಡ್ಜಿಂಗ್ ಹಾಗೂ ಪೂರ್ಣ ಕಾರ್ಯಭರಿತ ಟ್ವಿನ್ ಬ್ಯಾರೆಲ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಕಾರಿನ ಒಳಾಂಗಣ ವಿನ್ಯಾಸ

ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರಿನ ಒಳಭಾಗದಲ್ಲಿ ಸ್ಪೋರ್ಟಿ ಬ್ಲಾಕ್ ಮತ್ತು ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಎಸಿ ವೆಂಟ್ಸ್ ಗಳನ್ನು ಸಹ ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಸ್ಟೀರಿಂಗ್ ವ್ಹೀಲ್‍ಗೆ ಕಪ್ಪು ಬಣ್ಣದ ಲೆದರ್‍ ಮತ್ತು ಸೀಟ್‍ಗಳಿಗೆ ಕೆಂಪು ಬಣ್ಣದ ಲೆದರ್ ಹೊದಿಕೆ ನೀಡುವ ಮೂಲದ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಇದಲ್ಲದೇ ಅಲ್ಯುಮಿನಿಯಂ ಕಂಟ್ರೋಲ್ ಪೆಡಲ್‍ಗಳನ್ನು ನೀಡಲಾಗಿದ್ದು, ಈ ಎರಡು ಕಾರುಗಳು ಪ್ರೀಮಿಯಂ ಮಾದರಿಯಂತೆ 8-ಸ್ಪೀಕರ್ಸ್ ಹರ್ಮನ್ ಮ್ಯೂಸಿಕ್ ಸಿಸ್ಟಂ ಹಾಗು ಕನೆಕ್ಟ್ ನೆಕ್ಸ್ಟ್, ಆ್ಯಪಲ್ ಕಾರ್‍ ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಸ್ಟಿರಿಯೋ ಮತ್ತು ಇನ್ಫೋಟೈನ್‌ಮೆಂಟ್

ಟಾಟಾ ಸಂಸ್ಥೆಯು ಜೆಟಿಪಿ ಆವೃತ್ತಿಗಳಲ್ಲಿ ಸ್ಯಾಂಡರ್ಡ್ ಆಗಿ ಪ್ರತಿ ಕಾರು ಮಾದರಿಯಲ್ಲೂ ಸಂಗೀತ ಪ್ರಿಯರಿಗಾಗಿ ಪ್ರೀಮಿಯಂ ಆಡಿಯೋ ಸೌಲಭ್ಯ ನೀಡಲಾಗಿದ್ದು, ಹರ್ಮನ್ ಉತ್ಪಾದನೆಯ ಕನೆಕ್ಟ್ ನೆಕ್ಸ್ಟ್ ಎನ್ನುವ 5-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಿಸಲಾಗಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಕಂಫರ್ಟ್ ಮತ್ತು ಬೂಟ್ ಸ್ಪೆಸ್

ಜೆಟಿಪಿ ಕಾರುಗಳು ಪರ್ಫಾಮೆನ್ಸ್ ಮಾದರಿಯಾಗಿರುವ ಹಿನ್ನೆಲೆಯಲ್ಲಿ ಮುಂಭಾದ ಸೀಟುಗಳು ಸಾಮಾನ್ಯ ಮಾದರಿಗಿಂತ ತುಸು ದೊಡ್ಡ ಆಕಾರ ಹೊಂದಿದ್ದು, ಇದರಿಂದ ಅರಾಮದಾಯಕವಾಗಿ ಚಾಲನೆಗೆ ಸಹಕಾರಿಯಾಗಿದೆ. ಹಾಗೆಯೇ ಲಗೇಜ್ ತುಂಬಲು 242 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಇದ್ದು, ಹಿಂಬದಿಯ ಸವಾರರಿಗೂ ಇದು ಅನೂಕಲಕವಾಗಿವೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಜೆಟಿಪಿ ಕಾರುಗಳಲ್ಲಿ ಒಂದು ಗಮಿಸಬೇಕಾದ ಅಂಶ ಅಂದ್ರೆ ಟಾಟಾ ಸಂಸ್ಥೆಯು ಮ್ಯಾನುವಲ್ ಏರ್‌ಕಂಡೀಷನ್ ಸೌಲಭ್ಯವನ್ನು ಜೋಡಿಸಿದ್ದು, ಅದು ಆಟೋಮ್ಯಾಟಿಕ್ ಮೂಡ್ ಮೂಲಕ ಡ್ಯುಯಲ್ ಜೋನ್ ವಾತಾವರಣವನ್ನು ನೀಡಬಲ್ಲವು.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಎಂಜಿನ್ ಸಾಮರ್ಥ್ಯ

ಈ ಬಾರಿ ಹೊಸ ಜೆಟಿಪಿ ಕಾರುಗಳಲ್ಲಿ ದೊಡ್ಡ ಬದಲಾವಣೆ ಎಂದರೆ ಅವು ಎಂಜಿನ್. ಏಕೆಂದರೆ ಈ ಬಾರಿ ನೀಡಲಾಗಿರುವ ಹೆಚ್ಚು ಸಾಮರ್ಥ್ಯದ 1.2 ಲೀಟರ್ ರೆವೊಟ್ರಾನ್ ಟರ್ಬೋಚಾರ್ಜ್ಡ್ ಎಂಜಿನ್‍ಗಳು ಹೆಚ್ಚು ಸ್ಪೀಡ್ ಅನ್ನು ಒದಗಿಸಬಲ್ಲವು.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಟಾಟಾ ಟಿಯಾಗೊ ಜೆಟಿಪಿ ಹಾಗು ಟಿಗೋರ್ ಜೆಟಿಪಿ ಕಾರುಗಳಲ್ಲಿ ಅಳವಡಿಸಲಾಗಿರುವ 1.2 ರೆವೊಟ್ರಾನ್ ಪೆಟ್ರೋಲ್ ಎಂಜಿನ್‍ಗಳು 112-ಬಿಹೆಚ್‍ಪಿ ಮತ್ತು 150-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಇದೇ ಎಂಜಿನ್ ಮಾದರಿಯ ಸಾಮಾನ್ಯ ಕಾರುಗಳಲ್ಲಿ 83.2-ಬಿಎಚ್‌ಪಿ ಮತ್ತು 114ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಜೇಯಮ್ ಟಾಟಾ ಪರ್ಫಾಮೆನ್ಸ್ (ಜೆಟಿಪಿ) ಸಂಸ್ಥೆಯು ಕಾರು ಪ್ರಿಯರಿಗಾಗಿ ಉತ್ತಮ ಮಾದರಿಯ ಪರ್ಫಾಮೆನ್ಸ್ ಗುಣ ಹೆಚ್ಚಿಸಿವೆ

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಸುರಕ್ಷಾ ಸೌಲಭ್ಯಗಳು

ಪ್ರಯಾಣಿಕರ ಸುರಕ್ಷತೆಗೂ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಡ್ಯುಯಲ್ ಏರ್‌ಬ್ಯಾಗ್, ಇಬಿಡಿ, ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಕೇವಲ 10 ಸೇಕೆಂಡುಗಳಲ್ಲಿ 100ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿವೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಕಾರಿನ ಬೆಲೆಗಳು

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಟಾಟಾ ಹೊಸ ಟಿಯಾಗೊ ಜೆಟಿಪಿ ಬೆಲೆಯನ್ನು ರೂ. 6.39 ಲಕ್ಷಕ್ಕೆ ಮತ್ತು ಟಿಗೋರ್ ಜೆಟಿಪಿ ಕಾರಿನ ಬೆಲೆಯನ್ನು ರೂ.7.49 ಲಕ್ಷಕ್ಕೆ ನಿಗದಿಗೊಳಿಸಲಾಗಿದ್ದು, ಬೆಲೆಗೆ ತಕ್ಕಂತೆ ಹೊಸ ಸುಧಾರಿತ ಸೌಲಭ್ಯಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಕಾರಿನ ತಾಂತ್ರಿಕ ಅಂಶಗಳ ಪಕ್ಷಿನೋಟ

ಎಂಜಿನ್ 1,199ಸಿಸಿ, ಟರ್ಬೋಚಾರ್ಡ್ ಪೆಟ್ರೋಲ್
ಸಿಲಿಂಡರ್ ಸಂಖ್ಯೆ 3-ಸಿಲಿಂಡರ್
ಮ್ಯಾಕ್ಸ್ ಪವರ್ 112.44 @5,000ಆರ್‌ಪಿಎಂ
ಮ್ಯಾಕ್ಸ್ ಟಾರ್ಕ್ 150Nm @2,000-4,000ಆರ್‌ಪಿಎಂ
ಟ್ರಾನ್‌ಮಿಷನ್ 5-ಸ್ಪೀಡ್ ಮ್ಯಾನುವಲ್
ಗ್ರೌಂಡ್ ಕ್ಲಿಯರೆನ್ಸ್ 166ಎಂಎಂ
ಫ್ಯೂಲ್ ಟ್ಯಾಂಕ್ ಸಾಮರ್ಥ್ಯ 35 ಲೀಟರ್
0-100 ಕಿಮಿ ಪ್ರತಿ ಗಂಟೆಗೆ 10 ಸೇಕೆಂಡು
ಟಾಪ್ ಸ್ಪೀಡ್ 160ಕಿಮಿ ಪ್ರತಿ ಗಂಟೆಗೆ
ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರಿನ ಪ್ರತಿಸ್ಪರ್ಧಿಗಳು

ಕಾರು ಮಾದರಿಗಳು ಎಂಜಿನ್ ಸಾಮರ್ಥ್ಯ ಎಂಜಿನ್ ಪರ್ಫಾಮೆನ್ಸ್(ಬಿಎಚ್‌ಪಿ/ಎನ್ಎಂ ಟಾರ್ಕ್) ಕಾರಿನ ಬೆಲೆಗಳು
ಮಾರುತಿ ಸುಜುಕಿ ಬಲೆನೊ ಆರ್‌ಎಸ್ 998ಸಿಸಿ / 3-ಸಿಲಿಂಡರ್ 101/150 8.45 ಲಕ್ಷ
ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್ಐ 1,198ಸಿಸಿ / 4-ಸಿಲಿಂಡರ್ 103/175 9.40 ಲಕ್ಷ
ಫಿಯೆಟ್ ಪುಂಟೋ ಅಬಾರ್ಥ್ 1,368ಸಿಸಿ / 4-ಸಿಲಿಂಡರ್ 145/212 10.23 ಲಕ್ಷ
ಟಾಟಾ ಟಿಯಾಗೊ ಜೆಟಿಪಿ 1,199ಸಿಸಿ / 3-ಸಿಲಿಂಡರ್ 112/150 6.39 ಲಕ್ಷ
ಟಿಯಾಗೊ ಜೆಟಿಪಿ, ಟಿಗೋರ್ ಜೆಟಿಪಿ ರಿವ್ಯೂ: ಬಜೆಟ್ ಬೆಲೆಯಲ್ಲಿ ಟಾಟಾದಿಂದ ಸೂಪರ್ ಪರ್ಫಾಮೆನ್ಸ್ ಕಾರು..!

ಒಟ್ಟಿನಲ್ಲಿ ಟಾಟಾ ಸಂಸ್ಥೆಯ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ, ಟಿಗೋರ್ ಕಾರುಗಳನ್ನು ಮತ್ತು ಸ್ಪೋರ್ಟಿ ಡ್ರೈವ್ ಅನುಭವಕ್ಕಾಗಿ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರುಗಳನ್ನು ಬಳಸಬಹುದಾಗಿದೆ.

Most Read Articles

Kannada
English summary
Tata Tiago JTP & Tigor JTP Review — Brilliant Performance On A Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X