ಟಾಟಾ ಝಿಕಾ ಸಂಪೂರ್ಣ ಚಾಲನಾ ವಿಮರ್ಶೆ

By Nagaraja

ಇಡೀ ದೇಶವೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ನೀವು ಕೂಡಾ ಹೊಸ ಆತಿಥಿಯ ಸ್ವಾಗತ ಮಾಡಿಕೊಳ್ಳುವ ಇರಾದೆಯಲ್ಲಿದ್ದೀರಾ? ಇದೇ ಸುಸಂದರ್ಭವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅತಿ ನೂತನ ಟಾಟಾ ಝಿಕಾ ಹ್ಯಾಚ್‌ಬ್ಯಾಕ್ ಕಾರು ಭರ್ಜರಿ ಬಿಡುಗಡೆ ಕಾಣಲಿದೆ.

Also Read: ಕ್ವಿಡ್, ಆಲ್ಟೊ ಸವಾಲನ್ನು ಎದುರಿಸಲು ನೂತನ ಟಾಟಾ ಝಿಕಾ ರೆಡಿ

ಹಿಂದೆಂದಿಗಿಂತಲೂ ವ್ಯತಿರಿಕ್ತವಾಗಿ ಝಿಕಾ ಕಾರಿಗಾಗಿ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಯೋಜನಾಬದ್ಧ ಮಾರಾಟ ತಂತ್ರವನ್ನು ಅನುಸರಿಸುತ್ತಿದೆ. ಇದಕ್ಕಾಗಿ ವಿಶೇಷ ಅಭಿಯಾನವನ್ನು ಆರಂಭಿಸಿರುವ ಸಂಸ್ಥೆಯು ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಅವರನ್ನು ಮುಖ್ಯ ಪ್ರಚಾರ ರಾಯಭಾರಿಯನ್ನಾಗಿ ನೇಮಕಗೊಳಿಸಿದೆ. ನಿಮ್ಮ ಮಾಹಿತಿಗಾಗಿ, ಇತ್ತೀಚೆಗಷ್ಟೇ ಗೋವಾದಲ್ಲಿ ಟಾಟಾ ಝಿಕಾ ಚಾಲನಾ ವಿಮರ್ಶೆಯು ನೆರವೇರಿತ್ತು. ಇದರಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕ ಜೊಬೊ ಕುರುವಿಲ್ಲಾ ಸಹ ಪಾಲ್ಗೊಂಡಿದ್ದು, ಸಂಪೂರ್ಣ ಟೆಸ್ಟ್ ಡ್ರೈವ್ ರಿವ್ಯೂ ನಿಮ್ಮ ಮುಂದಿಡುತ್ತಿದ್ದೇವೆ. ಓದಲು ಮರೆಯದಿರಿ...

ಟಾಟಾ ಝಿಕಾ

ಟಾಟಾ ಝಿಕಾ

ಮಾರುಕಟ್ಟೆಯಲ್ಲಿ ಇಂಡಿಕಾ ಸ್ಥಾನವನ್ನು ತುಂಬಲಿರುವ ನೂತನ ಟಾಟಾ ಝಿಕಾ ಕಾರಿನಲ್ಲಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ. ಇದೇ ತಂತ್ರಗಾರಿಕೆಯಲ್ಲಿ ಟಾಟಾ ಬೋಲ್ಟ್ ಹ್ಯಾಚ್ ಬ್ಯಾಕ್ ಹಾಗೂ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆಯಾಗಿರುವುದು ನೀವಿಲ್ಲಿ ನೆನಪಿಸಿಕೊಳ್ಳಬಹುದು.

ವಿನ್ಯಾಸ

ವಿನ್ಯಾಸ

ಟಾಟಾದ ನೂತನ ಡಿಸೈನ್ ನೆಕ್ಸ್ಟ್ ಸಿದ್ಧಾಂತದ ಪ್ರಕಾರ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಮುಂದುಗಡೆ ಆತ್ಮವಿಶ್ವಾಸ ಭರಿತ ಭಂಗಿ ಹಾಗೂ ಟಾಟಾ ಲಾಂಛನದ ಜೊತೆಗೆ ಹೆಕ್ಸಾಗನ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಲಿದೆ.

ವಿನ್ಯಾಸ

ವಿನ್ಯಾಸ

ಆಕರ್ಷಕ ಹೆಡ್ ಲೈಟ್ ವಿನ್ಯಾಸ, ಬದಿಯಲ್ಲಿ ಸ್ವಭಾವ ರೇಖೆ, ಕಪ್ಪುವ ವರ್ಣದ ಬಿ ಪಿಲ್ಲರ್ ಯುವ ಗ್ರಾಹಕರಿಗೆ ಹೆಚ್ಚು ಪ್ರಿಯವೆನಿಸಲಿದೆ.

ವಿನ್ಯಾಸ

ವಿನ್ಯಾಸ

ಇನ್ನು ಹಿಂದುಗಡೆಯೂ ರಿಯರ್ ಸ್ಪಾಯ್ಲರ್ ಹಾಗೂ ರಿಯರ್ ಬಂಪರ್ ಸೇರಿದಂತೆ ಒಟ್ಟಾರೆ ವಿನ್ಯಾಸವು ಪ್ರಭಾವಿ ಎನಿಸಿಕೊಂಡಿದೆ.

ಒಳಮೈ

ಒಳಮೈ

ಕಾರಿನೊಳಗೆ ಹೆಚ್ಚಿನ ಪ್ರೀಮಿಯಂ ಚಾಲನೆಯ ಅನುಭವಕ್ಕಾಗಿ ಡ್ಯುಯಲ್ ಟೋನ್ (ಜೋಡಿ ಬಣ್ಣ) ಒಳನೋಟವನ್ನು ನೀಡಲಾಗಿದೆ. ಸಾಮಾನ್ಯವಾಗಿ ಪ್ರೀಮಿಯಂ ಕಾರುಗಳಲ್ಲಿ ಮಾತ್ರ ಇಂತಹದೊಂದು ಸೌಲಭ್ಯ ಲಭ್ಯವಾಗುತ್ತದೆ.

ಒಳಮೈ

ಒಳಮೈ

ಹೊಂದಾಣಿಕೆ ಮಾಡಬಹುದಾದ ಎಸಿ ವೆಂಟ್ಸ್ ಹಾಗೂ ಫ್ಯಾಬ್ರಿಕ್ ಪ್ರೀಮಿಯಂ ಗ್ರಾಫಿಕ್ಸ್ ಕಾರಿನೊಳಗೆ ಕಂಡುಬರುವ ಇತರ ಪ್ರಮುಖ ವೈಶಿಷ್ಟ್ಯವಾಗಿದೆ.

ಒಳಮೈ

ಒಳಮೈ

ಸುಲಭ ನಿರ್ವಹಣೆಗಾಗಿ ಕಾರಿನೊಳಗೆ 21ರಷ್ಟು ಸ್ಟೋರೆಜ್ ಜಾಗಗಳನ್ನು ಕೊಡಲಾಗಿದೆ. ಇಲ್ಲಿ ದೈನಂದಿನ ಸಂಚಾರದ ವೇಳೆ ಮೊಬೈಲ್, ವಾರ್ತಾ ಪತ್ರಿಕೆ ಅಥವಾ ನೀರಿನ ಬಾಟಲಿಗಳನ್ನಡಲು ಹೆಚ್ಚು ಸೂಕ್ತವೆನಿಸಲಿದೆ.

ಕನೆಕ್ಟ್ ನೆಕ್ಸ್ಟ್

ಕನೆಕ್ಟ್ ನೆಕ್ಸ್ಟ್

ಟಾಟಾದ ಕನೆಕ್ಟ್ ನೆಕ್ಸ್ಟ್ ಸಿದ್ಧಾಂತದ ಪ್ರಕಾರ ಪ್ರಖ್ಯಾತ ಹರ್ಮಾನ್ ಮಾಹಿತಿ ಮನರಂಜನಾ ವ್ಯವಸ್ಥೆಯನ್ನು ನೀವಿಲ್ಲಿ ನೋಡಬಹುದಾಗಿದೆ. ಇದರ ಮ್ಯೂಸಿಕ್ ಸಿಸ್ಟಂ ನಿಮಗೆ ಐಷಾರಾಮಿ ಕಾರಿನಲ್ಲಿರುವುದಕ್ಕೆ ತಕ್ಕುದಾದ ಅನುಭವ ನೀಡಲಿದೆ.

ಟರ್ನ್-ಬೈ-ಟರ್ನ್ ನೇವಿಗೇಷನ್ ಗೈಡನ್ಸ್

ಟರ್ನ್-ಬೈ-ಟರ್ನ್ ನೇವಿಗೇಷನ್ ಗೈಡನ್ಸ್

ಇದೇ ಮೊದಲ ಬಾರಿಗೆ ಆಂಡ್ರಾಯ್ಡ್ ಫೋನ್ ಸಂಪರ್ಕಿತ ಟರ್ನ್-ಬೈ-ಟರ್ನ್ ನೇವಿಗೇಷನ್ ಗೈಡನ್ಸ್ ಅಥವಾ ಮಾರ್ಗದರ್ಶಿ ಸೇವೆಯು ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಮ್ಯಾಪ್ ಮೈ ಇಂಡಿಯಾದ ನೇವಿಮ್ಯಾಪ್ ಆಪ್ ಅನ್ನು ಇನ್ ಸ್ಟಾಲ್ ಮಾಡಬೇಕಾಗುತ್ತದೆ.

ಜ್ಯೂಕ್ ಕಾರ್ ಆಪ್

ಜ್ಯೂಕ್ ಕಾರ್ ಆಪ್

ಅಂತೆಯೇ ಇದೇ ಮೊದಲ ಬಾರಿಗೆ ಜ್ಯೂಕ್ ಕಾರ್ ಆಪ್ ಸೇವೆಯು ಲಭ್ಯವಾಗಲಿದ್ದು, ಈ ಮೂಲಕ ಒಂದಕ್ಕಿಂತ ಹೆಚ್ಚು ಫೋನ್ ಗಳ ಜೊತೆ ಹಾಟ್ ಸ್ಪಾಟ್ ಜಾಲ ಉಪಯೋಗಿಸಿ ಸಂಪರ್ಕಿಸಬಹುದಾಗಿದ್ದು, ಮ್ಯೂಸಿಕ್ ವರ್ಗಾವಣೆ ಮಾಡಬಹುದಾಗಿದೆ. ಇಲ್ಲಿ ಏಕಕಾಲದಲ್ಲಿ ಗರಿಷ್ಠ 10 ಫೋನ್ ಗಳನ್ನು ಕನೆಕ್ಟ್ ಮಾಡಬಹುದಾಗಿದೆ.

ಎಂಜಿನ್

ಎಂಜಿನ್

ಇಲ್ಲಿ ಡ್ರೈವ್ ನೆಕ್ಸ್ಟ್ ತಂತ್ರಜ್ಞಾನಕ್ಕೆ ಒತ್ತು ಕೊಟ್ಟಿರುವ ಟಾಟಾ ಸಂಸ್ಥೆಯು ನೂತನ ಝಿಕಾದಲ್ಲಿ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಹಾಗೂ 1.05 ಲೀಟರ್ ರೆನೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುತ್ತಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್: 85 ಅಶ್ವಶಕ್ತಿ, 114 ಎನ್‌ಎಂ ತಿರುಗುಬಲ

ಬಹು ಚಾಲನಾ ವಿಧ (ಇಕೊ ಮತ್ತು ಸಿಟಿ)

1.5 ಲೀಟರ್ ಡೀಸೆಲ್ ಎಂಜಿನ್: 70 ಅಶ್ವಶಕ್ತಿ, 140 ಎನ್‌ಎಂ ತಿರುಗುಬಲ

ಬಹು ಚಾಲನಾ ವಿಧ (ಇಕೊ ಮತ್ತು ಸಿಟಿ)

ಬಹು ಚಾಲನಾ ವಿಧ

ಬಹು ಚಾಲನಾ ವಿಧ

ಇಲ್ಲಿ ಇಕೊ ಮತ್ತು ಸಿಟಿಗಳೆಂಬ ಬಹು ಚಾಲನಾ ವಿಧಗಳ ಆಯ್ಕೆಯನ್ನು ಟಾಟಾ ನೀಡುತ್ತದೆ. ಇದರ ಪ್ರಕಾರ ಇಕೊದಲ್ಲಿ ಗರಿಷ್ಠ ಇಂಧನ ಕ್ಷಮತೆ ಹಾಗೂ ಸಿಟಿಯಲ್ಲಿ ಹೆಚ್ಚು ಶಕ್ತಿಯುತ ಚಾಲನೆ ನಿಮ್ಮದಾಗಲಿದೆ.

ಚಾಲನಾ ಸಾಮರ್ಥ್ಯ

ಚಾಲನಾ ಸಾಮರ್ಥ್ಯ

ಟಾಟಾ ಝಿಕಾದಲ್ಲಿ ಮುಂದುವರಿದ ಡ್ಯುಯಲ್ ಪಾಥ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಒದಗಿಸಿಕೊಡಲಾಗಿದ್ದು, ಆರಾಮದಾಯಕ ಚಾಲನೆಯನ್ನು ಪ್ರದಾನ ಮಾಡಲಿದೆ. ಸ್ಟೈಲಿಷ್ ಸುಲಭ ಚಾಲನೆಯ ಹ್ಯಾಚ್ ಬ್ಯಾಕ್ ಕಾರು ನಿರೀಕ್ಷೆ ಮಾಡುವವರಿಗೆ ಇದೊಂದು ಪರಿಪೂರ್ಣ ಆಯ್ಕೆಯಾಗಿರಲಿದೆ.

ಟಾಟಾ ಝಿಕಾ ಸಂಪೂರ್ಣ ಚಾಲನಾ ವಿಮರ್ಶೆ

ಝಿಕಾ ಪೆಟ್ರೋಲ್ ಮಾದರಿಯು ಹ್ಯುಂಡೈ ಐ10 ಹಾಗೂ ಮಾರುತಿ ಸೆಲೆರಿಯೊಗಿಂತ ಬದಲಿ ಕಾರನ್ನು ಹುಡುಕವವರಿಗೆ ಉತ್ತಮ ಆಯ್ಕೆಯಾಗಿರಲಿದೆ. ಅಂತೆಯೇ ಡೀಸೆಲ್ ಝಿಕಾ ಚಾಲನೆಯು ಹೆಚ್ಚು ನಯವಾಗಿದ್ದು, ಹೆದ್ದಾರಿಯಲ್ಲಿ ಓವರ್ ಟೇಕಿಂಗ್ ಸುಲಭವೆನಿಸುತ್ತದೆ.

ಚಾಲನಾ ಸ್ಥಾನ

ಚಾಲನಾ ಸ್ಥಾನ

ಚಾಲನಾ ಸ್ಥಾನ ನಿಖರವಾಗಿದ್ದು, ಅತ್ಯುತ್ತಮ ಗೋಚರತೆಯನ್ನು ನೀಡುತ್ತದೆ. ಕ್ಲಚ್ ಹಗುರವಾಗಿದ್ದು, ಗೇರ್ ಬಾಕ್ಸ್ ನಯವಾಗಿದೆ. ಇದರಿಂದ ಸುಲಭ ನಿರ್ವಹಣೆ ಸಾಧ್ಯ. ಇನ್ನು ಬ್ರೇಕ್ ಕೂಡಾ ಪರಿಣಾಮಕಾರಿಯೆನಿಸಿಕೊಂಡಿದ್ದು, ಆಸನ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಗಿದೆ.

ಡಿಕ್ಕಿ ಜಾಗ

ಡಿಕ್ಕಿ ಜಾಗ

ಹಿಂದೆಲ್ಲ ಟಾಟಾ ಕಾರುಗಳ ಗುಣಮಟ್ಟತೆಯ ಬಗ್ಗೆ ಅನುಮಾನಗಳು ಮೂಡುತ್ತಿದ್ದವು. ಆದರೆ ನೂತನ ಝಿಕಾ ಇವೆಲ್ಲದಕ್ಕೂ ಉತ್ತರವಾಗಲಿದೆ. ಇದು ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್, ಚಿಲ್ಡ್ ಗ್ಲೋವ್ ಬಾಕ್ಸ್ ಜೊತೆಗೆ 242 ಲೀಟರ್ ಢಿಕ್ಕಿ ಜಾಗವನ್ನು ಪಡೆಯಲಿದೆ.

ಇಂಧನ ಟ್ಯಾಂಕ್: 35 ಲೀಟರ್

ಇನ್ಪೋಟೈನ್ಮೆಂಟ್ ಸಿಸ್ಟಂ

ಇನ್ಪೋಟೈನ್ಮೆಂಟ್ ಸಿಸ್ಟಂ

ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ ಎಂಟು ಸ್ಪೀಕರ್ ಆಡಿಯೋ ಸಿಸ್ಟಂ, ಎಫ್/ಎಎಂ, ಯುಎಸ್‌ಬಿ, ಐಪೊಡ್, ಆಕ್ಸ್ ಮತ್ತು ಬ್ಲೂಟೂತ್ ಸೇವೆಯನ್ನು ಒಳಗೊಂಡಿರಲಿದೆ.

ಸುರಕ್ಷತೆ

ಸುರಕ್ಷತೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಟಾಪ್ ಎಂಡ್ ವೆರಿಯಂಟ್ ನಲ್ಲಿ ಚಾಲಕ ಹಾಗೂ ಮುಂಭಾಗದ ಪ್ರಯಾಣಿಕ ಬದಿಯ ಏರ್ ಬ್ಯಾಗ್, ಸೀಟು ಬೆಲ್ಟ್, ರಿಮೋಟ್ ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಕ್ಲಚ್ ಲಾಕ್ ಮತ್ತು ಇಂಮೊಬಿಲೈಜರ್ ಸೇವೆಯು ಲಭ್ಯವಾಗಲಿದೆ.

ಬೆಲೆ

ಬೆಲೆ

ನೂತನ ಝಿಕಾ ಪೆಟ್ರೋಲ್ ಎಂಟಿ ಲೆವೆಲ್ ವೆರಿಯಂಟ್ ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ. ಅಂತೆಯೇ ಡೀಸೆಲ್ ವೆರಿಯಂಟ್ ಇದಕ್ಕಿಂತಲೂ 75,000 ರು.ಗಳಷ್ಟು ದುಬಾರಿಯೆನಿಸಲಿದೆ.

ಮುನ್ನಡೆ

ಮುನ್ನಡೆ

  • ಡ್ಯುಯಲ್ ಫ್ರಂಟ್ ಏರ್ ಬ್ಯಾಗ್,
  • ಜಾಣತನದ ಒಳಮೈ,
  • ಯುವ ಗ್ರಾಹಕರಿಗೆ ಹೆಚ್ಚಿನ ಒತ್ತು,
  • ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್,
  • 5 ಸ್ಪೀಡ್ ಗೇರ್ ಬಾಕ್ಸ್,
  • ಆರಾಮದಾಯಕ ಕ್ಯಾಬಿನ್, ಅತ್ಯುತ್ತಮ ಎಸಿ,
  • ಮುನ್ನಡೆ

    ಮುನ್ನಡೆ

    • ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ,
    • ಜ್ಯೂಕ್ ಕಾರ್ ಆಪ್,
    • ಟರ್ನ್ ಬೈ ಟರ್ನ್ ನೇವಿಗೇಷನ್ ಆಪ್,
    • ರಿಯರ್ ಪಾರ್ಕಿಂಗ್ ಸೆನ್ಸಾರ್,
    • ಕ್ಲಚ್ ಲಾಕ್,
    • ಅತ್ಯುತ್ತಮ ನಾಯ್ಸ್, ವೈಬ್ರೇಷನ್ ಮತ್ತು ಹಾರ್ಶ್‌ನೆಶ್ (ಎನ್‌ವಿಎಚ್) ಮಟ್ಟ,
    • ಹಿನ್ನಡೆ

      ಹಿನ್ನಡೆ

      • ನಿರ್ಮಾಣ ಗುಣಮಟ್ಟದಲ್ಲಿ ಅಲ್ಪ ಹಿನ್ನಡೆ,
      • ಸ್ಟ್ಯಾರ್ಟ್ ಮಾಡುವ ವೇಳೆ ಪೆಟ್ರೋಲ್ ಎಂಜಿನ್ ಸ್ವಲ್ಪ ಶಬ್ದ ಜಾಸ್ತಿ,
      • ಎಸಿ ವೆಂಟ್ಸ್ ಸಂಪೂರ್ಣ ಮುಚ್ಚುಗಡೆಯಾಗುವುದಿಲ್ಲ.
      • ಡೀಸೆಲ್ ಎಂಜಿನ್ ಪವರ್ ಬ್ಯಾಂಡ್ ಕಡಿಮೆ (ಗರಿಷ್ಠ ಅಶ್ವಶಕ್ತಿ ಹಾಗೂ ಗರಿಷ್ಠ ಟಾರ್ಕ್ ನಡುವಣ ವ್ಯಾಪ್ತಿ) 1,800rpm ನಿಂದ 3,000rpm ವರೆಗೆ,
      • ಡೀಸೆಲ್ ವೆರಿಯಂಟ್ ಬೂಟ್ ಲಾಕ್ ಗುಣಮಟ್ಟದ ಸಮಸ್ಯೆ,
      • ಡೋರ್ ಲಾಕ್ ಮಾಡಲು ಹೆಚ್ಚು ಶಕ್ತಿಯ ಪ್ರಯೋಗದ ಅಗತ್ಯ
      • ಆರು ಆಕರ್ಷಕ ಬಣ್ಣಗಳು

        ಆರು ಆಕರ್ಷಕ ಬಣ್ಣಗಳು

        ಬಿಳಿ,

        ಬೆಳ್ಳಿ,

        ಕಂದು,

        ಕೆಂಪು,

        ಕೇಸರಿ,

        ನೀಲಿ

        ಅಂತಿಮ ತೀರ್ಪು

        ಅಂತಿಮ ತೀರ್ಪು

        ನೀವು ಟಾಟಾ ಎಂಬ ಬ್ರ್ಯಾಂಡ್ ಮೌಲ್ಯವನ್ನು ತುಲನೆ ಮಾಡಿ ನೋಡದೇ ನೇರವಾಗಿ 'ಝಿಕಾ' ಎಂಬ ಕಾರಿನ ಗುಣಮಟ್ಟವನ್ನು ಅರಿತುಕೊಂಡಲ್ಲಿ ಈ ಹ್ಯಾಚ್ ಬ್ಯಾಕ್ ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯು ನಿಮಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದು ಟಾಟಾ ಬಿಡುಗಡೆ ಮಾಡಿರುವ ಕಾರುಗಳ ಪೈಕಿ ಅತ್ಯುತ್ತಮ ಮಾದರಿ ಎಂಬುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ. ಸದ್ಯ ಟಾಟಾ ಝಿಕಾ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

        ಇವನ್ನೂ ಓದಿ

        ಟಾಟಾ ಝಿಕಾ vs ಹ್ಯುಂಡೈ ಗ್ರಾಂಡ್ ಐ10; ಗೆಲುವು ಯಾರಿಗೆ?

Most Read Articles

Kannada
Story first published: Tuesday, December 15, 2015, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X