ಕಡಿಮೆ ಬೆಲೆಗೆ ದೇಶದ ಅಗ್ರ 5 ಪೆಟ್ರೋಲ್ ಮೈಲೇಜ್ ಕಾರುಗಳು

By Nagaraja

ಪೆಟ್ರೋಲ್ ಕಾರುಗಳನ್ನು ಹೋಲಿಸಿದಾಗ ಡೀಸೆಲ್ ವಾಹನಗಳು ಹೆಚ್ಚು ಮೈಲೇಜ್ ನೀಡುತ್ತಿರಬಹುದು. ಆದರೆ ದೀರ್ಘಕಾಲದ ಅವಧಿಯ ನಿರ್ವಹಣಾ ವೆಚ್ಚ ಗಮನಿಸಿದಾಗ ಪೆಟ್ರೋಲ್ ಕಾರುಗಳ ಖರೀದಿ ಹೆಚ್ಚು ಸೂಕ್ತೆವೆನಿಸುತ್ತದೆ. ಅಷ್ಟೇ ಯಾಕೆ ಆಧುನಿಕ ಕಾರುಗಳು ಡೀಸೆಲ್ ಕಾರುಗಳಿಗೆ ಪೈಪೋಟಿ ನೀಡುವಷ್ಟು ಇಂಧನ ಕ್ಷಮತೆಯೊಂದಿಗೆ ಬಿಡುಗಡೆಯಾಗುತ್ತಿದೆ.

ಇವೆಲ್ಲವನ್ನು ಪರಿಗಣಿಸಿದಾಗ ಕಡಿಮೆ ಬೆಲೆಯ ಪೆಟ್ರೋಲ್ ಕಾರುಗಳ ಖರೀದಿ ಹೆಚ್ಚು ಯೋಗ್ಯವೆನಿಸುತ್ತದೆ. ಪ್ರಸ್ತುತ ಈ ಲೇಖದಲ್ಲಿ ದೇಶದಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಅಗ್ರ ಐದು ಪೆಟ್ರೋಲ್ ಮೈಲೇಜ್ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ. ಭಾರತೀಯ ವಾಹನ ಅಧ್ಯಯನ ಪ್ರಾಧಿಕಾರ (ಎಆರ್ ಎಐ) ನೀಡಿರುವ ಮಾನ್ಯತೆಯ ಪ್ರಕಾರ ಅಗ್ಗದ ಪೆಟ್ರೋಲ್ ಮೈಲೇಜ್ ಕಾರುಗಳ ಪಟ್ಟಿಯನ್ನು ಕೊಡಲಾಗಿದೆ.

05. ಟಾಟಾ ಟಿಯಾಗೊ

05. ಟಾಟಾ ಟಿಯಾಗೊ

ದೇಶದ ಅಗ್ರ ಐದು ಮೈಲೇಜ್ ಪೆಟ್ರೋಲ್ ಕಾರುಗಳ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪ್ರವೇಶ ಪಡೆದಿರುವ ಟಾಟಾ ಟಿಯಾಗೊ ಐದನೇ ಸ್ಥಾನದಲ್ಲಿದೆ. ಟಾಟಾ ಕಾರುಗಳ ಪೈಕಿ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿರುವ ಟಿಯಾಗೊ ಪುನಶ್ಚೇತನ ತುಂಬುವಲ್ಲಿ ಯಶಸ್ವಿಯಾಗಿದೆ.

ಟಾಟಾ ಟಿಯಾಗೊ - ಮೈಲೇಜ್ 23.84 ಕೀ.ಮೀ.

ಟಾಟಾ ಟಿಯಾಗೊ - ಮೈಲೇಜ್ 23.84 ಕೀ.ಮೀ.

ವಿನ್ಯಾಸದಿಂದ ಹಿಡಿದು 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟಾಟಾ ಟಿಯಾಗೊ ಪ್ರತಿ ಲೀಟರ್ ಗೆ 23.84 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು 114 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಟಾಟಾ ಟಿಯಾಗೊ ಬೇಸ್ ವೆರಿಯಂಟ್ ಎಕ್ಸ್ ಬಿ ಹಾಗೂ ಟಾಪ್ ಎಕ್ಸ್ ಝಡ್ ಮಾದರಿಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.20 ಹಾಗೂ 4.81 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

04. ಮಾರುತಿ ಸುಜುಕಿ ಆಲ್ಟೊ ಕೆ10

04. ಮಾರುತಿ ಸುಜುಕಿ ಆಲ್ಟೊ ಕೆ10

ಆಲ್ಟೊದ ಶಕ್ತಿಶಾಲಿ ಆವೃತ್ತಿಯಾಗಿರುವ ಕೆ10 ಫ್ರಂಟ್ ಫಾಗ್ ಲ್ಯಾಂಪ್, ಟ್ಯಾಕೋಮೀಟರ್, ದೊಡ್ಡದಾದ ಚಕ್ರಗಳು, ಕಳ್ಳತನ ವಿರೋಧಿ ಅಲಾರಾಂ ಹಾಗೂ ಸೀಟು ಬೆಲ್ಟ್ ವಾರ್ನಿಂಗ್ ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಆಲ್ಟೊ ಕೆ10 - ಮೈಲೇಜ್ 24.07 ಕೀ.ಮೀ.

ಆಲ್ಟೊ ಕೆ10 - ಮೈಲೇಜ್ 24.07 ಕೀ.ಮೀ.

ಒಂದು ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಯಂತ್ರಿಸಲ್ಪಡುವ ಆಲ್ಟೊ ಕೆ10, ಪ್ರತಿ ಲೀಟರ್ ಗೆ 24.07 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇದು 90 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿದೆ. ಆಲ್ಟೊ ಕೆ10 ಬೇಸ್ ಎಲ್ ಎಕ್ಸ್ ಹಾಗೂ ಟಾಪ್ ಎಂಡ್ ವಿಎಕ್ಸ್ ಐ (ಐಚ್ಛಿಕ) ಮಾದರಿಗಳು ಅನುಕ್ರಮವಾಗಿ 3.25 ಹಾಗೂ 3.82 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

03. ಮಾರುತಿ ಆಲ್ಟೊ 800

03. ಮಾರುತಿ ಆಲ್ಟೊ 800

ಆಲ್ಟೊ ಕೆ10 ಗಿಂತಲೂ ಕಡಿಮೆ ಶಕ್ತಿಶಾಲಿ ಎನಿಸಿಕೊಂಡಿರುವ ಆಲ್ಟೊ 800 ಮೈಲೇಜ್ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ದೇಶದ್ಯಾಂತ ಹರಡಿರುವ ಸರ್ವೀಸ್ ಜಾಲವು ಈ ಚೊಕ್ಕದಾದ ಕಾರಿಗೆ ಹೆಚ್ಚು ಬೇಡಿಕೆಯನ್ನು ಕಾಯ್ದುಕೊಳ್ಳಲು ನೆರವಾಗಿದೆ.

ಮಾರುತಿ ಆಲ್ಟೊ 800 - ಮೈಲೇಜ್ 24.7 ಕೀ.ಮೀ.

ಮಾರುತಿ ಆಲ್ಟೊ 800 - ಮೈಲೇಜ್ 24.7 ಕೀ.ಮೀ.

796 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಲ್ಟೊ 800, ಪ್ರತಿ ಲೀಟರ್ ಗೆ 24.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು 69 ಎನ್ ಎಂ ತಿರುಗುಬಲದಲ್ಲಿ 47 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆಲ್ಟೊ 800 ಬೇಸ್ ಹಾಗೂ ಟಾಪ್ ಎಂಡ್ ವೆರಿಯಂಟ್ ಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 2.45 ಹಾಗೂ 3.30 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

04. ದಟ್ಸನ್ ರೆಡಿ ಗೊ

04. ದಟ್ಸನ್ ರೆಡಿ ಗೊ

ಅರ್ಬನ್ ಕ್ರಾಸೋವರ್ ಶೈಲಿಯ ದಟ್ಸನ್ ರೆಡಿ ಗೊ, ಜನಪ್ರಿಯ ರೆನೊ ಕ್ವಿಡ್ ತಳಹದಿಯನ್ನು ಹಂಚಿಕೊಂಡಿದೆ. ಇದೇ ಕಾರಣಕ್ಕಾಗಿ ಮಾರಾಟದಲ್ಲೂ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿರುವ ರೆಡಿ ಗೊ ತನ್ನದೇ ಆದ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ.

ದಟ್ಸನ್ ರೆಡಿ ಗೊ - ಮೈಲೇಜ್ 25.17 ಕೀ.ಮೀ.

ದಟ್ಸನ್ ರೆಡಿ ಗೊ - ಮೈಲೇಜ್ 25.17 ಕೀ.ಮೀ.

ದಟ್ಸನ್ ರೆಡಿ ಗೊದಲ್ಲಿ 799 ಸಿಸಿ ಎಂಜಿನ್ 72 ಎನ್ ಎಂ ತಿರುಗಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ. ಅಂತೆಯೇ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಒಟ್ಟು ಐದು ವೆರಿಯಂಟ್ ಗಳಲ್ಲಿ ಲಭ್ಯವಿರುವ ದಟ್ಸನ್ ರೆಡಿ ಗೊ ಬೇಸ್ ಡಿ ವೆರಿಯಂಟ್ 2.4 ಲಕ್ಷ ರು.ಗಳಷ್ಟು ದುಬಾರಿಯೆನಿಸಿದರೆ ಟಾಪ್ ಎಂಡ್ ಎಸ್ ಮಾದರಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.34 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುತ್ತಿದೆ.

01. ರೆನೊ ಕ್ವಿಡ್

01. ರೆನೊ ಕ್ವಿಡ್

ದೇಶದ ವಾಹನ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ರೆನೊ ಕ್ವಿಡ್ ಶ್ರೇಷ್ಠ ಮೈಲೇಜ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿಭಾಗದಲ್ಲಿ ಮೀಡಿಯಾ ನೇವ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರುವ ರೆನೊ ಕ್ವಿಡ್ ಮಾರುತಿ ಆಲ್ಟೊಗೆ ಪ್ರಬಲ ಪೈಪೋಟಿ ಎನಿಸಿಕೊಂಡಿದೆ.

ರೆನೊ ಕ್ವಿಡ್ - ಮೈಲೇಜ್ 25.17 ಕೀ.ಮೀ.

ರೆನೊ ಕ್ವಿಡ್ - ಮೈಲೇಜ್ 25.17 ಕೀ.ಮೀ.

ರೆನೊ ಕ್ವಿಡ್ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದರಲ್ಲಿರುವ 799 ಸಿಸಿ ಎಂಜಿನ್ 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿದೆ. ಅಂದ ಹಾಗೆ ರೆನೊ ಕ್ವಿಡ್ ಸ್ಟ್ಯಾಂಡರ್ಡ್ ಹಾಗೂ ಟಾಪ್ ಎಂಡ್ ಆರ್ ಎಕ್ಸ್ ಟಿ (ಐಚ್ಛಿಕ) ಮಾದರಿಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 2.6 ಹಾಗೂ 3.64 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಕಡಿಮೆ ಬೆಲೆಗೆ ದೇಶದ ಅಗ್ರ 5 ಪೆಟ್ರೋಲ್ ಮೈಲೇಜ್ ಕಾರುಗಳು

ಪ್ರಸ್ತುತ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಕಾರಿನ ಬಗ್ಗೆ ಅನುಭವಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

Most Read Articles

Kannada
English summary
Top 5 Best Mileage Petrol Cars In India — Value For Money Propostion
Story first published: Monday, August 22, 2016, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X